ಕೆಟ್ಟ ಪ್ರಭಾವ



You cannot believe in God until you believe in yourself. 
Swami Vivekananda 
 

ಪ್ರಿಯ ಗುರುವೇ ಇಂದು ನಿಮ್ಮ ಜನುಮದಿನ.. ನಿಮಗೆ ನನ್ನ ಹೃದಯಪೂರ್ವಕ  ಶುಭಕಾಮನೆಗಳು 


ಹೆಣ್ಣುಮಗು ಆ ಸಮಾನ -ಈ ಸಮಾನ ಎಂದು ಸದಾ ಗೊಣಗಾಡುವ ದೇಶ ನಮ್ಮದು.ಗೊಣಗಾಡೋದು ಅಂತ ಯಾಕೆ ಹೇಳೋಕೆ ಹೊರಟಿದ್ದೀನಿ ಅಂದ್ರೆ ದೊಡ್ಡ ದೊಡ್ಡ ಸ್ಥಾನದಲ್ಲಿ ಇರುವವರು ಎಲ್ಲರು ಒಂದಲ್ಲ ಒಂದು ರೀತಿ ತಮಗೆ ಇಷ್ಟ ಬಂದಂಗೆ ಹೆಣ್ಣುಮಕ್ಕ ಳಿಗೆ ಪುಕ್ಕಟೆ ಸಲಹೆ ಕೊಡ್ತಾರಲ್ಲ ಅದಕ್ಕೆ ...

ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ಇಷ್ಟ ಬಂದ  ಹಾಗೆ ಹೇಳುವ ಜನನಾಯಕರಿಗೆ ಏನು ಹೇಳಬೇಕೋ ಗೊತ್ತಿಲ್ಲ. ಭಾಗವತ್ ಕಥೆ ಒಂದು ರೀತಿ ಆದರೆ ಆಸು ರಾಮ್ ದು ಮತ್ತೊಂದು ರೀತಿ. ಈಗ ಆಯನೂರ್ ಮಂಜುನಾಥ್   ಅವರದು ಇನ್ನೊದು ರೀತಿ.
ಮಕ್ಕಳನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ಇದ್ದಾರಂತೆ ವಾಹಿನಿ ಆಂಕರ್ಸ್ ..ಆ ಹೆಣ್ಣುಮಕ್ಕಳು ಧರಿಸುವ ಉಡುಗೆ-ತೊಡುಗೆ ಮಕ್ಕಳ ಮನದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆಯ೦ತೆ ,ಅಯ್ಯೋ ಇಂತಹ ಮಾತುಗಳನ್ನು ಹೇಳಿದ ಮಹನೀಯರಿಗೆ ದೋರ್ದ೦ಡ ನಮಸ್ಕಾರಗಳು.

ಪಬ್ಲಿಕ್ ವಾಹಿನಿಯಲ್ಲಿ ನಿರೂಪಕ ಹರೀಶ್ ತಮ್ಮ ಸಹೋದ್ಯೋಗಿಗಳಾದ (ಬೇರೆ ಬೇರೆ ವಾಹಿನಿಗಳಲ್ಲಿ ಬದುಕು ಕಾಣುತ್ತಿರುವ ) ಸ್ವಪ್ನ, ಸೌಮ್ಯ  ಮತ್ತು ಶ್ವೇತ ಜೊತೆಯಲ್ಲಿ ತಮ್ಮ ವಾಹಿನಿಯ ರಾಧ ಜೊತೆ ಚರ್ಚೆ ನಡೆಸಿದ್ದರು.ಜೊತೆಗೆ ಸಾಥ್ ನೀಡಿದ್ದು ಮಹಿಳೆ ಯಾರ ಬಗ್ಗೆ ಕಾಳಜಿಯುಳ್ಳ ಮಹಿಳೆ ವಿಮಲಾ.
ಈ ವಿಷಯದ ಬಗ್ಗೆ ಆ ಹೆಣ್ಣು ಮಕ್ಕಳದ್ದು ಮಾತ್ರವಲ್ಲ ನಮ್ಮೆಲ್ಲರ ಪ್ರತಿಭಟನೆ ಇದ್ದೆ ಇದೆ.. 
ಇಂತಹ ಮಾತುಗಳನ್ನು ಉದುರಿಸುವುದಕ್ಕಿಂತ ಮುನ್ನ ಹೆಣ್ಣುಮಕ್ಕಳ ಶ್ರಮ-ಸಾಧನೆ ಬಗ್ಗೆ ಗೌರವಿಸುವುದನ್ನು ಕಲಿತಾಗ ಮಾತ್ರ ಎಲ್ಲವೂ ಉತ್ತಮ ಹಾದಿಯಲ್ಲಿ ನಡೆಯೋದು..




