ಸಕತ್ ಸರಳ

Image result for blue flower images
ಒಂದಷ್ಟು ದಿನ ಸೋಶಿಯಲ್ ನೆಟ್ ವರ್ಕ್ ನಲ್ಲಿ ಬರೀ ಗುಂಪುಗಾರಿಕೆ ಅಂದ್ರೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎನ್ನುವಂತೆ ಗುಂಪು ಮಾಡಿಕೊಂಡು ತಮ್ಮ ಪ್ರತಿಭೆಯ ಪ್ರಭೆ ತೋರುತ್ತಿದ್ದರು . ಈಗ ಹಾಗಿಲ್ಲ ಬಿಡಿ . ನಾನು ಸಾಮಾನ್ಯವಾಗಿ ಆಗಾಗಾ  ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳನ್ನು ಓದುತ್ತಿರುತ್ತೇನೆ . ಏನೇನು ಹೇಳ್ತಾರೆ ರಿಸರ್ಚ್ ಮಾಡಿದವರು, ಇನ್ನೇನು ಬದಲಾವಣೆ ಕಂಡಿದೆ ಆರೋಗ್ಯದ ವಿಷಯದಲ್ಲಿ . ಆದರೆ ಕೆಲವು ಸಂಗತಿಗಳು ಭಾರೀ ಮಜಾ ನೀಡಿದೆ ನನಗೆ. ಉದಾಹರಣೆಗೆ ಸಾಮಾನ್ಯವಾಗಿ ಸೂರ್ಯನ ಕಿರಣಗಳು ಇಂತಿಷ್ಟು ಸಮಯದಲ್ಲಿ ಮಾತ್ರ ಮೈಮೇಲೆ ಬೀಳಬೇಕು, ಆ ಸಮಯ ಮೀರಿದರೆ ಅಲ್ಟ್ರ ವೈಲೆಟ್ ಕಿರಣಗಳು ಬಂದು ತಾಕುತ್ತವೆ. ಆಗ ಚರ್ಮಕ್ಕೆ ತೊನ್ದರೆ. ಇದು ಎಲ್ಲರಿಗು ಗೊತ್ತೇ ಇದೆ. 
 ಸಾಮಾನ್ಯವಾಗಿ ಮುಂಜಾನೆ 11ರಿಂದ ಸಂಜೆ 4 ತನಕ ಇರುವ ಬಿಸಿಲು ಒಳ್ಳೆಯದಲ್ಲ ಎಂದೇ ಓ ದಿದ್ದು. ಒಮ್ಮೆ ಒಂದು ಲೇಖನದಲ್ಲಿ ಮುಂಜಾನೆ ಒಂಬತ್ತರ ನಂತರ ದಯಮಾಡಿ ಬಿಸಿಲಿಗೆ ಹೋಗದಿರಿ ಎಂದು ಬರೆದಿದ್ದರು. ಅದೂ ಆಯ್ತು , ಇತ್ತೀಚಿಗೆ ಒಂದು ಲೇಖನದಲ್ಲಿ ಮುಂಜಾನೆ 11ರಿಂದ ಸಂಜೆ 3 ಗಂಟೆ ತನಕ ಜನ ಹೊರಗೆ ಬರೋದೆ ಇಲ್ಲ. ಆದಕಾರಣ ಅವರ ದೇಹದಲ್ಲಿ ವಿಟಮಿನ್ ಡಿ ಲೋಪ ಆಗಿದೆ. ಹೀಗೆ ಬರೆದರೆ ತಲೆ ಕೆಡಲ್ವ ?? :-)
 ಹಾಗೆ ಆಗುತ್ತೆ ನನಗೆ ಅನೇಕ ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸುವಾಗ. ಅದರಲ್ಲೂ ಚರ್ಚೆಗಳು ಅಂದ್ರೆ ಭಾರಿ ಗಾಬರಿ ನನಗೆ. ಬಿಡಿ ಅದರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. 
ಆದರೆ ಟೀವಿ ಪರದೆಯ ಮೇಲೆ  ನಳನಳಿಸುತ್ತಾ  ತುಂಬಾ ಗಂಭೀರವಾಗಿ ಮಾತನಾಡುವ  ಹುಡುಗೀರು  ರೀಲ್ ಹಿಂದೆ ಸಕತ್ ಸರಳ . 
ಪಬ್ಲಿಕ್ ಟೀವಿಯ ರಾಧ ಹಿರೇ ಗೌಡರ್  ರಂಗಣ್ಣನ ಕ್ಯಾಂಪ್ ಮೆಂಬರ್ . ಆಕೆ ಬಗ್ಗೆ ಆಕೆಯ ಸಹೋದ್ಯೋಗಿ ಒಬ್ಬರಿಂದ ತಿಳಿದ ಮಾಹಿತಿ  ಎಂದರೆ ಆಕೆ ಸಕತ್ ಸರಳ . ಅದರಲ್ಲೂ ತನ್ನ ಸಹೋದ್ಯೋಗಿಗಳ ಜೊತೆ ಆರಾಮವಾಗಿ, ಖುಷಿಯಾಗಿರುತ್ತಾರೆ. ಅದೇ ಚಾನೆಲ್ ನ  ಒಬ್ಬ ಪುರುಷ ಮಹಾಶಯನ  ಅವತಾರಗಳು !!
ಸುವರ್ಣ ವಾಹಿನಿಯ ವಿಷಯದಲ್ಲಿ ಇಂತಹ  ವಿಷಯದಲ್ಲಿ ಹೇಳುವುದಾದರೆ  ನಿರೂಪಣೆ ವಿಷಯದಲ್ಲಿ ಸಹನಾ ಭಟ್  ಸಕತ್ ಭಿನ್ನ . ಇಷ್ಟ ಆಗುವ ಶೈಲಿ, ಅತಿ ಅಲ್ಲದ ಹಾವಭಾವ, ಎಲ್ಲ ಕಾರ್ಯಕ್ರಮಗಳಿಗೂ ಹೊಂದಿಕೆಯಾಗುವ ಆಂಕರ್.