Posts

Showing posts from December 7, 2014

ರಿಕ್ವೆಸ್ಟ್

Image
ಕಳೆದ ಕೆಲವು ದಿನಗಳೇನು ವಾರಗಳಿಂದಲೇ ಅನಾರೋಗ್ಯ.ಜೊತೆಗೆ ಕೆಲಸ ಕೆಲಸ. ಹಾಗಂತ ಕೆಲಸದ ಬಗ್ಗೆ ನಾನು ಎಂದಿಗೂ ಬೇಜಾರಾಗಲ್ಲ. ಆದ್ರೆ ಹಲ್ಲು ನೋವೂ :-) ಅದರ ಜೊತೆ ಡಾಕ್ಟರ್ ಬೇರೆ ಹೆದರಿಸಿದ್ದಾರೆ   ಗಮ್ ಸರ್ಜರಿ ಆಗಬೇಕು ಅಂತ. ಇಲ್ಲದೆ ಇದ್ರೆ ಕಷ್ಟ ಅಂತ .. ಇಷ್ಟೆಲ್ಲಾ ಕಷ್ಟ ನನಗೆ ಬರಬೇಕಾ ಹಾಯ್ ಹಾಯ್ ;-)

@ ಸ್ಟಾರ್ ವಾಹಿನಿಯಲ್ಲಿ ಪ್ರತಿದಿನ ಹತ್ತು ಗಂಟೆಗೆ ಒಂದು ಧಾರಾವಾಹಿ ಬರುತ್ತದೆ. ಅದರ ಹೆಸರು ಎವರೆಸ್ಟ್ . ಆ ಧಾರಾವಾಹಿಯಲ್ಲಿ ಮಾಡಿರುವ ಕಲಾವಿದರು ಚಿತ್ರವಿಚಿತ್ರವಾದ ಅಲಂಕಾರ ಮಾಡಿಕೊಂಡಿರುವ ಕಲಾವಿದರು ಥರ ಇಲ್ಲ. ಹಳೆಯ ಚಿತ್ರಗಳು ಅಂದ್ರೆ ಎಂಬತ್ತರ ದಶಕದ  ಪ್ರಶಸ್ತಿ ಸಿನಿಮಾಗಳಂತೆ. ಆದರೆ ಆ ಧಾರವಾಹಿ ತುಂಬಾ ಭಿನ್ನವಾಗಿದೆ. ತಪ್ಪದೆ ನೋಡುವಂತೆ ಇದೆ. ಆಕಾಶ್, ಅರ್ಜುನ್, ಅಂಜಲಿ ಪಾತ್ರಗಳು ಸಕತ್ತಾಗಿದೆ. ನೋಡ್ರಿ ಸಚ್ಚಿಮುಚ್ಚಿ ಚಂದ ಇದೆ. 

@ ಕಳೆದವಾರ ಒಂದು ವಿಷಯದಲ್ಲಿ ಅತ್ಯಂತ ಖೇದ ಆಯ್ತು, ಮತ್ತೊಂದು ಸಂಗತಿ ಬಗ್ಗೆ ಖುಷಿ ಆಯ್ತು. ಪಾಪದ ಹೆಣ್ಣುಮಗಳು ಗೌಹರ್ ಗೆ  ಕೆನ್ನೆಗೆ ಹೊಡೆ ದದ್ದು ಕಂಡಾಗ ಸಕತ್ ಬೇಜಾರಾಯ್ತು.ಈಟೀವಿ ಕನ್ನಡದಲ್ಲಿ ಬಂದ ನ್ಯೂಸ್  ನೋಡಿದ ತಕ್ಷಣ ಹಿಂದಿ ವಾಹಿನಿಗಳತ್ತ ಹೋಗಿ ನೋಡಿದಾಗ ಮತ್ತಷ್ಟು ವಿವರ ಬರ್ತಾ ಇತ್ತು. ಛೆ ಎಂತಹ ಅನ್ಯಾಯ ! ಆಕೆಯನ್ನು ಫ್ಯಾನ್ಸ್ ನೋಡೋದು ಧರ್ಮದ ಕಾರಣದಿಂದ ಅಲ್ಲವೇ ಅಲ್ಲ , ಆಕೆಯ ಮ್ಯೂಸಿಕ್ ಚಾನೆಲ್ ನಲ್ಲಿ  ಇದ್ದಾಗಿನಿಂದ ಕಂಡ ವೀಕ್ಷಕರಿಗೆ ಆಕೆ ಪ್ರತಿಭೆ ಇಷ್ಟ ಆಗಿದೆಯೇ …

ರಂಗಣ್ಣ ಅಂದ್ರೆ !!

Image
ಕೆಲವು ಸಂಗತಿಗಳು ಮನದಲ್ಲಿ ಒಂಥರಾ ಭಾವನೆಗಳನ್ನು ಹೊರ ಹೊಮ್ಮಿಸ್ತಾ ಇರುತ್ತದೆ. ಅದನ್ನು ಯಾವ ರೀತಿ ವ್ಯಕ್ತ ಮಾಡ ಬೇಕೋ ಗೊತ್ತೇ ಆಗಲ್ಲ. ಆದರು ಎಲ್ಲ ಭಾವನೆಗಳನ್ನು ಹುದುಗಿಸಿಕೊಂಡು ಬದುಕ್ತೀವಿ.. ಲೈಫ್ ಅಂದ್ರೆ ಇಷ್ಟೇ ಅನ್ನಿಸುತ್ತೆ.
ಕಿರುತೆರೆಯಲ್ಲಿ ತಮ್ಮ ಧ್ವನಿ ಮೂಲಕ ಬಾಲಕೃಷ್ಣ ಕಾಕತ್ಕರ್ ಎಲ್ಲರ ಗಮನ ಸೆಳೆದಿದ್ದರು. ವಯಕ್ತಿವಾಗಿ ಏನೇ ಇರಲಿ ಆದರೆ ಬದುಕಲ್ಲಿ ಅವರು ಪಟ್ಟ ಪಾಡು ಕೇಳಿ, ಓದಿ ತುಂಬಾ ಒಂಥರಾ  ಆಯ್ತು. ಹೀಗೆ ಅವರು ಸಾಯುವ ದಿನ ನನ್ನ ಪಾಡಿಗೆ ನಾನು ಆಫೀಸಲ್ಲಿ ಬರೀತಾ ಇದ್ದೆ. ಮೆಸೇಜ್ ಬಂತು ಹಿರಿಯ ಜರ್ನಲಿಸ್ಟ್ ಒಬ್ಬರಿಂದ. ಕಾಕತ್ಕರ್ ಸತ್ತು ಹೋದನಂತೆ...! ಒಂದು ಕ್ಷಣ ಯಾವ ರೀತಿ ರಿಸೀವ್ ಮಾಡಿಕೊಳ್ಳ ಬೇಕೋ ಗೊತ್ತೇ ಆಗಲಿಲ್ಲ. 
ಆಗ ನಾನು ಛೆ ಅಯ್ಯೋ ಪಾಪ ಅಂತ ಮೆಸೇಜ್ ಮಾಡಿದೆ. ತಕ್ಷಣ ನೀ ನೋಬ್ಬಳೆ ಪಾಪ ಅಂತಾ ಇರೋದು ಬೇರೆಯವರೆಲ್ಲ ನಿನ್ನ ರೀತಿ ಅನ್ನಲಿಲ್ಲ, ಬಿಡು ಅದು ನಿನ್ನ ಒಳ್ಳೆ ಗುಣ ಅಂದ್ರು.  ಅದು ಸಹ ಮನದಲ್ಲಿ ಕೊರಿತಾ ಇತ್ತು. ಸತ್ತ ಬಳಿಕವು ಆ ವ್ಯಕ್ತಿಯನ್ನು ದ್ವೇಷಿಸುವುದಾದರೆ ಆ ವ್ಯಕ್ತಿ ನಿಜಕ್ಕೂ ಎಂತಹ ಗುಣ ಅಥವಾ ವರ್ತನೆ ಹೊಂದಿರ ಬಹುದು ಅಂತ ಅನ್ನಿಸಿತ್ತು. ಆದರೆ ಆ ಸತ್ತ ಜೀವದ ಬಗ್ಗೆ ಪತ್ರಕರ್ತ ಮಿತ್ರರು ತುಂಬಾ ಚಂದ ಬರೆದಿದ್ದರು. ಅವರ ಮೆಚ್ಚಿನ ಕಾಕಗೆ ಸರಿಯಾದ ರೀತಿಯಲ್ಲಿ ನಮನ ಸಲ್ಲಿಸಿದ್ದರು. 
ಸಾವಿನ ಮುಂಚೆ ಏನೇ ಇರಲಿ ಸತ್ತ ಬಳಿಕ ಕನಿಷ್ಠ ಒಂದು ಒಳ್ಳೆ ಮಾತು ಹೇಳಿದರೆ ಸಾಕು ಎನ್ನುವ ಮಂದಿ ಬದ…