ತಿಂದೂ ತಿಂದೂ...!

Image result for orange color flower images

ಎನ್ ಡಿ  ಟೀವಿ ವೀಕ್ಷಕರಿಗೆ  ಸದಾ ಬ್ಯಾಡ್ ಟೈಮ್  ನ್ಯೂಸ್ ಗಳನ್ನು ನೋಡಿ ಅಭ್ಯಾಸ.. ಬರಿ ಎನ್ ಡಿ ಟೀವಿಯಲ್ಲ ಯಾವುದೇ ವಾರ್ತಾ ವಾಹಿನಿಗಳಾಗಿರಲಿ ಸದಾ ಏನಾದರೊಂದು ಬ್ಯಾಡ್ ಟೈಮ್ ನ್ಯೂಸ್ ಹಾಕ್ತಾನೆ ಇರ್ತಾರೆ. ಆದರೇ ಎನ್ ಡಿ ಟೀವಿಯರು ಬ್ಯಾಡ ಬ್ಯಾಡ ಎನ್ನುವ ವಾರ್ತೆಗಳನ್ನು ಪ್ರಸಾರ ಮಾಡುತ್ತಾ ಕೂರದೆ ಗುಡ್ ಟೈಮ್ ಅನ್ನುವ ಊಟದ ಚಾನೆಲ್ ತೆಗೆದು  ಜನರ  ಮನವನ್ನು ಸಂತೋಷ ಪಡಿಸಿದ್ದಾರೆ. ಅದರಲ್ಲಿ ವಿಭಿನ್ನ ರೀತಿಯ ಕಾರ್ಯಕ್ರಮಗಳು ಪ್ರಸಾರವಾಗುತ್ತದೆ ಅದರಲ್ಲಿ ಫುಡ್ ಮ್ಯಾಡ್ ಎಂಬ ಹೆಸರಿನ ಊಟದ ಕಾರ್ಯಕ್ರಮ ಪ್ರಸಾರವಾಗುತ್ತದೆ. ಆ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಫುಡ್ಡು ಮತ್ತು ಅದರ ಇಬ್ಬರು ಮ್ಯಾಡ್ ಗಳು... 
ರಾಕಿ ಮತ್ತು ಮಯೂರ್ ಶರ್ಮ ಎನ್ನುವ ಫುಡ್ ಮ್ಯಾಡ್ಗಳು  ಸಕತ್ ತಿನ್ನೋದರ ಜೊತೆಗೆ ಸಕತ್ ಉಲ್ಲಾಸ ನೀಡುವಂತೆ ಕಾರ್ಯಕ್ರಮ ಮುನ್ನಡೆಸಿಕೊಂಡು ಹೋಗುತ್ತಾರೆ.
ಕೆಲವು ವಾರಗಳ ಹಿಂದೆ ಅವರ ಕಾರ್ಯಕ್ರಮ ವೀಕ್ಷಿಸಿದಾಗ ವಿದೇಶದ  ರೆಸ್ಟೋರೆಂಟ್ ಒಂದರಲ್ಲಿ ಬಂದ ಗ್ರಾಹಕರಿಗೆ ತಿನ್ನಿಸುವ ವ್ಯವಸ್ಥೆ.  ರಾಕಿ ಆರಾಮವಾಗಿ ತಿನ್ನಿಸಿಕೊಂಡರೆ ಮಯೂರ್ ಉರಳಾಡಿ ನಕ್ಕು ಆ ಬಳಿಕ ಸ್ವಾಹ ಮಾಡಿದ್ದರು. ;-)
ಈ ಜೋಡಿಯು  ಇತ್ತೀಚೆಗೆ ಬೆಂಗೂರಿನ ಅದರಲ್ಲೂ ಗಾಂಧಿ ಬಜಾರಿನ ಅದರಲ್ಲೂ ವಿದ್ಯಾರ್ಥಿಭವನದ ದೋಸೆ, ವಡೆ,ಅದೂ ಇದೂ ವಾಹ್ ವಾಹ್ ಅಂತ ತಿಂದೂ ತಿಂದೂ...! 
ಒಟ್ಟಾರೆ ಈ ಜೋಡಿ ಕಾರ್ಯಕ್ರಮ  ಉಲ್ಲಾಸಭರಿತವಾಗಿರುತ್ತದೆ..

ಚಾತುರ್ಮಾಸ

Image result for orange color  flower images

ಹಿಂದೂ ಮತ್ತು  ಆ ಧರ್ಮದಿಂದ ಪಕ್ಕಕ್ಕೆ ಸರಿದು ಮತ್ತೊಂದು ಧರ್ಮ ಹುಟ್ಟು ಹಾಕಿದವರ ಅನುಯಾಯಿಗಳು ಬಹಳ ಮುತುವರ್ಜಿಯಿಂದ  ಆಚರಿಸುವ ಚಾತುರ್ಮಾಸ  ಆಚರಣೆ ಬಗ್ಗೆ ಇರುವಂತಹ ಅನೇಕ ಸಂಶಯಗಳನ್ನು ಕಣ್ವ ಮಠದ  ಪೀಠಾಧಿಪತಿಗಳು ವೀಕ್ಷಕರಿಗೆ -ಭಕ್ತರಿಗೆ ನಿವಾರಿಸಿದರು. ಶ್ರೀಶ್ರೀಶ್ರೀ 1008 ಶ್ರೀ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿಗಳು ನಡೆಸಿಕೊಟ್ಟಈ ಕಾರ್ಯಕ್ರಮ ಚಂದನ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾವಾಯಿತು. ಮೂಲಮಠ ಹುಣಸಿಹೊಳೆಯಲ್ಲಿದೆ. ಅಪಾರ ಸಂಖ್ಯೆಯಲ್ಲಿ  ಶಿಷ್ಯರನ್ನು ಹೊಂದಿರುವ ಈ ಮಠದ ಈಗಿನ  ಗುರೂಜೀಯವರು ಸಮಾಜಮುಖಿ ಹಾಗೂ ಜೀವನ್ಮುಖಿ. ಸರಳ ರೀತಿಯಲ್ಲಿ  ವೀಕ್ಷಕರಿಗೆ ಅರ್ಥವಾಗುವಂತೆ ಚಾತಯರ್ಮಾಸದ ಬಗ್ಗೆ ವಿವರಿಸಿದ ಗುರುಗಳ ಕಾರ್ಯಕ್ರಮ ತುಂಬಾ ಚಂದ ಇತ್ತು. ಜೀವನ ದರ್ಶನವೆನ್ನುವ ಹೆಸರಿನ ಈ  ಕಾರ್ಯಕ್ರಮವನ್ನು ನಿರೂಪಿಸಿದವರು ಜಯಪ್ರಕಾಶ್ ನಾಗತಿಹಳ್ಳಿ.ಸೊಗಸಾದ ನಿರೂಪಣೆಯ ಮೂಲಕ, ಸರಳ ಪ್ರಶ್ನೆಗಳ ಮುಖಾಂತರ ವೀಕ್ಷಕರ ಮನಗೆದ್ದಿರುವ ಜಯಪ್ರಕಾಶ್ ಅವರು ಈ ಕಾರ್ಯಕ್ರಮವನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಟ್ಟರು ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ ಅಲ್ಲವೇ :-)

ಯಾಕೆ ?

Image result for red flower images
ಕೆಲವೊಂದು ಕಾರ್ಯಕ್ರಮ, ನಿರೂಪಕ, ಆತ/ಕೆ  ಕಾರ್ಯಕ್ರಮದ ವಿಷ್ಯ ಹೀಗೆ ಹಲವಾರು ಅಂಶಗಳು ವೀಕ್ಷಕರ ಮನ ಸೆಳೆಯುತ್ತದೆ. ನಾನು ನೋಡಲ್ಲ, ನಾನು ನೋಡೋದೇ ಇಲ್ಲ  ಎಂದು  ಹೇಳುತ್ತಲೇ ಕೆಲವರು ನಡೆಸಿಕೊಡುವ ಕಾರ್ಯಕ್ರಮವನ್ನು ವಿಶೇಷ ಆಸ್ಥೆಯಿಂದ ವೀಕ್ಷಿಸುತ್ತಾರೆ ಮಂದಿ. ಅಂತಹ  ವ್ಯಕ್ತಿತ್ವದಲ್ಲಿ ಆರ್ನಬ್  ಗೋಸ್ವಾಮಿ ಸಹ ಒಬ್ಬರು. ಆರ್ನಬ್ ಬಗ್ಗೆ   ಮಾತ್ರವಲ್ಲ ಅವರ ಟೀಮ್ ಸಹ ಯಾವುದರಲ್ಲೂ ಕಡಿಮೆ.. ಅವರಿಗಿಂತ ಜೋರಾಗಿ ವಾದ ಮಾಡ್ತಾರೆ, ಮಾತಾಡ್ತಾರೆ.. ವೀಕ್ಷಕರ ಕಥೆ ಏನಾಗ ಬಹುದು ಎನ್ನುವುದು ನನಗೆ ಗೊತ್ತಿಲ್ಲ ;-). ಇದು ಒಂದು ವಿಷ್ಯ..
ಸಾಮಾನ್ಯವಾಗಿ ತಮ್ಮ ಮೆಚ್ಚಿನ ಹೀರೋ, ಹೀರೋಯಿನ್, ಕವಿ, ಹಾಡುಗಾರರ ಪಟವನ್ನು ಡಿಪಿ ಮಾಡಿಕೊಳ್ಲುವುದನ್ನು ಕಂಡಿದ್ದೇನೆ. ಆದರೇ ಪತ್ರಕರ್ತರ ಪಟವನ್ನು ಡಿಪಿ ಮಾಡಿಕೊಳ್ಳುವುದು  ಬಹಳ ಕಡಿಮೆ. ನಮ್ಮ ಕನ್ನಡದ ಕಂದನೊಬ್ಬ  ಆರ್ನಬ್  ಗೋಸ್ವಾಮಿ ಅವರ ಭಾವಚಿತ್ರವನ್ನು ತಮ್ಮ ಫೇಸ್ ಬುಕ್  ಮುಖಚಿತ್ರ  ಮಾಡಿಕೊಂಡಿದ್ದು ಗಮನಕ್ಕೆ ಬಂತು..ಇಂತಹ ಅಭಿಮಾನಿಗಳು ಜಾಸ್ತಿ ಇದ್ದಾರೆ. ಸಾರಿ ಆರ್ನಬ್ ಅವರು ನಿಮ್ಮನ್ನು ಯಾಕೆ ಇಷ್ಟ ಪಡ್ತಾರೆ ಅನ್ನುವ ಮಾಹಿತಿ ಸಿಕ್ಕಿಲ್ಲ :-)

ಸದಭಿರುಚಿ


Image result for orange flower
ಇತ್ತೀಚೆಗೆ ಸದಭಿರುಚಿಯ ಧಾರವಾಹಿಗಳು ಸಹಿತ ಪ್ರಸಾರವಾಗುತ್ತಿದೆ. ಅದರಲ್ಲಿ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ  ಮೇರಿ ದುರ್ಗ  ಸಹಿತ ಸೇರಿದೆ. ಓಟದಲ್ಲಿ ಆಸಕ್ತಿ ಉಳ್ಳ ಗ್ರಾಮೀಣ ಪ್ರತಿಭೆಯ ಕಥೆ ಇದು. ಆಕೆಯನ್ನು  ನಗರದ ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಆಕೆಯ ಕನಸು ಪೊರೆಯುವ ಕೋಚ್ ರಾಣ ಸಿಗುತ್ತಾರೆ. ಎರಡು ಹೆಣ್ಣುಮಕ್ಕಳ ತಂದೆ ಯಶ್ ಪಾಲ್  ಆಗಿ ನಟಿಸಿರುವ ವಿಕ್ಕಿ ಅಹುಜ ಪಾತ್ರವನ್ನು ನೋಡುವಾಗ ಆಮೀರ್ ಖಾನ್ ಅವರ ದಂಗಲ್ ನೆನಪಾಗುತ್ತದೆ. ಆ ಕಥೆಗೂ ಈ ಕಥೆಗೂ ಯಾವುದೇ ಹೋಲಿಕೆ ಇಲ್ಲ, ದಂಗಲ್ ಸಿನಿಮಾ ಕಥೆಯಂತೆ ಇದರಲ್ಲೂ ಸಹಿತ ತಂದೆ ತನ್ನೆರಡು ಹೆಣ್ಣುಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಕಷ್ಟು ಕಷ್ಟ ಪಡುತ್ತಾರೆ. ಅನನ್ಯ ಅಗರ್ ವಾಲ್ ಪುಟ್ಟ ದುರ್ಗ,  ಅದ್ಭುತವಾಗಿ ನಟಿಸಿದ್ದಾಳೆ. ಅವರ ಭಾವನಾಗಿ ಅದ್ವಿಕ್, ತಾಯಿಯಾಗಿರಶ್ಮಿ, ಅಕ್ಕನಾಗಿ ಐಶ್ವರ್ಯ , ಕೋಚ್  ಪಾತ್ರದಲ್ಲಿ ಅಂಕುರ ನಯ್ಯರ್, ಅಲ್ಲದೇ ದುರ್ಗ ಬಾಲ್ಯ ಗೆಳೆಯರಾಗಿ ಮಾಡಿರುವ ಇಬ್ಬರು ಹುಡುಗರು  ಹಾಗೂ ಎಲ್ಲರೂ ಸಕತ್ತಾಗಿ ನಟಿಸಿದ್ದಾರೆ. ಪ್ರಸ್ತುತ ನಮ್ ದುರ್ಗ  ಶಾಲೆಯ ಟ್ರಸ್ಟಿ ಮೋಸಕ್ಕೆ ಒಳಗಾಗಿ ಐದು ವರ್ಷಗಳ ನಿರ್ಬಂಧ ಶಿಕ್ಷೆ ಅನುಭವಿಸುತ್ತಿದ್ದಾಳೆ. ತುಂಬಾ ಸರಳ ರೀತಿಯಲ್ಲಿ ಕಥೆಯನ್ನು ಅದೂ ವಾಸ್ತವಿಕ ಅಂಶಗಳ ಅಡಿಯಲ್ಲಿ ಹಣಿದು ಜನರ ಮುಂದೆ ಇಟ್ಟಿದ್ದಾರೆ ಈ ಧಾರವಾಹಿಯ ಟೀಮ್. ಚಂದದ ಧಾರವಾಹಿ.ಇದರ ಕಥೆ ಹಾಗೂ ನಿರ್ದೇಶನ  ಅದ್ಭುತ.

ಉಂಟೈ

Image result for pink flower

ಅಡುಗೆ ಕಾರ್ಯಕ್ರಮದ ನಿರೂಪಕರು ಅವರು ಮಾಡಿದ್ದಲ್ಲ ಬಂದವರು ಮಾಡಿದ್ದು ಉಣ್ಣುವ ಪಾಪಾತ್ಮರು. ಯಾಕೇಂದ್ರೆ ಬಂದವರು ಅಂತಿಂಥ ಅಡುಗೆ ಮಾಡಿ ಸುಮ್ಮನಾಗಲ್ಲ, ವೆರೈಟಿ ಮಾಡ್ತೀವಿ ಅಂತ ಏನೇನೇನೇನೇನೇನೇನೇನೇನೋ ಮಾಡಿ ಕಾರ್ಯಕ್ರಮದ ನಿರೂಪಕರ ಮುಂದೆ ಇಡುತ್ತಾರೆ.ಅಂತಹ ಏನೇನೇನೇನೇನೇನೇನೇನೇನೋ ವನ್ನು ತಿಂದು ಅರಗಿಸಿಕೊಳ್ಳಲಾಗದೆ ಪಾಪದ ನಿರೂಪಕರು ಜಾಗ ಖಾಲಿ ಮಾಡಿ ನೇರವಾಗಿ ಕಾಸ್ಮೆಟಿಕ್ ಸರ್ಜನ್ ಮುಂದೆ ಬಂದು ಕುಳಿತು ಸರ/ಮೇಡಮ್ಮು ಈ ವೇಯಿಟ್ ಕಡಿಮೆ ಆಗೋ ಹಂಗ ಮಾಡ್ರಲ ಎನ್ನುವ ಬೇಡಿಕೆ ಮುಂದಿಟ್ಟು, ಆ ಬಳಿಕ ನಟನೆ ಕಡೆಗೆ ಜಂಪ್ ಮಾಡಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೇ ಈ ಲಿಸ್ಟ್ ಗೆ ಬರದವರು  ಜೀ ಕನ್ನಡವಾಹಿನಿಯ ಮುರಳಿಯವರು. ಒಗ್ಗರಣೆ ಡಬ್ಬಿಯ ಮುರಳಿ ಅವರ ಧೈರ್ಯ -ಆ ಗಟ್ಟಿತನ ಕಂಡಾಗ ಅನ್ನಿಸುವ -ಹೊರಡುವ ಉದ್ಘಾರ ಹೀಗೂ ಉಂಟೈ! 
ಅದರಲ್ಲೂ ಇತ್ತೀಚೆಗೆ ಆರೋಗ್ಯ ರಕ್ಷಕರಿಬ್ಬರು ವಾರದಲ್ಲಿ ಬಂದು ಮುರಳಿ ಅವರಿಗೆ ಸೊಪ್ಪು ಸದೆ ಹಾಕಿ ಮಾಡಿಕೊಡುವ ಕಹಿ,ವಗರು ಕಷಾಯ  ಕುಡಿಯುತ್ತಾ, ಅವರ ಯಾವುದೇ ರಸೌಷಧಗಳಿಗೆ ಹೆದರದೆ ನಗುತ್ತಾ ಕಾರ್ಯಕ್ರಮ ನಡೆಸಿಕೊಡುವ ಮುರಳಿ ಅವರನ್ನು ಕಂಡಾಗ ವೀಕ್ಷಕರಿಗೆ ಪ್ರತಿಬಾರಿ ಅನ್ನಿಸುವು ಹೀಗೂ ಉಂಟೈ !!