ಬಿ ಟೌನ್ ನಲ್ಲಿ ಇದ್ದೀದ್ದರೆ..

ಸುವರ್ಣ ನ್ಯೂಸ್ ನಲ್ಲಿ ಚಿದಂಬರ ರಹಸ್ಯ ಅನ್ನುವ ಕಾರ್ಯಕ್ರಮದ ನಿರೂಪಕನ ಬಗ್ಗೆ ಒಮ್ಮೆ ಬರೆಯುತ್ತ ನಾನು ಈತ ಹೆಚ್ಚು ಟೀವಿ ನೈನ್  ಹೀಗೂ ಉಂಟೆ ನಾರಾಯಣ ಸ್ವಾಮಿ ಯನ್ನು ಅನುಸರಿಸುತ್ತಾರೆ ಎಂದು ಬರೆದಿದ್ದೆ ಒಮ್ಮೆ. ಅದಾದ ಬಳಿಕ ಈ ನಿರೂಪಕ ನನ್ನ ಜೊತೆಯಲ್ಲಿ ಮಾತಾಡ  ಬಯಸಿದ್ದು ,ಆ ಬಳಿಕ ತಾನು ನ್ಯಾನ್ಸಿಯನ್ನು ಯಾಕೆ ಅನುಸರಿಸಿರ ಬಹುದು ಎಂದು ಕ್ಲಾರಿಫೈ ಮಾಡಿದ್ದು ಹಳೆಯ ಕಥೆ. ಹೀಗೆ ಸಾಫ್ಟಾಗಿ ಬೆಳೆದ ನಮ್ಮಿಬ್ಬರ ವಿಶ್ವಾಸದ ಸ್ನೇಹ ದಿನೇ ದಿನೇ  ಹೆಚ್ಚಾಗಿದೆ .ಆತನ ಹೆಸರು ಪ್ರದೀಪ್ ಬಡೆಕ್ಕಿಲ .
ಒಂದೊಳ್ಳೆಯ ಪ್ರಯತ್ನದಿಂದ ಸಾಧನೆ ಮಾಡಿದರೆ ಯಶಸ್ಸು ಗಟ್ಟಿ ಅನ್ನುವ ನಂಬಿಕೆ ಎಲ್ಲರಲ್ಲೂ ಇದ್ದೆ ಇದೆ,ಅ ರೀತಿಯ ಸಾಧನೆಯನ್ನು ಮಾಡಿರುವ ಪ್ರದೀಪ್  ಮಾಡಿರುವ ಸಾಧನೆಯನ್ನು ನಾನು ಗಮನಿಸುತ್ತಾ ಬಂದಿದ್ದೆ.. ಖುಷಿ ಅನ್ನಿಸುತ್ತೆ.

ಈತ ತನ್ನ ಧ್ವನಿಯ ಮೂಲಕ ಹೆಚ್ಚು ಪರಿಚಿತ. ಈ ಧ್ವನಿಗೆ ಮರುಳಾದವರು  ಕೇವಲ ಹೆಣ್ಣುಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಮತ್ತು ಎಲ್ಲ ವಯೋಮಿತಿಯವರು. ಟೀವಿ ನೈನ್ , ಸುವರ್ಣ , ಸುವರ್ಣ ನ್ಯೂಸ್,...! ವ್ಯಾಪ್ತಿ ದೊಡ್ಡದು ಪುತ್ತೂರಿನ ಪ್ರದೀಪ್ ದು.

ಸುವರ್ಣ ವಾಹಿನಿಯಲ್ಲಿ ಪ್ರಸಾರ ಆದ ರಿಯಾಲಿಟಿ ಶೋಗಳಿಗೆ ಧ್ವನಿ ನೀಡುತ್ತಿದ್ದ ಪ್ರದೀಪ್  ತಮ್ಮ ವ್ಯಾಪ್ತಿಯನ್ನು ನಟನೆಯತ್ತ ತಿರುಗಿಸಿ ಕೊಂಡರು,ರಾಜಕುಮಾರಿ  ಲಕುಮಿ, ಕೃಷ್ಣ ರುಕ್ಮಿಣಿ ಯಲ್ಲಿ ನಟಿಸಿದ ಬಳಿಕ  ಪ್ರದೀಪ  ಈಗ ತಮಿಳು ಧಾರವಾಹಿ ಸೊಂದ ಬಂಧಂ ನಲ್ಲಿ(ಸನ್ ಟೀವಿಯಲ್ಲಿ ಪ್ರಸಾರ ಆಗುತ್ತಿದೆ) ಮುಖ್ಯ ಪಾತ್ರಧಾರಿ. ಈಗ ಆತ  ತಮಿಳು ಕಲಿತು ಅದೂ ಓದುವುದನ್ನು.., ಮಾತಾಡುವುದನ್ನು .. ತಾನುಎಂತಹ ಚಾಲೆಂಜ್ ಗೆ ಬೇಕಾದರೂ  ಗೆಲ್ಲ ಬಲ್ಲೆ ಅನ್ನುವುದನ್ನು ಪ್ರೂವ್ ಮಾಡಿದ್ದಾರೆ.ಈಗ ಈ ಟೀವಿಯಲ್ಲಿ ಅವರ ಧ್ವನಿ ಕೇಳಿ ಬರ್ತಾ ಇದೆ..

ನನ್ನ ಫ್ರೆಂಡ್ ಎಂದು ನಾನುಹೊಗಳ್ತಾ ಇಲ್ಲ .. ಇರುವ ಸಂಗತಿ ಹೇಳ್ತಾ ಇದ್ದೀನಿ.
ಮತ್ತೊಂದು ಸಂಗತಿ ಈತ ಒಳ್ಳೆಯ ಹಾಡುಗಾರ .. ತನ್ನ ಮಿತ್ರರೊಡನೆ ಸೇರಿ ಒಂದು ಹಾಡಿನ ಸೀಡಿ ರೆಡಿ ಮಾಡಿದ್ದಾರೆ..ತುಂಬಾ ಚನ್ನಾಗಿದೆ,ಥೇಟ್  ಬಾಲಿವುಡ್  ರೀತಿಯಲ್ಲಿ. ಇದೆ ಹಾಡು , ಇಂತಹ ಹುಡುಗ ಬಿ ಟೌನ್ ನಲ್ಲಿ ಇದ್ದೀದ್ದರೆ..
ಲಿಂಕ್ ಕೆಳಗಿದೆ.ಹರಿಸಿ ಹಾರೈಸಿ ಕನ್ನಡದ ಕುಡಿಯನ್ನು ...

ಅಭಿಜಾತ ಕಲಾವಿದರು


ಟೀವಿ ನೈನ್  ವಾಹಿನಿ ಮತ್ತು ಜನಶ್ರೀ ವಾಹಿನಿ  ಇಬ್ಬರು ಅಭಿಜಾತ ಕಲಾವಿದರ ಬಗ್ಗೆ ಪ್ರಸಾರ ಮಾಡಿತು. 
ಜನಶ್ರೀ ಅವರು ಇವತ್ತಿನ ಸ್ಪೆಶಲ್ ಎನ್ನುವ ಕಾರ್ಯಕ್ರಮದಲ್ಲಿ, ಮತ್ತು ಟೀವಿ ನೈ ನ್  ಸಕಲಕಲಾವಲ್ಲಭ ಹೆಸರಿನ ಶೀರ್ಷಿಕೆಯ ಕಾರ್ಯಕ್ರಮ. ಎರಡು ಮೈಂಡ್ ಬ್ಲೋಯಿಂಗ್ ಕಾರ್ಯಕ್ರಮ. ಯಾಕೆ ಗೊತ್ತ ಆ ಎರಡು ಕಾರ್ಯಕ್ರಮದ ಕೇಂದ್ರ ಬಿಂದು ಇಬ್ಬರು ಸೂಪರ್ ಸ್ಟಾರ್ ಗಳು.
ಜನಶ್ರೀ ಯಲ್ಲಿ ಶಾರುಖ್ ಖಾನ್ ಮತ್ತು ಟೀವಿ ನೈನ್  ನಲ್ಲಿ ಕಮಲ ಹಾಸನ್. ಈ ಇಬ್ಬರು ಕಲಾವಿದರು ಅಪಾರವಾದ ಕಲಾಭಿಮಾನಿಗಳಿಂದ ಪ್ರೀತಿಯನ್ನು ಗಳಿಸಿರುವ ಕಲಾವಿದರು. ತಾನು ತನ್ನ ಧರ್ಮದಿಂದ ಗುರುತಿಸಿಕೊಳ್ಳದೆ ಪ್ರತಿಭೆಯಿಂದ ಮನಗೆದ್ದು ಅದಕ್ಕೆ ಪೂರಕ ಕಸರತ್ತು  ಮಾಡಿರುವ ಶಾರೂಕ್ ಎಲ್ಲರ ಮುದ್ದು.. ಹಾಗೆಂದರೆ ಪ್ರತಿಯೊಬ್ಬರೂ ಇಷ್ಟ ಪಡುವ ಕಲಾವಿದ. ಆತನಿಗೆ ಆತನ ಮನೆ ಅಂದ್ರೆ ಭಾರತದಲ್ಲಿ ರಕ್ಷಣೆ ಕೊಡ ಬೇಕಾ ? ಸಕತ್ ಬಾಲಿಶ ಸಂಗತಿ .

ಒಂದು ಧರ್ಮದ ಬಗ್ಗೆ ಮತ್ತೊಂದು ಧರ್ಮದವರಿಗೆ ಕೆಲವು ಬಗೆ ಇನ್ ಸೆಕ್ಯೂರಿಟಿ ಆಗುವುದು ಸಹಜ. ಅದರ ಕಾರಣಗಳನ್ನು ನಾವು ಹುಡುಕುತ್ತಾ ಹೋದರೆ ಅಂತಿಮವಾಗಿ ಉಳಿಯುವುದು ಏನು ಇಲ್ಲ.ಅದೇ ರೀತಿ ಜಾತಿಗಳ ವಿಷಯದಲ್ಲೂ ಆಗುತ್ತದೆ.ಬಿಡಿ ಧರ್ಮ ಜಾತಿ ಸಂಗತಿ ಬಿಡಿ ಎಲ್ಲ ವಿಷಯದಲ್ಲೂ ಇಂತಹ  ವಾತಾವರಣ ಇದ್ದದ್ದೇ.

ಕಮಲಾ ಹಾಸನ್ ಅಂದ್ರೆ ನನಗೆ ಸಕತ್ ಇಷ್ಟ. ಆ ಕಲಾವಿದ ಗುರುತಿಸಿ ಕೊಂಡಿರುವುದು .ಅವರ ಸಾಗರ ಸಂಗಮಂ  ಸ್ವಲ್ಪ ಜಾಸ್ತಿನೆ ಇಷ್ಟವಾದ ಸಿನಿಮಾ.ಈಗ ವಿವಾದಿತ ಆಗಿರುವ ಸಿನಿಮಾ ವಿಷಯಕ್ಕೆ ಸಂಬಂಧಿಸಿದಂತೆ ಓರ್ವ ಮುಸ್ಲಿಂ ನಾಯಕ ಅವರನ್ನು ಟಾ ಕ್ ಷೋ ನಲ್ಲಿ ಸುವರ್ಣ ನ್ಯೂಸ್ ನ ರಂಗ ನಾಥ್ ಚರ್ಚೆಗೆ  ಕುಳ್ಳರಿಸಿ ದ್ದರು . ಆದರೆ ತಮಾಷೆ ಅಂದ್ರೆ ಆತ  ಆ ಸಿನಿಮಾ ನೋಡದೆ ಅದನ್ನು ಬ್ಯಾನ್ ಮಾಡ ಬೇಕು ಅನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಸಕತ್ ನಗು ಬಂದಿತ್ತು.
ಆದರೆ ಬ್ಯಾನ್ ಆಗ ಬೇಕು ಅಂತ ಯಾರು ಒದ್ದಾಡು ತ್ತಿದ್ದಾರೆ ಅನ್ನುವ ಸಂಗತಿ ಈಗ ಸ್ಪಷ್ಟವಾಗಿದೆ.
ಟೀವಿ ನೈನ್  ಪ್ರಸಾರ ಮಾಡಿದ ಸಕಲಕಲಾ ವಲ್ಲಭ ಅನ್ನುವ ಕಮಲ್ ಅವರ ದೈತ್ಯ ಪ್ರತಿಭೆಯ ಬಗ್ಗೆ ಪ್ರಸ್ತುತ ಪಡಿಸಿದ ಕಾರ್ಯಕ್ರಮ ವಾವ್ ..

ಒಟ್ಟಾರೆ ಹೇಳೋದಿಷ್ಟೇ ಕಮಲ್-ಶಾರೂಕ್ ನಮಗೆ ನಿಮ್ಮ ನಟನೆ ಅಂದ್ರೆ ತುಂಬಾ ಇಷ್ಟ. ಭಾರತದಲ್ಲಿ ಪ್ರತಿಭೆಗಳಿಗೆ ಮಾತ್ರ ಮಣೆ  ಹಾಕೋದು ಮತ್ಯಾವುದಕ್ಕೂ ಅಲ್ಲ.. ಈ ಅಂಶ ಭಾರತೀಯರಾದ ನಿಮಗೆ ಗೊತ್ತೇ ಇದೆ ಅಲ್ವೇ !

 

ನಿಗೂಢ !


ಮಾಯಾ ಮಂತ್ರ, ದೆವ್ವ ಭೂತ ಅಂದ್ರೆ ವೀಕ್ಷಕರಿಗೆ ತುಂಬಾ ಇಷ್ಟ.. ವೀಕ್ಷಕರು ಅಂದ್ರೆ ಟೀವಿ ವೀಕ್ಷಣೆ ಮಾಡೋರು ಮಾತ್ರವಲ್ಲ ಆಮ್ ಆದ್ಮಿ ಗಳಿಗೆ ತುಂಬಾ ಇಷ್ಟ,, 
ಆದ ಕಾರಣ ಮ್ಯಾಜಿಕ್ ಮೋಡಿಗಳಿಗೆ ಹೆಚ್ಚು ಆದ್ಯತೆ ನೀಡ್ತಾರೆ ಜನಗಳು. ಅಯ್ಯೋ ಬಿಡಿ ಕಣ್ಕಟ್ಟು ಅದರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳ  ಬೇಕು  ಅನ್ನುವ ಮಾತು ಆಡಿದರೂ ಸಹ ಕಣ್ಕಟ್ಟು ವಿದ್ಯೆಯ ಬಗ್ಗೆ ಜನರಿಗೆ ಆಸಕ್ತಿ ಇದ್ದೆ ಇದೆ.
ನಿನ್ನೆ ಉದಯ ನ್ಯೂಸ್ ನಲ್ಲಿ ನಿಗೂಢ ಜಗತ್ತು ಅನ್ನುವ ಕಾರ್ಯಕ್ರಮ ವೀಕ್ಷಿಸಿದೆ. ಅದು ಸಹ ಕಣ್ಕಟ್ಟು ವಿದ್ಯೆ ಬಲ್ಲ ಅದಕ್ಕಿಂತಲೂ ಹೆಚ್ಚಾಗಿ ವಿಶೇಷ  ಶಕ್ತಿ ಎಂದು ಹೇಳ ಬಹುದಾ ಗೊತ್ತಿಲ್ಲ ಆದರೆ ಆ  ವಿದ್ಯೆ ಬಲ್ಲ ವ್ಯಕ್ತಿಯೊಬ್ಬರ ಬಗ್ಗೆ ಪ್ರಸಾರ ಮಾಡಿದರು ಕಾರ್ಯಕ್ರಮದಲ್ಲಿ. 

