ನಿನ್ನೆ ಒಂದು ರೀಲ್ ನೋಡಿದೆ, ಐಶ್ವರ್ಯ ರೈ ಬಚ್ಚನ್, ಆರಾಧ್ಯ ಮತ್ತು
ಅಭಿಷೇಕ್ ಬಚ್ಚನ್ ಇವರು ಅದೆಲ್ಲಿಂದಲೋ ಬರ್ತಾ ಇದ್ದರು. ಅವನ್ನು ತಮ್ಮ ಕ್ಯಾಮರಾ ಗಳಿಂದ ಸೆರೆ ಹಿಡಿಯುತ್ತಿದ್ದರು ಮಂದಿ. ಐಶ್ ತನ್ನ ಮಗಳನ್ನು ಪಕ್ಕಕ್ಕೆ
ಎಳೆದು ಕೊಂಡರು.ಅದೂ ತಾಯಿ ತನ್ನ ಕಂದನ ಬಗ್ಗೆ ತೋರಿದ ಕಾಳಜಿ.(ಏನೇನೋ ಟ್ರೋಲ್ ಮಾಡಿದ್ದರು ವರ್ಷದ
ಹಿಂದೆ ಈ ಮಗುವಿನ ಬಗ್ಗೆ..) ಆ ಮಗು ತಲೆವಾಲಿಸಿಕೊಂಡು
ನಸುನಗುತ್ತಾ ನಡೆಯುತಿದ್ದಳು. ಸಾಮಾನ್ಯವಾಗಿ ಆರಾಧ್ಯ ಳನ್ನು ರೀಲ್ ಗಳಲ್ಲಿ ಹೀಗೆ ನೋಡಿರುವುದು ಆ
ವಿಷಯ ಬೇರೆ. ಆ ಮಗುವಿನ ಬಗ್ಗೆ ಬರೆಯುವ ಕಮೆಂಟ್ ಗಳು, ಅಸೂಯೆ ಮಾತುಗಳು ಬೇಡವೇ ಬೇಡ ಅನ್ನಿಸುವಂತೆ
ಇರುತ್ತದೆ. ಇದು ಈಗಿನ ಮನಸ್ಥಿತಿಗಳ ಅನಾವರಣ.
ಕನ್ನಡದ ಸ್ಟೈಲೀಷ್ , ಸ್ಫುರದ್ರೂಪಿ ಹಾಗೂ ಅಪರೂಪದ ಪ್ರತಿಭೆ ಕಿಚ್ಚ
ಸುದೀಪ ಮಗಳು ಸಾನ್ವಿ ಸುದೀಪ ಕನ್ನಡ ಮಾತನಾಡದೆ ಇದ್ದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ, ಟ್ರೋಲು ಅದೂ
ಇದೂ ಎಲ್ಲಾ ಆಯಿತು. ಸಾನ್ವಿ ಕನ್ನಡ ಮಾತನಾಡದೇ ಇರುವ ಅಂಶ ನನಗೇನೂ ವಿಶೇಷಅನ್ನಿಸಲಿಲ್ಲ. ಬಹುತೇಕ
ಮನೆಗಳಲ್ಲಿ ಮಕ್ಕಳು ಹೆಚ್ಚು ಮಾತನಾಡುವುದು ಇಂಗ್ಲೀಷ್. ಕನ್ನಡವನ್ನೇ ಓದಬೇಕು, ಕನ್ನಡದಲ್ಲೇ ಬರೆಯಬೇಕು
ಅದೂ ಇದೂ ಎಂದು ಜೋರಾಗಿ ಮಾತನಾಡುವ ಮತ್ತು ಸಿಕ್ಕಾಪಟ್ಟೆ ಬರೆಯುವ ಬಹುತೇಕ ದೃಶ್ಯ ಮತ್ತು ಎಲ್ಲಾ ಮಾಧ್ಯಮಗಳ
ಮಂದಿಯ ಬಹುತೇಕ ಮಕ್ಕಳು ಹೀಗೆ ಇರುತ್ತಾರೆ. ಇದು ನಾನು ಮತ್ತು ನನ್ನಂತಹವರು ಕಂಡ ಸತ್ಯ. ನನ್ನ ಕಸಿನ್ ಒಬ್ಬ
ಅತ್ಯತ್ತಮವಾಗಿ ಕನ್ನಡ ಸಾಹಿತ್ಯ, ವಚನ, ಪುರಾಣ ಬಲ್ಲಂತಹವನು,. ವೃತ್ತಿಯಲ್ಲಿ ವಕೀಲ ಅವನಿಗೊಬ್ಬ ಮಗಳು
ಅವಳು ಕನ್ನಡದಲ್ಲಿ ಮಾತನಾಡಿದ್ದು ಕೇಳೇ ಇಲ್ಲ. ಸೆಲೆಬ್ರಿಟಿ ವಕೀಲ,( ದರ್ಶನ್ ಕೇಸ್ ನಲ್ಲಿ ಟಿವಿ ನೈನ್ ಮಂದಿ ಅವನ
ಮುಂದೆ ಮೈಕ್ ಹಿಡಿದು ಅಭಿಪ್ರಾಯ ಕೇಳುತ್ತಿದ್ದರು. ಆ ವಿಷ್ಯ ಬಿಡಿ!)ಕನ್ನಡ ಪ್ರೇಮಿ ಆದರೆ..! ಇದೇನು
ಅಸಹಜ ಅಲ್ಲವೇ ಅಲ್ಲ ಈಗಿರುವ ಪರಿಸ್ಥಿತಿಯಲ್ಲಿ. ನಿಜ ಹೇಳಬೇಕೆಂದರೆ ಅಂತಹ ಮಕ್ಕಳಿಗೆ ಕನ್ನಡ ಜ್ಞಾನ
ತುಂಬಾ ಚೆನ್ನಾಗಿ ಇರುತ್ತದೆ. ಸಮಯ ಬಂದಾಗ ಅದು ಅನಾವರಣ ಆಗುತ್ತದೆ. ಸಾನ್ವಿ ಇದಕ್ಕೆ ಹೊರತಲ್ಲ.ಸುದೀಪನನ್ನು
ಕಂಡ್ರೆ ನನಗೆ ಇಷ್ಟ ಅಂತ ಈ ಮಾತು ಹೇಳ್ತಾ ಇಲ್ಲ. ಇದು ನಿಚ್ಚಳ ಸತ್ಯ. ಆತ ಸೂಪರ್ ಮ್ಯಾಕ್ಸ್ ಸ್ಟಾರ್
ಆಗಿದ್ದಕ್ಕೆ ಜನ ಆ ಅಂಶವನ್ನು ಹೈಲೈಟ್ ಮಾಡ್ತಾ ಇದ್ದಾರೆ.
No comments:
Post a Comment