ಮುಂದೆಮುಂದೆ

Image result for red flower images
ಸಾಮಾನ್ಯವಾಗಿ ನಾನು ಯಾವುದೇ ಧಾರವಾಹಿ ಆಗಿರಲಿ ಆರಂಭದ ಕೆಲವು ಎಪಿಸೋಡ್ ಗಳನ್ನು ವೀಕ್ಷಿಸಿ ಸ್ವಲ್ಪ ಗ್ಯಾಪ್ ಕೊಟ್ಟು ನಂತರ ನೋಡುತ್ತೇನೆ. ಅದು ವಾರ, ತಿಂಗಳು, ಆರುತಿಂಗಳು ಸಹ ಆಗಿರ ಬಹುದು .ಕೆಲವು ಬಾರಿ ಧಾರವಾಹಿಗಳು ದಿಕ್ಕಾಪಾಲಾಗಿ ಹೋಗಿರುತ್ತದೆ, ಕೆಲವೊಂದು ಮುಗಿದೇ ಬಿಟ್ಟಿರುತ್ತದೆ ಆ ವಿಷ್ಯ ಬಿಡಿ.
ಸಧ್ಯಕ್ಕೆ ಇತ್ತೀಚೆಗೆ ನಾನು ವೀಕ್ಷಿಸಿದ ಕನ್ನಡ ಧಾರವಾಹಿ ಅಂದ್ರೆ ಬ್ರಹ್ಮಗಂಟು ಧಾರವಾಹಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಈ ಧಾರವಾಹಿ ಈಗಾಗಲೇ  ಹಿಂದಿಯ  ಅಂಡ್  ಟಿವಿಯಲ್ಲಿ ಸಾಕಷ್ಟು ಎಪಿಸೋಡ್ ಗಳನ್ನು ಪೂರ್ಣಗೊಳಿಸಿದೆ.
ದಪ್ಪ ಹುಡುಗಿಯ ಕಹಾನಿ ಇದರ ಜೀವಾಳ. ಅಪ್ಪ ಇಲ್ಲದ ,ತಾಯಿ, ಅಣ್ಣ, ಅತ್ತಿಗೆ ಹಾಗೂ ತಮ್ಮನ ಜೊತೆ ವಾಸಿಸುತ್ತಿದ್ದ ಸರಳ ಮನದ ಹುಡುಗಿಯನ್ನು ಸುಂದರ ಕಬಡ್ಡಿ ಛಾಂಪಿಯನ್ ಮದುವೆಯಾಗುತ್ತಾನೆ ಅದೂ  ಅನಿವಾರ್ಯ ಕಾರಣದಿಂದ.. ಹಿಂದಿ  ನಾಯಕಿಗಿಂತ ಕನ್ನಡದಲ್ಲಿರುವ ನಾಯಕಿ ದಪ್ಪ ಹಾಗೂ ರೂಪ  ಎರಡರಲ್ಲೂ ಮುಂದೆ ಇದ್ದಾರೆ. ಈ ಮುದ್ದಾದ ಹುಡುಗಿ ನಟನೆಯನ್ನು ಸಹಿತ  ಅಷ್ಟೇ ಮುದ್ದು ಮುದ್ದಾಗಿದೆ... 

ಗಮನ
ಹಿಂದಿ ಜೀ ವಾಹಿನಿಯಲ್ಲಿ ವೋ ಅಪ್ನಾ ಸ ಎನ್ನುವ ಹೆಸರಿನ ಧಾರಾವಾಹಿ ಪ್ರಸಾರ ಆಗ್ತಾ  ಇದೆ.   ಅತ್ಯಂತ ಶ್ರೀಮಂತ  ಉದ್ಯಮಿ  ಆದಿತ್ಯ ಜಿಂದಾಲ್, ಆತನ ಹೆಂಡತಿ ನಿಶಾ, ಕಾಕಾಸ, ಕಾಕಿಸಾ, ಬಾಬಾ ಸಾ , ಚಿಕ್ಕಪ್ಪನ ಮಗ-ಸೊಸೆ, ಆದಿ ಮಕ್ಕಳು , ಅಲ್ಲದೇ ಅತನ ಗೆಳತಿ ಜಾನ್ಹವಿ ಮತ್ತು ಆಕೆಯ ತಾಯಿ ಮತ್ತು ತಂಗಿ.
ಇಷ್ಟೇ ಪಾತ್ರಗಳು ಈ ಧಾರವಾಹಿಯ ಹೈಲೈಟ್. ಈ ರೀತಿಯ  ಧಾರವಾಹಿಗಳಲ್ಲಿ ವಿಲನ್ ಮಾಡುವ ಕೆಲಸಗಳು ಅಷ್ಟಿಷ್ಟಲ್ಲ. ಖಳರನ್ನು ಹೆಚ್ಚು ವೈಭವೀಕರಣ ಮಾಡಲಾಗಿರುತ್ತದೆ. ಆದರೇ ಈ ಕಥೆಯಲ್ಲಿ ಕಷ್ಟದ ಜೊತೆಗೆ ಪರಿಹಾರವನ್ನು ಸಹ ನಿರ್ದೇಶಕರು  ಶೀಘ್ರವಾಗಿ  ತೋರಿಸುವುದರಿಂದ  ವೋ ಅಪ್ನಾ ಸಾ ಧಾರವಾಹಿ ಬೋರ್  ಅನ್ನಿಸಲ್ಲ. ಮುಖ್ಯವಾಗಿ ಸಾಕಷ್ಟು ತಿರುವುಗಳನ್ನು ಒಳಗೊಂಡ ಈ ಧಾರವಾಹಿಯಲ್ಲಿ ಬರುವ ಮುಖ್ಯ ಪಾತ್ರಗಳು ಅದರಲ್ಲೂ ಜಾನ್ಹವಿ, ಆದಿ ಮತ್ತು ನಿಶಾ ಪಾತ್ರಗಳು ಹೆಚ್ಚು ಗಮನ ಸೆಳೆಯುತ್ತದೆ. ವಿಲನ್ ನಿಶಾ ಆಂಗಿಕ ಅಭಿನಯ ಅದ್ಭುತ. 

