Posts

Showing posts from January 10, 2016

ಜನ ನಿರೀಕ್ಷೆ

Image
google images
ಸಮಸ್ತರಿಗೂ. ಮಕರ ಸಂಕ್ರಾತಿ ಹಬ್ಬದ ಹಾರ್ದಿಕ ಶುಭಾಶಯಗಳು . ರೈತರ ಹಬ್ಬ ಇದು..ಆತನ ವ್ಯಕ್ತಿತ್ವವನ್ನು ಮತ್ತಷ್ಟು, ಮಗದಷ್ಟು, ಇನ್ನಷ್ಟು ಉಜ್ವಲಗೊಳಿಸುವ ಹಬ್ಬ.. ಆತನ ಸಾಕು ಪ್ರಾಣಿಗಳಿಗೆ ಮಾತ್ರವಲ್ಲ  ಆತನ ಬದುಕು  ಮೆರಗುಗೊಳಿಸಿದ ಪ್ರತಿ ಜೀವಕೋಟಿಗೆ   ಧನ್ಯವಾದಗಳನ್ನು ಅರ್ಪಿಸುವ..ಒಟ್ಟಾರೆ ಆತನ ಸಾಕು ಪ್ರಾಣಿಗಳಿಗೆ ಸರ್ಕಾರಿ ರಜೆಯ ದಿನ .. ಇದು ಹೆಣ್ಣುಮಕ್ಕಳ ಹಬ್ಬ.. ರಂಗೋಲಿಯಿಂದ  ಆವರಣವನ್ನು ಸುಂದರಗೊಳಿಸಿ ಆಹ್ಲಾದಗೊಳಿಸುವ ವಿಶಿಷ್ಟ  ಸಂಪ್ರದಾಯದ ಮೂಲಕ  ಆಕೆಯ ಸೃಜನಶೀಲತೆ  ಹೆಚ್ಚು ಜನಕ್ಕೆ ತಿಳಿಯುವಂತೆ ಮಾಡುವ ಹಬ್ಬ  ...
ಸಂಭ್ರಮ- ಸಂತೋಷ  ಎಲ್ಲರ ಬದುಕಲ್ಲಿ ಶಾಶ್ವತವಾಗಿರಲಿ ಎನ್ನುವ ಹಾರೈಕೆ ..
ಕನ್ನಡ ಪತ್ರಿಕಾರಂಗದಲ್ಲಿ ಹೊಸತನ್ನು ತಂದುಕೊಟ್ಟ ವಿಶ್ವೇಶ್ವರ ಭಟ್ಟರ ಹೊಸ ಕನಸು ಇಂದಿನಿಂದ ಆರಂಭವಾಗಿದೆ  .. ಸಾಕಷ್ಟು  ಹಳೆಯ- ಹೊಸ ಹುಮ್ಮಸ್ಸುಗಳು ಕೈ ಜೋಡಿಸಿವೆ..ಅವರ ಪ್ರಯತ್ನ ಸಫಲವಾಗಲಿ.. ಜನ ನಿರೀಕ್ಷೆಯ   ಪತ್ರಿಕೆಯಾಗಿ ವಿಶ್ವವಾಣಿ ಹೊರಹೊಮ್ಮಲಿ ಎನ್ನುವ ಶುಭ ಹಾರೈಕೆ ...


google images

ಜೀಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಾಡುಗರ.. ಅದರಲ್ಲೂ ವಿಶಿಷ್ಟ ಕಂಠಸಿರಿಯನ್ನು   ಪಡೆದ ಅಪರೂಪದ ಸಂಗೀತಗಾರ ರಾಜೇಶ್ ಕೃಷ್ಣನ್ ಅವರ ಕಾರ್ಯಕ್ರಮ ತುಂಬಾ ಚಂದ ಇತ್ತು. ರಾಜೇಶ್ ಅವರು ಧ್ವನಿಯಲ್ಲಿನ ಮಾಧುರ್ಯದ ಬಗ್ಗೆ ನಾನು ಸಾಕಷ್ಟು ಸರ್ತಿ ಹೇಳಿದ್ದೇನೆ. ಎಸ್ಪಿಬಿ, ರಾಜೇಶ್,…

ನೋ... ವೇ.. !

Image

ಯಾರ್ ನಂಬ್ತಾರೆ

Image

ಏನ್ ಮಾಡ್ತಾ ಇರ್ತಾರೆ

Image
“You have to grow from the inside out. None can teach you, 
none can make you spiritual. 
There is no other teacher but your own soul.” 
― Swami Vivekananda

ಇಂದು ವಿವೇಕಾನಂದರ ಹುಟ್ಟುಹಬ್ಬ.. ನನ್ನ ಪ್ರೀತಿಯ ಗುರುದೇವ..ಆದರ್ಶ ಅವರು .. ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಗುರುದೇವ..

ಕಳೆದವಾರ ಪುಟ್ಟಆಕ್ಸಿಡೆಂಟ್ ಆಯ್ತು.. ಕೈಗೆ ಸ್ವಲ್ಪ ಗಾಯ ಆಗಿದೆ.. ಕೀ ಬೋರ್ಡ್ ಮುಟ್ಟುವ..ತಟ್ಟುವ ಯಾವ ಕೆಲಸ ಆಗದ ಸ್ಥಿತಿ. ನಾನು ಎಡಗೈ ಬರಹಗಾರ್ತಿ  ಆದ ಕಾರಣ ಸ್ವಲ್ಪ ಸೇಫ್ .. ಆದರೂ ಸಹ ಕೀ ಬೋರ್ಡ್ಗೆ ಎರಡು ಕೈಗಳು ಬೇಕಾಗಿರುತ್ತೆ..ಇನ್ನು ಬೆರಳ ಹುಣ್ಣು ಮತ್ತು ಮೈಕೆ ನೋವು ಹಾಗೇ ಇದೆ.. ಮಲಗಿದರೆ.. ಆಗಿರುವ ಸಮಸ್ಯೆ ಬಗ್ಗೆ ಚಿಂತಿಸುತ್ತಾ ಕೂತರೆ ಅದರ ಪರಿಣಾಮ ಹೆಚ್ಚಾಗುತ್ತೆ.. ಅಂದು ಅಂದ್ರೆ ಬಿದ್ದ ದಿನವು ಸಹ ನಾನು ಆಫೀಸಿಗೆ ಹೋಗಿ ಕೆಲಸ ಮಾಡಲು ಆರಂಭ ಮಾಡಿದ್ದೆ.. ಮಧ್ಯಾಹ್ನ ಆಗುವಷ್ಟರಲ್ಲಿ ಇಡೀ ದೇಹವೆ ಚೂರು ಚೂರು ಆದ ನೋವು.. ಬಲಭಾಗಕ್ಕೆ ಬಿದ್ದಾಗ ಆದಂತಹ  ಗಾಯ..ರಕ್ತ . ಎಡ ಪಾದಕ್ಕೆ ಹೆಜ್ಜೆ ಇಡಲು ಸಾಧ್ಯವಾಗದೆ ಇರುವ  ಪರಿಸ್ಥಿತಿ. ನಮ್ಮ ಬಗ್ಗೆ ನಾವು ತಿಳಿಯ ಬೇಕಾದರೆ ಆಗಾಗ ಇಂತಹದ್ದೇನಾದರು ಆಗ್ತಾ ಇರಬೇಕೇನೋ  ಗೊತ್ತಿಲ್ಲ. ಸಾಮಾನ್ಯವಾಗಿ ನನಗೆ ತೊಂದರೆ ಆದ ಬಗ್ಗೆ ನಾನು ನನ್ನ ಬ್ಲಾಗ್ ಅಥವಾ ನನ್ನ ಫ್ರೆಂಡ್ಸ್ಗೂ ಸಹ ಹೇಳೋಲ್ಲ. ಕಳೆದವಾರ ಅಂದ್ರೆ ಶನಿವಾರ ನಾನು ಹಾಕಿದ ಪೋಸ್ಟ್ ಒಂದರ ಬಗ್ಗೆ ಬಂದ ಬ…