ಹೃದಯ ಕದ್ದಿದೆ

Image result for nature
ಧನುರ್ಮಾಸ ಯಪ್ಪಾ ಅನ್ನೋಷ್ಟು ಚಳಿ .. ಬೆಳಗಿನ ಆರಂಭವಾಗುವುದು ಭಜನೆ, ಹಾರ್ಮೋನಿಯಂ, ಗಂಟೆ, ಜಾಗಟೆಗಳ ಸದ್ದಿನಿಂದ
. ಹೆಣ್ಣುಮಕ್ಕಳಿಗೆ ಹೆಚ್ಚು ಪ್ರೀತಿಯ ತಿಂಗಳು ಇದು (ನನ್ನಂತಹವರನ್ನು ಹೊರೆತುಪಡಿಸಿ ).  ಅಯ್ಯಪ್ಪ ಸ್ವಾಮಿ ಸೀಸಜನ್ ಸಹ ಇದು. ಮುಂಜಾನೆ -ಸಂಜೆ  ಭಜನೆ ಭಜನೆ. ಒಂದಂತು ಸತ್ಯ ಅನೇಕ ಹಾಡುಗಳನ್ನು ಈಗ ಕೇಳುವ ಸದವಕಾಶ.. ಮೆಲೋಡಿಯ ಮೂಲಕ ಮನಗೆಲ್ಲುವ ಹಾಡುಗಳು . ಸಂಸ್ಕೃತಿ, ಆಚರಣೆ ಎಲ್ಲವನ್ನು ಪ್ರೀತಿಯಿಂದ ನೋಡಿದರೆ ಇಷ್ಟವಾಗುತ್ತದೆ. ಇಲ್ಲದೆ ಹೋದರೆ ಕಷ್ಟವಾಗುತ್ತದೆ .

@ಜೀ ಕನ್ನಡ ವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಎರಡನೆಯ ಅವತರಣಿಕೆ ಆರಂಭವಾಗಿದೆ. ಒಳ್ಳೆಯ ಒಪನಿಂಗ್ಸ್ . ಯಾಕೆ ಈ ರೀತಿ ಹೇಳ್ತಾ ಇದ್ದೀನಿ ಅಂದ್ರೆ ಈ ಬಾರಿ ವಿಜಯ್ ಪ್ರಕಾಶ್ ಅವರನ್ನು  ಜನರ ಮುಂದೆ ಕರೆತಂದರು  ರಮೇಶ್ ಅರವಿಂದ್. ಬಹಳ ಸುಂದರ ನಿರೂಪಣಾ ಶೈಲಿಯನ್ನು ಕರಗತ ಮಾಡಿಕೊಂಡಿರುವ ಸ್ಫುರದ್ರೂಪಿ  ರಮೇಶ್ ಅವರು ತಮ್ಮ ಈ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳಿಗೆ ಹೆಚ್ಚು ಮಾತಾಡಲು ಅವಕಾಶ ನೀಡುತ್ತಾರೆ. ಅದೇ ಅವರ ಕಾರ್ಯಕ್ರಮದ ಪ್ಲಸ್ ಪಾಯಿಂಟ್. ಈ ಬಾರಿ ವಿಜಯ್ ಪ್ರಕಾಶ್ ಅವರ ಮಾತುಕತೆ ಮನಸೆಳೆಯಿತು. ನಾನು ಕಂಡಂತೆ ಕೆಲವರ ಬಗ್ಗೆ ಮಾತ್ರ ಅವ್ಯಾಹತವಾಗಿ ಫೇಸ್ಬುಕ್ ನಲ್ಲಿ ಅಭಿಪ್ರಾಯಗಳು ಹೊರ ಹೊಮ್ಮಿಸುತ್ತಾರೆ. ಅಂತಹ ಸಾಲಿಗೆ ವಿಜಯ್ ಪ್ರಕಾಶ್ ಅವರ ಬಗೆಗಿನ ವೀಕೆಂಡ್ ಹೆಚ್ಚು ಹರಡಿತು. ಎಲ್ಲರ ಮಾತಿನ ಕೊನೆಯ ಸಾಲು ಎಷ್ಟು ಚಂದ ಇತ್ತು.
ಇಂತಹ ಅಭಿಪ್ರಾಯಗಳು ಬರುವಾಗ ಆ ಸಾಧಕನಿಗೆ ಈವರೆಗೂ ಗೆದ್ದ ಗೆಲುವಿನ ಆನಂದಕ್ಕಿಂತ ಮತ್ತಷ್ಟು ವಿಶಿಷ್ಟ ಖುಷಿಯನ್ನು ನಿಸ್ಸಂದೇಹವಾಗಿ ಕೊಡಮಾಡುತ್ತದೆ  . ಎರಡು ದಿನದ ಕಾರ್ಯಕ್ರಮ ಇದಾಗಿದ್ದರು ಒಂದಿನಿತೂ ಬೋರ್ ಉಂಟು ಮಾಡಲಿಲ್ಲ.ಶುದ್ಧಾನು ಶುದ್ಧ ಕನ್ನಡ , ಸರಳತೆ, ತೀರ ನಮ್ಮ ಪರಚಿತ ವ್ಯಕ್ತಿ ಎನ್ನಿಸುವಂತೆ  ಹರಟುವ ರೀತಿ ಪ್ರಾಯಶಃ ಕನ್ನಡಿಗರಗರ ಹೃದಯ ಕದ್ದಿದೆ  ಎನ್ನುವುದು ಸತ್ಯ.. ತುಂಬಾ ಇಷ್ಟ ಆಯ್ತು..
@ ಸುವರ್ಣ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುವ ಬೆರಗು ಅತಿ ವಿಶೇಷವಾದ ಕಾರ್ಯಕ್ರಮಗಳಲ್ಲಿ ಒಂದು. ನಿನ್ನೆ ಬಹಳ ದಿನಗಳ ನಂತರ ವೀಕ್ಷಿಸಿದೆ. ಉತ್ತಮ ನಿರೂಪಕಿ ಭಾವನ ಅವರು ಕಾರ್ಯಕ್ರಮ ನಿರೂಪಣೆ  ಮಾಡ್ತಾ ಇದ್ದರು.. ವಿಷಯ, ಸಂಗ್ರಹ ಬರಹ ಮಾಡಿದ ಎಲ್ಲರು ಕರೆಕ್ಟಾಗಿ ನೀಟ್ ವರ್ಕ್ ಮಾಡಿ ಜನರ ಮುಂದೆ ನೀಡಿದ್ದರು. ಪ್ರಾಣಿಗಳು ತಮ್ಮ ಶತ್ರುವನ್ನು ಎದುರಿಸುವ ಬಗ್ಗೆ ಎಲ್ಲದರ ಬಗ್ಗೆ ಇದ್ದು ಪುಟ್ಟ ಬೆರಗು ಕಾರ್ಯಕ್ರಮ  ಹೆಚ್ಚು ಮಾಹಿತಿ ಮೂಲಕ ವಿವರಿಸ್ತಾ ಇತ್ತು .
.ಜೀವ ಜಗತ್ತು, ಖಗೋಳ ಇಂತಹ ಸಂಗತಿಗಳು ಹೆಚ್ಚು ಆಸಕ್ತಿ ಉಂಟು ಮಾಡುವ ವಿಷಯಗಳು.. ಆದರೆ ಅದರ ನಿರೂಪಣೆ , ಬರಹ, ವಿವರವು ಸಹ ಅಷ್ಟೇ ಚಂದ ಇದ್ದಾಗ ಮಾತ್ರ...ಆಕರ್ಷಿಸುತ್ತೆ..

ಬಹಳ ಹಿಂದೆ ನಾನು ನನ್ನ ಇನ್ನೊಂದು ಬ್ಲಾಗ್ ನಲ್ಲಿ ಪ್ರಾಣಿಗಳ ಆಹಾರದ ಬಗ್ಗೆ ಬರೆದಿದ್ದೆ .. ಅದರಲ್ಲಿದ್ದ ಸ್ವಲ್ಪ ಭಾಗ ಇಲ್ಲಿ ಪೇಸ್ಟ್ ಮಾಡಿದ್ದೇನೆ
ಚಿಂಪಾಂಜಿ ಗಳು ಇರುವೆ ,ಗೆದ್ದಲು ರೀತಿಯ ಹುಳು ಹುಪ್ಪಟೆಗಳನ್ನು ಹಿಡಿಯುವುದು ಹೇಗೆ ಗೊತ್ತೇ? ಸಣ್ಣ ಬಿಲದ ರೀತಿ ಇರುವ ಸ್ಥಳದ ಬಳಿ ಬಂದು ಒಂದು ಚಿಕ್ಕ ಕಡ್ಡಿ  ಅದರೊಳಗೆ ತೂರಿಸಿ ಇಡುತ್ತದೆ ಸ್ವಲ್ಪ ಹೊತ್ತಾದ ಬಳಿಕ ಇರುವೆಗಳು ಕಡ್ಡಿಗೆ ಅಂಟಿ ಕೊಳ್ಳುತ್ತದಲ್ಲ,ಆಗ ಅದನ್ನು ತೆಗೆದು  ಬಾಯಲ್ಲಿ ಇಟ್ಟು  ಕಚ ಕಚನೆ ಚಪ್ಪರಿಸುತ್ತಾ ತಿನ್ನುತ್ತದೆ.ವಾಟ್ ಅನ್ ಐಡಿಯ ಸರ್ ಜಿ!!

No comments: