ಮಾಡಿ ಮುದ್ದೆಯಾ

 ಬಾ ಮಳೆಯೇ ಬಾ.. ಏನ್ ಸೆಖೆ  ರೀ ಸಾಕಾಗ್ತಾ ಇದೆ.. ಯಾಕೀ ಬೆಂಗಳೂರು ಹೀಗಾಗಿದೆ.. ಶಿವ ಶಿವ ... 

ಟೀವಿ ಕಾರ್ಯಕ್ರಮಗಳ ಬಗ್ಗೆ  ಬರೆಯೋಕೆ ಆರಂಭಿಸಿದಾಗ ಇದ್ದ  ನನ್ನ ಮನಸ್ಥಿತಿ ಗೂ  ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಿವೆ . ಆದರೆ ನನಗೆ  ಯಾವ ಕ್ಷಣವೂ ನನ್ನ ಬ್ಲಾಗ್ ಮೇಲೆ ಪ್ರೀತಿ ಕುಂದಿಲ್ಲ . 

ನಿನ್ನೆ ಜನಶ್ರೀ ವಾಹಿನಿಯ ಪತ್ರಕರ್ತ ನಿರೂಪಕ ರಮಾಕಾಂತ್ ಗೆ ಫೋನಿಸ ಬೇಕಾಯ್ತು . ನಾನು  ಸ್ವಲ್ಪ ಜಾಸ್ತಿನೆ ಲೈಕ್ ಮಾಡುವ ಕೆಲವು ನಿರೂಪಕರಲ್ಲಿ ರಮಾಕಾಂತ್ ಸಹ ಒಬ್ರು. ಮಾತಾಡಿ ಫೋನಿಟ್ಟ ಬಳಿಕ ಮನಸ್ಸಿಗೆ ಒಂದು ಬಗೆಯ ಆಹ್ಲಾದ ಆಯ್ತು.ಕಾರಣ  ಇಷ್ಟೇ ಆತನ ಮಾತಿನ ಶೈಲಿ , ಸನ್ನಡತೆ .  ಮಾತಿನಲ್ಲಿ ಏನು ಗೊತ್ತಾಗುತ್ತೆ ಅನ್ನಿಸ ಬಹುದು, ಆದರೆ ಭೇಟಿ ಮಾಡಿದಾಗ , ನನ್ನ ಜೊತೆ ಹರಟುವಾಗ ಎಲ್ಲಿಯೂ ಬೇಸರ ಅನ್ನಿಸಿರಲಿಲ್ಲ. ಆತನ ಪತ್ನಿ  ಸೌಮ್ಯ ಸಹ ಅಷ್ಟೇ ಸರಳ . ಒಮ್ಮೆ ಅವರ ಮನೆಗೆ ಹೋಗ ಬೇಕಾಗಿ ಬಂದಿತ್ತು, ನಾನು ಇಷ್ಟ ಪಡುವ ರುಚಿಯಾದ ಕಾಫಿ ಕೊಟ್ಟಿದ್ದ ಹೆಣ್ಣುಮಗಳು  ಮೊಳಕೆ ಕಟ್ಟಿನ  ಕಾಳು  ಸಾರು ಮಾಡುವ ಸಂಭ್ರಮದಲ್ಲಿ ಇದ್ರು. ಊಟ  ಮಾಡಿ ಹೋಗಿ ಮ್ಯಾಡಂ ಅನ್ನುವ ಬಲವಂತಕ್ಕೆ ಒಪ್ಪಿಗೆ ಸೂಚಿಸಲಾಗಲಿಲ್ಲ, ಕಾರಣ ಕೆಲಸ :-) ಆ ಮೂಲಕ  ಬಚಾವ್ ಆದೆ.. ಸಾರಿ ಸೌ  ;-)

