ಮಾತಾಡ್ತಾ

Image result for yellow flowers
ರಾಜ ಬೀದಿ ಒಳಗಿಂದ ಕಸ್ತೂರಿ ರಂಗ ಆಹಾ ಎಷ್ಟು ಚಂದದ ಹಾಡು, ಅದೇ ರೀತಿ ಕಲೊನಿಯಲ್ ಕಸಿನ್ಸ್  ಹಾಡಿರುವ ಕೃಷ್ಣ ನೀ ಬೇಗನೆ ಬಾರೋ  ಎಷ್ಟು ಖುಷಿ ಕೊಡುತ್ತದೆ...
ನಾನು ಅನೇಕ ಬಗೆಯ ಹಾಡಿನ ಪ್ರಕಾರಗಳನ್ನು ಕೇಳುತ್ತಾ ಇರ್ತೀನಿ. ಭಕ್ತಿ ಗೀತೆಗಳು ಹೊರತು ಪಟ್ಟಿಲ್ಲ. ಐ ಲವ್ ಮ್ಯೂಸಿಕ್.  ಯಾವ ವಿಷಯದಲ್ಲಿ ಆಗಲಿ ಚರ್ಚೆಗೆ ಕೂತರೆ ಅದು ಬೇರೆ ಬೇರೆ ರೂಪ ಪಡೆಯುತ್ತದೆ. ಅದು ನಾನು ಅರಿತ ಅನುಭವದ ಸಂಗತಿ. 
ಬಿಡಿ ಆ ಸಂಗತಿ..ಜೀ ಕನ್ನಡ ವಾಹಿನಿಯಲ್ಲಿ  ಸ ರೆ ಗ ಮ ಪ ಲಿಲ್ ಚಾಂಪ್ಸ್ ಮತ್ತೆ ಆರಂಭವಾಗಿದೆ, ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್. ಮತ್ತಷ್ಟು ಹೊಸ ಪ್ರತಿಭೆಗಳ ಆಗಮನ. ಇದೇ ವೇದಿಕೆಯಲ್ಲಿ ಹಾಡಿ ಗೆದ್ದು, ಈಗ ದೊಡ್ಡ ಹುಡುಗರಾಗಿ ಕಾಲೇಜು ಮೆಟ್ಟಿಲು, ವೃತ್ತಿ ನಿರತ ಕೋರ್ಸುಗಳಿಗೆ ಸೇರಿದ್ದಾರೆ. ಅವರಲ್ಲಿ ಒಬ್ಬರಾದ ಸಚಿನ್ ಸಿಕ್ಕಿದ್ದ. ರಾಯರ ಆರಾಧನಾ ಮಹೋತ್ಸವದ ಸಮಯದಲ್ಲಿ ಒಂದು ದಿನದ ಸಚಿನ್  ತನ್ನ ತಾಯಿ ತಂದೆ ಜೊತೆ ಬಂದಿದ್ದ. ಸಂಪೂರ್ಣವಾಗಿ ಮಠಕ್ಕೆ ತಕ್ಕಂತೆ. ಖುಷಿ ಅನ್ನಿಸಿತು ಆ ಹುಡುಗನನ್ನು ಕಂಡು. ಪುಟ್ಟ ಬಾಲಕ ಈಗ ಮೆಕ್ಯಾನಿಕಲ್ ಇಂಜಿನಿಯರ್ . ಅವರ ತಾಯಿ ಜೊತೆ ಹರಟಿದಾಗ ತನ್ನ ಮಗ ಈಗ ಆರ್ ಕೆ ಪದ್ಮನಾಭನ್ ಅವರ ಬಳಿ ಕ್ಲಾಸಿಕಲ್ ಸಂಗೀತ ಕಲಿತಾ ಇದ್ದಾನೆ ಅಂದ್ರು. ಹಾಗೆ ಈ ಟೀವಿ ಕನ್ನಡದಲ್ಲಿ, ಜೀ ಕನ್ನಡದಲ್ಲಿ ತಮ್ಮ ಮಗನ ಹಾಡುಗಳು ಯು ಟ್ಯೂಬ್  ನಲ್ಲಿ ಅಪ್ ಲೋಡ್ ಮಾಡಿದ್ದೇನೆ ಎಂದು ಸಹ ಹೇಳಿದರು ಆ ತಾಯಿ. ಮಾತಿನ ನಡುವೆ ನಿಮ್ಮ ಮಗನಿಗೆ ಕಷ್ಟ ಆಗಲಿಲ್ಲ ಶಾಲೆ, ನಿಮಗೆ ರಜೆ ಇವೆಲ್ಲ... ಎಂದಾಗ ಆಕೆ ಚಾನೆಲ್ ನವರು ಪ್ರತಿ ಶನಿವಾರ ಹಾಗೂ ಭಾನುವಾರ ಈ ಕಾರ್ಯಕ್ರಮ ಶೂಟ್ ಮಾಡ್ತಾ ಇದ್ರೂ ಎಂದು ಬಹಳ ಮೆಚ್ಚಿ ಹೇಳಿದರು. 
ಹೀಗೆ ಹಲವಾರು ಪ್ರತಿಭೆಗಳು ಈಗ ಏನ್ ಮಾಡ್ತಾ ಇದ್ದರೋ.ಅವರು ಮತ್ತೆ ಭಾಗವಹಿಸುವ ಕಾರ್ಯಕ್ರಮಗಳು ಚಾನೆಲ್ ನವರು ಮಾಡಿದ್ರೆ ಚಂದ ಅಲ್ವ.. ಆ ವೀಕ್ಷಕರು ಆಹಾ ಆ ಹುಡ್ಗಾ ಆಗಾ ಇದ್ದ, ಈ ಹುಡುಗಿ ಹೀಗೆ ಹಾಡಿದ್ದಳು ಎಂದುಕೊಳ್ತಾ ಮಾತಾಡ್ತಾ ... ? :-) 
Image result for yellow flowers
@ ಬಹಳ ದಿನಗಳ ನಂತರ ಟೀವಿ ನೈನ್ ವಾರ್ತೆಗಳನ್ನು ವೀಕ್ಷಿಸಿದೆ. ನಿಮಗೆ ಗೊತ್ತು ಕರ್ನಾಟಕದಲ್ಲಿ ಕರೆಂಟ್ ಇಲ್ಲ ಎನ್ನುವ ಸುದ್ದಿ ನಿಜ ಸಾಕಷ್ಟು ಸದ್ದು ಮಾಡಿದೆ. ಇನ್ನೇನು ಬೇಕು ಎನ್ನುವಾಗ ಕರೆಂಟ್ ಇರ್ತಾ ಇರಲಿಲ್ಲ. ಹೋಗ್ಲಿ ಬೇರೆ ಸಮಯದಲ್ಲಿ ಬರೆಯೋಣ ಅಂದ್ರೆ ನನಗೆ ಸಮಯ ಇರುತ್ತಿರಲಿಲ್ಲ :-)
ರಹಮಾನ್ ಅವರು ವಾರ್ತೆ ಓದುತ್ತಿದ್ದರು. ಕನ್ನಡದ ಉತ್ತಮ ಆಂಕರ್ ಗಳಲ್ಲಿ ರಹಮಾನ್ ಸಹ ಒಬ್ಬರು , ಅದರ ಬಗ್ಗೆ ಸಂಶಯ ಇಲ್ಲ. ಮೊದಲ ಸುದ್ದಿ  ನೋಡಿದ ಬಳಿಕ ಮತ್ತೆ ಬಂದ ಸುದ್ದಿ ವೀಕ್ಷಿಸದೆ ಹಾಯಾಗಿ ಆರಿಸಿ ಕುಳಿತೆ,
ಇಂದು ಟೀವಿ ನೈನ್ ವಾಹಿನಿಯಲ್ಲಿ ರಾಧಿಕ ತಿರುಪತಿಯಲ್ಲಿ ವಿಶೇಷವಾದ ಬೆಳಕು ಕಂಡ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಸ್ವಲ್ಪ ಮಾತ್ರ ವೀಕ್ಷಿಸಿದೆ. ಯಾರು ದೇವರನ್ನು ಯಾವ ರೀತಿ ಕಾಣ್ತಾರೋ ಹಾಗೆ ಕಾಣುವುದು ಆತನ ವಿಶೇಷತೆ.ಶ್ರೀನಿವಾಸ ದೇವರಲ್ಲಿ ಬೆಳಕು ಕಂಡಿದೆ ಎಂದು ಅವರು ಹೇಳಿದರೆ ಅದು ಅವರ ನಂಬಿಕೆ. ದೇವರಿದ್ದಾನ ಎಂದು ಕೇಳುವ ಬಹುತೇಕರು ತಮ್ಮ ಧರ್ಮದ ದೇವರನ್ನು ಹೊರೆತು ಪಡಿಸಿ ಈ ಪ್ರಶ್ನೆ ಉದ್ಭವ ಮಾಡುತ್ತಾರೆ. ದೇವರಿದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ಸಾಮಾನ್ಯನ ಭಾವನೆಗಳಿಗೆ ಧಕ್ಕೆ ತರುವುದು ಮಾತ್ರ ತಪ್ಪು. ಅವರ ನಂಬಿಕೆ ಅವರದ್ದು.ಇನ್ನು ಬೆಳಕಿನ ವಿಷಯಕ್ಕೆ ಬರುವುದಾದರೆ ನನ್ನ ಕಸಿನ್ ಆಂಧ್ರದ  ಮಾಧ್ಯಮದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ. ಅವರುತಿರುಪತಿಯ ಬ್ರಹ್ಮೋತ್ಸವದ ಎಲ್ಲ ಚಿತ್ರಗಳನ್ನು ಫೇಸ್ ಬುಕ್ ಮತ್ತು ವಾಟ್ಸ್ ಆಪ್ ನಲ್ಲಿ ಶೇರ್ ಮಾಡಿದ್ದಾರೆ. ಆದರೆ ಎಲ್ಲೋ ಬೆಳಕಿನ ಬಗ್ಗೆ ಹೇಳಿಲ್ಲ ! ಕ್ಷಮಿಸಿ ಇದು ನನ್ನ ಪ್ರಶ್ನೆ ಅಷ್ಟೇ. ಯಾಕೇಂದ್ರೆ ಅವರವರ ನಂಬಿಕೆ ಅವರವರದ್ದು ಅಲ್ವೇ.! ಯಾರ ಭಾವನೆಗಳಿಗೂ ಧಕ್ಕೆ ತರುವ ಕೆಲಸ ಎಂದಿಗೂ ಮಾಡ ಬಾರದು. ನಾನು ನನ್ನ ಧರ್ಮವನ್ನು ತುಂಬಾ ನಂಬುತ್ತೇನೆ. 

++++


Image result for red flower
Sometimes crying or laughing are the only options left, and laughing feels better right now.
@ Veronica RothDivergent?


 ಭಾಬಿಜಿ ಘರ್ ಪರ್ ಹೈ  ಈ ಹಾಸ್ಯ ಧಾರವಾಹಿ ಅಂಡ್ ಟೀವಿಯಲ್ಲಿ ಪ್ರಸಾರವಾಗುತ್ತದೆ. ಸಹಿ ಪಕಡೆ ಹೈ ಇದರ ಅತಿ ಹೆಚ್ಚು ಜನಪ್ರಿಯವಾದ ಪದ, ವಾಕ್ಯ, ಪಂಚಿಂಗ್, ಮಿಂಚಿಂಗ್  ಏನ್ ಬೇಕಾದ್ರೂ ಹೇಳ ಬಹುದು. ಅತ್ಯಂತ ಖುಷಿಕೊಡುವ ಈ ಒಂದು ಡೈಲಾಗ್ ಹೇಳುವ ಕಲಾವಿದೆ ಶಿಲ್ಪ ಶಿಂಧೆ. ಸ್ವಲ್ಪ ಮನೆಮುರಕಿ ಅತ್ತಿಗೆಯಂತ ಪಾತ್ರಗಳ ಮೂಲಕ ಕಿರುತೆರೆಗೆ ಎಂಟ್ರಿಯಾದ ಈ ಚೆಲ್ವಿ ಹೆಣ್ಣು ಮಗಳು ಈ ಧಾರಾವಾಹಿಯಲ್ಲಿ ಮುಗ್ಧ ಮನೋಹರಿಯಾಗಿದ್ದಾರೆ. 
ಅಕ್ಕಪಕ್ಕದ ಮನೆಯ ಯಜಮಾನರಿಗೆ ಅಕ್ಕಪಕ್ಕದ ಮನೆಯ ಬಾಭಿಜಿಗಳ ಬಗ್ಗೆ ಸಾಫ್ಟ್ ಕಾರ್ನರ್. ಸರಿಸುಮಾರು ಈ ಹಾಸ್ಯ ಧಾರವಾಹಿ ಹಿಂದೊಮ್ಮೆ ಅಧಿಕಾರಿ ಬ್ರ ದರ್ಸ್ ಅವರ ಶ್ರೀಮಾನ್ ಶ್ರೀಮತಿ ಹಾಸ್ಯ ಹಾರವಾಹಿಯನ್ನು ಹೋಲುತ್ತದೆ. ಆಗ ಅಪಾರ್ಟ್ಮೆಂಟ್ ಹೀರೋ ಆಗಿದ್ದರೆ, ಈಗ ಒಂದು ರಸ್ತೆ  ಹೀರೋ. ಇದರಲ್ಲಿ ಬರುವ ಪಾತ್ರಗಳೆಲ್ಲವೂ ಸಹ ಇಷ್ಟ ಆಗುವಂತೆ ಅಂದರೆ ಹಾಸ್ಯವನ್ನು ಹಂಚುವ, ಸಣ್ಣ ಪುಟ್ಟ ಆಸೆಗಳಿಂದ ಒದ್ದಾಡುವ ಸಾಮಾನ್ಯ ಮನುಷ್ಯರ ಪ್ರತಿನಿಧಿಗಲಾಗಿವೆ. ಪ್ರತಿಯೋರ್ವ ಕಲಾವಿದರು ಇಷ್ಟ ಆಗುವಷ್ಟು ಚೆನ್ನಾಗಿ ಮಾಡಿದ್ದಾರೆ. ಭಾಬಿಜಿ ಎಂದು ಸ್ಟೈ ಲೀಶ್ ಆಗಿ ಮಾತನಾಡುತ್ತ ಏನೇನು ಅರಿಯದ ಅಮಾಯಕ ಪಕ್ಕದ ಮನೆಯ   ಗೃಹಿಣಿಗೆ ಕಾಳು ಹಾಕುವ ಗೃಹಸ್ಥ, ಸೇಮ್ ಟು ಸೇಮ್  ಸ್ಟೈಲೀಶ್ ಗೃಹಿಣಿಗೆ ಬಿಸ್ಕೆಟ್ ಹಂಚೋ ಪ್ರಯತ್ನ ಮಾಡುವ ಗೃಹಸ್ಥ, ಜೊತೆಗೆ ಪೊಲೀಸ್, ಪೊರ್ಕಿ ಎಲ್ಲವೂ ಸಹ ಅವರವರ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಒಂದು ಪಾತ್ರ ಪ್ರತಿ ಬಾರಿ ಐ ಲೈಕ್ ಇಟ್ ಅನ್ನುವ ಡೈಲಾಗ್ ಹೇಳುವಂತೆ ಮಾಡಿದ್ದಾರೆ ನಿರ್ದೇಶಕರು. ವೆರಿ ನೈಸ್  ಸಹಿ ಪಕಡೆ ಹೈ ಗಾಗಿ ಕಾಯುವಂತೆ ಐ ಲೈಕ್ ಇಟ್ ಡೈಲಾಗ್ ಗೂ ಸಹಿತ ಕಾಯುವಂತಾಗುತ್ತದೆ. ನಿಜವೆಂದರೆ ಪಾತ್ರಧಾರಿಗಳು ಅತಿಯಾದ   ಅಲಂಕಾರದಲ್ಲಿ  ಇರದೆ ಸಾಮಾನ್ಯರು ಇರುವಂತೆ ಪಾತ್ರಗಳನ್ನೂ ಸೃಷ್ಟಿ  ಮಾಡಿದ್ದಾರೆ . ಅಂದ್ರೆ ನನಗೆ ಇಷ್ಟ ಆಯ್ತು .


Image result for red flowers images
@ಸಾಮಾನ್ಯವಾಗಿ ಕೆಲವು ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮನ ಸೆಳೆಯುತ್ತದೆ ನನಗೆ. ಅದರಲ್ಲಿ ಜೀ ಕನ್ನಡ ವಾಹಿನಿಯ ಡಿಐಡಿ ಒಂದು. ಅದಕ್ಕೆ ಕಾರಣ ಹೊಸ ಪ್ರತಿಭೆಗಳ ಆಗಮನ. ಅದರ ಜೊತೆ ಕಿರಿಯ ತೀರ್ಪುಗಾರರಾದ ಮುದಸ್ಸರ್, ಪುನೀತ್ ಹಾಗೂ ಗೇತಿ  ಜೊತೆ ಗ್ರಾಂಡ್  ಮಾಸ್ಟರ್  ದಾದ  ಮತ್ತು ನಿರೂಪಕ ಜಾಯ್. ಪ್ರತಿವಾರ ಪುನೀತ್ ಯಾವ ಹೊಸ ವಿಷಯ, ಡ್ಯಾನ್ಸ್ ತಮ್ಮ ಶಿಷ್ಯರ ಬಳಿ ಮಾಡಿಸ್ತಾರೆ ಎಂದು ಕಾಯುವಂತೆ ಇರುತ್ತದೆ. ಸಂತಿಂಗ್ ಸ್ಪೆಶಲ್ ಮಾಡುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿರುತ್ತಾರೆ. ಅದು ವೀಕ್ಷಕರಿಗೆ ಖುಷಿ ಕೊಡುವ ಸಂಗತಿ. ಜೊತೆಗೆ ಪುನೀತ್ ನಗುಮುಖ ಸಹ ಇಷ್ಟ ಆಗುತ್ತೆ. ಇಲ್ಲಿ ನಾನು ಈ ಮೂರು ಗುರುಗಳ ಕೆಲಸದ ಬಗ್ಗೆ ಆಗಿರಲಿ, ಅವರ ಶಿಷ್ಯರ ಬಗ್ಗೆ ಆಗಲಿ ಹೇಳಲ್ಲ. ಈಗಂತೂ ಆ ಕಾರ್ಯಕ್ರಮ ಕೊನೆಯ ಹಂತದತ್ತ ಸಾಗುತ್ತಿದೆ. ಆದ್ದರಿಂದ ಅದರ ಬಗ್ಗೆ ಹೇಳುವ ಅಗತ್ಯವಿಲ್ಲ. ಹೊಸ ಹೊಸ ರೀತಿಯಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆ ತೋರುತ್ತಿದ್ದಾರೆ. ಮತ್ತೊಂದು ಸಂಗತಿ ಎಂದರೆ ಕಳೆದ ಬಾರಿ ಹರೂನ್ ಎನ್ನುವ ಪ್ರತಿಭೆ ಬಗ್ಗೆ ಹೇಳಿದ್ದೆ. ಆತ ಸಹಿತ ಅಂತಿಮ ಹಂತದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರಂತೆ. ಅದೂ ಸಹಿತ ಅತ್ಯಂತ ಒಳ್ಳೆಯ ಅಂಶ. 

Image result for red flowers images
@ ಸ್ಟಾರ್ ವಾಹಿನಿಯಲ್ಲಿ ಈಗ ಸುಮಿತ್ ಸಂಭಾಲ್ ಲೇಗ ಎನ್ನುವ ಹೆಸರಿನ ಕಾಮಿಡಿ ಧಾರವಾಹಿ ಪ್ರಾಸಾರ ಆಗ್ತಾ ಇದೆ.  ರಾತ್ರಿ ಹತ್ತುಗಂಟೆಗೆ. ರಾತ್ರಿ ಊಟದ ಹೊತ್ತು ಕೆಲವರಿಗೆ, ಒಂದಷ್ಟು ಜನರಿಗೆ ಹಾಯಾಗಿ ಮಲಗುವ ಸಮಯ. ಇಂತಹ ಸಮಯದಲ್ಲಿ ಹಾಸ್ಯ ಪ್ರಧಾನ ಕಾರ್ಯಕ್ರಮ ಮನಕ್ಕೆ ಆಹ್ಲಾದ, ಪ್ರಶಾಂತವಾದ ನಿದ್ದೆ ಬರಲು ಸಹಾಯ ಆಗುತ್ತೆ. ಆ ವಿಷ್ಯ ಪಕ್ಕಕ್ಕೆ ಇಡಿ. ಈ ಧಾರಾವಾಹಿಯಲ್ಲಿ ನಮಿತ್ ದಾಸ್, ಮಾನಸಿ ಎನ್ನುವ ಕಲಾವಿದರು ಸುಮಿತ್ ಮತ್ತು ಆತನ ಪತ್ನಿ  ಮಾಯಾ ಪಾತ್ರಧಾರಿಗಳಾಗಿದ್ದಾರೆ. ಇದನ್ನು ವೀಕ್ಷಿಸುವಾಗ ಆಂಗ್ಲ ಧಾರವಾಹಿ ನೋಡಿದಂತೆ ಆಗುತ್ತೆ. ಚಿಕ್ಕ ಹಾಗೂ ಚೊಕ್ಕ, ಜೊತೆಗೆ ಎಲ್ಲ ಮಾಹಿತಿ. ಈ ರೀತಿಯ ಹಾಸ್ಯಧಾರಾವಾಹಿಗಳು ಅರ್ಚನ ಪೂರಣ್ ಸಿಂಗ್ ಅವರ ನೇತೃತ್ವದಲ್ಲಿ ಪ್ರಸಾರ ಆಗ್ತಾ ಇತ್ತು. ಈಗ ಅದೇ ರೀತಿಯಲ್ಲಿ ಈ ಧಾರವಾಹಿ ಇದೆ. ದಿನಕ್ಕೊಂದು ಕಥೆ ಅಷ್ಟೇ. ಅಮೋಲ್ ಪಾಲೇಕರ್ , ಅಂಜನ್ ಶ್ರೀವಾತ್ಸವ್ ರ ಜತೆ ನೋಡಿ ಖುಷಿ ಪಟ್ಟಿದ್ದ ವೀಕ್ಷಕರಿಗೆ ಈಗ ಕಲಾವಿದೆ ಭಾರತಿ ಅವರನ್ನು ಸತೀಶ್ ಕೌಶಿಕ್ ಜೊತೆ ನೋಡುವ ಸಂಭ್ರಮ. ಮಿಸ್ಟರ್ ಇಂಡಿಯಾ ಚಿತ್ರದ ಕ್ಯಾಲೆಂಡರ್ ಹೆಸರಿನ ಮೂಲಕ  ಅವರು ನನಗೆ ಹೆಚ್ಚು ಇಷ್ಟ ಆದ ಕಲಾವಿದ . ಈಗ ಪ್ರತಿದಿನ ಹತ್ತು ಗಂಟೆಗೆ ಬರ್ತಾರೆ. ಇವರ ಬಗ್ಗೆ ಹೇಳೋಕ್ಕಿಂತ ನಟನೆ ನೋಡಿದರೆ ಹೆಚ್ಚು ಖುಷಿ ಆಗುತ್ತೆ.ಇಲ್ಲಿ ಎಲ್ಲ ಪಾತ್ರಧಾರಿಗಳು ಸಹ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. 
Image result for red flower

@
ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ ಮತ್ತೊಂದು ವಿಶಿಷ್ಟ ಕಾರ್ಯಕ್ರಮ ಡ್ಯಾನ್ಸ್ ಪ್ಲಸ್. ಆ ಕಾರ್ಯಕ್ರಮದಲ್ಲಿ ರೆಮೋ ಡಿಸೋಜ ಅವರು ದೊಡ್ಡ ಮಾಸ್ಟರ್. ಅವರ ಜೊತೆಗೆ ಧರ್ಮೇಶ್, ಶಕ್ತಿ ಮತ್ತು  ಸುಮೀತ್ ಸಹ ಜಡ್ಜ್ ಗಳಾಗಿದ್ದಾರೆ. ಡಿಐಡಿ ಪ್ರತಿಭೆ ರಾಘವ ಅಲ್ಲಿ ಆಂಕರ್ ಆಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಎಬಿಸಿಡಿ 1 ಹಾಗೂ 2  ಮೂಲಕ  ರೆಮೋ ತಮ್ಮ ಶಿಷ್ಯರನ್ನು ಬಣ್ಣದ ಲೋಕಕ್ಕೆ ಪರಿಚಯಿಸಿದರು. ಈಗ ತೀರ್ಪುಗಾರರಾಗಿ ಮಾಡಿದ್ದಾರೆ. ಫೈನ್. ಆದರೆ ಇಲ್ಲಿ ಕಾಣುವ ಮತ್ತೊಂದು ಮುಖ್ಯ ಸಂಗತಿ ಅಂದ್ರೆ ಸ್ಪರ್ಧಿಗಳು ಯಾರು ಚಿನ್ನದ ಚಮಚೆ, ಸುರಕ್ಷಿತ ಬದುಕಿನ ಮೂಲದಿಂದ ಬಂದವರಲ್ಲ. ಅವರ ಮನೆ, ಆರ್ಥಿಕ ಸ್ಥಿತಿ ನಡುವೆ ಅವರು ಈ ಪರಿ ಸಾಧನೆ ಮಾಡಿದ್ದಾರೆಂದರೆ ಗ್ರೇಟ್. ನನಗೆ ಕಳೆದವಾರದ ಎಪಿಸೋಡ್ ನಲ್ಲಿ ವಂದೇ ಮಾತರಂ  ಡ್ಯಾನ್ಸ್ ಮಾಡಿದ ಗುಂಪು ಇಷ್ಟ ಆಯ್ತು. ಹೀಗೂ ಸಹ ತಮ್ಮ ಪ್ರತಿಭೆ ತೋರಿಸ ಬಹುದು ಎನ್ನುವ ಸಂಗತೀ ವಿಕ್ಷಕ ಲೋಕದ ಮುಂದೆ ಇಟ್ಟರು. ನೋಡಲೇ ಬೇಕಾದ ಅತ್ಯುತ್ತಮ ಕಾರ್ಯಕ್ರಮ ಇದು.