Posts

Showing posts from June 16, 2013

ಬಿಡಿಸಿ ಹೇಳ ಬೇಕಿಲ್ಲಾ.. ಅಲ್ವ... !

Image
ಬಿಗ್ ಬಾಸ್ ಬಗ್ಗೆ ಜನಕ್ಕೆ ಇದ್ದ ಕೋಪ ತಣ್ಣಗಾಯಿತು.. ಅದನ್ನು ತಣ್ಣಗೆ ಮಾಡಲು ಅವರು ಇಷ್ಟು ದಿನ ತೆಗೆದುಕೊಂಡರು :-) .. ನಿಕಿತಾಳನ್ನು ಉಳಿಸಿಕೊಂಡು ಅಲ್ಲಿ ಕನ್ನಡ ಕಲಿಸ್ಕೊಡುವ ಬಾಲಿಶ ಪ್ರಯತ್ನವನ್ನು   ಸುದೀಪ್ ಸಮರ್ಥಿಸಿಕೊಂಡರು ಅದು ತಪ್ಪು ಎನ್ನುವ ಅಂಶ ಅವರಿಗೆ ಗೊತ್ತಿತ್ತು :-)
ಕನ್ನಡ ರಿಯಾಲಿಟಿ ಶೋಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ  ಬಿಗ್ ಬಾಸ್ ನ್ನು ಕಿಚ್ಚ ಸುದೀಪ್ ನಡೆಸಿ ಕೊಡುತ್ತಿರುವುದು ಜನಕ್ಕೆ ಇಷ್ಟ ಆಗಿದೆ.. ಕಿಚ್ಚ ವೈಯುಕ್ತಿಕವಾಗಿ ನನಗೆ ತುಂಬಾ ಇಷ್ಟ ಆಗುವ ಕಲಾವಿದ. ಆತನ ಕ್ರಿಯೇಟಿವಿಟಿ, ಪ್ರಯತ್ನ, ಹೊಸತನ ಎಲ್ಲವೂ ಯೂನಿಕ್. ಬಿಗ್ ಬಾಸ್ ಗೆ ಅವರು ನಿರೂಪಕರಾಗಿ ಬಂದಾಗ ಅಪಾರವಾಗಿ   ಖುಷಿ ಪಟ್ಟ ಫ್ಯಾನ್ ಗಳಲ್ಲಿ ನಾನು ಒಬ್ಬಳು.
ಕಿಚ್ಚ ಅವರ ಬಗ್ಗೆ ಹೇಳೋದಾದರೆ ಹೆಚ್ಚಿನ ಮಂದಿ ಎಲ್ಲ ಕ್ಷೇತ್ರದವರು  ತುಂಬಾ ಇಷ್ಟ ಪಡ್ತಾರೆ. ಅದಕ್ಕೆ ಇರ ಬೇಕು ನಿಕಿತ ವಿಷಯದಲ್ಲಿ ಅವರು ಅಷ್ಟೊಂದು ಕೋಪ ಮಾಡಿಕೊಂಡಿದ್ದು.
ಜನತೆಯನ್ನು   ಜನಾರ್ಧನ ಮೆಚ್ಚಿಸೋಕೆ ಆಗಲ್ಲ ಅನ್ನುವ ಮಾತು ಸತ್ಯ, ಆದರೆ ಆಗಲ್ಲ ಅಂತ ಕೂತರೆ ಪಾಕ ಮತ್ತಷ್ಟು ಹದಗೆಡುತ್ತೆ!

ಅತ್ಯಂತ ಸುಂದರವಾದ ಶೈಲಿ ಮತ್ತು ಆಂಗಿಕ ಭಾಷೆಯಿಂದ ಮನ ಸೆಳೆದ ಕಿಚ್ಚ ಅವರನ್ನು ಕಂಡರೆ ಈಗ ಅಪಾರ ಸಂಖ್ಯೆಯಲ್ಲಿ , ವಯಸ್ಸಿನ ಭೇದ ಇಲ್ಲದೆ ಇಷ್ಟ ಪಡುವಷ್ಟಮಟ್ಟಿಗೆ ಬೆಳೆದಿದ್ದಾರೆ. ಬೆಳೆದಿದ್ದಾರೆ ಅನ್ನುವ ಪದ ಈಗ ಯಾಕೆ ಬಳಸ್ತಾ ಇದ್ದೀನಿ ಅಂದ್ರೆ ಸಾಮಾನ್ಯವಾಗಿ ಬಹಳಷ್ಟು ಹಿರಿಯ…