Posts

Showing posts from June 9, 2013

ಲೋಪದೋಷ ?

Image
ತುಂಬಾ ದಿನದಿಂದ ನನ್ನ ಬ್ಲಾಗ್ ಕಡೆ ಗಮನ ನೀಡುವುದಕ್ಕೆ ಆಗೇ ಇಲ್ಲ ಅದಕ್ಕೆ ಕಾರಣ ಮುಖ್ಯವಾಗಿ ಈ ಸೆಟ್ ಅಪ್ ಬಾಕ್ಸ್  ಕಥೆ.. ಅ ಪೆಟ್ಟಿಗೆಯನ್ನು ದೂರ ಮಾಡಿ ಮಲ್ಟಿ ನ್ಯಾಷನಲ್  ಕೊಡೆಗಳ ಪಾದ ಹಿಡಿದಿದ್ದಕ್ಕೆ ಇಲ್ಲಿ ಕೆಲವು ಕನ್ನಡ ಚಾನೆಲ್ ಗಳು ಪ್ರಸಾರ ಆಗಲ್ಲ. ರಂಗಣ್ಣನ  ಪಬ್ಲಿಕ್ ಟೀವಿ ನೋಡೋ ಹಾಗೆ ಇಲ್ಲ.. ಭಯಂಕರ ವಿಷಯಗಳು ಬರ್ತಾ ಇದೆ ನೋಡು ಅಂತ ನಮ್ಮ ಮೇಡಂ ಫೋನ್ ಮಾಡ್ತಾ ಇದ್ರೂ ನೋಡಲಾಗದ ಸ್ಥಿತಿ . ಹೇಯ್ ರಂಗಣ್ಣ ಏನಿದು ಕಥೆ ಎಂದು ಹೇಳಲಾಗದೆ    ಸುಮ್ಮನಿರುವ ಪರಿಸ್ಥಿತಿ ! ಕನ್ನಡದವರು ಕನ್ನಡ ಚಾನೆಲ್ಲೇ ನೋಡುತ್ತಾರೆ, ಆದರೆ ಕನ್ನಡ ಚಾನೆಲ್ಗಳು ಪ್ರಸಾರ ಆಗೋದೇ ಕಡಿಮೆ.. ಒಂದು ಕೊಡೆಯಲ್ಲಿ ಬೇರೆ ಭಾಷೆಗಳ ಅಷ್ಟು ಚಾನೆಲ್ ಬಂದ್ರು ಕನ್ನಡದವರ ಸ್ವಲ್ಪ ಚಾನೆಲ್ ಗಳು ಕಾಣೋದೆ ಇಲ್ಲ, ಇಲ್ಲಿ ಯಾರದು ಲೋಪದೋಷ ?

ನಿನ್ನೆ ನನ್ನ ಫ್ರೆಂಡ್ ಒಬ್ಬರು ಫೋನಿಸಿದರು.. ಸಾಮಾನ್ಯವಾಗಿ ಲೋಕಾಭಿರಾಮವಾಗಿ ಮಾತಾಡುವ ಅವರು ತುಂಬಾ ಸೀರಿಯಸ್ ಆಗಿ ಕೇಳಿದ್ದು ಆ ನಿಕಿತಾನ್ನ ಯಾಕೆ ಅಲ್ಲಿ ಇನ್ನು ಇಟ್ಟಿರೋದು ? ಕನ್ನಡದವರು ಇವರಿಗೆ ಬೇಡ ಹಿಂದಿಯವಳು ಕಂಡ್ರೆ ಇಷ್ಟ. ಆ ಸುದೀಪ್ ಗೆ ದರ್ಶನ್ ಫ್ರೆಂಡ್ ಅಂತನಾ ಹೀಗೆ ಮಾಡ್ತಾ ಇರೋದು, ಅವಳು ಕನ್ನಡ ಕೆಟ್ಟದಾಗಿ ಮಾತಾಡ್ತಾ ಹಾಳು ಮಾಡ್ತಾ ಇದ್ರೆ ಇವರು  ಅವಳಿಗೆ ಯಾಕೆ ಅಷ್ಟೊಂದು ಪ್ರಾಮುಖ್ಯತೆ ನೀಡ್ತಾ ಇರೋದು.. ಹೀಗೆ ಮಾತಿನ ಪ್ರವಾಹ ಹರಿದಿತ್ತು. ಒಂದು ಕ್ಷಣ ನಂಗೆ ಅರ್ಥ ಆಗಲಿಲ್ಲ, ಆ ಮೇಲೆ ತಿಳಿಯಿತು ಅದು…