ಗೆದ್ದಷ್ಟು ಖುಷಿ

 

 Open photo

 ಕೆಲವೊಂದು ಕಾರ್ಯಕ್ರಮಗಳು ಜನರಿಗೆ ಪ್ರಿಯವಾಗಿ   ಇರುತ್ತದೆ ಸದಾ ಕಾಲ. ಮುಖ್ಯವಾಗಿ ಮನೆಮಂದಿ ಎಲ್ಲರು ನೋಡುವಂತಹ  ಕಾರ್ಯಕ್ರಮಗಳು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ನೋಡುಗರ ಸಂಖ್ಯೆಯನ್ನು  ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ . ಇದಕ್ಕೆ ಸೂಕ್ತ ಉದಾಹರಣೆ ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ , ಡಾ .ನಾ . ಸೋಮೇಶ್ವರ್ ಅವರು ನಡೆಸಿಕೊಡುವ ಥಟ್ ಅಂತ ಹೇಳಿ! ಪುಸ್ತಕ -ಮಸ್ತಕ  ಇದೇ ವೀಕ್ಷಕರ ಮತ್ತು ಸ್ಪರ್ಧಿಗಳನ್ನು ಹೆಚ್ಚು ಇಂಪ್ರೆಸ್ ಮಾಡುವ ಅಂಶಗಳು . ಮನೆಯಲ್ಲಿ  ಕುಳಿತು ಉತ್ತರ  ಹೇಳಿ ಸರಿ ಇದ್ದರೆ ತಾವೇ ಗೆದ್ದಷ್ಟು ಖುಷಿ ಪಡುವ ಹಿರಿಯ ನಾಗರಿಕರು , ಜೊತೆಗೆ  ಕಿರಿಯ ವೀಕ್ಷಕರ ಸಮೂಹ .ಇಷ್ಟು ವರ್ಷಗಳಾದರೂ ವೀಕ್ಷಕರನ್ನು ಹಿಡಿದಿಟ್ಟಿರುವ ಸೋಮೇಶ್ವರ್ ಸರ್ ಗೆ  ಹ್ಯಾಟ್ಸ್ ಆಫ್  !

 

ವಾಸಂತಿ ನಲಿದಾಗ

 Open photo

ಸರಳ ಸದಭಿರುಚಿಯ ಹಾಸ್ಯಭರಿತ ವಾಸಂತಿ ನಲಿದಾಗ  ಚಿತ್ರವನ್ನು ನಿರ್ದೇಶನ ಮಾಡಿರುವವರು ನನ್ನ ಎಫ್ಬಿ ಮಿತ್ರ ರವೀಂದ್ರ ವೆಂಶಿ..ಆಗಾಗಲೇ ಅವರು  ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ . ಜೊತೆಗೆ ಉತ್ತಮ  ಸಿನಿ ವಿಮರ್ಶಕ.ಹೊಸ ಹುಡುಗ ರೋಹಿತ್ ಶ್ರೀಧರ್  ಮಾತ್ರವಲ್ಲದೆ ಮಾಗಿದ ಕಲಾವಿದರಾದ   ಸುಧಾರಾಣಿ  ಸಾಯಿ ಕುಮಾರ್ ಸಾಧು ಕೋಕಿಲ , ಸಂಭಾಷಣಕಾರ್ತಿ   ಶ್ರೀದೇವಿ ಅವರ ಶ್ರಮದ ಫಲ ಈಗ ಉತ್ತಮ ಫಲಿತಾಂಶ ನೀಡಿದೆ. ಸಾಮಾನ್ಯವಾಗಿ ನಿರ್ಮಾಪಕರ    ಮಕ್ಕಳು ಹೀರೊ ಆಗುವುದು  ವಿಶೇಷವಲ್ಲ ಆದರೆ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿಮಾಡುವಂತಹ ಡೆಡಿಕೇಷನ್ ಕೆಲವರಲ್ಲಿ ಕಂಡು ಬರುತ್ತದೆ . ಇದಕ್ಕೆ ರೋಹಿತ್ ಹೊರತಲ್ಲ    (ನಾವು ಬೇರೆಬೇರೆ ಭಾಷೆಯ  ನಿರ್ಮಾಪಕರ ಮಕ್ಕಳ ಸಿನಿಮಾಗಳನ್ನು ಬಹಳಷ್ಟು ನೋಡಿದ್ದೇವೆ . ಅವು ಬಂದಂಗೆ  ಹೋಗಿದ್ದು ಇದೆ .. ಯಶಸ್ಸು  ಉಹುಂ  ) . ನಾನು ಯಾಕೆ ಇವೆಲ್ಲ ಹೇಳಿದೆ ಅಂದ್ರೆ ರವೀಂದ್ರ ವೆಂಶಿ ಅವರ ಪತ್ನಿ ಸಹನಾ ಟಿವಿ ಕಲಾವಿದೆ . ಸುವರ್ಣ  (ಸ್ಟಾರ್  ಸುವರ್ಣ ) ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಹಾಸ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದರು . ಅದಾದ ನಂತ್ರ ರವಿ ಗರಣಿ ಅವರ ಧಾರಾವಾಹಿಯಲ್ಲಿ ನಟಿಸುವಾಗ  ನಾನು ಅವರನ್ನು ಸಂದರ್ಶಿಸಿದ್ದೆ . ಈಗ ಬಹಳಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ/ ಸುತ್ತಿದ್ದಾರೆ.ತುಂಬಾ ಸರಳ ಮನದ ಹೆಣ್ಣುಮಗಳು ಈಕೆ .ಸಹನಾ ಮೂಲಕ ನನಗೆ ರವಿ ಪರಿಚಯ ಆಯ್ತು .ನಾನು ಅಂತರ್ಜಾಲ   ಪತ್ರಿಕೆ ಒಂದರಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿ ಸಿನಿಮಾಗಳ ಬಗ್ಗೆ ವಿಮರ್ಶೆಯನ್ನು ಬರೆಯುತ್ತಿದ್ದರು...
ಸಿನಿ ಕ್ಷೇತ್ರದಲ್ಲಿ   ಹೆಚ್ಚು ಯಶಸ್ವಿ  ಆಗಲಿ ರವೀಂದ್ರ ಮತ್ತು  ಟೀಮ್.

