Posts

Showing posts from November 15, 2015

ಅದ್ಯಾಕೆ ?

Image
ಕಳೆದವಾರ ಬಹುತೇಕ ಹುಚ್ಚು ಮಳೆ ಹುಚ್ಚ ವಿಷ್ಯ ಹೆಚ್ಚು ಕಾಡಿದ್ದಂತೂ ಸತ್ಯ. ಹುಚ್ಚನ ಕಥೆ ಕಂಡಾಗ ನನಗೆ ಕಾಳಿ ಸ್ವಾಮಿ ನೆನಪಾಯಿತು. ಆತ ಸಹ ಮೀಡಿಯಾ ಪ್ರೇಮಿ. ಆತ ಪ್ರತಿಯೊಂದು  ಚರ್ಚೆಯಲ್ಲೂ ಇರಲೇ ಬೇಕು. ಆ ಕೂಗು ಸ್ವಾಮಿ ಕೂಗಾಟ ವೀಕ್ಷರು ಸಹಿಸಲೇ ಬೇಕಾಗಿತ್ತು. ಆತ ಸಹ ಬಾಯಿಗೆ ಬಂದದ್ದೆ  ಮಾತನಾಡಿದರು . ತನಗಿಷ್ಟವಾದ ಅಭಿಪ್ರಾಯಗಳನ್ನು ಹೊರ ಹಾಕಿದರು. ಯಾವ ಮಾಧ್ಯಮ  ಆತನನ್ನು ಬೆಳೆಸಿತೋ ಅದೇ ಮಾಧ್ಯಮದ ಮೂಲಕ ಆತ ...!
ಹುಚ್ಚ ವೆಂಕಟ್ ವಿಷಯ ಅದಕ್ಕಿಂತ ಭಿನ್ನ ಆಗಲಿಲ್ಲ ಬಿಡಿ. ಆತನು ತಿಂದ- ಕುಡಿದ ಕಥೆಯಿಂದ ಹಲ್ಲುಜ್ಜುವ ತನಕ ಎಲ್ಲರ ಗಮನ ಸೆಳೆದು ಕೊನೆಗೆ ಮದುವೆ ಆಗಿರುವ ವಿಷಯದ ಮೂಲಕ ಕೆಳಗೆ ಬಿದ್ದದು ...!
 ಆತನ ಬಗ್ಗೆ ಹೇಳಿದಷ್ಟು ಕಡಿಮೆ ಆಗದಂತಹ ಅಭಿಮಾನದ ಮಾತುಗಳು ಹುಟ್ಟಿದ್ದು ಸತ್ಯ. ಎಲ್ಲಾ ಸೋಶಿಯಲ್ ನೆಟ್ ವರ್ಕ್ ಗಳಲ್ಲೂ  ಹುಚ್ಚನದ್ದೆ ಕಥೆ,  ಅಷ್ಟೊಂದು ಪಾಪ್ಯುಲರ್ ಆಗಿತ್ತು ಆತನ ವರ್ತನೆ.
 ಈ ಟೀವಿಯಲ್ಲಿ ಆತನ ಮದುವೆ ಸಂಗತಿ ಪ್ರಸಾರ ಆಗಿದ್ದು , ಅದಕ್ಕೂ ಮುನ್ನ ಆತನ ಮಾತಿಗೆ ಜನರ ಕೆಂಗಣ್ಣಿನ ಪರಿಣಾಮ ಇವೆಲ್ಲಾ  ಆದ ಬಳಿಕ ಪೊಲೀಸ್  ಅದೂ ಇದು..ಕಥೆ ಇನ್ನು ಮುಂದುವರೆಯುತ್ತಲೇ ಇದೆ.

ಈ ಟೀವಿ ಕನ್ನಡ ವಾಹಿನಿಯಲ್ಲಿ ಒಂದು ಸಂಗತಿ ನನ್ನನ್ನು ಆಕರ್ಷಿಸಿತು. ಇತ್ತೀಚಿನ ಕೆಲವು ದಿನಗಳಿಂದ ನಮಗೆ ಆ ಚಾನೆಲ್ ಪ್ರಸಾರ ಆಗ್ತಾ ಇದೆ. ಸಂಜೆ ಐದು ಗಂಟೆಯ ಸುದ್ದಿ ಇರಬೇಕು , ಇಬ್ಬರು ಸುದ್ದಿಯನ್ನು ಓದುತ್ತಿದ್ದರು. ಇಷ್ಟ ಆಯ್ತು ಇಬ್ಬ…

ಉಚ್ಚನ್ನ .. ಉಚ್ಚನ್ನ

Image
Words don't have the power to hurt You unless, the person who said it, means a lot to You.
Anger comes alone and takes away all our good qualities with unwanted & unruly words.
Patience too comes alone and brings all good qualities of us, depicting our civilisation.
@ K S Gurulingaswamy ಮೇಲೆ ಹಾಕಿರುವ ಕೋಟ್  ನನ್ನ ಎಫ್ಬಿ ಮಿತ್ರರು, ಸತ್ಸಂಗ್ ಗುರು..ಅವರು ಪ್ರತಿದಿನ ಒಂದೊಂದು ಈ ರೀತಿಯ ಆಧ್ಯಾತ್ಮಿಕ ಸಂದೇಶಗಳನ್ನು ನೀಡ್ತಾ ಇರ್ತಾರೆ. ಬದುಕಿಗೆ ಸಂಪೂರ್ಣವಾಗಿ ಅಳವಡಿಸಿಕೊಳ್ಳ ಬಲ್ಲ, ಹಾಗೂ ಅದನ್ನು ಜೀವಾಳವನ್ನಾಗಿ ಮಾಡಿಕೊಂಡು ಗೆಲ್ಲಲು ಸಾಧನವಾಗುವ  ಅತ್ಯುತ್ತಮ ಮಾತುಗಳು. ನನಗೆ ಸದ್ಗುರು ಜಗ್ಗಿ ವಾಸುದೇವ್ ಅವರ ಬರಹಗಳ ಬಗ್ಗೆ ಅತಿ ಹೆಚ್ಚಿನ ಇಷ್ಟ. ಅದ್ಭುತರೀತಿಯಲ್ಲಿ ಅವರು ಅನಲೈಸ್ ಮಾಡಿರುತ್ತಾರೆ. ಸಕತ್ ಸರಳ ಹಾಗೂ ಸಕತ್ ವಿಶೇಷವಾಗಿರುತ್ತದೆ . 
ಈಗ ಈ  ಸಂಗತಿ ಯಾಕೆ ಬಂತು ಅಂದ್ರೆ ಶನಿವಾರದಿಂದ ಹುಚ್ಚನ ಕಥೆಯನ್ನು ನಮ್ಮ ಕನ್ನಡ ಮಾಧ್ಯಮಿಗಳು ಪೈಪೋಟಿ ಮೇಲೆ ಹರಡುತ್ತಿದ್ದಾರೆ. ಹುಚ್ಚ ವೆಂಕಟ್ ಎನ್ನುವ ಮೆಂಟಲ್ ಮನುಷ್ಯನನ್ನು ಕೂರಿಸಿ ಆತನ ಬಳಿ ಮಾತನಾಡಿಸಿ ಆತನ ಹುಚ್ಚು ಕಲ್ಪನೆಗಳನ್ನು ವೀಕ್ಷಕರ ಮೆದುಳಿನ ತಳಕ್ಕೆ ದೂಕುವ ಪ್ರಯತ್ನದಲ್ಲಿ ನಿರತರಾಗಿದ್ದ ಮಾಧ್ಯಮಗಳ ಸಹನೆಗೆ  ನಮಸ್ತೆ . ಆರಂಭದಲ್ಲಿ  ಹುಚ್ಚ, ಆತನ ಸಹೋದರ , ಆತನ ಅಭಿಮಾನಿಗಳು  ಎಲ್ಲರ ಜೊತೆ…

ರಾಮಾಯಣ

Image
ಪ್ರಕಾಶ್ ಹೆಗ್ಡೆ ನನ್ನ ಎಫ್ ಬಿ ಮಿತ್ರರು, ಯಾವಾಗಲಾದರೊಮ್ಮೆ ನಾನು ಹೋದಂತಹ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಭೇಟಿಯಾಗುವ ಅಕ್ಷರಪ್ರೇಮಿ ಪ್ರಕಾಶ್ ಹೆಗ್ಡೆ ಅವರ ಟ್ಯಾಲೆಂಟ್ ಸಿಕ್ಕಾಪಟ್ಟೆ ಇದೆ. ಅವರ ಆಸಕ್ತಿಗಳಲ್ಲಿ ಫೋಟೋಗ್ರಫಿ ಸಹ ಒಂದಾಗಿದೆ. ಈ ತಿಂಗಳ ಪೂರ್ತಿ  ನಾನು ದೀಪವನ್ನು ನನ್ನ ಬ್ಲಾಗ್ ನಲ್ಲಿ ಬೆಳಗ ಬೇಕು ಎನ್ನುವ ಆಶಯ ಹೊಂದಿರುವ ಬಗ್ಗೆ ನಿಮಗೆ ಮೊದಲೇ ಹೇಳಿದ್ದೆ. ನನ್ನ ಆಶಯ ಪೂರ್ಣವಾಗುತ್ತಿದೆ  . . ಪ್ರಕಾಶ್ ಎಫ್ ಬಿಯ ಗೋಡೆಯ ಮೇಲೆ  ಅವರ ಮನೆಯ  ದೀಪದ ಫೋಟೋಗಳನ್ನು ಹಚ್ಚಿಟ್ಟಿದ್ದರು.  ಪ್ರಕಾಶ್ ಹೆಗ್ಡೆ ಅವರ ಬಳಿ ಕೇಳಿದ ನಾನು ನನ್ನ ಬ್ಲಾಗ್ ನಲ್ಲಿ ನಿಮ್ಮ ಹಣತೆಯನ್ನು ಬೆಳಗಲೆ ಎಂದು .. ಒಂದು ಕಂಡೀಶನ್ ಮೇಲೆ ಸಮ್ಮತಿಸಿದರು. ಅವರ ಕಂಡಿಶನ್  ಗೆ  ಒಪ್ಪಿಗೆ ಇತ್ತು ನಾನು ದೀಪ ಹಚ್ಚಿದ್ದೇನೆ.. ಧನ್ಯವಾದಗಳು ಸರ್ಜಿ 

ನಿಬ್ಬೆರಗು

Image
ವಿಜಯಲಕ್ಷ್ಮಿ ಶಿಬರೂರು ಅವರ ಕವರ್ ಸ್ಟೋರಿ ಅತ್ಯಂತ ಇಷ್ಟವಾಗುವ ಕಾರ್ಯಕ್ರಮಗಳಲ್ಲಿ ಒಂದು. ಹೆಣ್ಣು ಎಂದರೆ ಹೀಗಿರಬೇಕು ಎಂದು ಹೇಳುವಂತಹ ವಿಶೇಷ ಪತ್ರಕರ್ತೆ ಆ ಹೆಣ್ಣುಮಗಳು. ಥೇಟ್ ಸಿನಿಮಾಗಳಲ್ಲಿ ಇರುವ  ಸಾಹಸಮಯಿ ಹೀರೋಯಿನ್ ರಂತೆ. ಆಕೆಯ ಸಾಧನೆ ಬಗ್ಗೆ ಹೆಚ್ಚು ಖುಷಿ ಆಗುತ್ತದೆ. ಆಕೆಯ ತಂಡ, ಸುವರ್ಣ ನ್ಯೂಸ್  ಎಲ್ಲರಿಗೂ ಇಂತಹ ಒಬ್ಬಾಕಿ ಅವರ ಗುಂಪಲ್ಲಿ ಇರುವುದು ಹೆಮ್ಮೆ ಆಗುತ್ತೆ. ನಮಗೂ ಸಹ.. ಡಿಯರ್ ವಿಜಯಲಕ್ಷ್ಮಿ ಸಾಹಸದ ಭರದಲ್ಲಿ ಹಾದಿಯಲ್ಲಿ ಹೆಜ್ಜೆ ಜಾಗ್ರತವಾಗಿಡಿ  ಅದಷ್ಟೇ ನಮ್ಮ ಕಳಕಳಿ .

@ ಕಲರ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕೀಸ್ ನಲ್ಲಿ  ಕಲಾವಿದ ಮಂಡ್ಯ ರಮೇಶ್ ಅವರ ಬಗ್ಗೆ ವಿಶೇಷವಾಗಿ ಹೇಳ ಬೇಕಿಲ್ಲ. ಏಕೆಂದರೆ ಅವರ ನಟನೆಯನ್ನು ನೋಡಿದರೆ ಸಾಕು.. ಅದೆಷ್ಟು ಜೀವಂತಿಕೆ. ಸಾಮಾನ್ಯವಾಗಿ ಮಂಡ್ಯ ಕನ್ನಡದ ಜೊತೆಗೆ ತಪ್ಪು ಆಂಗ್ಲ ಪದ ಅಂದ್ರೆ  ಅಂಪೈರ್ ಗೆ ಸಪ್ಲೈರ್ ಅನ್ನೋದು, ಹೀಗೆ ಹತ್ತು ಹಲವಾರು ರೀತಿಯಲ್ಲಿ ಅವರು ಜನರನ್ನು ನಗಿಸುತ್ತಾರೆ. ವಿಶೇಷ ಏನೆಂದರೆ ಆ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದೆ ಅಪರ್ಣ ಅದ್ಯಾಕೋ ತೀರಾ ಕಂಠಪಾಠ  ಮಾಡಿದಂತೆ ಮಾತಾಡ್ತಾರೆ. ಇಂತಹ ಕಾರ್ಯಕ್ರಮದಲ್ಲಿ ಎಷ್ಟು ನ್ಯಾಚುರಲ್ ಆಗಿದ್ರೆ ಅಷ್ಟು ಒಳ್ಳೇದಲ್ವ ? ಇದು ನನ್ನ ಅಭಿಪ್ರಾಯ ಅಷ್ಟೇ !
@ ಚಂದನವಾಹಿನಿ  ಅಚ್ಚ ಮಧ್ಯಮ ವರ್ಗದ  ಹೆಣ್ಣು ಮಗಳಂತೆ  .  ಸಾಂಪ್ರದಾಯಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವ ಒಂದು ವಾಹಿನಿ. ಅದರಲ್ಲಿ