Posts

Showing posts from March 16, 2014

ಗ್ಲಾಮಿ ಪೂನಂ...!

Image
ನಿನ್ನೆ ಈ ಟೀವಿ ಕನ್ನಡ ವಾರ್ತಾವಾಹಿನಿಯ ಉದ್ಘಾಟನೆಯ ನೇರ ಪ್ರಸಾರ ಇತ್ತು. ಈಟೀವಿ ಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾಷಣ ಇತ್ತು. ನೇರವಾಗಿ ದೃಶ್ಯ ಮಾಧ್ಯಮಗಳ , ಅದರಲ್ಲೂ ವಾರ್ತಾ ವಾಹಿನಿಗಳ ಬಗ್ಗೆ ತಿಳಿಸಿದರು. ನನಗೆ ಸಿದ್ದು ಅವರ ಮಾತುಗಾರಿಕೆ ಅಂದ್ರೆ ಜಾಸ್ತಿ ಇಷ್ಟ. ಅವರೀಗ ಮುಖ್ಯಮಂತ್ರಿ ಆಗಿರ ಬಹುದು, ಆದರೆ ಅದಕ್ಕಿಂತ ಮುಂಚಿನಿಂದಲೂ ರಾಜಕೀಯ ನಾಯಕ ಮತ್ತು ಉತ್ತಮ ವಾಗ್ಮಿ ಆಗಿದ್ದಾರಲ್ಲ.ಅವರ ಮಾತಿನಲ್ಲಿ ಇರುವ ತಿಳಿ ಹಾಸ್ಯ, ಮೊನಚು, ವಿಷಯವನ್ನು ಹೇಳುವ ಪರಿ .. ಹಾಗೆಂದು ಅವರು ಹೇಳಿದ್ದೆಲ್ಲಾ ಇಷ್ಟ ಆಗುತ್ತೇ ಎಂದಲ್ಲ. ನಿನ್ನೆ ಅವರು ದೃಶ್ಯಮಾಧ್ಯಮಗಳ ಕಾರ್ಯ ವೈಖರಿ, ಅವರು ವ್ಯಕ್ತಿತ್ವಗಳನ್ನು ತೇಜೋವಧೆ ಮಾಡಲು ಪ್ರಯತ್ನಿಸುವ ರೀತಿ ಇಲ್ಲದ ಬಗ್ಗೆ ಹೇಳುತ್ತಾ, ಆರೀತಿ ಮಾಡಿದರೆ ಆ ವ್ಯಕ್ತಿಗೆ ತೇಜೋವಧೆ ಆಗುತ್ತೆ ವಿನಃ ಸಮಾಜಕ್ಕೆ ಮತ್ತು ಜನಗಳಿಗೆ ಏನು ಪ್ರಯೋಜನ ಇಲ್ಲ ಅಂದ್ರು..ಅದು ಸತ್ಯ ಬಿಡಿ ಯಾರ ಬಗ್ಗೆ ಎಷ್ಟೇ ಕಾರ್ಯಕ್ರಮ ಮಾಡಿದರು ಸಹ ಜನರು ತಮ್ಮ ನಾಯಕನಿಗೆ ಓಟು ಹಾಕಿ ಗೆಲ್ಲಿಸೋದು..

@@ ಟೀವಿ ನೈನ್ ನಲ್ಲಿ ಅಂಬರೀಶ್ ಅವರ ಜೊತೆಗೆ ಮಾತುಕತೆಯನ್ನು ಆಡಿದ ಕಾರ್ಯಕ್ರಮ  ಪ್ರಸಾರ ಆಗ್ತಾ ಇದೆ. ಅಂಬಿ ಅವರನ್ನು ನೋಡಿ ಹೆಚ್ಚು ಖುಷಿ ಆಗ್ತಾ ಇದೆ. ಏನಾಗಿದೆ ಎನ್ನುವ  ಸಂಗತಿ ಅರಿಯದಷ್ಟು ನಿಗೂಡ ಇತ್ತು .. ರೆಹಮಾನ್ ಮುಖ್ಯ ನಿರೂಪಕರಾಗಿದ್ದರೆ. ಘೋಶಾಲ್ ಜೊತೆಗಿದ್ದಾರೆ.. ತುಂಬಾ ವಿಶೇಷವಾದ ಕಾರ್ಯಕ್ರಮ.. ಗೆಟ್ ವೆಲ್ ಸ…

ಟಿಪ್ಸ್ ಗಳು

Image
ನಾನು ಸಾಮಾನ್ಯವಾಗಿ  ನ್ಯೂಸ್ ವಾಹಿನಿಗಳಲ್ಲದೆ ಅಡುಗೆ ಚಾನೆಲ್ ಗಳ ಬಗ್ಗೆನು ಹೆಚ್ಚಿ ಆಸ್ಥೆಯಿಂದ   ನೋಡ್ತೀನಿ. ಯಾರೇ ಆಗಿರಲಿ ಅಂತಿಮವಾಗಿ ತಲುಪೋದು   ರುಚಿಯಾದ ಆಹಾರದ ಕಡೆಗೆ . ಮೊದಲೆಲ್ಲಾ ಇಂತಹ ಕಾರ್ಯಕ್ರಮಗಳ ಬಗ್ಗೆ ಜನರಿಗೆ ನಗು ಬರ್ತಾ ಇತ್ತು ಆದರೆ ಈಗಂತೂ ಹುಡುಗಿಯರ- ಹೆಣ್ಣು ಮಕ್ಕಳಂತೆ   ಅಪಾರ ಸಂಖ್ಯೆಯ ಗಂಡು ಮಕ್ಕಳು ಸಹ ಇಂತಹ ಕಾರ್ಯಕ್ರಮ ನೋಡ್ತಾರೆ.. ಜೀ ಅವರ ಖಾನ ಖಜಾನ ಚಾನೆಲ್ ನಾನು ಆಸ್ಥೆಯಿಂದ ನೋಡುವ ಚಾನೆಲ್ ಗಳಲ್ಲಿ ಒಂದು. ಒಂದೊಮ್ಮೆ ಅದರಲ್ಲೂ ಜೀ ವಾಹಿನಿಯು ಹೆಚ್ಚು ಪಾಪ್ಯುಲರ್ ಆಗೋಕೆ ಇದರಲ್ಲಿ ಪ್ರಸಾರ ಆಗ್ತಾ ಇದ್ದ ಖಾನ ಖಜಾನ ಕಾರ್ಯಕ್ರಮ ಸಹ ಕಾರಣ ಅಂತ ಹೇಳ ಬಹುದು. ಎಲ್ಲಿ ಹೆಣ್ಣು ಮಕ್ಕಳು ಆಕರ್ಷಿತರಾಗುತ್ತಾರೋ ಅಲ್ಲಿ ಯಶಸ್ಸು- ಜನಪ್ರಿಯತೆ ಇದ್ದೆ ಇರುತ್ತದೆ. ನಾನು ಕೇವಲ ನಮ್ಮ ದೇಶದ್ದು ಮಾತ್ರವಲ್ಲ ವಿದೇಶಿ ಅಡುಗೆ ತಯಾರು ಮಾಡುವುದಕ್ಕೆ ಆದ್ಯತೆ ನೀಡುವ ಚಾನೆಲ್ ಗಳನ್ನು ನೋಡ್ತೀನಿ.. ಅಲ್ಲಿ ಶೆಫ್ ಗಳು ನೀಡುವ ಅನೇಕ ಟಿಪ್ಸ್ ಗಳು ಹೆಚ್ಚು ಇಷ್ಟ ನನಗೆ!
ಅದೆಷ್ಟು ಟೀವಿ ನೋಡ್ತೀಯ ನೀನು ಅಂತ ನನ್ನ ಅನೇಕ ಎಫ್ಬಿ ಸ್ನೇಹಿತರು ಹೇಳ್ತಾ ಇರ್ತಾರೆ. ಜಾಸ್ತಿ ನೋಡಲ್ಲ, ನೋಡ ಬೇಕಾಗಿರುವುದನ್ನು ಬಿಡಲ್ಲ ಅಷ್ಟೇ !
ಹೆಚ್ಚು ಹಾಸ್ಯದ ಚಾನೆಲ್ ಗಳು, ರಿಯಾಲಿಟಿ ಶೋಗಳು ನೋಡುವ ಪೈಕಿಯಲ್ಲಿ ಸೇರಿದ್ದೇನೆ ನಾನು. ಅಲ್ಲದೆ ಜಿಗ್ರಫಿ, ಡಿಸ್ಕವರಿ ಕಾಮನ್... ! ಇದರ ಮಧ್ಯೆ ಓದು, ರಾಶಿ ರಾಶಿ ಬರೆಯೋ ಕೆಲಸ, ಜಿಮ್ ಗೆ ಹೋಗೋದು.…

ಈಸಿ ಈಸಿ ಅಮೀರ್ ;-)

Image
ಸ್ಟಾರ್ ವಾಹಿನಿಯಲ್ಲಿ ಸತ್ಯ ಮೇವ ಜಯತೆ ಎರಡನೇ ಅವತರಣಿಕೆ ಆರಂಭ ಆಗಿದೆ. ಕನ್ನಡಿಗರು ಅದರಲ್ಲಿ ಹಿಂದಿ ಬಲ್ಲ ಕನ್ನಡಿಗರು ಮಾತ್ರ ನೋಡಲು ಸಾಧ್ಯ ಆದ ಕಾರ್ಯಕ್ರಮ. ನಿನ್ನೆ ಕಸದ ಬಗ್ಗೆ ಇದ್ದ ಮಾಹಿತಿ ಸಕತ್ತಾಗಿತ್ತು. ನಿರೂಪಕ ಅಮೀರ್ ಖಾನ್ ನಟನೆ- ರೂಪದಷ್ಟೇ ನನಗೆ ಅವರ ನಿರೂಪಣೆ ಇಷ್ಟ. ಕಸದ ಬಗ್ಗೆ ಅಥವಾ ವೆಸ್ಟ್ ಮ್ಯಾನೇಜ್ ಮೆಂಟ್ ಬಗ್ಗೆ ನಮ್ಮ ಮನೆಯಲ್ಲಿ ಸದಾ ಚರ್ಚಿತ ಆಗ್ತಾ ಇರುತ್ತೆ. ಯಾಕೆಂದ್ರೆ ಭಾರತದ ಅನೇಕ ಸ್ಥಳಗಳಿಗೆ ನನ್ನ ಅಣ್ಣ ರವೀಂದ್ರ  ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಹೋಗ್ತಾ ಇರ್ತಾರೆ. ಅದೆಷ್ಟರ ಮಟ್ಟಿಗೆ ಕೆಲಸ ಮಾಡಿದ್ದಾರೆ ಅಂದ್ರೆ ಇತ್ತೀಚೆಗೆ ಜರ್ಮನ್ ಮೀಡಿಯಾ ಮಂದಿ ಇದರ ಬಗ್ಗೆ ಮಾತನಾಡಲು ಬೆಂಗಳೂರಿಗೆ ಬಂದಿದ್ದಾಗ, ನಮ್ಮ ಅಣ್ಣನನ್ನು ಭೇಟಿ ಮಾಡಲು ಬಯಸಿದ್ದರು. ಆದರೆ ಆತ ಮನಾಲಿಯ ಮಂಜಿನಲ್ಲಿ ಕೆಲಸ ಸಾಗಿಸ್ತಾ ಇದ್ರೂ :-) ಈ ವಿಷ್ಯ ಗೊತ್ತಾದಾಗ ಸಕತ್  ಒಂಥರಾ ಆಯ್ತು ನಮಗೆಲ್ಲಾ! ಬಿಡಿ ಆ ವಿಷ್ಯ..!! ನಮ್ಮ ಮನೆಯಲ್ಲಿ ಕಸದ ಫೋಟೋಗಳೇ ಸೀಡಿ ಮತ್ತು ಪೆನ್ ಡ್ರೈವ್ನಲ್ಲಿ   ತುಂಬಿರೋದು !
ಆದರೆ ಬೆಂಗಳೂರಿನಲ್ಲಿ ಅದರಲ್ಲೂ ಬೆಂಗಳೂರಿನ   ಸಮೀಪದ ಹಳ್ಳಿ ಮಂಡೂರಿನಲ್ಲಿ ಕಸದ  ಬೆಟ್ಟವೇ ಇದೆ. ಅಲ್ಲಿ ಸಮೀಪದ ಹಳ್ಳಿ ಗುನೂರು ಅದರಲ್ಲಿ ನನ್ನ ಕಸಿನ್ ಇದ್ದಾಳೆ. ರೈತರು. ಭೂಮಿ ಬೆಲೆ ಬಿಡಿ.. ! ಆದರೆ ಅವರ ಪರಿಸ್ಥ್ತಿತಿ  ಹೇಗಿದೆ ಅಂದ್ರೆ ಅವಳು ಹೇಳ್ತಾಳೆ ಒಮ್ಮೆ ಬನ್ನಿ ಮಳೆಗಾಲದ ಸಮಯದಲ್ಲಿ ಎಂತಹ ಗೊಬ್ಬು ವಾಸನೆಗಳನ್ನು ನಾವು …

ತಲೆ ಅಲುಗಾಡಿಸ್ತಾರೆ

Image
ಪ್ರತಿಯೊಂದು ಸಂಗತಿಗೂ ಅದರದ್ದೇ ಆದ ಪ್ರಾಮುಖ್ಯತೆ ಇರುತ್ತದೆ. ಯಾವುದೋ ಒಂದು ಲೇಖನ ಓದುತ್ತಿದ್ದೆ ತಂತ್ರಜ್ಞಾನವನ್ನು ನಾವು ಸರಿಯಾಗಿ ಬಳಸಿದಲ್ಲಿ ಅದು ನಮ್ಮ ಸ್ನೇಹ ಬೆಳೆಸುತ್ತದೆ  , ಇಲ್ಲದೆ ಹೋದಲ್ಲಿ ಅದು ನಮ್ಮ ಶತ್ರುವಾಗುತ್ತೆಂತ. ಟೀವಿ ವಿಷಯಕ್ಕೆ ಬಂದಾಗ ಅದೇ ಅಂಶ ಹೊಂದಿಕೆ ಆಗುತ್ತೆ ನಿಜ ಆದರೆ ಅಷ್ಟು ಹೊತ್ತು ಬೇಸರ ಇಲ್ಲದೆ ನೋಡುವಂತಹ ವ್ಯವಧಾನ ಯಾರಿಗೂ ಇರಲ್ಲ ಬಿಡಿ.


ನೋಡಿದ ಕಾರ್ಯಕ್ರಮ ಮನದಲ್ಲಿ ಉಳಿದಾಗ ಮಾತ್ರ ಅದಕ್ಕೆ ಬೆಲೆ. ಕೆಲವು ಮತ್ತೆ ಮತ್ತೆ ನೋಡ ಬೇಕು ಅನಿಸುವಷ್ಟು ಚಂದ ಇದ್ದರೆ, ಒಂದಷ್ಟು ಸಾಕಪ್ಪ ಅನ್ನಿಸುವಂತೆ ಇರುತ್ತದೆ. ಆದರೆ ಒಂದಷ್ಟು ಆರಕ್ಕೂ ಎರಡೇ ಮೂರಕ್ಕೂ ಇಳಿಯದೆ ತನ್ನ ಪಾಡಿಗೆ ಏಕ ರೂಪದಲ್ಲಿ ನಡೆಯುತ್ತಾ ಸಾಗುತ್ತದೆ, ಅಂತಹ  ಕಾರ್ಯಕ್ರಮದಲ್ಲಿ  ಚಂದನ ವಾಹಿನಿಯಲ್ಲಿ  ಪ್ರಸಾರ ಆಗುವ ಥಟ್ ಅಂತ ಹೇಳಿ ಸಹ ಒಂದು. ಅಲ್ಲಿ ಪುಸ್ತಕಗಳು, ಪ್ರಶ್ನೆಗಳು ಮಾತುಗಳು ಮತ್ತು ಮಾಹಿತಿಗಳು ಎಲ್ಲವು ಚಂದ. ಡಾ. ನಾ . ಸೋಮೇಶ್ವರ ಅವರ ನಿರೂಪಣಾ ಶೈಲಿ ಸಹ ಆಪ್ತ ಅನ್ನಿಸುತ್ತೆ.ಇಷ್ಟು ದಿನಗಳಾದರೂ ಯಾರಿಗೂ ಬೋರ್ ಹೊಡಿಸಿಲ್ಲ.


 ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ  ಸಂತಸದ ಸಂಗತಿ ಅಂದ್ರೆ ಅದು ಪ್ರಸಾರ ಆಗುವ ವೇಳೆಯಲ್ಲಿ ಬದಲಾವಣೆ. ಮತ್ತೆ ಒಂಬತ್ತೂವರೆಗೆ ಪ್ರಸಾರ ಆಗ್ತಾ ಇರೋದು ನಿಜಕ್ಕೂ ಖುಷಿಯ ಸಂಗತಿ. ವೀಕ್ಷಕರಿಗೆ  ಬೋರ್ ಆಗದೆ ಮುನ್ನಡೆಸಿಕೊಂಡು  ಹೋಗುವ ಸುಂದರ ಕಾರ್ಯಕ್ರಮ.


 @ ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಮತ…