ಕಜರಾರಾರೆ..

Image result for pink flowers
ಕೆಲವು ಧಾರವಾಹಿಗಳು ವರ್ಷಾನುಗಟ್ಟಲೆ ಪ್ರಸಾರ ಆದರೂ ವೀಕ್ಷಕರು ತಪ್ಪದೇ ವೀಕ್ಷಿಸುತ್ತಾರೆ. ಅಂತಹ ಧಾರವಾಹಿಗಳನ್ನು ನಿರ್ಮಿಸುವವರು, ಕಥೆ-ಸಂಭಾಷಣೆ ಬರೆದವರು, ನಿರ್ದೇಶನ ಮಾಡುವವರು ವೀಕ್ಷಕರ ಆಸಕ್ತಿಯನ್ನು ಅರಿತವರಾಗಿರುತ್ತಾರೆ. ಅಂತಹ ಧಾರವಾಹಿಗಳಲ್ಲಿ ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಮೇರೆ ಆಂಗನ್ ಮೇ ಸಹ ಒಂದು. ಶಾಂತಿನಿವಾಸದ ಹಿರಿಯ ಹೆಣ್ಣು ಮಗಳು (ಅಜ್ಜಿ) ಶಾಂತಿ, ಆಕೆಯ ಆಡಳಿತ, ಆಕೆಯ ಪೆದ್ದು-ಮುಗ್ಧ ಸೊಸೆ ಖುಷಿ, ಮಗ ರಾಘವ್, ಮೊಮ್ಮಕ್ಕಳಾದ ಶಿವಮ್ ,ನಿಮ್ಮಿ, ಪ್ರೀತಿ, ಪರಿ, ಅಮಿತ್ ..ರಾಣಿ,ನಂದು, ಆರತಿ..
ಪ್ರತಿಯೊಂದು ಪಾತ್ರಗಳು ವೀಕ್ಷಕರಿಗೆ ಸಕತ್ ಮಜ ಕೊಡುತ್ತದೆ. 
ಹಿರಿಯ ಹೆಣ್ಣುಮಗಳು (ಅಜ್ಜಿ) ಪಾತ್ರಧಾರಿಯಾಗಿ ಕೃತಿಕ ದೇಸಾಯಿ ನಟಿಸಿದ್ದಾರೆ. ಕೆಲವು ಬಾರಿ ಆಕೆಯ ನಟನೆ ಅದೆಷ್ಟು ಖುಷಿ ನೀಡುತ್ತದೆ ಅಂದ್ರೆ ಅದನ್ನು ಅನುಭವಿಸಿದಾಗಲೇ ಗೊತ್ತಾಗುವುದು..
ಅತ್ಯಂತ ಲವಲವಿಕೆಯ ಅಜ್ಜಿಯಾಗಿರುವ ಕೃತಿಕ ಎಂಬ ಈ  ದೈತ್ಯ ಪ್ರತಿಭೆ ನಿನ್ನೆ ಎಪಿಸೋಡ್ ನಲ್ಲಿ  ಬಂಟಿ ಔರ್ ಬಬ್ಲಿ ಚಿತ್ರದ ಕಜರಾರಾರೆ...ಹಾಡಿಗೆ ಮಾಡಿದ ನೃತ್ಯ ಅದ್ಭುತ. ಸದಾ ಉಯ್ಯಾಲೆ ಮೇಲೆ ಕುಳಿತಿರುವ ಅಜ್ಜಿ ಅಷ್ಟೊಂದು ಫ್ಲೆಕ್ಸಿಬಲ್ ಆಗಿ ಡ್ಯಾನ್ಸ್ ಮಾಡೋಕೆ ಸಾಧ್ಯನಾ ಅನ್ನುವ ಗೊಂದಲ ಉಂಟಾಗುವುದು ಸಹಜ. ಈಗಾಗಲೇ ಕನ್ನಡದ ಹಿರಿಯ  ಹಾಸ್ಯ ನಟಿ ಜಯಮ್ಮ ಜೋಕೆ ನಾನು ಬಳ್ಳಿಯ ಮಿಂಚು ಎಂದು  ನರ್ತಿಸಿ ವಯಸ್ಸಲ್ಲ ಮುಖ್ಯ ಮನಸ್ಸು ಎನ್ನುವುದು ಸಾಬೀತು ಮಾಡಿದ್ದಾರೆ.ಅದನ್ನು ಕಂಡಿರುವ ಕನ್ನಡಿಗರಿಗೆ ಈ ಬಿಹಾರಿ/ಯುಪಿ  ಅಜ್ಜಿ ಶಾಂತಿ ಸಹ  ಮೆರ ಚೈನ್ ವೈನ್ ಸಬ್ ಉಜಡಾ ಜಾಲಿಮ್ ನಜರ್ ಹಟಾ ಲೆ  ಎಂದು ಡ್ಯಾನ್ಸ್ ಮಾಡಬಲ್ಲರು  ಎಂಬುದನ್ನು ಒಪ್ಪಿಕೊಂಡಿದ್ದಾರೆ.
ತಮ್ಮ ವಯಸ್ಸಿಗಿಂತ ಅದೆಷ್ಟೋ ವರ್ಷಗಳಷ್ಟು ಹಿರಿಯರಾಗಿ ನಟಿಸಿರುವ  ರಂಗಭೂಮಿ ಕಲಾವಿದೆ ಕೃತಿಕ ದೇಸಾಯಿ ಖಾನ್ ನನ್ನ ಇಷ್ಟದ ನಟಿಗಳಲ್ಲಿ ಒಬ್ಬರು. 

ಅಮಲಾ-ಅಬೀರ್ ದೇವ್

Image result for red flower images

ಪರಿಸ್ಥಿತಿಗಳು ಯಾವ ರೀತಿ ಬದಲಾಗುತ್ತದೆ ಎಂದು ಹೇಳಲಾಗದು. ಎಲ್ಲವೂ ಸರಿಯಾಗುತ್ತದೆ.. ಬದುಕು ಸುಂದರವಾಗುತ್ತದೆ ಎಂದು ಬಯಸುವುದು ತಪ್ಪಲ್ಲ. ಆದರೇ ಬಯಸಿದಂತೆ ನಡೆಯಬೇಕು ಎಂದೇನೂ ಇಲ್ಲ.ಈ ಅಂಶ ಅಮಲಾ ಬದುಕಲ್ಲೂ ನಡೆಯುತ್ತದೆ.
ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿ ಕ್ಯಾ ಕುಸೂರ್ ಹೈ ಅಮಲಾ ಕ? 
 ಮದುವೆ, ಮನೆ ಗಂಡ , ಮಕ್ಕಳು ಎಂಬಂತಹ ಕನಸುಗಳನ್ನು ಹೊಂದಿದ್ದ ಅಮಲಾ ಎನ್ನುವ ಸುಂದರ ಹುಡುಗಿ ಶ್ರೀಮಂತ ಹುಡುಗರ ಕೈಗೆ ಸಿಕ್ಕಿ  ಹಾಕಿಕೊಂಡು ಮಾನಭಂಗಕ್ಕೆ ಒಳಗಾಗುತ್ತಾಳೆ. ಅವಳ ಬದುಕು ಆನಂತರ ಯಾವ ರೀತಿ ಏರುಪೇರುಗಳನ್ನು ಕಾಣುತ್ತದೆ..ಆಕೆಯ ಮನಸ್ಥಿತಿ, ಮನೆಯವರೇ  ಅವಳ ಜೊತೆ ವ್ಯವಹರಿಸುವ ರೀತಿ...
ಅದೇರೀತಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ  ಅಬೀರ್ (ಅತ್ಯಾಚಾರದ ಬಳಿಕ ಮದುವೆಯಾದ ಯುವಕ),ಆಕೆ ಅತ್ತಿಗೆ ಮಂದಾಕಿನಿ, ಅಬೀರ್ ತಾಯಿ  ಕರುಣ, ಅಮಲಾ ಪ್ರಿಯಕರ ದೇವ್  ಸೇರಿದಂತೆ  ಪ್ರತಿಯೊಬ್ಬರೂ  ಪಾತ್ರಗಳಿಗೆ ಜೀವ ತುಂಬಿದ್ದಾರೆ.ಅಮಲಾ ಪಾತ್ರಧಾರಿ ಪಂಕುರಿ ಅವಸ್ಥಿ, ಅಬೀರ್ ಆನಂದ್ ಪಾತ್ರಧಾರಿ ರಾಜವೀರ್ ಸಿಂಗ್.
ಅಬೀರ್  ಹಾಗೂ ದೇವ್ ಪಾತ್ರಧಾರಿಗಳು ಥೇಟ್ ಗ್ರೀಕ್ ದೇವತೆಗಳಂತೆ  ಸುಂದರವಾಗಿದ್ದಾರೆ. ಅತ್ಯಂತ ಸೂಕ್ಷ್ಮ ಅಂಶದಡಿಯಲ್ಲಿ ತಯಾರಾಗಿರುವ ಈ ಕಥೆ ಟರ್ಕಿಶ್ ಮೂಲದ್ದು. 
ಸೂಕ್ಷ್ಮ ಸಂವೇದನೆಯ ಕಥಾಹಂದರ ಹೊಂದಿರುವ ಈ ಧಾರವಾಹಿ ಎಲ್ಲರೂ ನೋಡಲೇ ಬೇಕಾಗಿರುವಂತಹದ್ದು....