ಟಿಪ್ಸ್ ಗಳು


ನಾನು ಸಾಮಾನ್ಯವಾಗಿ  ನ್ಯೂಸ್ ವಾಹಿನಿಗಳಲ್ಲದೆ ಅಡುಗೆ ಚಾನೆಲ್ ಗಳ ಬಗ್ಗೆನು ಹೆಚ್ಚಿ ಆಸ್ಥೆಯಿಂದ   ನೋಡ್ತೀನಿ. ಯಾರೇ ಆಗಿರಲಿ ಅಂತಿಮವಾಗಿ ತಲುಪೋದು   ರುಚಿಯಾದ ಆಹಾರದ ಕಡೆಗೆ . ಮೊದಲೆಲ್ಲಾ ಇಂತಹ ಕಾರ್ಯಕ್ರಮಗಳ ಬಗ್ಗೆ ಜನರಿಗೆ ನಗು ಬರ್ತಾ ಇತ್ತು ಆದರೆ ಈಗಂತೂ ಹುಡುಗಿಯರ- ಹೆಣ್ಣು ಮಕ್ಕಳಂತೆ   ಅಪಾರ ಸಂಖ್ಯೆಯ ಗಂಡು ಮಕ್ಕಳು ಸಹ ಇಂತಹ ಕಾರ್ಯಕ್ರಮ ನೋಡ್ತಾರೆ.. ಜೀ ಅವರ ಖಾನ ಖಜಾನ ಚಾನೆಲ್ ನಾನು ಆಸ್ಥೆಯಿಂದ ನೋಡುವ ಚಾನೆಲ್ ಗಳಲ್ಲಿ ಒಂದು. ಒಂದೊಮ್ಮೆ ಅದರಲ್ಲೂ ಜೀ ವಾಹಿನಿಯು ಹೆಚ್ಚು ಪಾಪ್ಯುಲರ್ ಆಗೋಕೆ ಇದರಲ್ಲಿ ಪ್ರಸಾರ ಆಗ್ತಾ ಇದ್ದ ಖಾನ ಖಜಾನ ಕಾರ್ಯಕ್ರಮ ಸಹ ಕಾರಣ ಅಂತ ಹೇಳ ಬಹುದು. ಎಲ್ಲಿ ಹೆಣ್ಣು ಮಕ್ಕಳು ಆಕರ್ಷಿತರಾಗುತ್ತಾರೋ ಅಲ್ಲಿ ಯಶಸ್ಸು- ಜನಪ್ರಿಯತೆ ಇದ್ದೆ ಇರುತ್ತದೆ. ನಾನು ಕೇವಲ ನಮ್ಮ ದೇಶದ್ದು ಮಾತ್ರವಲ್ಲ ವಿದೇಶಿ ಅಡುಗೆ ತಯಾರು ಮಾಡುವುದಕ್ಕೆ ಆದ್ಯತೆ ನೀಡುವ ಚಾನೆಲ್ ಗಳನ್ನು ನೋಡ್ತೀನಿ.. ಅಲ್ಲಿ ಶೆಫ್ ಗಳು ನೀಡುವ ಅನೇಕ ಟಿಪ್ಸ್ ಗಳು ಹೆಚ್ಚು ಇಷ್ಟ ನನಗೆ!
ಅದೆಷ್ಟು ಟೀವಿ ನೋಡ್ತೀಯ ನೀನು ಅಂತ ನನ್ನ ಅನೇಕ ಎಫ್ಬಿ ಸ್ನೇಹಿತರು ಹೇಳ್ತಾ ಇರ್ತಾರೆ. ಜಾಸ್ತಿ ನೋಡಲ್ಲ, ನೋಡ ಬೇಕಾಗಿರುವುದನ್ನು ಬಿಡಲ್ಲ ಅಷ್ಟೇ !
ಹೆಚ್ಚು ಹಾಸ್ಯದ ಚಾನೆಲ್ ಗಳು, ರಿಯಾಲಿಟಿ ಶೋಗಳು ನೋಡುವ ಪೈಕಿಯಲ್ಲಿ ಸೇರಿದ್ದೇನೆ ನಾನು. ಅಲ್ಲದೆ ಜಿಗ್ರಫಿ, ಡಿಸ್ಕವರಿ ಕಾಮನ್... ! ಇದರ ಮಧ್ಯೆ ಓದು, ರಾಶಿ ರಾಶಿ ಬರೆಯೋ ಕೆಲಸ, ಜಿಮ್ ಗೆ ಹೋಗೋದು.. ಹೀಗೆ ಎಲ್ಲವು ಇದ್ದೆ ಇರುತ್ತೆ. ಮನಸ್ಸಿದ್ದರೆ ಮಾರ್ಗ ಅನ್ನೋ ಹಾಗೆ..!

@ ಉದಯ ವಾಹಿನಿಯಲ್ಲಿ  ಸಂಗೀತ ರಿಯಾಲಿಟಿ ಷೋ ಬರುತ್ತದೆ. ಪ್ರಾಯಶಃ  ಭಾನುವಾರ ಮಾತ್ರ ಬರೋದು ಅಂತ ಕಾಣುತ್ತೆ. ಅದರಲ್ಲಿ ವಿಜಯ್ ಪ್ರಕಾಶ್ ಮುಖ್ಯ ಜಡ್ಜ್ ಗಳಲ್ಲಿ ಒಬ್ಬರು. ಕನ್ನಡದಲ್ಲಿ ಅತಿ ಹೆಚ್ಚು ಇಷ್ಟ ಆಗುವ ಹಾಡುಗಾರರಲ್ಲಿ, ವಿಜಯ್ ಪ್ರಕಾಶ್, ಹೇಮಂತ್, ರಾಜೇಶ್ ಕೃಷ್ಣನ್. ಎಲ್ಲರ ಧ್ವನಿಯು ತುಂಬಾ ಭಿನ್ನ.. ಅದರಲ್ಲೂ ಜಡ್ಜ್ ಗಳಾಗಿ ಅವರು ಮುಂದಿನ ಪೀಳಿಗೆಯವರಿಗೆ   ನೀಡುವ ಸಲಹೆ ಅನನ್ಯ.
ಸುವರ್ಣ ವಾಹಿನಿಯಲ್ಲಿ ಇಂತಹದ್ದೇ ಕಾರ್ಯಕ್ರಮವನ್ನು ತಪ್ಪದೆ ನೋಡುತ್ತಿದ್ದೆ ಆರಂಭಿಕ ಅವತರಣಿಕೆಯನ್ನು. ಆಗ ಗುರುಕಿರಣ್, ನಂದಿತಾ , ಪ್ರವೀಣ್ ಡಿ  ರಾವ್  ರವರು  ಜಡ್ಜ್ ಗಳಾಗಿ  ನಡೆಸಿಕೊಡುತ್ತಿದ್ದ ಕಾರ್ಯಕ್ರಮದ ಅತಿ ಹೆಚ್ಚು ಆಕರ್ಷಿಸಿತ್ತು ನನಗೆ. ಒಂದು ದಿನವು ತಪ್ಪದೆ ನೋಡುತ್ತಿದ್ದ ಕಾರ್ಯಕ್ರಮ ಅದಾಗಿತ್ತು. ಈಗ ಈ ಕಾರ್ಯಕ್ರಮದಲ್ಲೂ ಗುರು, ವಿಜಯ್ ಪ್ರಕಾಶ್  ಅಲ್ಲದೆ ನಿರೂಪಕಿ ಚೈತ್ರ ಕಾಣ ಸಿಗ್ತಾರೆ. ಹಳೆಯ ನೆನಪುಗಳನ್ನು ಮರಕಳಿಸುತ್ತಾ...ಸುವರ್ಣ ವಾಹಿನಿಯ ಬಿಗ್ ಫ್ಯಾನ್ ಆಗಿದ್ದೆ ತುಂಬಾ ದಿನಗಳ ಕಾಲ!!


No comments: