ಜನ ನಿರೀಕ್ಷೆ


google images
ಸಮಸ್ತರಿಗೂ. ಮಕರ ಸಂಕ್ರಾತಿ ಹಬ್ಬದ ಹಾರ್ದಿಕ ಶುಭಾಶಯಗಳು . ರೈತರ ಹಬ್ಬ ಇದು..ಆತನ ವ್ಯಕ್ತಿತ್ವವನ್ನು ಮತ್ತಷ್ಟು, ಮಗದಷ್ಟು, ಇನ್ನಷ್ಟು ಉಜ್ವಲಗೊಳಿಸುವ ಹಬ್ಬ.. ಆತನ ಸಾಕು ಪ್ರಾಣಿಗಳಿಗೆ ಮಾತ್ರವಲ್ಲ  ಆತನ ಬದುಕು  ಮೆರಗುಗೊಳಿಸಿದ ಪ್ರತಿ ಜೀವಕೋಟಿಗೆ   ಧನ್ಯವಾದಗಳನ್ನು ಅರ್ಪಿಸುವ..ಒಟ್ಟಾರೆ ಆತನ ಸಾಕು ಪ್ರಾಣಿಗಳಿಗೆ ಸರ್ಕಾರಿ ರಜೆಯ ದಿನ .. ಇದು ಹೆಣ್ಣುಮಕ್ಕಳ ಹಬ್ಬ.. ರಂಗೋಲಿಯಿಂದ  ಆವರಣವನ್ನು ಸುಂದರಗೊಳಿಸಿ ಆಹ್ಲಾದಗೊಳಿಸುವ ವಿಶಿಷ್ಟ  ಸಂಪ್ರದಾಯದ ಮೂಲಕ  ಆಕೆಯ ಸೃಜನಶೀಲತೆ  ಹೆಚ್ಚು ಜನಕ್ಕೆ ತಿಳಿಯುವಂತೆ ಮಾಡುವ ಹಬ್ಬ  ...
ಸಂಭ್ರಮ- ಸಂತೋಷ  ಎಲ್ಲರ ಬದುಕಲ್ಲಿ ಶಾಶ್ವತವಾಗಿರಲಿ ಎನ್ನುವ ಹಾರೈಕೆ ..
ಕನ್ನಡ ಪತ್ರಿಕಾರಂಗದಲ್ಲಿ ಹೊಸತನ್ನು ತಂದುಕೊಟ್ಟ ವಿಶ್ವೇಶ್ವರ ಭಟ್ಟರ ಹೊಸ ಕನಸು ಇಂದಿನಿಂದ ಆರಂಭವಾಗಿದೆ  .. ಸಾಕಷ್ಟು  ಹಳೆಯ- ಹೊಸ ಹುಮ್ಮಸ್ಸುಗಳು ಕೈ ಜೋಡಿಸಿವೆ..ಅವರ ಪ್ರಯತ್ನ ಸಫಲವಾಗಲಿ.. ಜನ ನಿರೀಕ್ಷೆಯ   ಪತ್ರಿಕೆಯಾಗಿ ವಿಶ್ವವಾಣಿ ಹೊರಹೊಮ್ಮಲಿ ಎನ್ನುವ ಶುಭ ಹಾರೈಕೆ ...


google images

ಜೀಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಾಡುಗರ.. ಅದರಲ್ಲೂ ವಿಶಿಷ್ಟ ಕಂಠಸಿರಿಯನ್ನು   ಪಡೆದ ಅಪರೂಪದ ಸಂಗೀತಗಾರ ರಾಜೇಶ್ ಕೃಷ್ಣನ್ ಅವರ ಕಾರ್ಯಕ್ರಮ ತುಂಬಾ ಚಂದ ಇತ್ತು. ರಾಜೇಶ್ ಅವರು ಧ್ವನಿಯಲ್ಲಿನ ಮಾಧುರ್ಯದ ಬಗ್ಗೆ ನಾನು ಸಾಕಷ್ಟು ಸರ್ತಿ ಹೇಳಿದ್ದೇನೆ. ಎಸ್ಪಿಬಿ, ರಾಜೇಶ್, ಸೋನು ನಿಗಮ್ , ವಿಜಯ್  ಪ್ರಕಾಶ್ ಹೀಗೆ ಒಂದಷ್ಟು ಹಾಡುಗಾರರ ಕಂಠ ಮಾಧುರ್ಯ ನನಗೆ ಹೆಚ್ಚು ವರ್ಣಿಸೋಕೆ ಆಗಲ್ಲ ಆದರೆ  ನನಗೆ ತುಂಬಾ ಇಷ್ಟ..
 ರಾಜೇಶ್ ಅವರ ಬದುಕು, ಕುಟುಂಬ,  ಯಶಸ್ಸು, ಅವರ ಗುರುಗಳು, ಶಿಷ್ಯಕೋಟಿ ,ಅಲ್ಲದೆ ಸ್ನೇಹಿತರು, ಸಹೋದ್ಯೋಗಿಗಳು ಹೀಗೆ ಪ್ರತಿಯೊಂದು ವಿಷಯ ಸರಳವಾಗಿ ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಚಿಕ್ಕದಾಗಿ ಚೊಕ್ಕವಾಗಿ ಆ ಕಾರ್ಯಕ್ರಮದ ಆಯೋಜಕರು ತಿಳಿಸಿದರು.. ಮನೋಜವಂ ರಾಜೇಶ್ ಶಿಷ್ಯ ಅನ್ನೋದು ನೋಡಿ ಖುಷಿ ಅನ್ನಿಸಿತು. ಚೈತನ್ಯ, ಓಹಿಲೇಶ್ವರಿ ಅವರೆಲ್ಲರಗಿಂತ ಈ ಮನೋಜವಂ ಜಾಸ್ತಿ ನೆನಪಲ್ಲಿ ಉಳಿದಿರುವುದು  ಯಾಕೇಂದ್ರೆ  ಈಹುಡುಗ  ಹೆಚ್ಚು ಹೆಚ್ಚು ಅಣ್ಣಾವರ ಧ್ವನಿಯನ್ನು ಇಮಿಟೇಟ್ ಮಾಡ್ತಾ ಇದ್ದ.ಎಲ್ ಎನ್ ಶಾಸ್ತ್ರಿಯವರು ಸಹ ಈ ಬಾಲಕನನ್ನು ತಿದ್ದಿದ ಮತ್ತೋರ್ವ ಗುರು.. ಅವರನ್ನು ಈ ಕಾರ್ಯಕ್ರಮದಲ್ಲಿ  ನೋಡಿ ಖುಷಿ ಆಯ್ತು..
ರಮೇಶ್ ಮಾತುಗಾರಿಕೆ, ಅತಿಥಿಗಳ ಜೊತೆಗಿನ ಮಾತುಕತೆಯ ಶೈಲಿಯನ್ನು  ಹೊಸಬರು ಮತ್ತು ಹಳಬರು ಮಾತ್ರವಲ್ಲ ನಿರೂಪಣೆಯ ಕನಸು  ಬೆಳೆಸಿಕೊಂಡವರು ಸಹ ಕಲಿಯಬೇಕಿದೆ..


google images


No comments: