Posts

Showing posts from November 22, 2015

ಸತ್ಯಾವತಾರ...

Image
ಇಂದು ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತ ದೊಡ್ದೊರೆಲ್ಲ ಹೇಳ್ತಾ ಇದ್ದಾರೆ. ಅದರ ಭಾಗವಾಗಿ ವಿಶ್ವದಲ್ಲಿ ಹೆಚ್ಚಾದ ಅಸಹಿಷ್ಣುತೆಯ ಫಲ ಮುಂಬೈ ದಾಳಿ ಆಗಿ ಇಂದಿಗೆ  26 / 11 ..ಏಳು ವರ್ಷ. ಈ ಅಸಹಿಷ್ಣುತೆ ಬಗ್ಗೆ ವಾಪಸಿ ಜನರು  ಏನು ಹೇಳ್ತಾರೋ ...  ಗೊತ್ತಿಲ್ಲ. ಆದರೆ ದೇಶಕ್ಕಾಗಿ , ದೇಶದ ಜನತೆಗಾಗಿ ಪ್ರಾಣ ತೆತ್ತ ಜೀವಾತ್ಮಗಳಿಗೆ ನಮನ...
ಈ ಟೀವಿ ನ್ಯೂಸ್ ನಲ್ಲಿ ಇದರ ಬಗ್ಗೆ ಸಂಜೆ ಪ್ರಸಾರವಾದ ಕಾರ್ಯಕ್ರಮ ಗಮನ ಸೆಳೆಯಿತು. ಅದನ್ನು ಸಿದ್ಧ ಮಾಡಿದ ರೀತಿ, ಅದನ್ನು ಜನರ ಮುಂದೆ ಇಟ್ಟ ಬಗೆ, ಅದಕ್ಕೆ ವಾಯ್ಸ್ ಓವರ್ ಮಾಡಿದವರು , ಆ ಸ್ಪಷ್ಟತೆ, ಕಾರ್ಯಕ್ರಮದಲ್ಲಿ ಪೂರಕ ದೃಶ್ಯ ಜೋಡಣೆ ಎಲ್ಲವೂ ಮನ ಸೆಳೆಯಿತು.
@ ಬಿಗ್ ಬಾಸ್ ಮನೆಯಿಂದ ಗಾಯಕ ರವಿ ಮೂರೂರ್ ಹೊರ ಬಂದ ಬಳಿಕ ಅತ್ಯಂತ ಆಹ್ಲಾದ ಉಂಟಾಗುವಂತೆ ಇತ್ತು.. ಅವರು ಹೊರ ಬಂದಿದ್ದಕ್ಕೆ ಅಲ್ಲ ಅವರನ್ನು ಸಂದರ್ಶಿಸಿದ ವಾಹಿನಿಗಳು ಆ ಕಲಾವಿದರ ಕೈಲಿ ಹಾಡು ಹಾಡಿಸಿ ಮಾನಸೋಲ್ಲಾಸ  ಹೆಚ್ಚಿಸಿದರು.
ಸುವರ್ಣ ನ್ಯೂಸ್ ನಿರೂಪಕ, ಪತ್ರಕರ್ತ  ರಾಘವೇಂದ್ರ ಅವರ ಸಂದರ್ಶನ ನೋಡುವ ಅವಕಾಶ ಸಿಕ್ತು. ಅತ್ಯುತ್ತಮ ರೀತಿಯಲ್ಲಿ ಸಂದರ್ಶಿಸುವ  ನಿರೂಪಕರಲ್ಲಿ ರಾಘವೇಂದ್ರ ಸಹ ಒಬ್ಬರು..ಚಂದದ ಕಾರ್ಯಕ್ರಮ.. ಚಂದದ ಹಾಡುಗಾರ ರವಿ ...
ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ ನಿತ್ಯವೂ ಅವತರಿಪ ಸತ್ಯಾವತಾರ... ಆಹಾ ಥ್ಯಾಂಕ್ಸ್ ರವಿ  ಅವರೇ ಖುಷಿ ಕೊಡ್ತು..
 ಹಾಡಿನಿಂದ   ಮಾತ್ರವಲ್ಲ ರವಿ   ಬಿಗ್ ಬಾಸ್…

ಡೌಟ್.....

Image
PC: Prakash Hegde ಕಳೆದ ಭಾನುವಾರ ಬಹುದಿನಗಳ ಬಳಿಕ ಜೇಮ್ಸ್  ಬಾಂಡ್  OO7 -‎ಸ್ಪೆಕ್ಟ್ರೆ ‬ ‪ಗೆ ಹೋಗಿದ್ದೆ. ಬಾಂಡ್ ಸಿನಿಮಾಗಳಲ್ಲಿ ಬರಿ ಕತ್ತಲು, ಇಲ್ಲದೆ ಹೋದರೆ ಇದ್ದಬದ್ದ  ಮನೆ , ಕಾರು, ವಿಮಾನ, ಹೆಲಿಕಾಪ್ಟರ್ ಎಲ್ಲವನ್ನು ಒಡೆದು ಹಾಕುವ ತಂತ್ರಗಾರಿಕೆ. ಶಬ್ದಮಯ. ಆದರು ಮಜಾ ಸಿಗುತ್ತೆ ಅಂತಹ ಸಿನಿಮಾಗಳಿಂದ. ಎಂತಹ ವಿಶೇಷ ಕ್ರೌರ್ಯ ಇರುತ್ತೆ . ಡಡಾಂಟ...ಡಾ...ಅ...ಅ... ಡಿಶ್ಕುಲ್ .. ಇಂತಹದ್ದೇ ಶಬ್ದ....

ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ ಗಲಾಟೆ  ಈಗ ಶ್ರುತಿಕಡೆ ತಿರುಗಿರುವುದು ಮಾತ್ರ ನಿರೀಕ್ಷಿತ ಸಂಗತಿ. ಶ್ರುತಿ ಬಗ್ಗೆ ಹೆಚ್ಚು ಇಷ್ಟ ಆಗಿದ್ದು ಬಿಗ್ ಬಾಸ್ ಕಾರ್ಯಕ್ರಮದಿಂದ.. ಆಕೆಯ ಬದುಕಲ್ಲಿ  ಏನೆಲ್ಲಾ  ನಡೆಯಿತು.. ಆಕೆಯನ್ನು ಮತ್ತಷ್ಟು ಗಟ್ಟಿ ಗೊಳಿಸುವ ರಿಯಾಲಿಟಿ ಷೋ ಇದು.. ಬೇರೆಯವರ  ಅಸೂಯೆ ಶ್ರುತಿಯ ಒಳ್ಳೆಯ ವ್ಯಕ್ತಿತ್ವದ ಮೇಲೆ ಹೇಗೆ  ಪ್ರಭಾವ ತೋರುತ್ತೆ ಅನ್ನುವ ಅಂಶದ ಬಗ್ಗೆ ಕುತೂಹಲವಿದೆ.  ಈ ಕಾರ್ಯಕ್ರಮದಲ್ಲಿ ಅಯ್ಯಪ್ಪ ನಿಜಕ್ಕೂ ಸರಿಯಾಗಿ ಗೇಂ ಆಡ್ತಾ ಬಂದಿದ್ದಾರೆ. ಎಲ್ಲರನ್ನು ಡಿವೈಡ್ ಅಂಡ್ ರೂಲ್.
ನಿಜ ಹೇಳ ಬೇಕೆಂದರೆ ಆತ ಕ್ರಿಕೆಟ್ ಟೀಮ್ ನಲ್ಲೂ ಇದೆ ಸ್ಟ್ರಾಟಜಿ ಬಳಸಿ ಹೆಚ್ಚು ಬೆಳೆದರಾ ಅಂತ ಅನ್ನಿಸುತ್ತೆ. ಏನೇ ಇರಲಿ ಈ ಬಾರಿ ಅಲಂಕಾರದ  ಕಾನ್ಸೆಪ್ಟ್ ಖುಷಿ- ಮಜಾ ಕೊಡ್ತು. ಇನ್ನು ಹಾಗೆ ನೋಡೋಕೆ ಹೋದ್ರೆ ಹುಚ್ಚಾಸ್ಪತ್ರದು ಅಷ್ಟೊಂದು  ಖುಷಿ ನೀಡಲಿಲ್ಲ ಬಿಡಿ.
 ನಾಮಿನೇಷನ್ ಸಮಯದಲ್ಲಿ  ಭಾವನ ಬೆ…