 ಟೀವಿ ನೈನ್  ವಾಹಿನಿಯಲ್ಲಿ ನೀವು ಹೇಳಿದ್ದು ನಾವು ಕೇಳಿದ್ದು ಅನ್ನುವ ಕಾರ್ಯಕ್ರಮ ಪ್ರಸಾರ ಆಗೋದು ನಿಮಗೆ ಗೊತ್ತೇ ಇದೆ. ಕಳೆದ ಕೆಲವು ದಿನಗಳಿಂದ ಸ್ಕ್ರಿಪ್ ಬರೆಯೋರ ಹೆಸರು ಶರತ್ ಚಕ್ರವರ್ತಿ ಎಂದು ಓದುವಾಗ  ಇದು ನಮ್ಮ ಶರತ್ತ ಅನ್ನುವ ಅನುಮಾನ ಕಾಡ್ತಾ ಇದ್ರೂ ನನಗೆ ಅದನ್ನು ಕನ್ಫ಼ರ್ಮ್  ಮಾಡಿಕೊಳ್ಳಲು ಆಗಿರಲಿಲ್ಲ. ಆದರೆ ಅದು ನಮ್ಮ Shaರತ್ತು ಅನ್ನುವ ಸಂಗತಿ ಗೊತ್ತಾಗೋಕೆ ಜಾಸ್ತಿ ದಿನ ಬೇಕಾಗಲಿಲ್ಲ ಬಿಡಿ :-) .ಎನೊ ಪುಟ್ಟ ನೀನ ಅದು ಅಂದಾಗ ಹುಡುಗನಿಗೆ ಸಂತೋಷ, ಹೂ ಅಕ್ಕ  ಎಂದ . ಒಳ್ಳೆಯ ರಂಗಭೂಮಿ ಕಲಾವಿದ ನಮ್ ಶರತ್ತು. ದೊಡ್ಡ ಕನಸುಗಳನ್ನು ತಲೆಯೊಳಗೆ ಇಟ್ಟುಕೊಂಡಿರುವ ಜಾಣ . ಅಕ್ಕ ಇನ್ನು ಸ್ವಲ್ಪ ದಿನ ಕಳ ಲಿ .. ಈ ಕಾರ್ಯಕ್ರಮ  ಮತ್ತೂ ಚೆನ್ನಾಗಿ ಆಗುತ್ತೆ ಅಂತ ಹೇಳಿದ್ದಾನೆ .  ಖುಷಿ ಆಗುತ್ತೆ ಕಣ್ರೀ ಪ್ರತಿಭೆಗಳಿಗೆ ಅವಕಾಶ ಸಿಕ್ಕಿರೋದು ಕಂಡ್ರೆ . 

ಈಟೀವಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಬಿಗ್ ಬಾಸ್  ದಿನೇ ದಿನೇ  ಹೊಸತನಕಾಣ್ತಾ  ಇದೆ. ನನಗೆ  ಮುಖ್ಯ ಆಕರ್ಷಣೆ ಆಗಿರುವವರು.. ಆಲ್  ಟೈಮ್  ಕಿಚ್ಚ ಸುದೀಪ್ , ಜೊತೆಗೆ ಬ್ರಹ್ಮಾಂಡ ಸ್ವಾಮಿ , ಈಗ ಕಾಳಿ - ಕೋಳಿ !ಏನ್ ನಾಟಕ ಮಾಡಿದ್ರು  ಕಾಳಿ ವಾವ್ . ಅದಿಕ್ಕೆ ಹೇಳೋದು ನಮ್ಮ ಕ್ಷೇತ್ರದಲ್ಲಿ ನಾವು ಬೆಳೆಯೋಕೆ ಪ್ರಯತ್ನ ಪಡಬೇಕು  ಅಂತ . ಹಾಗಂತ ಬೇರೆಯವರು ಇಲ್ಲ ಎಂದೇನು ಅಲ್ಲ. ಅರುಣ್ ಸಾಗರ್ ವಾವ್  ಸಕತ್ ಕಣ್ರೀ . 
ಆದರೆ ಕಳೆದ ವಾರ ಸಕತ್ ಇಷ್ಟಾ ಆಗಿದ್ದು ಕಿಚ್ಚ ಮಾಡಿದ ಚಪಾತಿ.. :-) ಆಹಾ ಕಿಚ್ಚ.. ಚಪಾತಿ ಮಾಡುವ ವಿಷಯದಲ್ಲಿ ಸೈ  ಅನ್ನಿಸಿಕೊಂಡ್ರಿ . ಈ ಬಾರಿ ಮುದ್ದೆ ತಿರುವಿ   ನೋಡುಮ .. ಹಲೋ ಸುದೀಪು  ಮುದ್ದೆ ಅಂದ್ರೆ ಸುಮ್ನೆ  
ಅಲ್ಲ ಗೊತ್ತಾ.. ಏಯ್  ಕಿಚ್ಚ ಕಮಾನ್  ಮಾಡಿ ಮುದ್ದೆಯಾ ! ;-) 

 ಬಿಗ್ ಬಾಸ್  ವೀಕ್ಷಿಸುವಾಗ ತನ್ನ ಮನದಲ್ಲಿ ಉಂಟಾಗುವ ಭಾವನೆಗಳ  ಬಗ್ಗೆ ಒಬ್ಬ ಹೆಣ್ಣುಮಗಳು ಬರೆದುಕೊಂಡಿದ್ದಾಳೆ . ಏಕೆ ನನ್ನ ಎಫ್ಬಿ ಗೆಳತಿ  ತುಂಬಾ ಜಾಣೆ .. ಇಲ್ಲಿದೆ ನೋಡಿ   

ಈ ಟಿವಿಯಲ್ಲಿ ಪ್ರಸಾರವಾಗುತ್ತಿರುವ "ಬಿಗ್ ಬಾಸ್" ಈಗ ಕನ್ನಡದ ಟಾಪ್ ಒನ್ ಕಾರ್ಯಕ್ರಮ. ಹೆಚ್ಹಾಗಿ ಟಿವಿ ಕಾರ್ಯಕ್ರಮಗಳನ್ನು ನೋಡದ ನನಗೆ, ಈ ಕಾರ್ಯಕ್ರಮ ಯಾಕೋ ಇಷ್ಟ ಆಯ್ತು... ಹಿಂದಿಯಲ್ಲಿ ಇದೇ ಕಾರ್ಯಕ್ರಮ ಪ್ರಸಾರವಾದಾಗ ನಾನು ಅದರ ಬಗ್ಗೆ ತುಂಬಾ ಆಳವಾಗಿ ಯೋಚಿಸಿರಲಿಲ್ಲ...ಸರಿಯಾಗಿ ನೋಡುತ್ತಲೂ ಇರಲಿಲ್ಲ!!

ಆ ಆಟದಲ್ಲಿ ಗೆಲ್ಲುವದಕ್ಕೋಸ್ಕರ ಒಬ್ಬರ ಮೆಲೆ ಇನ್ನೊಬ್ಬರು ಎತ್ತಿ ಕಟ್ಟುವದು, ಜನರ ಮನಸನ್ನು ಸೆಳೆಯಲು ಸುಮ್-ಸುಮ್ನೆ ಅಳೋದು, ಬೇಕಾದ-ಬೇಡದ ಅನೇಕ ವಯಕ್ತಿಕ ವಿಚಾರಗಳನ್ನು ಹೇಳಿ, ಜನರಿಂದ ವೋಟು ಗಿಟ್ಟಿಸುವ ಪ್ರಯತ್ನ, ಬೇರೆ ಬೇರೆ ಸಂಸ್ಕ್ರುತಿಯಿಂದ ಬಂದು ಒಬ್ಬರನ್ನೊಬ್ಬರು ಇಷ್ಟ ಪಡುವ ರೀತಿ, ಅವರ ವಿಚಿತ್ರ ಯೋಚನೆಗಳನ್ನು ನೋಡಿದಾಗ, ನೋಡುಗರಿಗೆ ಕೋಪ, ನಗು, ಬೇಸರ ಉಂಟಾಗುವದು ಸಹಜ.

ಪ್ರತಿದಿನ ಅವರವರ ಕೆಲಸಗಳಲ್ಲಿ ಬಿಜಿಯಾಗಿದ್ದ ಜನರನ್ನು ತಂದು ಒಂದು ಮನೆಯಲ್ಲಿ ಕೂರಿಸಿ, ಅವರಿಗೆ ಟಿ.ವಿ, ಇಂಟರ್ ನೆಟ್, ಗಡಿಯಾರ ಮುಂತಾದವುಗಳಿಂದ ದೂರ ಇಟ್ಟು ಬಾಹ್ಯ ಪ್ರಪಂಚದ ಅರಿವಿಲ್ಲದೇ ಬದುಕಲು ಬಿಟ್ಟು, ಅದರ ಮೇಲೊಂದಿಷ್ಟು ಜಗಳ ಹಚ್ಚಿ ಹಾಕುವಂತಹ ಟಾಸ್ಕ್ ಗಳನ್ನು ಕೊಡುವ ಬಿಗ್ ಬಾಸ್ ನ ಮನೆಯಲ್ಲಿ ಕಳೆಯುವದು ಎಷ್ಟು ಕಷ್ಟ ಅಲ್ವ? ಅಂತಹ ಮನೆಯಲ್ಲಿ ಬೇರೆ ಬೇರೆ ಜನರೊಂದಿಗೆ ಬೆರೆತು ಬದುಕಲು ನಿಜವಾಗಲೂ ತಾಕತ್ತಿರಬೇಕು ಅಲ್ವಾ?

ನಾನು ಈ ಕಾರ್ಯಕ್ರಮವನ್ನು ಬರೀ ಎಂಟರ್ ಟೇನ್ ಮೆಂಟ್ ಗೋಸ್ಕರ ನೋಡುತ್ತಿಲ್ಲ... ಅವರ ಜಾಗದಲ್ಲಿ ನಾನಿದ್ದರೆ?.... ಅಂತ ಯೋಚಿಸ್ತೀನಿ... ಮನಸು ಗಟ್ಟಿಯಾಗಲು, ಜನರೊಡನೆ ಕೂಡಿ ಬದುಕುವದನ್ನು ಕಲಿಯಲು ಈ ಕಾರ್ಯಕ್ರಮ ಒಂದು ಉತ್ತಮ ವೇದಿಕೆ ಅಂತ ನನ್ನ ಅನಿಸಿಕೆ.

5 comments:

Badarinath Palavalli said...

ಕನ್ನಡ ನೆಲದಲ್ಲಿ ಟೀವಿ ಮಾದ್ಯಮವನ್ನು ಪರಿಚಯಿಸುವ ಏಕೈಕ ಬ್ಲಾಗ್ ನಿಮ್ಮದು. ನಿಮ್ಮ ಶ್ರಮವನ್ನು ಟೀವಿ ಮಾದ್ಯಮ ಮತ್ತು ಕೇಬಲ್ ಉದ್ಯಮ ಗಂಬೀರಬಾಗಿ ಪರಿಗಣಿಸಿ ನಿಮ್ಮನ್ನು ಗೌರವಿಸುವ ಕಾಲವೂ ಅತಿ ಸನಿಹದಲ್ಲೇ ಇದೆ.

Unknown said...

ಹೌದು... ಬ್ರಹ್ಮಾಂಡ ಗುರುಗಳನ್ನು ಎಲ್ಲರೂ ಬಯ್ಕೊತಾರೆ... ಆದರೆ ಬಿಗ್ ಬಾಸ್ ನಲ್ಲಿ ಅವರದ್ದು ಚಿಕ್ಕ ಮಗುವಿನ ಮನಸು ಅಂತ ಸುದೀಪ್ ಹೇಳಿದ ಮಾತನ್ನು ಅಲ್ಲಗಳೆಯುವಂತಿಲ್ಲ..ಇನ್ನು ಅರುಣ್ ಸಾಗರ್!.... ಮಲ್ಟಿ ಟ್ಯಾಲೆಂಟೆಡ್ ವ್ಯಕ್ತಿ! ಗೋಧಿ ಹಿಟ್ಟಿನಲ್ಲಿ ಬರೆದ ಗಣಪತಿ-ಶಿವನ ಚಿತ್ರ ಅದ್ಭುತ... ರಾಘು ನನ್ನ ಕಣ್ಣಿಗೆ ಕಾಣುವ ಚಿನ್ನಾರಿ ಮುತ್ತ!

ಒಟ್ಟಿನಲ್ಲಿ ಬಿಗ್ ಬಾಸ್ ನನಗಿಷ್ಟವಾದ ಕಾರ್ಯಕ್ರಮ.

Anonymous said...