ಎಂಥ ಅದ್ಭುತ ಪ್ರತಿಭೆ.

 

ಕಲರ್ಸ್  ಕನ್ನಡ ವಾಹಿನಿಯನ್ನು ನಾನು ತುಂಬಾ ನೋಡ್ತಾ ಇದ್ದೆ ಮೊದಲು. ಅದಕು ಮುನ್ನ ನಾನು ಹೆಚ್ಚು ನೋಡ್ತಾ ಇದ್ದದ್ದು ಸ್ಟಾರ್ ಸುವರ್ಣ. ಇತ್ತೀಚೆ ಸ್ಟಾರ್ ಸುವರ್ಣ ವಾಹಿನಿ ನೋಡುವುದೇ ಇಲ್ಲದಂತೆ ಆಗಿದೆ. ಅದೇರೀತಿ ಕಲರ್ಸ್ ಕನ್ನಡ..ಆದರೆ ಬಿಗ್ ಬಾಸ್ ಬರುವುದರಿಂದ ಈ ವಾಹಿನಿ  ನೋಡ್ತಾ ಇರ್ತೀನಿ,ಸ್ವಲ್ಪ ಸ್ವಲ್ಪ ರಾಮಾಚಾರಿ, ಭಾಗ್ಯದ ಲಕ್ಷ್ಮಿ ಬಾರಮ್ಮ..!
ಕಿಚ್ಚ ಸುದೀಪ  ಕಳೆದ ವಾರ ಮನೆಯಿಂದ  ಸ್ನೇಹಿತ್ ಮತ್ತು ಮೈಕೆಲ್  ರನ್ನ ಹೊರ ಕಳುಹಿಸದೆ ಉಳ್ಸಿಕೊಂಡಿದ್ದಕ್ಕೆ ಹಲವಾರು ಕಾರಣ ಗಳು ಹರಡಿದೆ. ಆದರೆ ನನಗೆ ಒಬ್ಬ ನಾಯಕನಾಗಿ ಸುದೀಪ ತೆಗೆದುಕೊಂಡ ನಿರ್ಧಾರ ಸರಿ ಅನ್ನಿಸಿತು. ಕಾರಣ ಇಷ್ಟೇ ಸ್ನೇಹಿತ್  ಎಷ್ಟೇ ಚೇಲಾ ಆದರೂ ಆತನಲ್ಲಿ ಇರುವ ಫೈರ್  ಗೆ ಆ ವಾರ ಸರಿಯಾದ ವೇದಿಕೆ ಒದಗಿಸಿತು. ನನಗೆ ಈ ಮೊದಲು ಪ್ರಸಾರ ಆದ ಬಿಗ್ ಬಾಸ್  ನಲ್ಲಿ ಇದ್ದ  ವೈಷ್ಣವಿ ಗೌಡ ನೆನಪಾಗುತ್ತಾರೆ. ಆಕೆಯನ್ನು ದಿವ್ಯ ಉರುಡುಗ   ವೈಷ್ಣವಿ ಶಕ್ತಿಹೀನ  ಸ್ಪರ್ಧಿ ಎಂದು  ತಮ್ಮ ಟೀ ಮ್ ಗೆ ಸೇರಿಸಿಕೊಂಡು ಇರಲಿಲ್ಲ. ಆದರೆ ಆಕೆ ಆ ವಾರ ನೀಡಿದ ಸ್ಪರ್ಧೆ ಮತ್ತು ಗೆದ್ದ ರೀತಿ ಅದ್ಭುತ ! ಯಾರೇ ಆಗಲಿ ಕೆಲವೊಂದು ಸಮಯ  ಕೈಲಾಗದವರಂತೆ ಇದ್ದಾರೆ ಅನ್ನಿಸಿದ್ರೂ ಸಮಯ ಅವರಲ್ಲಿರುವ ಬೆಂಕಿ ಹೊರ ಹಾಕುತ್ತದೆ. ಪ್ರಕೃತಿಯಲ್ಲಿ ಎಲ್ಲರು ಒಂದೇ.. ಎಲ್ಲರಿಗು ಒಂದಲ್ಲ ಒಂದು ರೀತಿಯ ಶಕ್ತಿ ನೀಡಿರುತ್ತದೆ.
 ಸ್ಪರ್ಧಿ ತುಕಾಲಿ ಸಂತೋಷ ಅಬ್ಬಾ ಎಂಥ ಅದ್ಭುತ ಪ್ರತಿಭೆ. ಅರುಣ್  ಸಾಗರ್ ,  ಮಾಸ್ಟರ್ ಆನಂದ್  ನಂತರ ಸಕತ್  ಖುಷಿ ಕೊಡುತ್ತಿರುವ ಅಪ್ಪಟ ಪ್ರತಿಭಾವಂತ ಹಾಸ್ಯಗಾರ ತುಕಾಲಿ ಸಂತೋಷ್. ಆತನ  ವರ್ತನೆ, ಸಣ್ಣಮಟ್ಟದ ಹೊಟ್ಟೆಕಿಚ್ಚು, ಜಗಳಗಂಟಿತನ ಏನೇ ಇರಲಿ ಅವರ ಪ್ರತಿಭೆ ಅನನ್ಯ.  ಹೆಚ್ಚಾಗಿ  ನಾನು  ತೆಲುಗಿನಲ್ಲಿ ಬ್ರಹ್ಮಿ , ಸುನಿಲ್    ತಮಿಳಿನಲ್ಲಿ  ಯೋಗಿ ಬಾಬು,ಅವರ  ನಟನೆ   ಇಷ್ಟಪಟ್ಟು ನೋಡ್ತೀನಿ.. ಹಾಸ್ಯ ಕಾರ್ಯಕ್ರಮಗಳು ನೋಡುವು ದಿಲ್ಲ )  ತುಕಾಲಿ, ಮಾಸ್ಟರ್ ಆನಂದ್   ಕುರಿತು ಪದಗಳು ಇಲ್ಲ ಬಿಡಿ..!

ಮಾನಸಿಕವಾಗಿ ಆಕ್ರಮಿಸಿತಪ್ಪು ಸಹ ಕಣ್ಣಿಗೆ ಕಾಣದೆ ಇರುವಂತೆ ಮಾಡುವ, ಮಾಡಿದ ತಪ್ಪು ಮರೆಮಾಚುವ  ಚಾಕಚಕ್ಯತೆ  ಇರುವ   ಪ್ರತಾಪ್ ಬಗ್ಗೆ .. ! ಕಳೆದವಾರ ಆತ ತನಗಾದ ಸಮಸ್ಯೆ ಅದರಲ್ಲೂ ಕೋವಿಡ್ ಕಾಲದಲ್ಲಿ ಉಂಟಾದ  ಸಮಸ್ಯೆ ಅತ್ತು ಅತ್ತು ಹೇಳುವಾಗ  ಯಾರು ತಾನೇ  ಕಣ್ಣೀರಾಗಲ್ಲ?? ಸುದೀಪ  ??   ಬಿಗ್ ಬಾಸ್ ಆ ವೇದಿಕೆ ಒದಗಿಸಿದ್ದು ತಾನು  ಮಾಡಿದ ತಪ್ಪು, ಕೇಳ ಬೇಕಾದ ಸಾರಿ ,ಹೇಳಬೇಕಾದ ಥ್ಯಾಂಕ್ಸ್ ಬಗ್ಗೆ. ... ಆದರೆ ಆತ ತನ್ನನ್ನು ನಂಬಿದ ಅಪಾರ ಜನಸಂಖ್ಯೆ ಭಾವನೆಗಳ ಮೇಲೆ ಆಡಿದ ಆಟದ ಬಗ್ಗೆ ಸೊಲ್ಲೆತ್ತದೆ  ಕೋವಿಡ್ ಸಮಯದಲ್ಲಿ ತನಗೆ ತೊಂದರೆ ನೀಡಿದರು  ಎಂದು ವೈದ್ಯರ ಮೇಲೆ ಅಪವಾದ ಹೊರೆಸಿ ..  ಗೂಬೆ ಕೂರಿಸಿ  ಚಿಕ್ಕವರಾದರು!ತಾನು ದೊಡ್ಡ ವಿಜ್ಞಾನಿ , ನನ್ನ ಲೆವೆಲ್ ಬೇರೆ ಎನ್ನುವ ಮನಸ್ಥಿತಿ ಆತನಿಗಿದೆ.  ನಮ್ಮ ಮನೆಯಲ್ಲೂ ವಿಜ್ಞಾನಿ ಗಳು ಇದ್ದಾರೆ. ನನ್ನ ಕಸಿನ್ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಿರುವ ಪೌಷ್ಟಿಕ ತಜ್ಞೆ. , ಒಬ್ಬಣ್ಣ  ಕೇಂದ್ರ ಸರ್ಕಾರದಲ್ಲಿ ಕ್ಲಾಸ್ ಒ ನ್ ಆಫೀ ಸರ್. ಆತನಿರುವ ಡಿಪಾರ್ಟ್ ಮೆಂಟ್  ನಲ್ಲಿ ಅರ್ಧಕರ್ಧ ವಿಜ್ಞಾನಿಗಳು ಅಪಾರ ಡೆಡಿಕೇಷನ್, ಹಗಲು ರಾತ್ರಿ ಮಾಡುವ ರಿಸರ್ಚ್, ವರ್ಷದಲ್ಲಿ ಅರ್ಧ ಭಾಗ   ಬಿಸಿಲು ಮಳೆ ಅನ್ನದೆ ಮಾಡುವ ಕೆಲಸಗಾರರು . ಬಿಗ್ ಬಾಸ್ ಕೊಟ್ಟ ಅವಕಾಶವನ್ನು ಬಳಸಿಕೊಳ್ಳ ಬೇಕಿತ್ತು ಸುದೀಪಾ ಅಷ್ಟೇ ನನ್ನ ಅಭಿಪ್ರಾಯ. 

