ಕ್ಲಾಸಿಕಲ್ - ರಾಪ್

Image result for blue flowers
ಚಂದನ ವಾಹಿನಿಯಲ್ಲಿ ನಿನ್ನೆ ಒಂದು ಸಂಗೀತ ಕಾರ್ಯಕ್ರಮ ವೀಕ್ಷಿಸಿದೆ. ಭಾರತೀಯ ಸಾಮಗಾನ ಸಭಾ ಅವರ ಮೈಸೂರು ಆಸ್ಥಾನ ಸಂಗೀತೋತ್ಸವ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಶಾಸ್ತ್ರೀಯ ಸಂಗೀತ ಮನಕ್ಕೆ   ಅದರಲ್ಲೂ ವಾದ್ಯ ಸಂಗೀತ ಹೆಚ್ಚು ಇಷ್ಟ. ಮತ್ತೊಂದು ಸಂಗತಿ ಅಂದ್ರೆ ನನಗೆ  ಅಂದ್ರೆ ಒಂದು ಕೀರ್ತನೆಯನ್ನು ವೀಣೆ, ವಯೊಲಿನ್, ಕೊಳಲು,ಸ್ಯಾಕ್ಸೋ ಫೋನ್ ಹೀಗೆ   ವಾದ್ಯಗಳಲ್ಲಿ ಆಲಿಸುವ ಹವ್ಯಾಸ. ಸಕತ್ ಖುಷಿ ಕೊಡುತ್ತದೆ. ನಿನ್ನೆ ವೀಣಾವಾದನ ಪ್ರಸಾರವಾಗುತ್ತಿತ್ತು. ಪ್ರತಿದಿನ ಪ್ರಾಯಶಃ  ಸಂಜೆ ವೇಳೆ  ಈ ಕಾರ್ಯಕ್ರಮ ಇರುತ್ತದೆ ಅನ್ನಿಸುತ್ತದೆ (ಸಮಯದತ್ತ ಗಮನ ಹರಿಸಲು ಆಗಲಿಲ್ಲ ) ಸಂಗೀತಾಸಕ್ತರು ಇದನ್ನು ವೀಕ್ಷಿಸ ಬಹುದು.
Image result for blue flowers
@ ಈ  ವಾಹಿನಿಯಲ್ಲಿ ಪ್ರಸಾರವಾಗುವ ಶುಭೋದಯ ಕಾರ್ಯಕ್ರಮವನ್ನು ಇತ್ತೀಚೆಗೆ ವೀಕ್ಷಣೆ ಮಾಡಿದಾಗ ವಾಸು ದೀಕ್ಷಿತ್ ಅವರ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಭಿನ್ನಶೈಲಿಯಿಂದ ಕ್ಲಾಸಿಕಲ್ ಮತ್ತು ರಾಪ್ ಎರಡನ್ನು ಮೇಳೈಸಿ ಕೀರ್ತನೆಗಳು , ವಚನಗಳ  ಮೂಲಕ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ವಾಸು. ಅವರ ಶೈಲಿ ಖುಷಿ ಕೊಡ್ತು. ಎಲ್ಲಾ ವಾಹಿನಿಗಳಿಗಿಂತ ಚಂದನ ಸದಾ ಭಿನ್ನ ಎನ್ನುವಂತೆ ಮಾಡುತ್ತದೆ ಇಂತಹ ವಿಶಿಷ್ಟವಾದ ಕಾರ್ಯಕ್ರಮಗಳಿಂದ ಮತ್ತು ಈ ರೀತಿಯ ವಿಶೇಷವಾದ ಕಲಾವಿದರಿಂದ.. 

ಇಂಡಿಯನ್-ಶಿಷ್ಯ


Image result for red and orange flowers
ಅತಿ ಹೆಚ್ಚು ವೀಕ್ಷಕರನ್ನು ಆಕರ್ಷಿಸುವುದು ಸುಲಭವಲ್ಲ. ಆದರೆ ಸಂಗೀತ ಮಾತ್ರ ಸದಾ ಸರ್ವದಾ ಜನರನ್ನು ತನ್ನತ್ತ ಸೆಳೆಯುತ್ತಲೆ ಇರುತ್ತದೆ. ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಇಂಡಿಯನ್ ಐಡಲ್ ಅದಕ್ಕೆ ಒಂದು ಉತ್ತಮ ಉದಾಹರಣೆ ಎಂದು ಹೇಳ ಬಹುದು ಪ್ರಸ್ತುತ 11 ಸೀಸನ್ ನಡೆಯುತ್ತಿರುವ  ಹಾಡಿನ ರಿಯಾಲಿಟಿ ಶೋ ನಲ್ಲಿ  ಹಿಮೇಶ್ ರೇಷ್ಮಿಯಾ, ನೇಹಾ ಕಕ್ಕರ್ ಮತ್ತು ವಿಶಾಲ್ ದದ್ಲಾನಿ ಸಾರಥ್ಯ ನಡೆಸುತ್ತಿದ್ದಾರೆ. ಆದಿತ್ಯ ನಾರಾಯಣ್  ನಿರೂಪಕ.ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಈ ಶೋ ಆರಂಭಗೊಂಡಿತು. ನಾನು ಕೆಲವೊಂದು ವೀಕ್ಷಿಸಿದ್ದೇನೆ, ನನಗೆ ಹೆಚ್ಚು ಆಸಕ್ತಿ ನೀಡಿದ್ದು ಸ್ಪರ್ಧಾಳುಗಳು ಅವರಿಗಿಂತಲೂ ಈ ಕಾರ್ಯಕ್ರಮದ ಥೀಮ್. ಪ್ರಸಿದ್ಧ ಸಂಗೀತ ನಿರ್ದೇಸಕರ ಜೋಡಿ, ಸಿನಿಮಗಳಲ್ಲಿ ನಟಿಸಿದ್ದ ಆ ಕಾಲದ ಪ್ರಸಿದ್ದ ಕಲಾವಿದರು,ಹಾಡುಗಾರರು.. ಅಂದ್ರೆ ಪ್ರತಿವಾರ ಯಾರು ಬರುತ್ತಾರೆ ಎಂದು ಕಾಯುವಂತಹ ಆಸಕ್ತಿ ಮೂಡಿಸುವಂತೆ ಸಿದ್ಧವಾಗಿದದೆ ಕಾರ್ಯಕ್ರಮ. ಆ ಸಾಧಕರು ತಮ್ಮ ಸಿನಿಮಾಗಳಲ್ಲಿ ಹಾಡಿಸಿದ್ದ , ನಟಿಸಿದ್ದ, ನಿರ್ದೇಶಿಸಿದ್ದ ಹಾಡುಗಳನ್ನು ಹೊಸಬರು ಅದರಲ್ಲೂ ಕಿರಿಯ ಪ್ರತಿಭೆಗಳಿಂದ ಆಲಿಸುವಾಗ ಅವರ ಮೊಗದಲ್ಲಿದ್ದ  ಖುಷಿ ಸಹ ಮರೆಯಲಾಗದ್ದು.
Image result for red and orange flowers
 ಕಪಿಲ್ ಶರ್ಮ ಶೋ ಸೋನಿಯಲ್ಲಿ ಪ್ರಸಾರವಾಗುವ ಮತ್ತೊಂದು ಆಕರ್ಷಣೆ ( ಕನ್ನಡದಲ್ಲಿ ಸೃಜನ್ ಲೋಕೇಶ್ ಮಜಾ ಟಾಕೀಸ್ ನಂತೆ ). ಕಪಿಲ್ ಶೋ  ನಕ್ಕು ನಕ್ಕು ಸಾಕಾಗುವಂತೆ ಮಾಡಿದ , ಮಾಡುತ್ತಿರುವ ಹಾಸ್ಯಭರಿತ ರಿಯಾಲಿಟಿ ಶೋ. ಕಪಿಲ್, ಕಿಕು, ಸುಮೋನಾ,ಚಂದನ್ ಪ್ರಭಾಕರ್, ಕೃಷ್ಣ ಅಭಿಷೇಕ್, ಭಾರತಿ.. ಹಾಸ್ಯಗಾರರ ಒಟ್ಟು ಗುಂಪು.. ! ನನ್ನನ್ನ್ನು ಹೆಚ್ಚು ಆಕರ್ಷಿಸುವುದು ಕೃಷ್ಣ ಅಭಿಷೇಕ್ -ಭಾರತಿ ನಟನೆ..ತಕ್ಷಣ ಮಾತಿಗೆ ಹಾಸ್ಯದ ಲೇಪನ ಹಚ್ಚುವ ಈ ಪ್ರತಿಭೆಗಳ ಪ್ರಭೆಯನ್ನು  ಕಪಿಲ್ ಶೋ ನಲ್ಲಿ ಒಟ್ಟಿಗೆ ವೀಕ್ಷಿಸುವ  ಆನಂದ ವೀಕ್ಷಕರಿಗೆ..ಆದರೆ  ಗುತ್ತಿಯನ್ನು ಸಹ  ಮಿಸ್ ಮಾಡಿಕೊಳ್ತಾ ಇರ್ತಿನಿ ಶೋ ವೀಕ್ಷಿಸುವಾಗ.. ಒಂದು ಕಾಲದಲ್ಲಿ ಪ್ರಸಾರವಾಗುತ್ತಿದ್ದ ಹಾಸ್ಯದ ರಿಯಾಲಿಟಿ ಶೋಗಳಲ್ಲಿ ಕಪಿಲ್ ಸಹ  ಒಬ್ಬ ಸ್ಪರ್ಧಿಯಾಗಿದ್ದರು. ಅವುಗಳಿಗೆ ಅರ್ಚನಾ ಪೂರಣ್ ಸಿಂಗ್ ಜಡ್ಜ್ ಆಗಿರುತ್ತಿದ್ದರು. ಈಗ  ಅವರು ಆಯ್ಕೆ ಮಾಡಿ ಭಾರತೀಯ ವೀಕ್ಷಕರ ಮುಂದೆ ತಂದ ಕಪಿಲ್ ಅವರ ಶೋ ನಲ್ಲಿ ತೀರ್ಪುಗಾರರಾಗಿದ್ದಾರೆ. ಶಿಷ್ಯರ ಸಾಧನೆ ಹೀಗಿರಬೇಕಲ್ಲವೇ!

ಸೂಪರ್-ತಾಯಾಣೆ

Image result for green flowers
ಕಲರ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾಗುವ ಸೂಪರ್ ದಂಪತಿ ರಿಯಾಲಿಟಿ  ಷೋ ವಾರ ಪೂರ್ತಿ ವೀಕ್ಷಕರನ್ನು ಉಲ್ಲಾಸವಾಗಿಡುತ್ತದೆ. ಮುರಳಿ ಅವರ ನಿರೂಪಣೆಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆ ಆಟಗಳು ಮತ್ತು ಮುರಳಿಯವರ ಮಾತಿನ ಶೈಲಿ. ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಹಾಗೆ ಅನ್ನುವುದಕ್ಕಿಂತ ಬಿಗ್ ಬಾಸ್ ಮನೆಯಲ್ಲಿ ಸಣ್ಣಗಾಗಿ ಬಂದ ಮುರಳಿ ತಮ್ಮ ಫಿಟ್ನೆಸ್  ಕಾಯ್ದಿಟ್ಟುಕೊಂಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ  ಅಡುಗೆ ಕಾರ್ಯಕ್ರಮದಲ್ಲಿ ಜನರ ಮನ ಗೆದ್ದಿದ್ದ ಮುರಳಿ  ಕ.ಸೂಪರ್  ವಾಹಿನಿಯ ಕಾರ್ಯಕ್ರಮದಲ್ಲಿ ಇನ್ನು ಹೆಚ್ಚು ಇಷ್ಟವಾಗುತ್ತಾರೆ.(ಸ್ವಲ್ಪ ಜಾಸ್ತಿ ಅ ಮತ್ತು ಹಕಾರ  ಇದ್ರೂ ಸಹ!)ಮುಖ್ಯವಾಗಿ ಮುರಳಿ ಮಾತಿನ  ಶೈಲಿ, ಲವಲವಿಕೆ ಆಕರ್ಷಿಸುತ್ತದೆ.ಒಂದರಥದಲ್ಲಿ ಹಳೆಯ -ಹೊಸ ಆಟ..

Image result for green flowers

ಭೂಮಿ ತಾಯಾಣೆ  ಸರಳ ಕಥೆಯನ್ನು ಹೊಂದಿರುವ ಮತ್ತು ಇದೇ ವಾಹಿನಿಯಲ್ಲಿ ಪ್ರಸಾರವಾಗುವಂತಹ ಧಾರವಾಹಿ . ತುಂಬಾ ಕ್ಯೂಟ್  ಹೀರೊ-ಹೀರೋಯಿನ್ (ಭೂಮಿ -ಆಕಾಶ ) .ಶ್ರೀಮಂತರ  ಹುಡುಗ ಹಳ್ಳಿಗೆ ಬಂದು ಭತ್ತ ಬೆಳೆಯುವ  ಸಾಹಸಿ, ಅಲ್ಲಿನ ರಾಜಕೀಯ, ಹಳ್ಳಿ ಪ್ರಕೃತಿ ಸೌಂದರ್ಯ. ಆಕಾಶ್ ಮತ್ತು ಭೂಮಿ ಪಾತ್ರಧಾರಿಗಳು ಜಾಸ್ತಿ ಇಷ್ಟ ಆಗ್ತಾರೆ ಅವರ ಮುಗ್ಧ ನಟನೆಯಿಂದ.ಸಂಪೂರ್ಣವಾಗಿ ಹಳ್ಳಿಯ ಸೊಗಡು ಅದರಲ್ಲೂ ಮೈಸೂರು ಮಂಡ್ಯ ಸೊಗಡು .. ಇಷ್ಟ ಆಗುತ್ತದೆ.ಅಂಬರೀಷ್ ನಾರಂಗ್ ಮುಖ್ಯ ಪಾತ್ರಧಾರಿಗಳಲ್ಲಿ ಒಬ್ಬರು. ಟಿ ಎನ್ ಧಾರವಾಹಿ ಮೂಲಕ ವೀಕ್ಷಕರ ಮನದ  ಬಾಗಿಲು ತಟ್ಟಿದ್ದ  ಕಲಾವಿದ ಈ ಧಾರಾವಾಹಿಯಲ್ಲಿ ಭೂಮಿ ಅಪ್ಪನ ಪಾತ್ರಧಾರಿ. ತಾಯಿ ಪಾತ್ರ ಮಾಡಿರುವವರು ಮಾತ್ರವಲ್ಲ ಎಲ್ಲ ಪಾತ್ರಗಳು ಕೊಟ್ಟಿರುವುದನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. 

ಡೈಲಾಗ್

Image may contain: one or more people
ಚಿತ್ರಸೆರೆ : ವೆಂಕಟೇಶ್ ಮೂರ್ತಿ
ಕಳೆದ ಭಾನುವಾರ, ದಿನಾಂಕ ೦೩-೧೧-೨೦೧೯ ರಂದು ಗೋಖಲೆ ಇನ್ಸ್ಟಿಟ್ಯುಟ್, ಎನ್.ಆರ್.ಕಾಲೋನಿಯಲ್ಲಿ ಶ್ರೀ ಮುರಳಿ ಶ್ರೀನಿವಾಸನ್ ಅವರ ವಸಂತ ಪ್ರಕಾಶನದ ಮೂಲಕ ಮಹಾಭಾರತ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶ್ರೀ ಪೇಜಾವರ ಮಠದ ಪರಮ ಪೂಜ್ಯ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಆಗಮಿಸಿದ ವೇಳೆ ಸೆರೆಹಿಡಿದ ಚಿತ್ರ
 ಶ್ರೀ ಪೇಜಾವರ ಮಠದ ಪರಮ ಪೂಜ್ಯ ಗುರುಗಳಾದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಶ್ರೀಕೃಷ್ಣನ  ಬಳಿ  ಶಾಶ್ವತವಾಗಿ  ತೆರಳಿದಾಗ  ಈ ಚಿತ್ರ ಪಟ ಹೆಚ್ಚು  ಬಳಕೆಯಾಯಿತು. ವೆಂಕಿಪಿಡಿಯ  ಎಂದು  ಫ್ರೆಂಡ್ ಸರ್ಕಲ್ ನಲ್ಲಿ ಪ್ರಸಿದ್ಧರಾಗಿರುವ ವೆಂಕಿ ಅದ್ಭುತ ಛಾಯಾಚಿತ್ರಗಾರ .

ಗುರುಗಳು ಶಾಶ್ವತವಾಗಿ  ಭೌತಿಕ  ದೇಹ ತ್ಯಜಿಸಿದ  ದಿನ  ಕನ್ನಡ ಸುದ್ದಿವಾಹಿನಿಗಳ ನಿರೂಪಕರು   ನಿಜಕ್ಕೂ ಅದ್ಭುತವಾಗಿ ವಿಷಯದ  ಪ್ರಸ್ತಾವನೆ, ಮಂಡನೆ ಮಾಡಿದರು . ಆದರೆ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರ...! ಬಿಡಿ ...!
Image result for green color background

ಚಂದದ ಧಾರವಾಹಿ ಎಂದು ಹೇಳುವುದಕ್ಕಿಂತ ಸಾಮಾನ್ಯರಿಗೆ ಇಷ್ಟವಾಗುವಂತಹ ಕಥಾಹಂದರ ಇರುವಂತಹದ್ದು ಅಂದ್ರೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸುಬ್ಬಲಕ್ಷ್ಮಿ ಸಂಸಾರ. ಸುಬ್ಬಲಕ್ಷ್ಮಿ ಪಾತ್ರಧಾರಿ ಬಗ್ಗೆ ಹೇಳುವಷ್ಟಿಲ್ಲ. ಬಾಲನಟಿಯಾಗಿ , ಕಂಠದಾನ ಕಲಾವಿದೆಯಾಗಿ, ಸೀರಿಯಲ್ ನಟಿಯಾಗಿ ಹೀಗೆ ಹಲವಾರು ಬಗೆಯಲ್ಲಿ ಕನ್ನಡ ಕಲಾಪ್ರಿಯರ ಮನಗೆದ್ದ ಪ್ರತಿಭಾವಂತೆ. ಅವರ ಜೊತೆ ಶನಾಯ, ಗುರುಮೂರ್ತಿ, ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್,ಜೊತೆಗೆ  ಅರುಣ್ ಪಾತ್ರಧಾರಿ,ಬಾಲಕಲಾವಿದರು , ಮನೆಕೆಲದ ಪಾತ್ರ ಮಾಡಿರುವ  ನಟಿ   ...   ಎಲ್ಲರು ಸಕತ್ತಾಗಿ ಮಾಡಿದ್ದಾರೆ. ಪತಿ ಪತ್ನಿ ವೊ ಎನ್ನುವ ಅಂಶದ ಅಡಿಯಲ್ಲಿ ಈ ಕಥೆ ಸಾಗುತ್ತದೆ. ಮುಖ್ಯವಾಗಿ ಈ ಧಾರಾವಾಹಿಯ ಸಂಭಾಷಣೆ ತುಂಬಾ ವಿಶೇಷವಾಗಿದೆ. ಇಡೀ  ವಾರದಲ್ಲಿ ಪ್ರಸಾರವಾಗುವಂತಹ ಎಪಿಸೋಡ್ ಗಳಲ್ಲಿ ಪ್ರತಿ ಸಂಚಿಕೆಯಲ್ಲೂ  ಸಾಮಾನ್ಯವಾಗಿ  ಎರಡು ಮೂರಾದರೂ ತುಂಬಾ ಇಷ್ಟ ಆಗುವಂತಹ ಡೈಲಾಗ್ ಗಳು  ಇರುತ್ತದೆ.(ಮಿನಿಮಮ್ ).