ಘನತೆ

 

ಜಗ್ಗೇಶ್‌ ಕನ್ನಡದ ಅಪರೂಪದ ಕಲಾವಿದರು. ಹೆಚ್ಚಾಗಿ ತಮ್ಮ ಲೂಸ್‌ ಟಾಕ್‌ ನಿಂದ ಹೆಚ್ಚು ಜನರ ಗಮನ ಸೆಳೆದವರು.ಜಗ್ಗಣ್ಣನ ಬಗ್ಗೆ ಹೇಳುವಾಗ  ಸಾಮಾನ್ಯವಾಗಿ  ನೆನಪಿಗೆ ಬರುವ ಅಂಶಗಳು.. ಗುರು ರಾಘವೇಂದ್ರ ಸ್ವಾಮಿ, ಹಾಸ್ಯ, ಅಪರೂಪದ ನಟ, ಯಾವುದನ್ನು ಯಾವಾಗ ಹೇಗೆ ಹೇಳಬೇಕೆಂದು ತಿಳಿಯದ ವ್ಯಕ್ತಿತ್ವ ಮತ್ತು ರೀಲ್ಸ್..‌

ಅವರು  ಬಿಗ್‌ ಬಾಸ್‌ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ವರ್ತೂರ್ ಸಂತೋಷ್‌ ಅವರ ಒಂದು ಹುಲಿಯುಗುರಿನ ಕಥೆಯ ಬಗ್ಗೆ ಹೇಳುತ್ತಾ ಯಾವೋನೋ ಕಿತ್ತೊದವನು ರೀಲ್ಸ್‌ ಮಾಡಿಕೊಂಡು ಇದ್ದವ ಅದ್ಯಾವುದೋ ಚಾನಲ್‌ ಪ್ರೋಗ್ರಾಂ ಅದರಿಂದ ತನಗೆ ಎದುರಾದ ಕಷ್ಟ , ಜನರ ಕೆಟ್ಟ ಕಮೆಂಟ್‌ ಹೀಗೆ ತಮ್ಮ ಮಾತಿನ ಝರಿ ಹರಿದು ಬಿಟ್ಟಿದ್ದರು‌ ಸಿನಿಮಾ ಪ್ರಮೋಷನ್‌ ಕಾರ್ಯಕ್ರಮದಲ್ಲಿ. . ಅದನ್ನು ಆಗ ವೀಕ್ಷಿಸಿದಾಗ ನನಗೆ ಸಿಕ್ಕಾಪಟ್ಟೆ ನಗು ಬಂದಿತ್ತು,