ಸಕತ್ ಇದೆ

 ಕಲರ್ ವಾಹಿನಿಯಲ್ಲಿ ತಪ್ಪದೆ ನೋಡುವ ಷೋ ಬಿಗ್ ಬಾಸ್ .ಕಿಚ್ಚ ಸುದೀಪ್ ನಿರೂಪಣೆ ನನಗೆ  ಹೆಚ್ಚು ಆಸಕ್ತಿದಾಯಕ ಅಂಶ . ಜೊತೆಗೆ ಕೆಲವೊಬ್ಬರು ಸ್ಪರ್ಧಿಗಳು  , ಅದರಲ್ಲಿ ನೀಡುವ  ಟಾಸ್ಕ್ ಗಳು ಹೀಗೆ ಒಂದಲ್ಲ ಒಂದು ಅಂಶವು ಆಕರ್ಷಿಸುತ್ತದೆ .ಈಸರ್ತಿಯಂತೂ  ಸಕತ್  ಇದೆ ಟಾಸ್ಕ್ ಗಳು . ಈ ಬಾರಿ ನಾನು  ಬಿಗ್ ಬಾಸ್ ವೀಕ್ಷಿಸುವುದು ಸ್ವಲ್ಪ   ತಡವೇ  ಆಯ್ತು . ಕಾಶಿ ಪ್ರವಾಸಕ್ಕೆ ಹೋಗಿದ್ದೆ . ಕಾರಿಡಾರ್ ನೋಡುವ ಆಸೆ ಇತ್ತು .. ಅದು ನೆರವೇರಿತು . ನಾನು ಹೋದಂತಹ ಸಮಯದಲ್ಲಿ ಸಿಕ್ಕಾಪಟ್ಟೆ ಮಳೆ , ಮಳೆಯಲ್ಲಿ ಬೋಟಿನಲ್ಲಿ ಕುಳಿತು ಗಂಗೆ ನದಿಯಲ್ಲಿ ಬೀಟ್ ಹೊಡೆದಿದ್ದು ಒಂದು ಚಂದದ  ಅನುಭವ .
ಬಿಗ್ ಬಾಸ್ ನಲ್ಲಿ ನನಗೆ ಹೆಚ್ಚು ಇಷ್ಟ ಆಗಿರೋದು ರಾಕೇಶ್ ಅಡಿಗ. ನಾನೊಂದು ಸಿನಿ ಪತ್ರಿಕೆಯಲ್ಲಿ (ಅರೆಬರೆ ಕೆಲಸ ) ಕೆಲಸ ಮಾಡುವಾಗ ರಾಕೇಶ್  ಕನ್ನಡ rap ನಲ್ಲಿ ಹೆಸರು ಮಾಡುತ್ತಿದ್ದ ಪ್ರತಿಭೆ . ರವಿ ಬೆಳಗೆರೆ ಮಗ ಕರ್ಣರ  ಫ್ರೆಂಡ್  ಆಗಿದ್ದಕ್ಕೆ ಈ  ತಂಡ ಬಗ್ಗೆ ಬರೆಯುವಂತೆ ಭಾವನಾ  ಬೆಳಗೆರೆ ನಮ್ಮ ಮ್ಯಾಮ್  ಬಳಿ ಕೇಳಿದ್ದರು . ಅವರು ನನಗೆ ಕೆಲಸ ಒಪ್ಪಿಸಿದ್ದರು. ಅದಾದ ಬಳಿಕ ಈ ಹುಡುಗ ಒಂದಷ್ಟು ಸಿನಿಮಾಗಳಲ್ಲಿ  ನಟಿಸಿದ್ದು ..ಯಶಸ್ವಿ ಆಗಿದ್ದು ... ! ಆಗ ಇದ್ದ ಸೌಮ್ಯ ಕಳೆ ಈಗಲೂ ಇದೆ .. ಅದಕ್ಕೆ ಲೈಕ್ ಆಯ್ತು . ಈತ ಟ್ರೋಫಿ ಗೆಲ್ತಾರೋ  ಇಲ್ಲವೋ ಗೊತ್ತಿಲ್ಲ .ಯಾಕೇಂದ್ರೆ  ಬಿಗ್ ಹೌಸ್ ಕ್ಯಾಲುಕಲೇಶನ್ ಬೇರೆ  ಅಲ್ವ ಸುದೀಪಾ ..
 ಅರುಣ್ ಸಾಗರ್ ಆ ಎನರ್ಜಿ , ಅಮ್ಮು ಧೈರ್ಯ , ಜೊತೆಗೆ ಅನುಪಮಾ  ಸ್ವಭಾವ  ಇಷ್ಟ ಆಗ್ತಾ ಇದೆ . ಮೊದಲ ಅತಂತ್ರದ  ಅನುಪಮಾ ಈಗಿನ ಆತ್ಮವಿಶ್ವಾಸದ  ಸ್ಟೈಲಿಶ್ ಹುಡುಗಿಯಾಗಿ ವೀಕ್ಷಕರ ಮುಂದೆ  ಬಂದಿರುವುದು ನೋಡುವಾಗ ಖುಷಿ ಆಗುತ್ತೆ.



ಶ್ರೀರಸ್ತು

 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ 'ಶ್ರೀ ರಸ್ತು ಶುಭಮಸ್ತು'  ಸಧ್ಯಕ್ಕಂತೂ ಬೋರ್ ಹೊಡಿಸದೆ ಮುನ್ನಡೆಯುತ್ತಿರುವ ಧಾರಾವಾಹಿ . ಜೊತೆಜೊತೆಯಲಿ  ಪ್ರಸಾರ ಆಗುತ್ತಿದ್ದ ಸಮಯದಲ್ಲಿ ಇದು  ಆರಂಭ ಆಗಿದ್ದಕ್ಕೆ ಮೊದಲಿನಿಂದಲೂ ನೋಡುವ ಮನಸ್ಸು  ಆಯಿತು . ಕತೆ ಮಾಮೂಲಿನೆ ಆಗಿದ್ದರು ತುಂಬಾ ತಲೆ ಕೆಡುವಂತಹ ಪಾತ್ರಗಳು, ಬೋರ್ ಹುಟ್ಟಿಸುವ ಅಂಶಗಳು ಸಧ್ಯಕ್ಕೆ ಇಲ್ಲ ಬಿಡಿ ! ಮುದ್ದಾದ ನಟಿ ಸುಧಾರಾಣಿ ,ಅಜಿತ್ ಹಂಡೆ  ಮಾತ್ರವಲ್ಲ ತುಳಸಿಯ ಸೊಸೆ , ಮಗ ಮಗಳು ,ಬೀಗರುಗಳು , ನೈಬರ್ರ್ ಗಳು .. ಎಲ್ಲರ  ಅಭಿನಯ ಚನ್ನಾಗಿದೆ. ಸುಧಾರಾಣಿ  ಪಾತ್ರದಷ್ಟೇ ಇಷ್ಟ ಆಗೋದು ಮಾಧವ್ ಮತ್ತು  ತುಳಸಿ ಮಾವನವರ ಪಾತ್ರ.ಅದರಲ್ಲೂ ಮಾವನ  ಡೈಲಾಗ್ ಗಳು  ಖುಷಿ ಕೊಡುತ್ತೆ ..
ಸಧ್ಯಕ್ಕೆ ಇಷ್ಟೇ  ಈ ಸೀರಿಯಲ್ ವಿಷ್ಯ ಹೇಳೋಕೆ ಇರೋದು ಮತ್ತೇನು ಇಲ್ಲ ಬಿಡಿ!

😅😁

ಮುಗ್ಧತೆ

 

 

ನಮ್ಮಮ್ಮ ಸೂಪರ್ ಸ್ಟಾರ್  ಕಲರ್ ವಾಹಿನಿಯಲ್ಲಿ ವೀಕೆಂಡ್ ಗಳಲ್ಲಿ ಪ್ರಸಾರ ಆಗುವ   ಕಾರ್ಯಕ್ರಮ . ಸೃಜನ್ ಲೋಕೇಶ್ , ತಾರಾ  ಮತ್ತು ಅನು ಪ್ರಭಾಕರ್   ನೇತೃತ್ವದಲ್ಲಿ ಹೊರ ಬರುತ್ತಿರುವ ಈ ರಿಯಾಲಿಟಿ ಷೋ ನಲ್ಲಿ ಮಕ್ಕಳು , ಮಕ್ಕಳು ಮತ್ತು ಮಕ್ಕಳು , ಜೊತೆಗೆ ಅವರ ಅಮ್ಮಂದಿರು ಹಾಗು ವಂಶಿಕ  ವೀಕ್ಷಕರನ್ನು ಹಿಡಿದಿಡುವ  ಅಂಶಗಳು . ಚಿಣ್ಣರ   ಪ್ರತಿಭೆಯ ಜೊತೆಗೆ ಅಮ್ಮಂದಿರ ಪ್ರತಿಭೆಗೂ ಹೆಚ್ಚಿನ ವ್ಯಾಲ್ಯೂ ದೊರಕಿಸಿ ಕೊಡುವಂತಹ ಕಾರ್ಯಕ್ರಮ ಇದಾಗಿದೆ . ಮಾತಿನ ಮೂಲಕ ವೀಕ್ಷಕರನ್ನು ಹಿಡಿದಿಡುವ ಸೃಜನ್ , ಚಂದ ನಗುವಿನ ಅನು , ಎವರ್ ಗ್ರೀನ್ ತಾರಾ ಅನುರಾಧ ಜೊತೆಗೆ  ಇಷ್ಟ ಆಗುವ ಅಂಶ  ಅಂದ್ರೆ ನಿರಂಜನ್ ದೇಶಪಾಂಡೆ ನಿರೂಪಣೆ . ರೇಡಿಯೋ ಜಾಕಿ ಆಗಿದ್ದಾಗಲೂ ಸಹ ಹೆಚ್ಚು ಇಷ್ಟ ಆಗ್ತಾ ಇದ್ರು . ಮಾತಿನ ಓಘ , ಸಮೇಹಕ್ಕೆ ಅನುಗುಣವಾಗಿ ಹೊರಹೊಮ್ಮಿಸುವ   ಹಾಸ್ಯಭರಿತ (ದ್ವಂದ್ವಾರ್ಥವು ಹೆಚ್ಚಾಗಿರುತ್ತೆ ಆ ವಿಷ್ಯ ಬೇರೆ !) ಮಾತುಗಳು . ದೊಡ್ಡವರು   ಏನೇ ಮಾತಾಡಿ ಆದ್ರೆ  ಅಲ್ಲಿಗೆ ಬರುವ ಮಕ್ಕಳನ್ನು ಮಕ್ಕಳಾಗಿಯೇ  ಇರಲು ಬಿಡಿ .. ವೀಕ್ಷಕರಿಗೆ   ಇಷ್ಟ ಆಗುವುದು ಮಕ್ಕಳ ಮುಗ್ಧತೆ  ಹೊರೆತು .....!

ಸೂಪರ್ ಸ್ಟಾರ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುವ  'ಸುವರ್ಣ ಸೂಪರ್ ಸ್ಟಾರ್ 'ಮಹಿಳೆಯರ ಚಂದದ ಕಾರ್ಯಕ್ರಮ . ಅದು ಯಾವ ಕಾರಣಕ್ಕೆ ಇಷ್ಟ ಆಗುತ್ತೆ ಅಂದ್ರೆ  ಅದನ್ನು ನಡೆಸಿ ಕೊಡುವ ಶಾಲಿನಿಯ ಮಾತಿನ ಶೈಲಿ  , ಆಕೆ ಪ್ರತಿದಿನ   ಧರಿಸುವ  ವಿನ್ಯಾಸಭರಿತ ರವಿಕೆ ಹೀಗೆ     ಎಲ್ಲವು ಚಂದ ಚಂದ .ಮುಖ್ಯವಾಗಿ ಗುಳಿಗಲ್ಲದ  ಶಾಲಿನಿ  ಸ್ವಲ್ಪ ಜಾಸ್ತಿನೇ ಇಷ್ಟ ಆಗುವ ನಿರೂಪಕಿ.
ತೆಲುಗು  ವಾಹಿನಿಗಳಲ್ಲಿ ಸುಮಾ ಎನ್ನುವ ಹೆಣ್ಣುಮಗಳು  ಮಾಡುವ ನಿರೂಪಣೆಯು ಸಹ  ಹೀಗೆ ಹೆಚ್ಚಿನ ಲವಲವಿಕೆಯಿಂದ ಇರುತ್ತಿತ್ತು.ಇತ್ತೀಚಿನ ದಿನಗಳಲ್ಲಿ ವಾಹಿನಿಗಳನ್ನು ನೋಡುವುದಕ್ಕಿಂತ ಸಿನಿಮಾಗಳನ್ನು  ನೋಡುವ ಕೆಲಸವೇ   ಆಗಿದೆ .
ಒಟ್ಟಾರೆ ಹೇಳುವುದಾದರೆ ಶಾಲಿನಿಯ ನಿರೂಪಣೆ ಇರುವ ಯಾವುದೇ ಕಾರ್ಯಕ್ರಮ ಆಗಿರಲಿ  ನವಿರಾದ ಆಹ್ಲಾದ ಕೊಡುತ್ತದೆ ಮನಕ್ಕೆ !