ಕಸ ಗುಡಿಸಿ


ಪೂರ್ಣ ವಿರಾಮ ಇಲ್ಲದ  ಒಂದು  ವಾಕ್ಯವನ್ನು  ನಾವು ಹೇಗೆ  ಊಹಿಸಲಾರೆವೋ,  ಅದೇ ರೀತಿ ಸಾವು ಸಹ ಬದುಕಲ್ಲಿ ಅತ್ಯಗತ್ಯ. ಕಮಲ್ ಹಾಸನ್ ಹಾಗಂತ ಕಮಲ್ ಹಾಸನ್ ಹೇಳಿದ್ದಾರೆ. ಅವರ ಪಾಪನಾಸನಂ ಸಿನಿಮಾ ಶೂಟಿಂಗ್ ಸಮಯದಲ್ಲಿ ತುಂಬಾ ನ್ಯಾಚುರಲ್ ಆಗಿ ಬರ ಬೇಕೆಂದು ಮಾಡಿಕೊಂಡ ಅವಾಂತರದಿಂದ ಅವರ ಉಸಿರಾಟಕ್ಕೆ ತೊಂದರೆ ಆಗಿತ್ತಂತೆ. ಹಾಗಂತ ಓದಿದ್ದೆ. ಬಿಡಿ ಆ ವಿಷ್ಯ
ಈ ಸಾವಿನ ಬಗ್ಗೆ ಕುತೂಹಲ ಇದ್ದೆ ಇರುತ್ತದೆ ಎಲ್ಲರಿಗು. ಆದರೆ ಅದು ಬರುವಂತೆ ಬಂದರೆ ಚಂದ ಅಷ್ಟೇ. ಸ್ಟಾರ್ ವಾಹಿನಿಯ ಅತ್ಯದ್ಭುತ ಕಾರ್ಯಕ್ರಮಗಳಲ್ಲಿ ಒಂದಾದ ಸತ್ಯಮೇವ ಜಯತೆಯಲ್ಲಿ ಆತ್ಮಹತ್ಯೆ ಬಗ್ಗೆ ಮಾತನಾಡಿದ ಆಮೀರ್ ಖಾನ್ , ಅದರಿಂದ ನೊಂದ ಕುಟುಂಬಗಳ ಬಗ್ಗೆ ಹೇಳುತ್ತಾ ರಸ್ತೆ ಅಪಘಾತದಲ್ಲಿ ಮರಣಿಸುವವರ ನಂತರದ ಸ್ಥಾನ ಈ ಹರೆಯದ ಆತ್ಮಹತ್ಯೆಯ ಪ್ರಕರಣಗಳು ಇವೆ ಎನ್ನುವ ಮಾತು ಸಕತ್ ಬೇಜಾರು ಅನ್ನಿಸಿತು. ಆಮೀರ್  ಇಂತಹ ಕಾರ್ಯಕ್ರಮಕ್ಕೆ ಸೂಕ್ತ ನಿರೂಪಕ ಸಚ್ಚಿ !

ನಾನು ಕಳೆದ ವರ್ಷ ಒಂದು ಲೇಖನ ಓದಿದ್ದೆ. ಅದರಲ್ಲಿ ಹೀಗೆ ಒಬ್ಬ ಹರೆಯದ ಹುಡುಗ ಆತ್ಮಹತ್ಯೆ  ಮಾಡಿಕೊಳ್ಳಲು ನಿರ್ಧಾರ ಮಾಡಿದನಂತೆ. ಆದರೆ ಆತ ತಾನು ಸಾಯುವ ಸಂಗತಿಯನ್ನು ತನ್ನ ಎಲ್ಲ ಮಿತ್ರರಿಗೆ ಎಸೆಮೆಸ್ ಮೂಲಕ ಹೇಳಿದನಂತೆ. ಯಾರಿಗೂ ಆತನನ್ನು ಉಳಿಸಲು ಸಾಧ್ಯವಾಗದ ಪರಿಸ್ಥಿತಿ. ಆಗ  ಸಾಯುವುದಕ್ಕಿಂತ ಬದುಕು ಸಾಧಿಸು ಎನ್ನುವ ಅರ್ಥ ಹೊಂದಿರುವ   ಒಂದು ಎಸೆಮೆಸ್  ಈತನ ಬದುಕಿನ ಚಿತ್ರ ಬದಲಾಯಿಸುತ್ತದೆ. ಸಾರಿ ಆ    ಲೇಖನ ಅರ್ಧಂಬರ್ಧ ನೆನಪಿದೆ.. ಆದರೆ ಆಮೀರ್ ಈ ಸಂಗತಿ  ಹೇಳುವಾಗ ನನಗೆ ಪದೇಪದೇ ನೆನಪಿಗೆ ಬಂತು.. ತುಂಬಾ ಚಂದದ ಕಾರ್ಯಕ್ರಮ ಪೀಕೆ ಆಮೀರ್ :-) .

@ ಶಾರುಖ್ ಖಾನ್ ಬಗ್ಗೆ ಬರೆಯುವಾಗ ನನಗೆ ಸದಾ ಅವರು ಬೆಳೆದ   ಪರಿ ನೆನಪಿಗೆ ಬರುತ್ತದೆ. ಈಗ ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಡ್ಯಾನ್ಸ್ ಕಾರ್ಯಕ್ರಮದ ಶಾರುಖ್, ಫೌಜಿ , ಚಮತ್ಕಾರ್ ....ಅನೇಕ ಸಂಗತಿಗಳು ಶಾರುಖ್ ಬಗ್ಗೆ ಓದುವಾಗ ಆಗೆಲ್ಲ ಸಾಧಕರ  ಬದುಕೆಷ್ಟು ಕಷ್ಟಕರ ಅನ್ನಿಸಿತ್ತು. ಆಗ ಅಷ್ಟೇ ನನ್ನ ಯೋಚನಾ ಮಟ್ಟ  ಇದ್ದುದು..ಇತ್ತೀಚೆಗೆ ಅಂದ್ರೆ ಹ್ಯಾಪಿ ನ್ಯೂ ಇಯರ್ ನಲ್ಲಿ ಶಾರುಖ್ ತಮ್ಮ  ಬದುಕನ್ನು ಹಂಚಿಕೊಂಡಿದ್ದರು ಮಾಧ್ಯಮಗಳ ಮುಂದೆ..ಅದರಲ್ಲಿ ತಮ್ಮ ಮಕ್ಕಳು ಯಾವರೀತಿ ಆರಂಭಿಕ ಹಂತದಲ್ಲಿ ತಮ್ಮ ಫ್ಯಾನ್ಸ್ ಪ್ರೀತಿ ಕಂಡು ಹೆದರುತ್ತಿದ್ದರು. ತಮ್ಮ ವಿರಾಮದ ವೇಳೆಯಲ್ಲಿ ಶಾರುಖ್  ಬುಕ್ ಓದುವ ವಿಷಯ ಎಲ್ಲ ಎಲ್ಲ...! ನಮ್ಮ ಮನೆಯಲ್ಲಿ ಶಾರುಖ್ ಫ್ಯಾನ್ ಕ್ಲಬ್ ಸಹ ಇದೆ :-) ಅದರ ಮೆಂಬರ್ ಗಳು ಒಂದಷ್ಟು ಚಂದದ ಬಾಲಕಿಯರು :-)

 ನನಗೆ ಶಾರುಖ್ ಅವರ ಬದುಕಲ್ಲಿ ಅಬ್ರಾಂ ಹುಟ್ಟಿದಾಗ ಆದ ಗಲಾಟೆ ನೆನಪಿಸಿಕೊಂಡರೆ ಬೇಸರ ಎಂದೆನಿಸುತ್ತದೆ. ಸೂಪರ್ಸ್ಟಾರ್ ಆದ ಮಾತ್ರಕ್ಕೆ ಅವರು ತಂದೆ ಅಲ್ವೇ .. ಅವರಿಗೂ ಭಾವನೆಗಳು ಇರಲ್ವೆ.. !
ಎನಿವೆಸ್ ಮಗು ಮಾತ್ರ ಸಕತ್ ಇದೆ  :-)


@  ಕಲರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ನಲ್ಲಿ ಹಿರಿಯ ಕಲಾವಿದ ಪುನೀತ್ ಇಸ್ಸಾರ್ ದುರ್ಯೋಧನನಂತೆ ಆ ಷೋ ಅರ್ಧದಲ್ಲಿ ಹೋದದ್ದು ಬೇಸರ ಅನ್ನಿಸಿತು. ಸಾಮಾನ್ಯವಾಗಿ ಇಂತಹ ಹಿರಿಯ ಕಲಾವಿದರ ಬಗ್ಗೆ ಹೆಚ್ಚಿನ ಗಮನ ಇರುತ್ತದೆ. ಆದರೆ ಅವರೇ ತಪ್ಪು ಮಾಡಿ ಹೀಗೆ ಹೋಗ್ತಾರೆ. ಅದು ಬಿಡಿ ಕಳೆದವಾರ ಅತಿ ಹೆಚ್ಚು ಜನರು ಪೊರಕೆ ತೆಗೆದುಕೊಂಡಿದ್ದರು. ಸಲ್ಮಾನ್ BOY  ನೀವು ಸಹ ಕಸ ಗುಡಿಸಿ ಬಿಟ್ಟಿರೆ....  ಆಹಾ ಆಹಾ ಮತ್ತು ಆಹಾ.. ಆದರು  ಮೋದಿಜಿ ಅವರು ಸ್ವಚ್ಛ ಭಾರತ ಕನಸು ನನಸು ಮಾಡುವ ಮಂದಿ ಹೀಗೆ ಒಟ್ಟಾಗಿ ಕಸ ಗುಡಿಸುವುದು  ನನಗೆ ಸಕತ್ ಮಜಾ ನೀಡಿದೆ. ನಾನು ಕಂಡಂಗೆ ಯಾರೇ ಆಗಲಿ ಹೀಗೆ ಒಟ್ಟಿಗೆ ಕಸ ಗುಡಿಸಲ್ಲ . ಆ ರಸ್ತೆ, ಅಥವಾ ಒಂದು ಭವನ ಅಥವಾ ಪಾರ್ಕ್ ಅಥವಾ .. ಅಥವಾ ರಾಜಕಾರಣಿಗಳು ಬರ್ತಾರೆ ಅಂದಾಗ ಹೀಗೆ ಒಟ್ಟಿಗೆ ಕಸ ಗುಡಿಸಿ ತಾವು ಕೆಲಸ ಮಾಡಿದ್ದೀವಿ ಅಂತ ತೋರಿಸುತ್ತಾರೆ  ಬೀದಿ ಕಸ ಗುಡಿಸುವ ಮಂದಿ.. ಆದರೂ ಕಸದ ಬಗ್ಗೆ ನಿಮಗೆಲ್ಲರಿಗೂ  ಗಮನ ಬಂದಿದ್ದು ಖುಷಿ ಕೊಡ್ತು. ಅದೇರೀತಿ ಅಕ್ಕಿನೇನಿ ನಾಗಾರ್ಜುನ, ಕನ್ನಡದ ಕಿಚ್ಚ ಸುದೀಪ್ ಈ ಕೆಲ್ಸಕ್ಕೆ ಮುಂದಾಗಿದ್ದಾರೆ.ಒಳ್ಳೆಯ  ಕೆಲಸ .. ಆದರೆ  ಮತ್ತೆ ಯಾವಾಗ ಸಲ್ಮಾನ್ Boy  ಕಸ ಗುಡಿಸೋದು ;-)

ಪ್ರಾಪರ್ಟಿ



ಅತ್ಯಂತ ಖೇದ ಅನ್ನಿಸುವ ಸುದ್ದಿ ಮಕ್ಕಳ ಮೇಲೆ ಮಾಡುವ ಅತ್ಯಾಚಾರ. ಅದರಲ್ಲೂ ರೆಪ್ಯು ಟೆಡ್ ಶಾಲೆಗಳಲ್ಲಿ ಆ ರೀತಿಯ ವಾತಾವರಣ ಇದ್ದಾರೆ ಕೆಳಸ್ತರದ ಮಕ್ಕಳು ಯಾವರೀತಿ ಬದುಕಲು ಸಾಧ್ಯ ಅನ್ನುವ ಪ್ರಶ್ನೆ ಉದ್ಭವ ಆಗುತ್ತದೆ  . ಮುಖ್ಯವಾಗಿ ಇಂತಹ ಪ್ರಕರಣಗಳನ್ನು ಆ ಗಳಿಗೆ ತೋರಿ ಸುಮ್ಮನಾಗುವ ಮಾಧ್ಯಮಗಳು ಆನಂತರ ಮತ್ತೊಂದು ಪ್ರಕರಣ ಆಗುವ ತನಕ ಇಂತಹ ಸಮಸ್ಯೆಗಳು ನಮ್ಮ ಸಮಾಜದಲ್ಲಿ ಕಳೆಯಂತೆ  ಬೇರೂರಿದೆ ಕಿತ್ತು ಬಿಸಾಡ ಬೇಕು ಎನ್ನುವ ಅಂಶದ ಕಡೆಗೆ ಗಮನ ನೀಡ ಬೇಕು.ಪೂರಕ ವಾತಾವರಣದ ಸೃಷ್ಟಿ ಆಗ ಬೇಕು. ಆದರೆ ಮಾಧ್ಯಮವನ್ನು ನಡೆಸುವವರು ಮನುಷ್ಯರೆ ಅಲ್ವೆ ? ಅವರು ತಮ್ಮ ಲಿಮಿಟ್ ನಲ್ಲಿ ಏನಾಗುತ್ತದೆಯೋ ಅದನ್ನು ಮಾಡುತ್ತಾರೆ.


@ ಸಾಮಾನ್ಯವಾಗಿ ಟೀವಿ ಟಾಕ್  ಷೋ ಗಳನ್ನೂ ಪ್ರಸಿದ್ಧರು ಮಾಡುತ್ತಾರೆ. ಆಗ ಎಲ್ಲರು ಅವರೆಷ್ಟೇ ತಪ್ಪು ಮಾಡಲಿ ಒಪ್ಪಿಕೊಂಡು ಬಿಡ್ತಾರೆ. ಅದು ಸಾಮಾನ್ಯ ಸಂಗತಿ. ಆದರೆ ಪ್ರಸಿದ್ಧರ ಮಕ್ಕಳು ಇಂತಹ ಸಾಹಸಕ್ಕೆ ಕೈ ಹಾಕಿದಾಗ ಜನರು ಅವರ ಬಗ್ಗೆ ಅಭಿಪ್ರಾಯ ಹೇಳೋಕೆ ಹಿಂದೇಟು ಹಾಕ್ತಾರೆ. ಅದು ಅವರ ಬೆಳವಣಿಗೆಗೆ ಅಡ್ಡಗಾಲು ಅಂತ ನಾನು ನಂಬುತ್ತೀನಿ. ಭಾವನ ಬೆಳಗೆರೆ ವಿಷಯದಲ್ಲೂ ಸಹಿತ ಹಾಗೆ ಆಗಿದೆ. ಆಕೆಯ ಪ್ರತಿಭೆ ಹೊರ ಬರಲು ಇನ್ನು ಪ್ರಯತ್ನ ಮಾಡ ಬೇಕು. ಯಾಕೇಂದ್ರೆ ಸೋಫಾ ಇದ್ದ ಕಡೆ ಹೋಗಿ ಮಾತಾಡಿ ಬರುವ ಪರಿಪಾಠ ಹೊಂದಿದ್ದಾರೆ ಅದೇ ದೊಡ್ಡ ಸಮಸ್ಯೆ. ನಿರೂಪಣೆಗೆ ಪ್ರಾಪರ್ಟಿ ಸಹ ಹೆಚ್ಚು ಪ್ರಾಮುಖ್ಯತೆ ಗಳಿಸುತ್ತದೆ.. ಉತ್ತಮ ನಿರೂಪಕರಿಗೆ  ಕ್ರೇಜಿ ಸ್ಟಾರ್ ರವಿಚಂದ್ರನ್  ಮನಸ್ಥಿತಿ ಇರಬೇಕು. ಹಾಗೆ ಆದಾಗ ಮಾತ್ರ ಎಲ್ಲವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳ ಬಹುದು. ರವಿಮಾಮ ಅವರ ಹೊಸ ಸಿನಿಮಾದಲ್ಲಿ ಲಿಫ್ಟ್ ಮುಖ್ಯ ಪಾತ್ರಧಾರಿಯಂತೆ.. ನನಗೆ ಆ ಸಂಗತಿ ತಿಳಿದೇ ರೋಮಾಂಚನ ಆಗಿ ಹೋಯ್ತು. ಅವರು ಸಂದರ್ಶನ ಒಂದರಲ್ಲಿ ತನ್ನ ಕಣ್ಣಿಗೆ ಯಾವ ವಸ್ತು ಕಂಡರು ಅದನ್ನು ಹೇಗೆ ಬಳಸಿಕೊಳ್ಳ ಬೇಕು ಎನ್ನುವ ಯೋಚನೆ ಬಂದು ಅದನ್ನು ಕಾರ್ಯರೂಪಕ್ಕೆ ತರುವ ಮನಸ್ಥಿತಿ ಉಂಟಾಗುತ್ತದೆಯಂತೆ. .ಈ ಸಂಗತಿಯನ್ನು ಭಾವನಾಗೆ ಹೇಳ್ತಾ ಇರೋದು ಯಾಕೆ ಅಂದ್ರೆ ಆಕೆಯ ಖಾಸಬಾತ್ ವಿತ್ ಭಾವನ ಬೆಳಗೆರೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ..ಅಂದಂಗೆ ಈ ಕಾರ್ಯಕ್ರಮ ಕಸ್ತೂರಿ ವಾಹಿನಿಯಲ್ಲಿ ಪ್ರಸಾರ ಆಗುತ್ತದೆ. ಭಾವನ ಅಕ್ಕ ಚೇತನ ನನ್ನ ಎಫ್ಬಿ ಗೆಳತಿ..ಆಗಾಗ ತನ್ನ ಮನದ ಭಾವನೆಗಳನ್ನು ಬರೀತಾ ಇರ್ತಾರೆ ಸಕತ್ ಇಷ್ಟ ಆಗುತ್ತೆ ಓದೋಕೆ  ನನಗೆ.ಮತ್ತೊಂದು ವಿಷ್ಯ ಭಾವನ ಇದು ನನ್ನ ಅಭಿಪ್ರಾಯ ಮಾತ್ರವಲ್ಲ ಬಹುತೇಕರದ್ದು! ಮತ್ತೊಂದು ಸಂಗತಿ ದೊಡ್ಡಣ್ಣನಂತಹ   ಹಿರಿಯರ ಮುಂದೆ ಕಾಲು ಮೇಲೆ ಕಾಲು ಹಾಕಿಕೊಂಡು ಮಾತಾಡೋದು ಕಂಡಾಗ ಯಾರಿಗೂ ಆಪ್ತ ಆಗಲ್ಲ !!