ಆತನ ತನ್ನ  ಬಾಯಲ್ಲಿ ಕೆಂಡ ಇಟ್ಟುಕೊಂಡ-ಬೆಂಕಿ ಉಗುಳಿದ. ಹಾವುಗಳ ಜೊತೆಯ ಆತನ ಒಡನಾಟ ಭಯದಿಂದ ಮೈ ನಡಗುವಂತಹದ್ದು . ಯಾವ ಇಂಡಿಯಸ್  ಗಾಟ್  ಟ್ಯಾಲೆಂಟ್ ನಲ್ಲೂ ಕಾಣದ ಪ್ರತಿಭೆ.. ಆತ ಈಗ ಎಲ್ಲ ಆಕರ್ಷಣೆಯ ಕೇಂದ್ರ ಬಿಂದು. ಕೇರಳ ನಿವಾಸಿಯ ಬಗ್ಗೆ  ಪ್ರಸಾರಿಸಿದ ಕಾರ್ಯಕ್ರಮ ನಿಗೂಢವಾಗಿ ಇತ್ತು.
ಬೇರೆ ವಾಹಿನಿಗಳಲ್ಲಿ ಇಂತಹ ಕಾರ್ಯಕ್ರಮಗಳು ಪ್ರಸಾರ ಆದರೂ ಹೆಚ್ಚು ಗಿಮಿಕ್ಕುಗಳಿರುತ್ತೆ.ಆದರೆ ಇಲ್ಲಿ ಮಾತ್ರ ಅಂತಹ ಯಾವುದೇ ಅತಿರೇಕಗಳು ಇಲ್ಲದೆ ಒಪ್ಪವಾಗಿ  ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು.
ಹೆಸರು ನಿಗೂಢ ಆಗಿದ್ದರೂ ನಿರೂಪಕ ಮಾತ್ರ ಸುಂದರವಾಗಿದ್ದುದು ಆ ಕಾರ್ಯಕ್ರಮದ ಮತ್ತೊಂದು ವಿಶೇಷ 

ಕಲರ್ ವಾಹಿನಿಯಲ್ಲಿ  ಜೈ ಮಾ ದುರ್ಗಾ ಅನ್ನುವ ಧಾರವಾಹಿ ಪ್ರಸಾರ ಆಗುತ್ತದೆ.ಸಂಪೂರ್ಣವಾಗಿ ದೇವಿ-ಅಮ್ಮನವರ  ಮಹಿಮೆ. ಶಾಂತ ಮುಖಭಾವದ ಹೆಣ್ಣುಮಗಳು ಆ ಪಾತ್ರ ನಿರ್ವಹಿಸಿರುವುದು .ನಾವು ಹೆಚ್ಚಾಗಿ ರಮ್ಯಕೃಷ್ಣ ರಂತಹ ಪಾತ್ರಧಾರಿಗಳನ್ನು ಕಂಡಿರೋದು ,ಆದರೆ ದೇವರು ಇಷ್ಟು ಸಾಫ್ಟಾಗಿ  ಛೆ 
ಈ ಧಾರಾವಾಹಿಗೆ ಸಂಬಂಧಿಸಿದಂತೆ  ಅನೇಕ ವೀಕ್ಷಕಿರು, ಅದರಲ್ಲೂ ತೆಲುಗು -ದೇವರ ಸಿನಿಮಾಗಳನ್ನು ವೀಕ್ಷಿಸಿದವರು ಈ ಹಿಂದಿ ದೇವರಿಗೆ  ಆಟಿಟ್ಯುಡ್ ಇಲ್ಲ, ಅದಕ್ಕೆ ನೋಡೋಕೆ ಬೇಸರ ಅನ್ನುವ ಅಭಿಪ್ರಾಯ ಪಟ್ಟಿದ್ದಾರೆ.. ಹೇ ಮಾತೆ ಒಮ್ಮೆ ಒಂದಷ್ಟು ಸೌತ್ ಸಿನಿಮಾಗಳನ್ನು ನೋಡಿದರೆ ಒಳ್ಳೆಯದು..ನೀವು ಶಾಂತಮೂರ್ತಿ ಆಗಿರೋದು ದಕ್ಷಿಣದ ವೀಕ್ಷಕರಿಗೆ ಇಷ್ಟ ಇಲ್ಲ ;-)



ದೋಸೆ ಕಥೆ

 ಟೀವಿಗಳಲ್ಲಿ ಭವಿಷ್ಯ ಪ್ರಸಾರ ಆಗದೆ ಇದ್ರೆ ಹೆಣ್ಣುಮಕ್ಕಳಿಗೆ ಕಷ್ಟ ಅನ್ನುವ ಕುಹುಕ  ಗಂಡು ಮಕ್ಕಳಲ್ಲಿ ಮನೆ ಮಾಡಿದೆ. ತಮಾಷೆ ಅಂದ್ರೆ ಆ ಗಂಡು ಮಕ್ಕಳ ಜುಟ್ಟು ಹೆಣ್ಣು ಮಕ್ಕಳ ಕೈಲಿ ಇರುವುದರಿಂದ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ್ರು ಅದ್ರ ಫಲಾಫಲ ಮೊದಲು ಅನುಭವಿಸುವುದು ಪಾಪದ ಗಂಡು ಮಕ್ಕಳೇ ..

ಏನೇ  ಆದರೂ ಅ ಗುರುಜಿ ಈ ಗುರುಜಿ ಅನ್ನುವ ಮಾತುಗಳು ಹೆಣ್ಣುಮಕ್ಕಳ ಮಾತುಗಳು ಆ ಗುರುಗಳು ಹೇಳಿದ ಕೆಲವೊಂದು ವ್ರತಗಳನ್ನು ತಮ್ಮ ಮನೆಯಲ್ಲಿ ಇರುವ ಗಂಡು ಮಕ್ಕಳ ಕೈಲಿ ಮಾಡಿಸಿ ತಾವು ದೇವರಿಗೆ ಹಾಕಿದ ಅಪ್ಲಿಕೇಶನ್ ಗೆಲ್ಲುವಂತೆ ಮಾಡಿಕೊಳ್ತಾರೆ ಎಚ್ಚರ ಗಂಡು ಮಕ್ಕಳೇ  :-)


ಆದರೂ ಒಂದು ಬಾರಿ ನೀವು ವಾಸ್ತು ಅನ್ನುವ  ತುರುಕೆಯನ್ನು  ಅಂಟಿಸಿ ಕೊಂಡರೆ ಕೊನೆಗೆ ಆಗೋದು ಹುಣ್ಣ ಷ್ಟೆ ..ಭವಿಷ್ಯವೂ ಇದಕ್ಕೆ ಹೊರತಲ್ಲ ಬಿಡಿ.ಆದರೆ ಟೀವಿ ನೈನ್  ವಾಹಿನಿಯಲ್ಲಿ ಸಂಸ್ಕಾರ ಅನ್ನುವ ಖಾರವನ್ನು ತಲೆಗೆ ಮೆತ್ತುತ್ತಾರೆ. ಅದರಲಿ ದೋಸೆ ಯಾವ ರೀತಿ ಹೆಂಚಿನ ಮೇಲೆ ಬರೆಯ ಬೇಕು ಅನ್ನುವ ಮಾಹಿತಿಯನ್ನು ಹೆಣ್ಣುಮಕ್ಕಳಿಗೆ ಹೇಳಿಕೊಡ್ತಾರೆ. ಯಾವರೀತಿ ಬರೆದರೂ ಗುಂಡಗೆ ಇರುವ ದೋಸೆ ಎಡದಿಂದ ಆಗಿರಲಿ ಬಲದಿಂದ ಆಗಿರಲಿ ಹೊಯ್ದರೆ ಕಡೆಗೆ ಕೈಗೆ ಸಿಗೋದು ದೊಸೇನೆ ವಿನಃ ದುರದೃಷ್ಟ ಅಲ್ಲ :-).. (ಈ ಸಂಗತಿ ನಾನು ಬಹಳ ಹಿಂದೆ ನೋಡಿದ್ದೆ .ಅದನ್ನು ಈಗ  ಹೇಳಿದ್ದೀನಿ ಅಷ್ಟೇ ಈ  ದೋಸೆ ಕಥೆ )



ಅನೇಕ ಸರ್ತಿ ಪ್ರಸಾರ ಆಗಿತ್ತು,ಆದರೆ ಪುನಃ ಈ  ಕಾರ್ಯಕ್ರಮ ನಿನ್ನೆ ಮತ್ತೊಮ್ಮೆ ಪ್ರಸಾರ ಆಯ್ತು.ನಿನ್ನೆ ವೀಕ್ಷಿಸಿದೆ..ಯಾವುದು ಅಂತೀರ  ಜೀ ವಾಹಿನಿಯ ಜೀ ಕುಟುಂಬ ಅವಾರ್ಡ್ಸ್ .
ಅದರಲ್ಲಿ ಮುಖ್ಯ ಆಕರ್ಷಣೆ ಆಗಿದ್ದು  ಪಾಂಡುರಂಗ ವಿಠಲ  ಧಾರಾವಾಹಿಯ ಜಹಂಗೀರ್ ಮತ್ತು ಪಾರ್ವತಿ ಪರಮೇಶ್ವರ ಧಾರಾವಾಹಿಯ ಲಾಯರ್ ಗುಂಡಣ್ಣ ಪಾತ್ರಧಾರಿ ಲೋಕೇಶ್ ಅವರ ನಿರೂಪಣೆ .ಇವರಿಬ್ಬರು ಜನ್ಮಜಾತ ಕಲಾವಿದರು. ಲೋಕೇಶ್  ಅವರನ್ನು ನಾನು ಸಂದರ್ಶಿಸಿದಾಗ ಭಾವುಕರಾಗಿ ಮಾತಾಡಿದ್ದರು.ಆನಂತರ ಇಬ್ಬರ ಮಧ್ಯೆ ವಿಶ್ವಾಸ ಮನೆ ಮಾಡಿದೆ. ನಟನ ರಮೇಶ್ ಶಿಷ್ಯ ಈತ. ತನ್ನ ಬಣ್ಣದ ಬದುಕಿಗಾಗಿ ಮಾಡಿದ ಸಾಧನೆ, ಅದಕ್ಕಾಗಿ ಬೆನ್ನೆಲುಬಾಗಿ ನಿಂತ ರಮೇಶ್ ಹಾಗೂ ಅವರ ಪತ್ನಿ ..ಈಗ ಫೈನಲ್ ಕಟ್ ಎಲ್ಲವೂ ಕೇಳ್ತಾ ಇದ್ರೆ ಗ್ರೇಟ್ ಅನ್ನಿಸುತ್ತೆ. ಎಲ್ಲೋ ಚಾಮರಾಜ ನಗರದ ಹುಡುಗ ಬೆಂಗಳೂರಿಗೆ ಬಂದು ಈ ಪರಿ ಜನಮನ ಗೆದ್ದಿರುವುದು ನಿಜಕ್ಕೂ ಶ್ಲಾಘನೀಯ.
ಹಿರಿಯ ಕಲಾವಿದರಾದ ಬಿ.ಜಯಮ್ಮ ಸೇರಿದಂತೆ ಅನೇಕ ಹಿರಿಯ ಕಲಾವಿದರು ಮಾಡಿದ ಡ್ಯಾನ್ಸ್ ..:-)
ತಲೆ ಕೆಟ್ಟ ಸಂಗತಿ ಅಂದ್ರೆ ಸೃಜನ್ ಲೋಕೇಶ್ ಮತ್ತು ನೀತು ಅವರ ನಿರೂಪಣೆ .