Posts

Showing posts from September 14, 2014

ವಿಭಿನ್ನ

Image
ಅತ್ಯಂತ ಸುಂದರ ಕಾರ್ಯಕ್ರಮ ಆಗಿದೆ ವೀಕೆಂಡ್ ವಿತ್ ರಮೇಶ್. ಪ್ರಾಯಶಃ ಆ ಕಾರ್ಯಕ್ರಮ ಹೆಚ್ಚು ಆಸಕ್ತಿ ಉಂಟು ಮಾಡುವುದರಲ್ಲಿ ರಮೇಶ್ ಅರವಿಂದ್ ಅವರ ಪಾತ್ರ ತುಂಬಾ ಹಿರಿದು ಅಂತ ಸ್ಪಷ್ಟವಾಗಿ ಹೇಳ ಬಹುದು. ಮುಖ್ಯವಾಗಿ ನಾನು ಕಂಡಂತೆ ಅಥವಾ ಕೇಳಿದಂತೆ ರಮೇಶ್ ಬಗ್ಗೆ ಒಂದಷ್ಟು ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಅವರ ಹಸನ್ಮುಖ, ಸೃಜನಶೀಲತೆ, ಆಂಗಿಕ ಭಾವ, ಜನರನ್ನು ಸೆಳೆಯುವ ಪರಿ ಎಲ್ಲವು ಇಷ್ಟ ಆಗುವಂತೆ ಇರುತ್ತದೆ . ಈ ಕಾರ್ಯಕ್ರಮಕ್ಕೆ ಅವರು ಬಿಟ್ರೆ ಮತ್ಯಾರಿಗೂ ಸಾಧ್ಯವಿಲ್ಲ ಮಾಡೋಕೆ ಪರ್ಫೆಕ್ಟ್ ಪಕ್ಕಾ ಪರ್ಫೆಕ್ಟ್. 
ಕೆಲವೊಂದು ಕಾರ್ಯಕ್ರಮಗಳಿಗೆ   ಇಂತಹವರೇ ಆಗ ಬೇಕು.. ಅವರನ್ನು ಬಿಟ್ರೆ ಆ ಜಾಗ ತುಂಬೋಕೆ ಕಷ್ಟ.  ಸಿನಿಮಾ ನಿರ್ದೇಶನದಲ್ಲೂ ಸಹಿತ ಸ್ಟಾರ್ ಹೀರೋಗಳು ನಿರ್ದೇಶಕರ ಬಗ್ಗೆ ಹಾಗೆ ನಿರ್ದೇಶಕರು ಸ್ಟಾರ್ ಹೀರೋಗಳ ಬಗ್ಗೆ ಗಮನ ನೀಡಿರುತ್ತಾರೆ, ಅವರನ್ನು ಹೊರತು ಪಡಿಸಿದರೆ ಮತ್ಯಾರಿಗೂ ಸಹಿತ ಆ ಸ್ಥಳ ತುಂಬೋಕೆ ಸಾಧ್ಯವಿಲ್ಲ ಎನ್ನುವ ಭಾವದಲ್ಲಿ ಇರ್ತಾರೆ.. ಡಾ. ರಾಜ್ ಕುಮಾರ್ ಅಶ್ವಥ್ ಅವರಿಗಾಗಿ ಕಾಯ್ತಾ ಇರೋರಂತೆ.. ಈಗ ಹಾಸ್ಯ -ಪೋಷಕ ಕಲಾವಿದರು ಸಹಿತ ಆ ರೇಂಜ್ ನಲ್ಲಿ ಇಲ್ಲ, ಆದರು ಸಹಿತ ಒಂದಷ್ಟು ಜನಕ್ಕೆ ಹೆಸರಿದೆ!


ರಮೇಶ್ ವಿಷಯದಲ್ಲೂ ಹಾಗೆ ಆಗಿದೆ.ಜೀ ವಾಹಿನಿಯ ವೀಕೆಂಡ್ ಗೆ ರಮೇಶ್ ಗೆ ರಮೇಶ್ ಸಾಟಿ.  ಒಮ್ಮೆ ಹೀಗೆ ಒಂದು ಲೇಖನ ಓದುತ್ತಿದ್ದೆ ರಮೇಶ್ ಬಗ್ಗೆ .. ಅವರು ಅತ್ಯಂತ ಸುಂದರ , ಸಂಭಾವಿತ,ಉತ್ತಮ ಕಲಾವಿದ, ಕನ್ನಡ ಹೆ…