Posts

Showing posts from December 15, 2013

ಇಂಕಾ ಇಂಕಾ

Image
ಡಿಸ್ಕವರಿ ಚಾನೆಲ್ ನಲ್ಲಿ ಅತಿ ಹೆಚ್ಚು ಮುಜುಗರ ಮತ್ತು ಆಶ್ಚರ್ಯ ಉಂಟು ಮಾಡುವ ಕಾರ್ಯಕ್ರಮ ಅಂದ್ರೆ ಮ್ಯಾನ್ vs ವೈಲ್ದ್. ಮನುಷ್ಯ ಏನು ಬೇಕಾದ್ರೂ ತಿಂದು ಬದುಕಿರ ಬಲ್ಲ ಅನ್ನೋದಕ್ಕೆ ಸಾಕ್ಷಿ ಈ ಕಾರ್ಯಕ್ರಮ. ನಿಜ ಹೇಳಬೇಕು ಅಂತ ಅಂದ್ರೆ ನಮಗೆ ತಿನ್ನುವ ಆಸೇನೆ ಹೊರತು ಹೊಗುತ್ತದೆ. ನನಗೆ ಆತನಿಗಿಂತ ಆತನ ಆಟಗಳನ್ನು ಶೂಟ್ ಮಾಡ್ತಾರಲ್ಲ ಅವರ ಬಗ್ಗೆ ಹೆಚ್ಚು ಆಸಕ್ತಿ. ಒಂದು ಜೋಕ್ ಇದೆಯಲ್ಲ ಚಂದ್ರಗ್ರಹಕ್ಕೆ ಯುರಿಗಗಾರಿನ್ ಹೋದಾಗ ಅಲ್ಲಿ ಉಡುಪಿ ಹೋಟಲ್ ಭಟ್ಟರ ಟೀ  ಅಂಗಡಿ ಅಲ್ಲಿ ಇತ್ತು  ಅನ್ನುವಂತೆ  ಈತನ ಹಿಂದೆ ಹಿಂದೆ ಕ್ಯಾಮರ ಹಿಡಿದು ಹೋಗ್ತಾರಲ್ಲ ಅವರೇ ಹೆಚ್ಚು ಗ್ರೇಟ್ ಅಂತ ಅನ್ನಿಸೋದು .

ಸೋನಿ ವಾಹಿನಿಯಲ್ಲಿ ಪ್ರಸಾರ ಆಗುವ ಸಿಐಡಿ ಸಕತ್ ಮಜಾ ಕೊಡುವ ಕಾರ್ಯಕ್ರಮ. ಅಷ್ಟೊಂದು ವರ್ಷಗಳಿಂದ ಪ್ರಸಾರ ಆಗುತ್ತಿದ್ದರು ಜನರಿಗೆ ಬೋರ್ ಆಗಿಲ್ಲ. ನನಗೂ ಇಷ್ಟ ಕಣ್ರೀ . ಇನ್ಫ್ಯಾಕ್ಟ್ ಮಜಾ ಯಾಕೆಂದ್ರೆ ಸಾಮಾನ್ಯವಾಗಿ ನಾನು ಕಥೆಗಳಲ್ಲಿ ಓದಿರುವ ಪ್ರಕಾರ ಸಿ ಐಡಿ ಗಳು ಒಟ್ಟಿಗೆ ಹೋಗಿ ಕಂಡು ಹಿಡಿಯಲ್ಲ. ಆದರೆ ಸೋನಿ ಸಿಐಡಿ ಗುಂಪುಗುಂಪಾಗಿ ಹೋಗ್ತಾರೆ ಕಂಡು ಹಿಡಿಯಲು. ಆ ದೃಶ್ಯಗಳು ಮಜಾ ಕೊಡುತ್ತೆ ನನಗೆ. ಇಂತಹ ಕಡೆ ಕೆಲಸ ಸಿಕ್ರೆ ಆರಾಮವಾಗಿ ಸೇರ  ಬಹುದು ;-)

ಬಿಗ್ ಬಾಸ್ ಕಲರ್ ವಾಹಿನಿ ಜಾನ್. ಅದರಲ್ಲುಸಲ್ಮಾನ್ ಖಾನ್ ಮಾತುಗಳು ಎಲ್ಲರಿಗೂ ಇಷ್ಟ . ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಈ ಸೀಸನ್ ಮಾತ್ರ ಸಾಡೇ ಸಾತಿ ತೊಂದರೆ ಅನುಭವಿಸ್ತಾ ಇ…