Posts

Showing posts from December 13, 2015

ಗಮನಕ್ಕೆ ಬಂದಿದ್ದರೆ !

Image

ಸಾರಿ ಸಾರಿ....

Image
ಮೊನ್ನೆ ಸಂಜೆ ಚಾನೆಲ್ ನ್ಯೂಸ್ ಏಷ್ಯಾ ದಲ್ಲಿ ಪ್ರಸಾರ ಆಗುತ್ತಿದ್ದ ದ ರಿಯಲ್ ವುಮನ್ ನಾಟ್ ವಿಚ್ ಎನ್ನುವ ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ನಾನು ಅದರತ್ತ ಹೋಗುವಷ್ಟರಲ್ಲಿ ಆ ಕಾರ್ಯಕ್ರಮ ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿತ್ತು. ಪಪುವಾ ನ್ಯೂ ಗಿನಿ ದೇಶದ - ದ್ವೀಪದ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರ  ಆಗ್ತಾ ಇತ್ತು. ಅದರಲ್ಲಿ ತೊಂದರೆಗೊಳಗಾದ , ಹಿಂಸೆ ಎದುರಿಸಿದ ಓರ್ವ ಹಿರಿಯ ಹೆಣ್ಣುಮಗಳ  ಬಗ್ಗೆ ಕಾರ್ಯಕ್ರಮ ಪ್ರಸಾರವಾಗ್ತಾ ಇತ್ತು. ಹೆಚ್ಚು ತಲೆಗೆ ಹೋಗದೆ ಇದ್ದರು ಸಹಿತ ಅಲ್ಲಿನ ಕಾರ್ಯಕ್ರಮದಿಂದ ಹೆಣ್ಣುಮಕ್ಕಳ ಪರಿಸ್ಥಿತಿ ಅಲ್ಲಿ ಬದಲಾಗುವ ಸಾಧ್ಯತೆಗಳು ತುಂಬಾ ಕಡಿಮೆ ಎನ್ನುವುದು ಮತ್ತೇ ಸಾಬೀತು ಮಾಡಿತ್ತು ಕಾರ್ಯಕ್ರಮ. ಹೆಣ್ಣು ಮಕ್ಕಳ   ನಿಸ್ಸಹಾಯಕತೆ ಆ ಕಾರ್ಯಕ್ರಮದಿಂದ ಮಾತ್ರವಲ್ಲ ಒಟ್ಟಾರೆ ಆ ದೇಶದ ಬಗ್ಗೆ ತಿಳಿದವರಿಗೆ ಗೊತ್ತೇ ಇದೆ. ಅತಿ ಹೆಚ್ಚು ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣುಮಕ್ಕಳು ಅಲ್ಲಿ ಬದುಕುತ್ತಿದ್ದಾರೆ. ಗಂಡ ಮಾತ್ರವಲ್ಲದೆ, ಸಮೀಪ- ದೂರದ ನೆಂಟರು, ಅಕ್ಕಪಕ್ಕದ, ಅಪರಿಚಿತ ಗಂಡಸರುಗಳು ಸಹ  ಹೆಣ್ಣನ್ನು ದೈಹಿಕವಾಗಿ- ಲೈಂಗಿಕವಾಗಿ ದೌರ್ಜನ್ಯ ಮಾಡ್ತಾ ಇದ್ದಾರೆ. . ಅಲ್ಲದೆ ಆ ದೇಶದಲ್ಲಿ ಹೆಣ್ಣುಮಕ್ಕಳು ಅದೆಷ್ಟರಮಟ್ಟಿಗೆ ಶೋಷಿತರು ಅಂದರೆ ಅಲ್ಲಿರುವ  ಪೊಲೀಸ್  ಸ್ಟೇಶನ್ ಗಳಲ್ಲಿ ದಾಖಲಾಗುವ ಬಹುತೇಕ   ಕೇಸ್ ಗಳು ಪುರುಷರಿಂದ ಒದೆ, ಗಿಂಡಿದ, ಸುಟ್ಟ, ಚಾಕುವಿನಿಂದ ಕತ್ತರಿಸಿಕೊಂಡು ಜೀವ ಉಳಿಸಿಕೊಳ್ಳಲು ಬಂ…

ಅಧಿಕಾರ ದಾಹ

Image
ಇತ್ತೀಚಿಗೆ ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತಾಷ್ಕಾಂಟ್  ಒಪ್ಪಂದದ ಬಗ್ಗೆ ಓದುವ ಅವಕಾಶ ಸಿಕ್ತು.ಅದಕ್ಕೂ ಮುನ್ನ ಅವರು ಪ್ರಧಾನಿ ಆಗಿದ್ದಾಗ ನೆಹರೂ ಪುತ್ರಿ ಇಂದಿರಾಗಾಂಧಿ ಅವರ ವರ್ತನೆ, ಆಕೆಯ ಸ್ವಭಾವ ಶಾಸ್ತ್ರೀಜಿ ಅವರಿಗೆ ತಲೆನೋವಾಗಿದ್ದು ಎಲ್ಲವನ್ನು ಲೇಖಕರು ತಿಳಿಸುತ್ತಾ  ಸಾಗಿದ್ದರು. ಅತ್ಯಂತ ಸರಳವಾದ   ರೀತಿಯಲ್ಲಿ ಇದ್ದ ಲೇಖನ ಅದು . ಹಾಗೆ ಓದುವಾಗ ತಾಷ್ಕಾಂಟ್  ಒಪ್ಪಂದದ ನಂತರ ತಾವೇನು ಎನ್ನುವುದನ್ನು ಜಗತ್ತಿಗೆ ಮನದಟ್ಟು ಮಾಡಬೇಕು ಎನ್ನುವ ಉತ್ಸಾಹದಲ್ಲಿ ಇದ್ದ ಶಾಸ್ತ್ರೀಜಿ ಅವರು  ಮಾರನೆಯ ದಿನ ಹೆಣವಾಗಿ (11 January 1966) ಬಿಟ್ಟಿದ್ದರು ಎನ್ನುವುದು ಓದಿದಾಗ ಕಣ್ಣಲ್ಲಿ ನೀರು ಬಂದಿತ್ತು. ಅಂತಹ ವಿಶೇಷ ವ್ಯಕ್ತಿತ್ವದ ದೇಹದ ಮೇಲೆ ಇದ್ದ ಹೊಲಿಗೆ, ಅವರಿಗೆ ಮರಣೋತ್ತರ ಪರೀಕ್ಷೆ ಮಾಡಲು ಅವಕಾಶ ನೀಡದ ಸರ್ಕಾರ, ಅವರ ಪತ್ನಿಯ ಅನುಮಾನವನ್ನು ಬಗೆಹರಿಸದ ಸರ್ಕಾರ  ಅವೆಲ್ಲ ಓದುವಾಗ ಯಾಕೋ ತುಂಬಾ  ಬೇಜಾರಾಗಿತ್ತು.

@ಆದರೆ ಮತ್ತೆ ನನಗೆ ಆ ಬೇಸರ ಕಾಡಿತು . ಅದು ದುಃಖದ ಬೇಸರ. ಅದಕ್ಕೆ ಕಾರಣ ಸುವರ್ಣ ನ್ಯೂಸ್ ನಲ್ಲಿ  ನಿನ್ನೆ ಬೆಳಿಗ್ಗೆ ನೇತಾಜಿ ಸುಭಾಶ್ ಚಂದ್ರ ಭೋಸ್ ಅವರ ಬಗ್ಗೆ   ಒಂದು ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಅದನ್ನು ನವಿತ ಜೈನ್ ನಿರೂಪಣೆ ಮಾಡ್ತಾ ಇದ್ರೂ. ಅದನ್ನು  ಚೆನ್ನಾಗಿ ಬರೆದಿದ್ದಾರೆ ವಿಷಯವನ್ನು ಅಲ್ಲದೆ ಅದರ  ಹಿನ್ನೆಲೆ ಧ್ವನಿ ನೀಡಿದವರು ತುಂಬಾ ಚೆನ್ನಾಗಿ ಆ ವಿಷಯವನ್ನು ವಿ…