ನಮ್ಮ ಊರು ಬೆಂಗಳೂರು


ಅತ್ಯಂತ  ಸುಂದರ ಕಾರ್ಯಕ್ರಮ ಕಾರ್ಯಕ್ರಮಗಳಲ್ಲಿ ಜನಶ್ರೀ ಯಲ್ಲಿ ಪ್ರಸಾರ ಆಗುವ ಸುರೇಶ  ಮುನಾ  ಬೆಂಗಳೂರು ಇದು ನಮ್ಮ ಊರು ಸಹ ಒಂದು .ಹೇಗಿತ್ತು ಹೇಗಾಯ್ತು ಈ ನಮ್ಮ ಊರು ಅಂತ ಒಂದು ಬಾರಿ ಯೋಚಿಸಿದರೆ ಒಹ್ ! ಕೆಲವು ಸ್ಥಳಗಳಲ್ಲಿ ಅನಾವಶ್ಯಕವಾಗಿ ಎದ್ದಿರುವ ಆ ಫ್ಲೈ ಓವರ್ ಗಳು ಆ ಸ್ಥಳಗಳ ಸೌಂದರ್ಯವನ್ನೇ ದೂರ ಮಾಡಿದೆ. ನ್ಯಾಷನಲ್ ಕಾಲೇಜ್ ಇರುವ ಜಾಗ ,ಅದರ ಜೊತೆಗೆ ಮಿಳಿತವಾಗಿರುವ  ಇತಿಹಾಸ, ಸುಂದರ ನೆನಪುಗಳಿಗೆ ಪರದೆ ಹಾಕಿದಂತೆ ಎದ್ದಿರುವ ಆ ಸೇತುವೆ .. !ಪ್ರತಿ ಎಪಿಸೋಡ್ ನೋಡುವಾಗಲು ನನಗೆ ತುಂಬಾ ದುಃಖ ಆಗುತ್ತೆ ಹಳೆಯ ಬೆಂಗಳೂರು ನೆನಪಿಸಿಕೊಂಡರೆ 
ಈ ಭಾವನೆಗೆ ಪೂರಕಆಗುವಂತೆ  ಮಿತ್ರ ಪಲವಳ್ಳಿ  ಬದರಿನಾಥ್ ಕವನ ಇಲ್ಲಿ ಅಂಟಿಸಿದ್ದೇನೆ.ಅನೇಕ ವಾಹಿನಿಗಳಲ್ಲಿ ಕ್ಯಾಮರ ನಿರ್ವಹಣೆ ಬದುಕು ನಡೆಸುತ್ತಿರುವ ಕವಿ ಮನಸಿನ ಭಾವುಕ ಗೆಳೆಯ ಬದರಿ ಈಗ  ಸುವರ್ಣ ನ್ಯೂಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತೋಚಿದ್ದು ಬರೆದೆ ಅನ್ನುವ ಈ ವಿನಮ್ರ ಗೆಳೆಯ ತೋಚಿದ್ದು ಬರೆದು ಓದುಗರ ಮನಸ್ಸು ಬಾಚಿದ್ದಾರೆ..ಕವನ ಓದಿ ನಿಮಗೆ ಅರ್ಥ ಆಗುತ್ತೆ.. 


ಯಾವುದೀ ಓಘ? ಹುಚ್ಚು ಆವೇಗ?
ಎತ್ತ ಸಾಗಿದೆ ಪ್ರಿಯೇ! ಬೆಂಗಳೂರು...

ರಾಯರಾಳ್ವಿಕೆಯಲಿ ರಾಶಿ ಲೆಕ್ಕದಲಿ
ವಜ್ರ ವೈಢೂರ್ಯ ರತ್ನಾದಿಗಳು,
ನನ್ನ ಕಾಲಕೆ; ಕಳ್ಳೇ ಕಾಯಿ ಪರಿಷೆಯಲಿ
ಪ್ರದ್ಯುಮ್ನ ಬಾಣಕ್ಕೆ ಸಿಕ್ಕ ಪದ್ಮ ಮೀನಾಕ್ಷಿಯರು!