ಕೋರಿಕೆಸ್ಟಾರ್ ಸುವರ್ಣ ವಾಹಿನಿಯಲ್ಲಿ  ಪ್ರಸಾರವಾಗುವ ಅಡುಗೆ ಕಾರ್ಯಕ್ರಮ ಬಹಳ ವಿಶಿಷ್ಟವಾಗಿರುತ್ತದೆ.ಅದರಲ್ಲಿ ಶೆಫ್ ಗಳು ಬಂದು ತಮ್ಮ ಕೈ ರುಚಿಯನ್ನು ತೋರುತ್ತಾರೆ, ವಿಜಯಲಕ್ಷ್ಮಿ ರೆಡ್ಡಿಯವರು ಸಹಿತ ವಿವಿಧ ಅಡುಗೆಯನ್ನು ವೀಕ್ಷಕರಿಗೆ ತೋರಿಸುತ್ತಾರೆ. 
ಆದರೇ ಇವೆಲ್ಲಕ್ಕಿಂತ ಹೆಚ್ಚು ಗಮನ ಸೆಳೆಯುವ ಕಾರ್ಯಕ್ರಮ ಅಂದ್ರೆ ಗೌರಿ ಮೇಡಮ್ ಅವರು ತಿಳಿಸಿಕೊಡುವ ಅಡುಗೆ, ಕಷಾಯಗಳು, ಎಲೆ, ಕಾಂಡ , ಬೇರು, ತರಕಾರಿ, ಹಣ್ಣುಗಳ ವಿಶೇಷ ಮಹತ್ವ..  ಜೊತೆಗೆ ಮಕ್ಕಳು, ಹಿರಿಯರು ಎಲ್ಲರಿಗೂ ಅಗತ್ಯವಿರುವ ಮನೆಔಷಧ. ಹಳೆ ಸಿನಿಮಾ ಹೀರೋಯಿನ್ ಥರ ಇರುವ ಗೌರಿ ಮೇಡಮ್ ಅವರು ಧರಿಸುವ ಉಡುಗೆ (ಸೀರೆಗಳು), ಒಡವೆ, ಅಲಂಕಾರ, ಆತ್ಮವಿಶ್ವಾಸ ಹೆಚ್ಚು ಗಮನ ಸೆಳೆಯುತ್ತದೆ.
ಈಗ ಮಳೆಗಾಲ.. ಸಾಮಾನ್ಯವಾಗಿ ಎಲ್ಲರಿಗೂ ನೆಗಡಿ ಹಾಗೂ ಕೆಮ್ಮು ಬಹಳ ಬೇಗ ಬರುತ್ತದೆ.ಅದರಲ್ಲೂ ಮಕ್ಕಳಿಗೆ ನೆಗಡಿ-ಕೆಮ್ಮಿನ  ಉಪಟಳ ಹೆಚ್ಚಾಗಿರುತ್ತದೆ.ಗೌರಿ ಅವರು ಈ ಅಂಶಗಳನ್ನು ಹೈಲೈಟ್ ಮಾಡಿ ಸೂಕ್ತ ಪರಿಹಾರಗಳ ಬಗ್ಗೆ ಹೇಳಿದರೆ ವೀಕ್ಷಕರಿಗೆ ತಿಳಿಸಿದರೆ ಹೆಚ್ಚು ಉಯುಕ್ತವಾಗುತ್ತದೆ ಎಂಬುದು ಅನೇಕ ವೀಕ್ಷಕರ ಕೋರಿಕೆ