ಗಣತಂತ್ರ

Image
ಭಾರತದಲ್ಲಿ ಈಗ ಎಲ್ಲ ಭಾಷೆಗಳ ಮಾಧ್ಯಮಗಳು ಅಸಹಿಷ್ಣುತೆಯ ಬಿಸಿಯಲ್ಲಿ ಇದ್ದಾರೆ. ಕೆಲವರ ಪ್ರಕಾರ  ಇದು ಬೌದ್ಧಿಕ ದಾರಿದ್ಯ ಆಗಿದ್ದರೆ, ಒಂದಷ್ಟು ಜನರಿಗೆ ನೋವಿನ ಸಂಗತಿ. ಕಾರಣ ಇಷ್ಟೇ ಎಲ್ಲರು ಅವರದ್ದೇ ಅದ ರೀತಿಯಲ್ಲಿ ಅದನ್ನು ಅರ್ಥೈಸಿಕೊಂಡು ತಮ್ಮ ಮನದ ಭಾವ ಹೊರ ಹಾಕುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹಾಗೆ ಜೀ ಹಿಂದಿ ನ್ಯೂಸ್ ಕಡೆಗೆ ಹೊರಟಾಗ ಅಲ್ಲಿ ರೋಹಿತ್ ಅವರು ಮಾತು ಕಥೆ ನಡೆಸಿದ್ದರು. ಅಲ್ಲಿನ ಸಂಗತಿ ಸಹಿತ ಸಹಿಷ್ಣುತೆ ಆಗಿತ್ತು. ಆದರ್ ನನಗೆ ಹೆಚ್ಚು ನೋವು ಕೊಡುವ ಸಂಗತಿಗಳಲ್ಲಿ ಒಂದಾದ  ಕಾಶ್ಮೀರ್ ಪಂಡಿತರ ಬದುಕು. ಜೀ ಯಲ್ಲಿ ಅಲ್ಲಿ ಉಳಿದಪಂಡಿತರ ಬಗ್ಗ ಹೇಳ್ತಾ ಅಂಕಿಅಂಶಗಳನ್ನು ತೋರಿಸ್ತಿದ್ದರು, ಅದರಲ್ಲಿ 1947  ರ ಸಮಯದಲ್ಲಿ  ಅಲ್ಲಿ ಶೇ. 15 ರಷ್ಟು  ಪಂಡಿತರು ಇದ್ದರಂತೆ, ಅದೇರೀತಿ 1981ರಷ್ಟರಲ್ಲಿ ಆ ಸಂಖ್ಯೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿತ್ತು, ಅಂದರೆ ಶೇ. 5 ರಷ್ಟು ಮಾತ್ರ ಅಲ್ಲಿದ್ದರು. ಈಗಿನ ಪರಿಸ್ಥಿತಿ  ಕೆಟ್ಟದಾಗಿದೆ ಎನ್ನುವುದನ್ನು ಹೇಳ ಬೇಕಿಲ್ಲ.
ಆದರೆ ಈ ಅಂಶವನ್ನು ಮತ್ತು ಆಮೀರ್ ಖಾನ್ ಅಸಹಿಷ್ಣುತೆಯ   ವಿಷಯವನ್ನು ಜೊತೆ ಮಾಡಿಸಿ ಡಿಬೇಟ್ ಮಾಡ್ತಾ ಇದ್ರೂ ರೋಹಿತ್.  ಈ ಪತ್ರಕರ್ತ - ನಿರೂಪಕರ   ಬಗ್ಗೆ ಹೇಳುವಷ್ಟಿಲ್ಲ, ನನ್ನ ಕಡೆಯಿಂದ ಒಂದು ಥಂಬ್ಸ್ ಅಪ್ . ಆಮೀರ್ ಹೇಳಿರುವುದನ್ನು ತಪ್ಪಾಗಿ ಅರ್ಥೈಸಿರ ಬಹುದು, ಅಥ್ವಾ  ಏನೇ  ಸಂಗತಿ ಆಗಿರ ಬಹುದು ಆದರೆ ಪಾರ್ಟಿಗಳ ಮುಖಂಡರು ತಮ್ಮ ಬೆನ…