ರಸಿಕ ಮಣಿಗಳಿಗೆ ಕೆಂಪೇಗೌಡ ಹಿಮಾಲಯ
ಸಭ್ಯರಿಗೆ! ರಾಜ್ಕುಮಾರ್ ವಿಷ್ಣು ಅಂಬಿ ರಮೇಶ
ಇಷ್ಟ ದೇವತಾ ಕ್ಯಾಲಂಡರಿನ ಹಿಂದೆ
ಸಿಲ್ಕು ಡಿಸ್ಕೋ ಮುಲುಕೋ ಜನ್ಮಸ್ಥ ಉಡುಗೆ!

ಊರಗಲವಿದ್ದ ಮಸಾಲೆ ದೋಸೆ ಕಾಸಗಲ
ನಲ್ಲಿ ನೀರಿಗೂ ಬ್ರಾಂಡಿನ ಬಿರುಡೆ
ಸುರಿದ ಮಳೆ, ಒಂಥರಾ ಹೆಂಡತಿ ಉಪದೇಶ
ರಾಜ ಕಾಲುವೆಗಳೆಲ್ಲ ಒತ್ತುವರಿ ಈಗ!

ದಮ್ಮು ರಮ್ಮು ಲಲನೆಯಕೂಡ, ಎಲ್ಲಿಂದಲೋ ಬಂದವರಿಗೆ
ಅಫೀಮು ಗಾಂಜ ಲೈವ್ ಬ್ಯಾಂಡುಗಳ ತೆವಲು
ನೂರ ತೊಂಬತ್ತೆಂಟು ಹುತ್ತಗಳಲೂ ಪರಕೀಯ ಹಾವುಗಳು
ನಮ್ಮ ಬಸ್ಸಲ್ಲೇ ನಾವು ನಿಂತ ಪಯಣಿಗರು...

ನಗರ ಭೂಪಟಕೀಗ ಆನೆ ಕಾಲು ರೋಗ
ನನ್ನ ಪ್ರಾರಬ್ಧ ಕರ್ಮಕೆ
ಈಕೆ ಗತ ತ್ರಿಪುರ ಸಿಲಿಕಾನ್ ಸುಂದರಿ...


ಕನ್ನಡ ದಲ್ಲೂ ...Bigg Boss ?!

ಪಾಕಿಸ್ತಾನದ ಮೋಸದಿಂದ ನಮ್ಮ ಸೇನಾ ಸಿಂಹಗಳು ಮರಣಿ ಸಿದ್ದಾರೆ . ಅವರಿಗೆ ನಮ್ಮ ಸಲಾಂ..ಮೋಸದ ವಿದ್ಯೆಯನ್ನು ಕಲಿಯ ಬೇಕಾದರೆ ಪಾಕಿಗಳನ್ನು ನೋಡಿ ಕಲಿಯ ಬೇಕು. ಅವರಿಂದ ನಮಗೆ ಎಷ್ಟೇ ಮೋಸ ಆದರೂ ನಾವು ಮಾತ್ರ ಅಲ್ಲಿನ ಪ್ರತಿಭೆಗಳಿಗೆ ಬೆಲೆ ಕೊಡ್ತಾ ಇದ್ದಿವಿ.. ಏನೇ ಹೇಳಿ ಮೇರ ಭಾರತ ಆಲ್ವೇಸ್ ಮಹಾನ್.. ಜೈ ಹಿಂದ್..
ನಿನ್ನೆ ನಾನು ಎಫ್ ಬಿ ಯಲ್ಲಿ ಈ ವೀರ ಯೋಧರ ಬಗ್ಗೆ ಒಂದು ಸಾಲು ಬರದಾಗ ಅವರ ಜೊತೆ ಕೆಲಸ ಮಾಡುತ್ತಿದ್ದ ಕನ್ನಡ ಯೋಧ ಹಾಗೂ ನನ್ನ ಎಫ್ಬಿ   ಮಿತ್ರ ತನ್ನ ಸಾಥಿಯ ವೀರಮರಣ ಕ್ಕೆ ಕಂಬನಿ ಮಿಡಿದಿದ್ದರು. ಕೇವಲ ಅವರು ಮಾತ್ರವಲ್ಲ ಇಡಿ ಭಾರತೀಯ ಹೃದಯಗಳು ಆ ವೀರಯೊಧರಿಗೆ  ನಮಿಸುತ್ತದೆ..

foto: PROUD TO BE AN INDIAN

ಈ ಫೋಟೋ ನೋಡಿದ್ರೆ ತುಂಬಾ ಖೇದ ಅನ್ನಿಸುತ್ತೆ ಅಲ್ವ..ಇದಕ್ಕೆ ಕಾರಣ ಯಾರು ಎನ್ನುವ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ಪಡೆದು ಕೊಂಡರೆ ಎಲ್ಲ ಸರಿಯಾಗುತ್ತದೆ. ಆದರೆ ಹಾಗೆ  ಮಾಡೋಕೆ ........ ಬಿಡೋದಿಲ್ಲ ಅಲ್ವೇ..!




ಕಲರ್ ವಾಹಿನಿಯಲ್ಲಿ ಅಲಗ್  6 ಅಂತ ಹೇಳ್ತಾ ಚಿತ್ರ ವಿಚಿತ್ರ ರೀತಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಆಗ್ತಾ ಇದೆ. ಶುಕ್ರವಾರ ಶೂಟ್ ಆದದ್ದು ಶನಿವಾರ  ಪ್ರಸಾರ ಮಾಡಿ ಶನಿವಾರವೆ ಶೂಟ್ ಮಾಡಿದ್ದು  ಎಂದು ವೀಕ್ಷಕರ ಕಿವಿಯಲ್ಲಿ ಕನಿಗಳೇ ಇದೊದ್ರಲ್ಲಿ ಬಿಗ್ ಬಾಸ್ ಗ್ರೂಪ್ ಮುಂದೆ. ತಮಾಷೆ ಅಂದ್ರೆ ಕಿವಿಗೆ ಹೂ ಇದೋ ರಭಸದಲ್ಲಿ ಅವರು ಮಾಡುವ ತಪ್ಪುಗಳು ಅನೇಕ. ಅದರಲ್ಲೂ ಶನಿವಾರ ಪ್ರಸಾರ ಮಾಡುವಾಗ ಅದು ಶುಕ್ರವಾರದ್ದು ಅಂತ ಸರಳವಾಗಿ ಗೊತ್ತಾಗುತ್ತದೆ, ಮುಖ್ಯವಾಗಿ ಸ್ಪರ್ಧಿಗಳು ಧರಿಸಿದ ಡ್ರೆಸ್, ಅವರ ಜೊತೆ ಆಟ ಆಡಲು ಬಂದ  ಅತಿಥಿಗಳು.. ಇವೆಲ್ಲದರ ಜೊತೆಗೆ ಪ್ರತಿ ಸೀನ್ ನಲ್ಲೂ ಎಷ್ಟನೆಯ ದಿನ-ಗಂಟೆ ತೋರಿಸುವಾಗ ಎಷ್ಟು ಚೆನ್ನಾಗಿ ವೀಕ್ಷಕರನ್ನು ಪೆದ್ದರನ್ನಾಗಿಸೋಕೆ ಪ್ರಯತ್ನ ಪಡ್ತಾ ಇದ್ದಾರೆ ಈ ಟೀಮ್  ಎಂದು ತಿಳಿಯುತ್ತದೆ. ಶನಿವಾರ ಫೈನಲ್ ಇದೆ.. ಶುಕ್ರವಾರದ್ದು ಶನಿವಾರ ನೀಡ್ತಾರೇನೋ ...! ಬಿಡಿ ನಮಗೇನು ಸಿಂಪ್ಲಿ ಮಜಾ ತೆಗೆದುಕೊಳ್ಳುವುದಷ್ಟೇ  ಬೇಕಾಗಿರೋದು.. 


ಸಲ್ಮಾನ್  ಖಾನ್ ಮಾತು ಕೇಳೋಕೆ  ಮಂದಿ ಟೀವಿ ಮುಂದೆ ಕುಳಿತಿರುತ್ತಾರೆ. ಅದೇ ರೀತಿ  ಇಮಾಂ ಸಿದ್ದಿಕಿ  ಐಲಾಟ   ವೀಕ್ಷಿಸೊಕು ಸಹ ಜನ ಕಾಯ್ತಾ ಇರ್ತಾರೆ. ಅಷ್ಟೊಂದು ವಿಚಿತ್ರ ಮನಸ್ಥಿತಿಯ ವ್ಯಕ್ತಿತ್ವ. ಆತ  ಕೊನೆ ಕೊನೆಗೆ ಮಾತು ಕೇಳ್ತಾ ಇದ್ದುದು ಸಪ್ನಾದು ಮಾತ್ರ.. ಆಕೆ ಹೇಳ್ತಾ ಇದ್ದ ಬಡ ಮಜಾ ಆಯ ಉಲ್ಲು  ಬನಾಯ..ವನ್ನು ಆಕೆ ಎಲಿಮಿನೆಟ್  ಆದ ಬಳಿಕವೂ ಹೇಳ್ತಾ ಇರೋದು ಕಂಡ್ರೆ.... ನೋಡಿದ್ರೆ ... ಹೀಗೆ ಹೆಚ್ಚು ಆಕೆ ಬಗ್ಗೆ  ಯೋಚಿಸೋದು ಕಂಡ್ರೆ ಅನ್ನಿಸ್ತಾ ಇರೋದು.... ಕ್ಯಾ ಸಿದ್ದಿಕಿ ನಿಮ್ದುಕೆ ದಿಲ್  ನಲ್ಲಿ ಕುಚ್ ಕುಚ್ ಆಗ್ತಾ ಇದ್ದೀಯ.. ಆದ್ರೆ ಪಾಪ ಸಪ್ನಾ ಎಂದು ಹೇಳುವುದಕ್ಕಿಂತ.. ಈ ಎರಡು ಐಲು ಗಳು ಒಂದಾದರೆ ಯಪ್ಪಾ ಅವರ ಆಪ್ತರ ಕಥೆ 


ಇಮಾಂ ಸಿದ್ದಿಕಿ ಮಾತಾಡಿದಂತೆ ನಾನು ಸಲ್ಮಾನ್ Boy ಗೆ  ಒಂದು ಪತ್ರ ಬರಿತಿನಿ.. .. ಲೆಟರ್ ಬರೆಯೋದರಲ್ಲಿ ನಾನು ಫೇಮಸ್ ಗೊತ್ತ ಸಲ್ಮಾನ್ 
ಹಾಯ್  ಸಲ್ಮಾನ್ Boy
ವಾವ್ ವಾವ್ ನೀವು ಯಾಕಿಷ್ಟು ಸ್ಮಾರ್ಟ್.. ವಾವ್  ಖುದಾ ಕ ವಾಸ್ತೇ ಐ ಲೈಕ್ ಯು ಯಾರ್.. ನಾನು ಮಾತ್ರವಲ್ಲ ತುಂಬಾ ಜನರಿಗೆ ಲೈಕ್ ಆಗ್ತಾ ಇರ್ತೀರಿ ವಾವ್  ಐ ಕಾಂಟ್ ಬಿಲೀವ್  ಡಿಸ್...
ಸಲ್ಮಾನ್  Boy ಬೇಗ  ಇನ್ನೊಂದು ಬಿಗ್ ಬಾಸ್ ಸೀಸನ್ ಶುರು ಆಗಲಿ... ಈಗ ಟೈಮ್ ಔಟ್ .. ಟೈಮ್ ಔಟ್ .. ಟೈಮ್ ಔಟ್.. ನೆವರ್  ಯು ಕಾಂಟ್  ಬಿಲಿವ್ ನಾನು ಎಂದಿಗೂ ಹಾಗೆ ಹೇಳಲ್ಲ...ಟಪ್ ಟಪ್  ಟಪ್  ಟಪ್ 
ಉಫ್ ಸಾಕಾಗಿ ಹೋಯ್ತು.. ಸಿದ್ದಿಕಿ ರೀತಿ ಯಾರ ಕೈಲು ಮಾಡೋಕೆ ಆಗಲ್ಲ ಬಿಡಿ.. 

ಮುಖ್ಯವಾಗಿ ಸಲ್ಮಾನ್ ಯಾಕೆ ಇಷ್ಟ ಅಂತ ಹೇಳೋದಾದ್ರೆ  ಫಿಟ್ ನೆಸ್ ಕಾರಣಾನೂ  ಒಂದು. ಸಾಕಷ್ಟು ಅಭಿಮಾನಿಗಳು ಇಷ್ಟ ಪಡೋದು ಈ ಕಾರಣದಿಂದ..ಎಲ್ಲ ವಿಷಯದಲ್ಲೂ ಓಕೆ ಅನ್ನುವವರು ಫಿಟ್ನೆಸ್ ವಿಷಯದಲ್ಲಿ ಓಕೆ ಅನ್ನಲ್ಲ .ನಾನು ಸ್ವಲ್ಪ ಜಾಸ್ತಿನೆ ಫಿಟ್ ನೆಸ್ ಗೆ ಪ್ರಾಮುಖ್ಯತೆ  ನೀಡ್ತೀನಿ   ಆದರೆ ಕೆಲವು  ಕಾಲದಿಂದ ಯಾಕೋ ಸ್ವಲ್ಪ ಸುಮ್ಮನಿದ್ದು  ಬಿಟ್ಟಿದ್ದೆ.. ಆದ್ರೆ ಮತ್ತೆ ಜ್ಞಾನೋದಯ ಆಗಿದೆ..ಸಲ್ಮಾನ್ Boy 

ವೆಲ್  ಕನ್ನಡ ದಲ್ಲೂ ಬಿಗ್ ಬಾಸ್ ಆರಂಭ ಆಗ್ತಾ ಇದೆ .. ಸಧ್ಯಕ್ಕೆ ಇಷ್ಟು ನ್ಯೂಸ್ ಸಾಕು.. 

ಕಾರ್ಟೂನ್ -ಕಾರ್ಟೂನ್



 ಒಂದು ಮಾತು  ಅದೂ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದೆ.ದೆಹಲಿಯಲ್ಲಿ ಕ್ರೂರವಾಗಿ ದೇಹವನ್ನು ಛಿದ್ರ   ಮಾಡಿದ ಹೆಣ್ಣು ಮಗಳ ಸಾವಿನ ಬಳಿಕ ಸೃಷ್ಟಿ ಆದದ್ದು. ಪ್ರಾಯಶಃ ಅದನ್ನು ನೀವುಗಳು ಗಮನಿಸಿರ ಬಹುದು ಆದರೂ ಆ ಮಾತು-ಅಥವಾ ಜೋಕ್ ಹೇಗೆ ನೀವು ಅರ್ಥೈಸುತ್ತಿರೋ ಅದು ನಿಮಗೆ ಸೇರಿದ್ದು...
ಒಂದು ಹೆಣ್ಣು ನಾಯಿ ರಸ್ತೆಯಲ್ಲಿ ಹೋಗ್ತಾ ಇತ್ತಂತೆ.. ಇದ್ದಕ್ಕಿದ್ದ ಹಾಗೆ ಒಂದಷ್ಟು ಗಂಡು ನಾಯಿಗಳು ಆಕೆಯನ್ನು ಫಾಲೋ ಮಾಡಲು ಆರಂಭಿಸಿದವು. ಆ ಹೆಣ್ಣು ನಾಯಿ ಹೆದರಿ ಗಡಗಡ ! ಆಗ ಗಂಡು ನಾಯಿಗಳು ಹೆದರ ಬೇಡ ನೀನು ಆರಾಮವಾಗಿ-ಧೈರ್ಯವಾಗಿ ಮನೆಗೆ ಹೋಗು...ನಾವು ಮನುಷ್ಯರಲ್ಲ ! 

ಈ ವಿಷಯವನ್ನು ಸಾಧಕರು ಅನ್ನಿಸಿಕೊಂಡ ಮಹನೀಯರು ಅನೇಕ ರೀತಿ ಅದೂ ಬಾಯಿಗೆ ಬಂದಂತೆ ಹೇಳಿ ತಪ್ಪು ಆ ಹೆಣ್ಣು ಮಗಳದ್ದೆ ಅನ್ನುವ ಅರ್ಥ ಬರುವಂತೆ ಎಲುಬಿಲ್ಲದ ನಾಲಿಗೆಯಿಂದ ವ್ಯಕ್ತಪಡಿಸಿದರು. ಅಂತಹವರಿಗಾಗಿ ಪ್ರಸಿದ್ಧ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಬರೆದ ಕಾರ್ಟೂನ್ಗಳು ...




ಧ್ವನಿ

ಪಬ್ಲಿಕ್ ಟೀವಿಯಲ್ಲಿ ಒಂದು ವಿಶೇಷ ಕಾರ್ಯಕ್ರಮ ಪ್ರಸಾರ ಆಗುತ್ತದೆ.ನಾನು ಎರಡು ಬಾರಿ ಮಾತ್ರ ವೀಕ್ಷಿಸಿದ್ದೇನೆ. ಸೊ ಅದು ನಿರಂತವಾಗಿ ಪ್ರಸಾರ ಆಗುವ ಕಾರ್ಯಕ್ರಮ ಹೌದೋ ಅಲ್ಲವೋ ಗೊತ್ತಿಲ್ಲ. ಇರ್ಲಿ ಬಿಡಿ ಆದರೂ ಇಷ್ಟ ಆಯ್ತು .

ಗುರು ನಾನಕ್ ಜಯಂತಿ  ಸಂದರ್ಭದಲ್ಲಿ ಗುರು ಮಂದಿರ್ ಗೆ ಹೋಗಿ ಅಲ್ಲಿನ ರೀತಿ ರಿವಾಜು ಅಲ್ಲದೆ ಅನ್ನದಾನದ ಬಗ್ಗೆ ತಿಳಿಸುತ್ತ, ಅಲ್ಲಿ ಪಂಜಾಬಿ ರೆಸಿಪಿ ವೀಕ್ಷಕರಿಗೆ ತಿಳಿಸಿ ಕೊಡುವ ಪ್ರಯತ್ನ ಮಾಡಲಾಯ್ತು.
ಅಂತಹುದೇ ಸಂಗತಿ ಹೊಂದಿರುವ ಕಾರ್ಯಕ್ರಮ ನಿನ್ನೆ ಪ್ರಸಾರ ಆಯ್ತು, ಅದರಲ್ಲಿ ಕನಕಪುರ ರಸ್ತೆಯಲ್ಲಿ ಇರುವ ರವಿ ಶಂಕರ್ ಗುರುಜಿ ಅವರ ಧ್ಯಾನ ಮಂದಿರ.

ಯೋಗ ಹೇಳಿ ಕೊಡುವ, ಪ್ರಾಣಾಯಾಮ,ಧ್ಯಾನದ ವಿಷಯದಲ್ಲಿ ರವಿಶಂಕರ್ ಗುರುಜಿ ಅವರ ಸಾಧನೆ ಅಪರೂಪದ್ದು. ಯಾಕೆಂದ್ರೆ ನಾನು ಕಂಡ೦ಗೆ ಹಳಿ ಹಳ್ಳಿಯಲ್ಲೂ ರಾಜ್ಯದ ಮೂಲೆ ಮೂಲೆಯಲ್ಲೂ ಸಹ ಇವರ ಅನುಯಾಯಿಗಳು ಸತ್ಸಂಗ, ಪ್ರಾಣಾ ಯಾಮದ ರುಚಿ ತೋರಿಸುತ್ತಿದ್ದಾರೆ ನಮ್ಮ ಊರುಗಳಲ್ಲೂ, ನನ್ನ ರಕ್ತ ಸಂಬಂಧಿಕರು ಇದರ ಉಪಯೋಗ ಪಡೆದಿದ್ದಾರೆ . ಹಳ್ಳಿಗಳಲ್ಲಿ ಇದರ ಒಂದು ಅಲೆ ಹೇಗಿದೆ ಅಂದ್ರೆ ವಾವ್! ಗುರುಜಿ ಅವರ ಈ ಸಾಧನೆ ನಿಜಕ್ಕೂ ವಂದನಾರ್ಹ.

ನಿನ್ನೆ ನಿರೂಪಕಿ ದಿವ್ಯ ನಡೆಸಿದ ಸಂದರ್ಶನದಲ್ಲಿ ರವಿಶಂಕರ್ ಗುರುಜಿ ಅವರು ದಾಸೋಹದ ಮಹತ್ವದ ಜೊತೆಗೆ ನಮ್ಮ ಹಳ್ಳಿಗಳಲ್ಲಿ ಬಳಸುವ-ಮಾಡುವ ಸಿಹಿ ತಿನಿಸುಗಳು ಜಗತ್ಪ್ರಸಿದ್ಧವಾಗ ಬೇಕು ಅನ್ನುವ ಮಾತು ನಿಜ ಅನ್ನಿಸಿತು, ಜೊತೆಗೆ ಖುಷಿ ನೀಡಿತು. 
ಕಾರ್ಯಕ್ರಮ ಪೂರ್ತಿ ನೋಡಿದೆ :-).ಹಿನ್ನಲೆ ಧ್ವನಿ ಕೊಟ್ಟ ಮಾನಸಿ ಧ್ವನಿ ಅದ್ಭುತವಾಗಿದೆ.