ಅದ್ಭುತ

 


ಜೀ ಕನ್ನಡ ವಾಹಿನಿಯ ಸರಿಗಮಪ ಸಂಗೀತ ರಿಯಾಲಿಟಿ ಷೋ ಗೆ ಈಗ ಇಪ್ಪತ್ತನೆಯ  ಮೆಟ್ಟಿಲು ಹತ್ತಿದೆ. ಅತ್ಯಂತ ವಿಶೇಷ ರಿಯಾಲಿಟಿ ಷೋ ಅಂದ್ರೆ ತಪ್ಪಲ್ಲ. ಚಂದನವನದ ಅಸಾಮಾನ್ಯ ಪ್ರತಿಭಾವಂತರಾದ ಹಂಸಲೇಖ, ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ. ತಮ್ಮದೇ ಆದ ವಿಶಿಷ್ಟ  ಶೈಲಿಯಿಂದ ನಿರೂಪಣೆ ಮಾಡುವ ಅನುಶ್ರೀ .. ಕಳೆದ ವಾರ ನನ್ನ ನೀನು ಗೆಲ್ಲಲಾರೆ  ಎಂದು ಡಾ. ರಾಜ್ ಹಾಡನ್ನು  ಕನ್ನಡ ವಾಹಿನಿಯಲ್ಲಿ  ಹೇಳ್ತಾ  ವೀಕ್ಷಕರ ಮನಕ್ಕೆ ಖುಷಿ ನೀಡ್ತಾ  ಇದ್ರು . ಅಂದೇ ಹಿಂದಿ ವಾಹಿನಿಯಲ್ಲಿ ಲತಾ ಜಿ ಹಾಡನ್ನು ಹೆಣ್ಣುಮಗಳು ಅದ್ಭುತವಾಗಿ ಹಾಡಿ  ಮನ ಗೆದ್ದಳು . ಒಟ್ಟಾರೆ ಹೆಚ್ಚು ಖುಷಿ ಕೊಟ್ಟವಾರ . ನನಗೆ ಸ್ಪರ್ಧಿಗಳ  ಹೆಸರು ಗೊತ್ತಿಲ್ಲ ಇಲ್ಲದೆ ಇದ್ರೆ ಖಂಡಿತ ಬರೀತಾ ಇದ್ದೆ.ನನಗೆ ಒಂದು  ಆಸೆ ಇದೆ. ಈ ಮಹಾನ್ ವೇದಿಕೆಯಲ್ಲಿ ವಿಜಯ್ ಪ್ರಕಾಶ್ ಮತ್ತು ರಾಜೇಶ್ ಕೃಷ್ಣನ್ ನೀನು ನೀನೆ  .. ಇಲ್ಲಿ  ನಾನು ನಾನೇ ಹಾಡು(ಗಡಿಬಿಡಿ ಗಂಡ ) ಹಾಡಬೇಕು ಅಂತ.. !

ಸೋನಿ -ಝಲಕ್-ಚಂಚಲ್

 

ಸೋನಿ 
 ವಾಹಿನಿಯಲ್ಲಿ  ಪ್ರಸಾರ ಆಗುತ್ತಿರುವ ಝಲಕ್ ದಿಕ್ಲಾಜ ಡ್ಯಾನ್ಸ್ ಕಾರ್ಯಕ್ರಮ ಬಗ್ಗೆ ಹೇಳುವಷ್ಟಿಲ್ಲ. ಸ್ಪರ್ಧಿಗಳ ಪ್ರಯತ್ನ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಸಹಿತ  ಪ್ರಯತ್ನ ಇದ್ದೆ ಇರುತ್ತದೆ. ಆದರೆ  ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಜಡ್ಜ್ ಗಳು  ಮಲೈಕಾ ಅರೋರಾ, ಫರಾ ಖಾನ್ ಮತ್ತು ಅರ್ಷದ್ ವಾರ್ಸಿ . ಮಲೈಕಾ ಬಗ್ಗೆ ನನಗೆ ಇಷ್ಟ ಆಗುವುದು ಆಕೆಯ ಅರೋಗ್ಯ ರಕ್ಷಣಾ ವಿಧಾನ ಮತ್ತು  ಕ್ಯಾಮರಾಗಳು  ಎಷ್ಟೇ  ಆಕೆಯ ಸುತ್ತಮುತ್ತ ತಿರುಗಾಡಿದರು   ತುಂಬಾ ಡಿಗ್ನಿಫೈ  ಮುಗುಳ್ನಗು ( ರೀಲ್ ಗಳಲ್ಲಿ ನೋಡ್ತಾ ಇದ್ದೀನಿ/ಇರ್ತೀನಿ )  ಹಂಚುತ್ತಾ ಪೋಸ್ ಕೊಡ್ತಾರೆ. ವಿವಾದಗಳಿಗೆ ಆಸ್ಪದ ಇಲ್ಲದಂತೆ , ಅರ್ಷದ್  ಮತ್ತು ಫರಾ ಸಹ ಇಷ್ಟ ಪಟ್ಟು ನೋಡುವ  ಪ್ರತಿಭಾವಂತರು. ಸರ್ಕುಟ್ ,, ನಿಮ್ಮ ಜಡ್ಜ್ಮೆಂಟ್ ಚೆನ್ನಾಗಿರಲಿ.. 



ಇಂಡಿಯನ್ ಐಡಲ್  ಸಂಗೀತ ಕಾರ್ಯಕ್ರಮ ಪ್ರಸಾರ ಆಗ್ತಾ ಇದೆ. ಶ್ರೇಯ ಘೋಷಾಲ್  ಮತ್ತೊಬ್ಬ ಜಡ್ಜ್ ಹೆಸರು ಮರೆತಿದೆ ಮತ್ತೊಮ್ಮೆ ಬರೀತೀನಿ..  ಕಳೆದವಾರ  ಕನ್ನಡ ವಾಹಿನಿ ಯಲ್ಲಿ ಒಂದು ವಿಶೇಷ ಇತ್ತು. ಅದಕ್ಕೆ ಹೊಂದುವಂತೆ ಸೋನಿ ವಾಹಿನಿಯ  ಸಂಗೀತ ಕಾರ್ಯಕ್ರಮದಲ್ಲೂ ಇತ್ತು. ಕಲ್ಯಾಣ್- ಆನಂದ್ ಸಂಗೀತ ನಿರ್ದೇಶನದ   ಚಂದನ್ ಸ ಬದನ್ ಚಂಚಲ್ ಚಿತ್ವನ್ ಎನ್ನುವ ಹಾಡನ್ನು ದೃಷ್ಟಿ ವಿಕಲಚೇತನ ಹುಡುಗಿ  ತುಂಬಾ ಸುಮಧುರವಾಗಿ ಹಾಡಿದಳು.  ನನಗೆ ಯಾರ ನ್ಯೂನ್ಯತೆ ಬಗ್ಗೆ ಬರೆಯೋಕೆ ಇಷ್ಟ ಇಲ್ಲ. ಆದರೆ ವಿಶೇಷ ಇರೋದು ಈ ಅಂಶದಲ್ಲಿಯೇ. ಆಕೆ ಅದೆಷ್ಟು ಮಧುರವಾಗಿ ಹಾಡಿದಳು ವಾಹ್.. ಕನ್ನಡ ವಾಹಿನಿಯ ವಿಶೇಷ ಮುಂದಿನ ಪೋಸ್ಟ್ ನಲ್ಲಿ ಬರೀತಿನಿ .... ಖಂಡಿತಾ