Posts

Showing posts from January 3, 2016

ಹೀಗಿದೆ ಕಥೆ

Image
ಆತ್ರಾಡಿ ಸುರೇಶ ಹೆಗ್ಡೆ  ವಿಶ್ಲೇಷಣೆಯ ಸ್ವಭಾವದವರು. ವಿಮರ್ಶೆ ಮಾಡುವವರ ಬಗ್ಗೆ ಜನಕ್ಕೆ ಜಾಸ್ತಿ ಬೇಸರ. ಅದಕ್ಕೇನು ಮಾಡಲಾಗದು. ಆದರೆ ವಿಮರ್ಶೆ ಮಾಡುವವರು ಸಹ ಒಮ್ಮೆ ಯೋಚಿಸ ಬೇಕಾದ ಸಂಗತಿ ಏನಂದರೆ  ಸಿದ್ಧವಾದ ಮಡಕೆಯನ್ನು ಒಡೆಯುವುದು ಸುಲಭ, ಆ ಮಡಕೆಯ ನಿರ್ಮಾಣಕ್ಕೆ ಎಷ್ಟೊಂದು ಪ್ರಯತ್ನ, ಶ್ರಮ ವ್ಯಯಿಸಿರುತ್ತಾರೆ ಅಂತ.. ! ಒಟ್ಟಾರೆ ಅತ್ರಾಡಿಯವರು ಸಮಯ ಸಿಕ್ಕಾಗ ಸುದ್ದಿ ವಾಹಿನಿಗಳ  ಕಣ್  ತಪ್ಪು ಗಳನ್ನು ತಮ್ಮ ಕಣ್ಣಿನಿಂದ ನೋಡಿ ಸ್ಕ್ರೀನ್ ಶಾಟ್ ಮೂಲಕ  ಅವರ ಎಫ್ ಬಿ ಗೋಡೆಯಲ್ಲಿ ಅಂಟಿಸುತ್ತಿರುತ್ತಾರೆ. ಅಂತಹ ಕೆಲವು ಸ್ಕೀನ್ ಶಾಟ್ ಗಳು ಇಲ್ಲಿವೆ. ಇದರಿಂದ ನಿಮಗೆ ಉಪಯೋಗ ಆಗಬಹುದು ಎನ್ನುವ ಆಶಯ ನನ್ನದು 
ಆತ್ಮಕ್ಕೆ  ಅಥವಾ..?
ಎಲ್ಲಿಂದ ಈಶಾನ್ಯ?


                                                    ದಟ್ಟ ಹೊಗೆ ಕಾಣಿಸಿದ "ಹಿನ್ನೆಲೆ" ಏನು?

                                                                ಏನ್ರೀ ಅಷ್ಟೊಂದು ತರಾತುರಿ?

                                                         ಹಾಲು ಮತ ಸಮಾಜ "ದರಿಂದಾ"!?

"ಹಿನ್ನೆಲೆ" ನೆಲೆಯೂರಿದೆ.

                                                              "ಮೂಲ" ವ್ಯಾಧಿ!

"ನಿಧನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು!?"


                          …

ಹೃದಯ ಕದ್ದಿದೆ

Image
ಧನುರ್ಮಾಸ ಯಪ್ಪಾ ಅನ್ನೋಷ್ಟು ಚಳಿ .. ಬೆಳಗಿನ ಆರಂಭವಾಗುವುದು ಭಜನೆ, ಹಾರ್ಮೋನಿಯಂ, ಗಂಟೆ, ಜಾಗಟೆಗಳ ಸದ್ದಿನಿಂದ
. ಹೆಣ್ಣುಮಕ್ಕಳಿಗೆ ಹೆಚ್ಚು ಪ್ರೀತಿಯ ತಿಂಗಳು ಇದು (ನನ್ನಂತಹವರನ್ನು ಹೊರೆತುಪಡಿಸಿ ).  ಅಯ್ಯಪ್ಪ ಸ್ವಾಮಿ ಸೀಸಜನ್ ಸಹ ಇದು. ಮುಂಜಾನೆ -ಸಂಜೆ  ಭಜನೆ ಭಜನೆ. ಒಂದಂತು ಸತ್ಯ ಅನೇಕ ಹಾಡುಗಳನ್ನು ಈಗ ಕೇಳುವ ಸದವಕಾಶ.. ಮೆಲೋಡಿಯ ಮೂಲಕ ಮನಗೆಲ್ಲುವ ಹಾಡುಗಳು . ಸಂಸ್ಕೃತಿ, ಆಚರಣೆ ಎಲ್ಲವನ್ನು ಪ್ರೀತಿಯಿಂದ ನೋಡಿದರೆ ಇಷ್ಟವಾಗುತ್ತದೆ. ಇಲ್ಲದೆ ಹೋದರೆ ಕಷ್ಟವಾಗುತ್ತದೆ .

@ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಎರಡನೆಯ ಅವತರಣಿಕೆ ಆರಂಭವಾಗಿದೆ. ಒಳ್ಳೆಯ ಒಪನಿಂಗ್ಸ್ . ಯಾಕೆ ಈ ರೀತಿ ಹೇಳ್ತಾ ಇದ್ದೀನಿ ಅಂದ್ರೆ ಈ ಬಾರಿ ವಿಜಯ್ ಪ್ರಕಾಶ್ ಅವರನ್ನು  ಜನರ ಮುಂದೆ ಕರೆತಂದರು  ರಮೇಶ್ ಅರವಿಂದ್. ಬಹಳ ಸುಂದರ ನಿರೂಪಣಾ ಶೈಲಿಯನ್ನು ಕರಗತ ಮಾಡಿಕೊಂಡಿರುವ ಸ್ಫುರದ್ರೂಪಿ  ರಮೇಶ್ ಅವರು ತಮ್ಮ ಈ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳಿಗೆ ಹೆಚ್ಚು ಮಾತಾಡಲು ಅವಕಾಶ ನೀಡುತ್ತಾರೆ. ಅದೇ ಅವರ ಕಾರ್ಯಕ್ರಮದ ಪ್ಲಸ್ ಪಾಯಿಂಟ್. ಈ ಬಾರಿ ವಿಜಯ್ ಪ್ರಕಾಶ್ ಅವರ ಮಾತುಕತೆ ಮನಸೆಳೆಯಿತು. ನಾನು ಕಂಡಂತೆ ಕೆಲವರ ಬಗ್ಗೆ ಮಾತ್ರ ಅವ್ಯಾಹತವಾಗಿ ಫೇಸ್ಬುಕ್ ನಲ್ಲಿ ಅಭಿಪ್ರಾಯಗಳು ಹೊರ ಹೊಮ್ಮಿಸುತ್ತಾರೆ. ಅಂತಹ ಸಾಲಿಗೆ ವಿಜಯ್ ಪ್ರಕಾಶ್ ಅವರ ಬಗೆಗಿನ ವೀಕೆಂಡ್ ಹೆಚ್ಚು ಹರಡಿತು. ಎಲ್ಲರ ಮಾತಿನ ಕೊನೆಯ ಸಾಲು ಎಷ್ಟು ಚಂದ ಇತ್ತು.
ಇಂತಹ ಅಭಿಪ್ರ…

ಪರಿಚಿತ !

Image

ವೆಲ್ ... ವೆಲ್

Image
ಇಂತಹದ್ದೊಂದು ಘಟನೆ ನಡೆಯ ಬಹುದು ಎಂದು ನಾನು ಕನಸು ಮನಸಿನಲ್ಲೂ ನೆನೆಸಿರಲಿಲ್ಲ. ಕ್ರಿಸ್ಮಸ್ ದಿನ ನಮ್ಮ ಮನೆ ಒಟ್ಟು ನಮ್ಮ ಖಾನ್ದಾನ್ಗೆ ಸೇರಿದ ಇಬ್ಬರು ಬಾಲಕರ ಜನ್ಮದಿನ. ಇಬ್ಬರು ಅಣ್ಣಂದಿರ ಮಕ್ಕಳೇ. ಹಿಂದಿನ ದಿನ ಒಬ್ಬ ಅಣ್ಣನ ಮಗನ ಹುಟ್ಟು ಹಬ್ಬ ಆಗಿತ್ತು.ಇಪ್ಪತೈದರ  ರಾತ್ರಿ ಒಂಬತ್ತು ಗಂಟೆ ನನ್ನ ಅಣ್ಣನ ಮಗ ಬೈಕ್ ಆಕ್ಸಿಡೆಂಟ್ ನಲ್ಲಿ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದ. ಅವ ನನ್ನ ಕಸಿನ್ ಮಗ ಆದರು, ದೂರದ ಊರಲ್ಲಿದ್ದರು ಸಹ  ಸೋಶಿಯಲ್ ನೆಟ್ ವರ್ಕ್ ಕಾರಣದಿಂದ ಎಲ್ಲರೊಂದಿಗೆ ಹೆಚ್ಚಿನ ಬಾಂಧವ್ಯ ಬೆಳೆದಿದೆ ನನಗೆ. ಇಪ್ಪತ್ನಾಲ್ಕನೇ ತಾರೀಖು ಹುಟ್ಟುಹಬ್ಬ ಆಚರಿಸಿಕೊಂಡವನು ಇಪ್ಪತ್ತೈ ದರಂದು ಜೀವ ಕಳೆದುಕೊಂಡ ಅಂದ್ರೆ ಹೇಗಿರ ಬೇಡ ನಮ್ಮ ಮನಸ್ಥಿತಿ ?  ದೂರದ ಹಳ್ಳಿಯಲ್ಲಿ ಇರುವ ಅವರ ಕುಟುಂಬದಲ್ಲಿ ಇಂತಹದೊಂದು ಬರಸಿಡಿಲು.. ತೇಜು - ತೇಜಸ್ ಸತ್ತಿದ್ದಾನೆ ಎನ್ನುವ ಸುದ್ದಿ ತುಂಬಾ ದುಃಖ ನೀಡಿತು. ಎಲ್ಲವನ್ನು ಸ್ವೀಕರಿಸಿ  ಮತ್ತೆ ಕೆಲಸದಲ್ಲಿ ಮಗ್ನಳಾದರು  ಸಹ , ಎರಡು ದಿನ ಬ್ಲಾಗಿಂಗ್ ಮಾಡಿದ್ರು ಏಕಾಗ್ರತೆ ಹಾಳಾಗಿತ್ತು. ಈ ಸಾವು ನ್ಯಾಯವೇ ಎಂದು ಪದೇಪದೇ ಅನ್ನಿಸಿತ್ತು.  ಆ ನಿಸ್ಸಹಾಯಕ ತಾಯಿ ತಂದೆ ನೆನಪು.. ಅ ಪಾಪದವರ ಸಂಕಟ ವಿವರಿಸೋಕೆ ಆಗಲ್ಲ..

                                                          ........

ಕಳೆದವಾರದಲ್ಲಿ ಪ್ರಸಾರವಾದ ಬಿಗ್ ಬಾಸ್ ನಲ್ಲಿ ಕ್ಯಾಪ್ಟನ್ ಸ್ಥಾನಕ್ಕೆ ಸಂಬಂಧಪಟ್ಟ ಇಡ್ಲಿ ತಿನ್ನ…