Posts

Showing posts from October 19, 2014

ಪಾಕ ಕೆಡಿಸ್ತಾರೋ

Image
ದೀಪದ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು .. ಬದುಕಲ್ಲಿ ಕತ್ತಲೆಗೆ ಜಾಗ ಇಲ್ಲದಷ್ಟು ಗೆಲ್ಲುವ ಹುಮ್ಮಸಿನ ಬೆಳಕು ಸದಾ ಪ್ರಕಾಶಮಾನವಾಗಿರಲಿ...ನಿಮ್ಮ ಬಾಳಲ್ಲಿ ಕತ್ತಲು ಕರಗಿ ಬೆಳಕಿನ ಪ್ರಭಾವ ಸದಾ ಇರಲಿ ಎನ್ನುವ ಶುಭ ಹಾರೈಕೆ..


ಹಿಂದಿ   ಜನ ದೀಪಾವಳಿಯನ್ನು ದಿವಾಳಿ ಮಾಡಿ ಒದ್ದಾಡುತ್ತಾರೆ..ನಾವು ದೀಪಾವಳಿ ಅಂತ ಹೇಳ್ತಿವಿ. ನನ್ನ ಎಫ್ಬಿ ಮಿತ್ರ ರೋಹಿತ್ ರಾಮಚಂದ್ರಯ್ಯ ದೀಪಾವಳಿ ಬದಲಾಗಿ  ದಿವಾಳಿ(ಲಿ) ಅಂತ ಬರೆದರೆ ನಾನು ಅನ್ ಫ್ರೆಂಡ್ ಮಾಡ್ತೀನಿ ಅಂತ ಕೋಪ ತೋರಿದ್ದಾರೆ. ಆದರು ನನಗೆ ದಿವಾಳಿ(ಲಿ) ಅನ್ನೋದು ನನಗೆ ಗೂಗಲ್ ನಲ್ಲಿ ಸಿಕ್ಕ ಕಾರಣ ಅದನ್ನೇ ಹಾಕಿದ್ದೇನೆ...ದಿವಾಳಿ ಅನ್ನೋ ಪದ ನಿಮ್ಮ ಬದುಕಲ್ಲಿ ಪ್ರಭಾವ ಬೀರದಿರಲಿ ಎನ್ನುವ ಹಾರೈಕೆ ನನ್ನದು :-)
ಇವತ್ತು ದೀಪಾವಳಿ  ಹಬ್ಬಕ್ಕಿಂತ ಚಿನ್ನದ ಚೀಟಿ ಗೀಟಿ ಇತ್ಯಾದಿ ಬಗ್ಗೆ ಒಂದು ಕಾರ್ಯಕ್ರಮ ಇತ್ತು ಟೀವಿ ನೈನ್ ವಾಹಿನಿಯಲ್ಲಿ. ಹರಿಪ್ರಸಾದ್ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಚಿನ್ನದ ಬಗ್ಗೆ ಭಾರತೀಯರಿಗೆ ಮೋಹ. ಅದನ್ನೇ ಮುಂದಿಟ್ಟುಕೊಂಡು ದುಡ್ಡು ಮಾಡುವ ಮಂದಿ ಬಹಳಷ್ಟು ಮಂದಿ! ನಾನು ಅನೇಕ ಬಾರಿ ಚಿನ್ನ ಖರೀದಿ ಮಾಡಿದ್ದೇನೆ . ಆದರೇ,  ಒಂದು ಅಂಗಡಿಯಲ್ಲಿ ಕೊಂಡಾಗ ಕೊಟ್ಟ ಭರವಸೆ ಅದನ್ನು ಬದಲಾಯಿಸುವಾಗ  ಬೇರೆ ಆಗಿರುತ್ತದೆ. ಅದರಲ್ಲೂ ಈ ಚಿನ್ನದ ಒಡವೆ ಆರ್ಡರ್ ಮಾಡಿದಾಗ ಇರುವ ಪರಿಸ್ಥಿತಿ , ಅದು ನಮ್ಮ ಕೈಗೆ ಬಂದಾಗ  ??  ಬಿಡಿ ..ಇಂತಹ ವರ್ತನೆ ಸಾಕಷ್ಟು ಬಾರಿ ಆಶ್ಚ…

ಮೋಶನ್ ಪೋಸ್ಟರ್

Image
ಕಳೆದ ವಾರ ಅಲ್ಲ ಸುಮಾರು ಹತ್ತು ದಿನಗಳಿಂದ ಜ್ವರ, ಸುಸ್ತು.. ಜೊತೆಗೆ ರಾಶಿ ರಾಶಿ ಆಫೀಸ್ ವರ್ಕ್ .. ಬ್ಯಾಡ ಅಂದ್ರು ಬಿಡದ ಜವಾಬ್ದಾರಿ.. ಅವುಗಳ ನಡುವೆ ಮಾಡಿದ ಕೆಲಸಕ್ಕೆ ಪುರಸ್ಕಾರ ನೀಡೋದು ಬೇಡ ತಮ್ಮ ತಪ್ಪು ಮುಚ್ಚಿಟ್ಟು ಕೊಳ್ಳೋಕೆ ನಮ್ಮನ್ನೇ ಹೊಣೆ ಮಾಡುವ ಮಂದಿ.. ಇಷ್ಟು ಅಂಶಗಳ ನಡುವೆ ದೇಹ ಮತ್ತು ಮನಸ್ಸು ಎರಡು ದಣಿದಿತ್ತು. ಹಾಗಂತ ಈಗ ಚೇತರಿಕೆ ಆಗಿದೆ ಎಂದು ಅಲ್ಲ ಇದರ ಅರ್ಥ. ಆದರೆ ಚೇತರಿಸಿ ಕೊಳ್ಳಲೇ ಬೇಕು.. ಮಾಧ್ಯಮದಲ್ಲಿ ಕೆಲಸ ಮಾಡುವವರು ಕೊಚ್ಚೆಯಲ್ಲಿರುವ ಎಮ್ಮೆ ಥರ ಇದ್ದಾಗ ಮಾತ್ರ ಏನೇ ಆದರೂ ನಿರ್ಲಿಪ್ತವಾಗಿ ಇರ ಬಹುದು..ಏನೇ ಆದರು ಟೀವಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ತಪ್ಪದೆ ನೋಡೋ ಪದ್ಧತಿ ಹಾಗೆ ಮುಂದುವರೆದಿದೆ. ಬ್ಲಾಗ್ ಬರೆಯೋಷ್ಟು ಮನಸ್ಸು ಇಲ್ಲದೆ ಇದ್ದರು ಸಹಿತ ಟೀವಿ ನೋಡುವಷ್ಟು ಸಹನೆ ಇತ್ತು ಮತ್ತು ಇದೆ. 
ಸಾಮಾನ್ಯವಾಗಿ ನ್ಯೂಸ್ ಚಾನೆಲ್ಗಳು ನೋಡಲು ಹೆಚ್ಚಾಗಿ  ಆದ್ಯತೆ ನೀಡುತ್ತೀನಿ.  ರಿಯಾಲಿಟಿ ಶೋಸ್ ಅದರಲ್ಲೂ ಸ್ವಲ್ಪ ಮಜಾ ಕೊಡ ಬೇಕು, ನನಗೆ ಇಷ್ಟ  ಆಗುವ ಕಲಾವಿದರು ಅಥವಾ ಆಂಕರ್ ಗಳು ಇರ ಬೇಕು ಹೀಗೆ ಹತ್ತು ಹಲವಾರು ಸಂಗತಿ. 
 ಮೂಡ್ ಇರಲಿ ಬಿಡಲಿ ಇದ್ರೂ ಕಲರ್ ವಾಹಿನಿಯಲ್ಲಿ  ಬಿಗ್ ಬಾಸ್ ಅದರಲ್ಲೂ  ಸಲ್ಮಾನ್ ಖಾನ್ ನೋಡೋದಕ್ಕೆ  ತಪ್ಪದೆ ಶನಿವಾರ ಭಾನುವಾರ ಕಾಯ್ತೀನಿ. ಅದೇರೀತಿ ಕಪಿಲ್ ಕಾರ್ಯಕ್ರಮ ಸಹಿತ.ಗುತ್ತಿ,ಪಲಕ್ ಮತ್ತು ದಾದಿ, ಸಿದ್ದುಜಿ ಅಂದರೆ ಜಾಸ್ತಿ ಲೈಕ್! 
ಎಲ್ಲಾ ಹೆಣ್ಣುಮಕ್ಕಳಿಗೂ ಸಲ್ …