ನಿಮ್ಮ ಮಾತಿನ ಶೈಲಿಗಲ್ಲ… ವರ್ತೂರ್‌ ಸಂತೋಷ್‌ ಎನ್ನುವ ಸ್ಪರ್ಧಿಯೊಂದಿಗೆ ನಿಮ್ಮನ್ನು ಹೋಲಿಸಿಕೊಂಡಿದ್ದಕ್ಕೆ. ಆತನ ರೀಲ್ಸ್‌ ಬಗ್ಗೆ ನೀವು ಕೆಂಡ ಕಾರಿದ್ದಕ್ಕೆ.. ನೀವು ನೋಡಿದ್ದೀರೋ ಇಲ್ಲವೋ ವರ್ತೂರ್‌ ರೀಲ್ಸ್‌ ನಾನಂತೂ ನೋಡಿದ್ದೀನಿ. ಒಂದು ಹೋಟೆಲ್‌ ನಲ್ಲಿ ಕುಳಿತು ಈ ಚಿಕನ್‌ ಗೆ ಪೆಪ್ಪರ್‌ ಕಡಿಮೆ ಹಾಕಿದಾರೆ, ಉಪ್ಪು ಇನ್ನೂ ಸ್ವಲ್ಪಾ ಬೇಕಾಗಿತ್ತು.. ಇಂತಹ ಮಾತುಗಳಿರುವ ಪುಟ್ಟ ರೀಲ್ಸ್. ಇಲ್ಲಂದ್ರೆ ತಮ್ಮ ಹಳ್ಳಿಕೇರಿ ದನದ ಬಗ್ಗೆ ಇಂತಹ ವಿಷಯಗಳಷ್ಟೇ.. ಆದರೇ ಸಿನಿಮಾ ಕ್ಷೇತ್ರದಲ್ಲಿ ನಿಮ್ಮದೇ ಆದಂತಹ ಛಾಪು ಇದೆ.,ಈ ಕ್ಷೇತ್ರದಲ್ಲಿ  ಗೆಲುವು- ಸೋಲು ಕಂಡಿದ್ದು ಅದೊಂದು ಭಾಗವಷ್ಟೇ , ರಾಜಕೀಯದಲ್ಲಿ ಸಹ ರಾಯರ ದಯೆಯಿಂದ ಉತ್ತಮ ಭವಿಷ್ಯ ಕಂಡಿರುವ ನೀವು ಟೀಕೆಗಳನ್ನು ನೆಗೆಲೆಕ್ಟ್‌ ಮಾಡಿ ವರ್ತೂರ್‌ ಸಂತೋಷನ್ನು ನಿರ್ಲಕ್ಷಿಸಿದ್ದರೆ  ಹೆಚ್ಚು ಘನತೆಯಿಂದ ಕೂಡಿರುತ್ತಿತ್ತು.

ರಾಘವೇಂದ್ರ ರಾಯರ ಪರಮ ಭಕ್ತರಾದ ನಿಮ್ಮ ಬಗ್ಗೆ ಜಾತಿ, ಪಕ್ಷ ಅನ್ನದೇ ಅನೇಕಾನೇಕ ರಾಯರ ಭಕ್ತರು ಇಷ್ಟ ಪಡುತ್ತಾರೆ. ಆದರ್ಶ ಮಾಡಿಕೊಂಡಿದ್ದಾರೆ ಜಗ್ಗಣ್ಣ.ನೀವು ಯಾವಾಗ ಪಕ್ಷ ಬದಲಿಸಿ ಆ ಪಕ್ಷದಿಂದ ಉತ್ತಮ ಭವಿಷ್ಯ ಪಡೆದುಕೊಂಡಿರೋ ಅಂದಿನಿಂದ ನಿಮ್ಮ ಶತ್ರುಪಡೆ ಹೆಚ್ಚಾಯಿತು. ಗೆದ್ದವರು ಇರುವ  ಕಡೆ  ಅಸೂಯೆ ಪಡುವವರು ಇದ್ದೇ ಇರುತ್ತಾರೆ. ಜೀಕನ್ನಡ ದಲ್ಲಿ ಇನ್ನೂ ಉತ್ತಮ ಪ್ರತಿಭೆಗಳು ಹಾಸ್ಯಕ್ಕಷ್ಟೇ ಮಹತ್ವ ಕೊಡುವ ಕಾರ್ಯಕ್ರಮ ನೀಡಿ ಸದಭಿರುಚಿಯ ವೀಕ್ಷಕರ ಹತ್ತಿರ ಆಗಿ.. ಆದಷ್ಟು ಬೇಗ..

ಯಾವುದೇ ಕಾರ್ಯಕ್ರಮ ಇರಲಿ ಅದನ್ನು ನಡೆಸಿಕೊಡುವವರು, ಹಿನ್ನಲೇ ಧ್ವನಿ , ನಿರೂಪಣೆ ಹೀಗೆ ಕೆಲವೊಂದು ಅಂಶಗಳ ಅಡಿಯಲ್ಲಿ ವೀಕ್ಷಕರನ್ನು ಸೆಳೆಯುತ್ತದೆ. ನಿರ್ದಿಷ್ಟ ಕಾರ್ಯಕ್ರಮದಲ್ಲಿ ನಿರ್ದಿಷ್ಟ ವ್ಯಕ್ತಿತ್ವನ್ನು ಬಯಸುವುದು ಸಾಮಾನ್ಯ. ಸರೆಗಮಪ ದಲ್ಲಿ ರಾಜೇಶ್‌ ಕೃಷ್ನ್‌, ಅರ್ಜುನ್‌ ಜನ್ಯ, ವಿಜಯ ಪ್ರಕಾಶ್‌, ಚಂದನದ ಥಟ್‌ ಅಂತ ಹೇಳಿ ಯಲ್ಲಿ ಡಾ. ನಾ. ಸೋಮೇಶ್ವರ್‌, ಬಿಗ್‌ ಬಾಸ್‌ ನಲ್ಲಿ ಸುದೀಪ, ವೀಕೆಂಡ್‌ ನಲ್ಲಿ ರಮೇಶ್‌ ಹೀಗೆ…..!

ಸರೆಗಮಪ ಜೀ ಕನ್ನಡ ವಾಹಿನಿಯ ಪ್ರತಿಷ್ಠಿತ ಸುಂದರ ಕಾರ್ಯಕ್ರಮ. ಅದರ ಬಗ್ಗೆ ಅನೇಕಾನೇಕ ಪಾಜಿಟಿವ್‌, ನೆಗೆಟಿವ್‌ ಅಭಿಪ್ರಾಯಗಳು ಕೇಳಿಬಂದರೂ ಒಟ್ಟಾರೆಯಾಗಿ ಹೇಳುವುದಾದರೆ ಇಷ್ಟ ಆಗುವ ರಿಯಾಲಿಟಿ ಷೋ. ಈ ಬಾರಿ ಜಡ್ಜ್ ಗಳಾಗಿ ರಾಜೇಶ್‌ ಕೃಷ್ಣನ್‌ ಮತ್ತೇ ಸ್ಥಾನ ಅಲಂಕರಿಸಿದ್ದಾರೆ. ಸುಮಧುರ ಕಂಠಸಿರಿ ಅವರ ಹಾಡುಗಳು ಅಹ್‌ ..! ಅರ್ಜುನ್‌ ಜನ್ಯ ರಂತಹ ಅಪರೂಪದ ಸಂಗೀತ ನಿರ್ದೇಶಕ ಮತ್ತು ವಿಜಯ್‌ ಪ್ರಕಾಶ್‌ ರಂತಹ ಬಹುಮುಖ ಪ್ರತಿಭೆ ಸಮ್ಮಿಳನದಿಂದ  ವೀಕೆಂಡ್‌ ಚೆನ್ನಾಗಿ ಕಳೆಯುವಂತೆ ಮಾಡುತ್ತದೆ. ಈ ಕಾರ್ಯಕ್ರಮದ ಮುಖ್ಯ ಸಾರಥಿ ರಾಜೇಶ್‌ .. ಆರಂಭಿಕ ದಿನಗಳಲ್ಲಿ ಈ ಟೀವಿ ಕನ್ನಡ ವಾಹಿನಿಯಲ್ಲಿ ಎಸ್‌ ಪಿ ಬಿ ಅವರ  ಸಂಗೀತ ರಿಯಾಲಿಟಿ ಷೋ ಎದುರು ಜೀ ವಾಹಿನಿಯ ಸರೆಗಮಪ ಫಾಮ್‌ ಗೆ ಬರುವಂತೆ ರಾಜೇಶ್‌  ಮತ್ತು ಟೀಂ ಮಾಡಿದ ಪ್ರಯತ್ನ ನೆನಪಲ್ಲಿದೆ. ಮತ್ತೇ ಆ  ಜಾಗಕ್ಕೆ ಬಂದಿದ್ದು ಖುಷಿ ಆಯ್ತು. 



No comments: