ಸಾಮಾನ್ಯವಾಗಿ ಸಿನಿಮಾ ರಿವ್ಯೂ ಗಳನ್ನು ಹೆಚ್ಚಾಗಿ ಪತ್ರಕರ್ತರು ಬರೆಯುವುದಕ್ಕಿಂತ
ಮೊದಲೇ ಸಿನಿಮಾರಂಗದ ಮಂದಿ ಸೋಷಿಯಲ್ ಮೀಡಿಯಾದಲ್ಲಿ ಬರೆದು ಇಷ್ಟೇ ಅದರ ಕಥೆ ಎಂದು ನಿರ್ಧರಿಸಿ ಬಿಡುತ್ತಾರೆ.
ಉಪೇಂದ್ರ ಅವರ ಯು ಐ ಮೊದಲು ರಿವ್ಯೂ ಓದಿದ್ದು ಸಿನಿ ಕ್ಷೇತ್ರದ ಒಬ್ಬರು ಬರೆದದ್ದು. ಆನಂತರ ಸಿನಿ
ಪ್ರೇಮಿ ಒಬ್ಬರು ಬರೆದ್ದು ಓದಿದೆ. ಸಿನಿಪ್ರೇಮಿ ಅವರ ಬರಹ ಚೆನ್ನಾಗಿತ್ತು. ಸದಾ ಸಿನಿ ಪತ್ರಕರ್ತರ
ಬಗ್ಗೆ ಕೆಟ್ಟಕೋಪ ಇರುವ ಸಿನಿ ಮಂದಿ ಅವರ ಮನೆಯವರೇ ಅಂದರೆ ಸಿನಿಮಾ ಮಂದಿ ಬರೆಯುವ ವಿಮರ್ಶೆ ತಡೆದರೆ
ಸಿನಿಮಾ ಬಹುತೇಕ ಹಿಟ್ ಆದಂತೆ. ಹಾಗೇ ಮಾಡೋಕೆ ಸಾಧ್ಯವೇ ಇಲ್ಲ..ಅಲ್ವೇ!
ಹೀಗೆ ವಾಹಿನಿಗಳನ್ನು ಬದಲಾಯಿಸುವಾಗ ಮೇಘಾಲಯ, ಅಸ್ಸಾಂ,ಮಿಜೋರಾಮ್,
ತ್ರಿಪುರ ಹೀಗೆ ಒಟ್ರಾಶಿ ಬೇರೇ ಬೇರೆ ಭಾಷೆಗಳ ದೂರದರ್ಶನ ನೋಡಿದೆ.ಕಾಶ್ಮೀರ್ ದೂರದರ್ಶನದಲ್ಲಿ ಪಾಕಿಸ್ತಾನ್
ರಿಪೋರ್ಟರ್ ಎನ್ನುವ ಅರ್ಧಗಂಟೆ ನ್ಯೂಸ್ ನೋಡಿದೆ. ಪಾಕಿಸ್ತಾನದ ವಿದ್ಯಮಾನಗಳ ಬಗ್ಗೆ ತಿಳಿಸುತ್ತಾರೆ
ಸುದ್ದಿಯಲ್ಲಿ ಅರ್ಧದಷ್ಟು ಸಾವಿನ ಸುದ್ದಿ, ಆದರೂ ವಾರ್ತೆಯನ್ನು ಓದುವ ಹೆಣ್ಣುಮಗಳ ಕಾನ್ಫಿಡೆನ್ಸ್
ಇಷ್ಟ ಆಯಿತು. ಅದಾದ ಬಳಿಕ ಲಡಕ್ ನ್ಯೂಸ್ ಬಂತು ಸ್ವಲ್ಪ ಬೆಚ್ಚಿಬೀಳುವಂತೆ ಗಾಬರಿ ಗಾಬರಿ ಮುಖ..
ಮೇಘಾಲಯ ಮತ್ತು ಅಸ್ಸಾಂ ದೂರದರ್ಶನ ಲೋಗೊ ಥೇಟ್ ಜೀ ನ್ಯೂಸ್ ನಂತೆ
ಇತ್ತು. ಆ ವಾಹಿನಿಗಳ ಫ್ಯಾನ್ ಆದೆ .. ಆಗಾಗ ನೋಡೋಕೆ ಸಿಕ್ತು ಒಂದಷ್ಟು ಬೇರೆ ಬೇರೆ ಭಾಷೆಗಳ ದೂರದರ್ಶನ..
No comments:
Post a Comment