Posts

Showing posts from July 13, 2014

ಭಾವನೆ...ಭಾವನೆ...!

Image
ದೇವರು, ಯತಿಗಳು, ಸಂತರು ಹೀಗೆ ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಸ್ವಲ್ಪ ಹೆಚ್ಚಿನ ಜಾಗರೂಕತೆ ಇರಬೇಕು ಯಾರೇ ಮಾತನಾಡಲಿ. ಆದರೆ ಇಂತಹ ವಿಷಯ ಅದರಲ್ಲೂ ಹಿಂದೂ ಧಾರ್ಮಿಕ ಭಾವನೆಗಳ ಬಗ್ಗೆ ಸ್ವಲ್ಪ ಜಾಸ್ತಿನೆ ಹಗುರವಾಗಿ ಮಾತಾಡೋ ಮಂದಿ ಇತರ ಧರ್ಮಗಳ ಬಗ್ಗೆ ಅದಿನ್ಯಾವ ಮಟ್ಟದ್ದು ವಿಶ್ವಾಸವು ಇರದು. ನಿಜ ಯಾವುದು ಅತಿ ಆಗ ಬಾರದು . ಯಾಕೆಂದ್ರೆ ಧರ್ಮ-ಜಾತಿಯು ಹೆಚ್ಚು   ಮನುಷ್ಯ ಮನುಷ್ಯರ ನಡುವೆ ಅತಿ ದೊಡ್ಡ ಕಂದರ ಏರ್ಪಡಿಸಿ ಬಿಡುತ್ತದೆ. 

ನಾನು ಎಲ್ಲ ಧರ್ಮಗಳ ಗುರುಗಳನ್ನು ಹೆಚ್ಚು ಗೌರವಿಸುತ್ತೇನೆ. ಸಾಮಾನ್ಯವಾಗಿ ಅನೇಕ ಧರ್ಮಗಳ ಸಂತರ ರಚನೆ ಓದಿದ್ದೇನೆ. ನಮ್ಮ ತಾಯಿಯನ್ನು ಅತಿ ಹೆಚ್ಚು ಆಕರ್ಷಿಸಿರುವುದು ಕಬೀರ್ ದೋಹ..!  .. ಗೌರವ ಬೇರೆ ಬೇರೆ... ಭಾರತದಂತಹ ದೇಶದಲ್ಲಿ ಎಲ್ಲ ಧರ್ಮದ ಜೊತೆಜೊತೆಯಲ್ಲಿ ಬೆಳೆಯುವುದು ಸಾಮಾನ್ಯ ಸಂಗತಿ. 

ಈಗ ಅತಿ ಹೆಚ್ಚು ಮಾತಿಗೆ ಸಿಕ್ಕಿರುವುದು ಶಿರಡಿ ಸಾಯಿ ಬಾಬ ಅವರ ಸಂಗತಿ. ಅವರು ಏನೇ ಆಗಿರಲಿ, ಹೇಗೆ ಇರಲಿ ಅಪಾರ ಸಂಖ್ಯೆಯ ಭಕ್ತರ ಆಪ್ತ ಬಂಧು. ನಮ್ಮ ಮನೆಯಲ್ಲಿ ನಮ್ಮ ತಾನಿಂದ ಈಗಿನವರೆಗೂ ಅತೀ ಹೆಚ್ಚು ನಂಬಿರುವ ಗುರುಗಳು. ಕ್ಷಣ ಕ್ಷಣ   ಜಪಿಸುವುದು ಮನ ಸಾಯಿ ಸಾಯಿ ಅಂತ. ನಮ್ಮಂತಹ ಪಾರ ಭಕ್ತರು ಇದ್ದಾರೆ ಈ ದುನಿಯಾದಲ್ಲಿ.
ಅದೇ ರೀತಿ ನಮ್ಮ ರಾಘವೇಂದ್ರ ರಾಯರು ಸಹ ಭಕ್ತರ ಕಾಮಧೇನು. ಅವರ ನೆನೆಯದ ದಿನವಿಲ್ಲ,.. ರಾಯರು ಅಪರೋಕ್ಷ ಜ್ಞಾನಿಗಳು..ಇವೆಲ್ಲ ನಮ್ಮಂತಹ  ಭಕ್ತರ ನಂಬಿಕೆ..ಆದರೆ ಕೆಲವು ಸಂಗತಿ…

ತಮಾಷೇನೆ ಅಲ್ಲ

Image
ಜೀ ಹಿಂದಿ   ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಇಂಡಿಯಾ'ಸ್ ಬೆಸ್ಟ್ ಸಿನಿ ಸ್ಟಾರ್ ಕಿ  ಖೋಜ್ ಆಡಿಶನ್ ಬಗ್ಗೆ ಈ ಮೊದಲೇ ಹೇಳಿದ್ದೆ. ಇಂತಹ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಆಪ್ತ ಅನ್ನಿಸೋದು ನನಗೆ ಆ ಸ್ಪರ್ಧಿಗಳ   ಮೊದಲ ಹಂತದ ಭಾಗವಹಿಸುವಿಕೆ.. ಗೆಲ್ಲ ಬೇಕೆನ್ನುವ ಕಾತುರ, ಭವಿಷ್ಯದ ಬಗ್ಗೆ ಅತಿಯಾದ ನಿರೀಕ್ಷೆ.. ಹೀಗೆ ಹತ್ತು ಹಲವಾರು ಸಂಗತಿಗಳು. 
ಈ ಕಾರ್ಯಕ್ರಮದಲ್ಲಿ ತೀರ್ಪುಗಾರ್ತಿ ಗಳಲ್ಲಿ ಒಬ್ಬರಾದ ಸೊನಾಲಿ ಬೇಂದ್ರೆ ಮೂಗನ್ನು ಒಬ್ಬ ಸ್ಪರ್ಧಿ ಡ್ಯಾನ್ಸ್ ಮಾಡಿಕೊಂಡು ಟಚ್ ಮಾಡಿದ.. ಅದು ತಪ್ಪು ನಿಜ ಆದರೆ ಆಕೆ ಕೋಪ ಮಾಡಿಕೊಂಡರು ಸಹ ಆ ಬಳಿಕ ಆ ಪ್ರತಿಭೆಗೆ ಅವಕಾಶ ನೀಡಿದ್ದು....! 
ಆ ಕಾರ್ಯಕ್ರಮದ ತೀರ್ಪುಗಾರ ಆಯುಷ್ಮಾನ್ ಜಾಸ್ತಿ ಇನ್ವಾಲ್ವ್.. ಗುಳಿಗಲ್ಲದ ಈ ತೀರ್ಪುಗಾರ ನಿರೂಪಣೆ ಮಾಡುವಾಗಲು , ನಟಿಸಿದಾಗಲು ಮನ ಸೆಳೆದಿದ್ದರು. ಅದೇರೀತಿ ಜಡ್ಜ್ ಆದಾಗಲೂ
ಆದರೆ ಈ ಕಾರ್ಯಕ್ರಮದಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸಿದ ತೀರ್ಪುಗಾರ ವಿಜಯ್ ಕೃಷ್ಣ  ಅಚಾರ್ಯ್... ಬರೆಯುವವರು ಸಾಮಾನ್ಯವಾಗಿ ತಮ್ಮ ಶಕ್ತಿಯನ್ನು ಅದರತ್ತ ಕೇಂದ್ರೀಕರಿಸಿ ಬಿಡ್ತಾರೆ ಅನ್ನೋದಕ್ಕೆ ಇವರೇ  ಸಾಕ್ಷಿ. ವಿಕ್ಟರಿ ಆಚಾರ್ಯ ಬಗ್ಗೆ ಧೂಮ್ 3  ನೋಡಿದವರಿಗೆ ಮಾತ್ರ ಗೊತ್ತು. ಬಾಲಿವುಡ್ ನ ಚಿತ್ರ ಸಾಹಿತಿ, ಚಿತ್ರಕತೆಗಾರ, ಸಂಭಾಷಣೆಕಾರ, ನಿರ್ದೇಶಕ .. ಎಲ್ಲವು ಈ ಈ ಆಚಾರ್ಯರ ಪದ ತಳದಲ್ಲಿ ವಾವ್! ನೀವು ಸ್ವಲ್ಪ ಮಾತಾಡಿ ವಿಕ್ಟರಿ .. ಸುಮ್ಮನೆ ಇದ್ರೆ ಆಯುಷ್ಮಾನ್ …

ಡಿವೈನ್ ಪಾರ್ಕ್

Image
ಶ್ರೀ ಶಂಕರ ವಾಹಿನಿಯಲ್ಲಿ ಪ್ರತಿ ಗುರುವಾರ ರಾತ್ರಿ 9.30 ಕ್ಕೆ ಡಿವೈನ್ ಪಾರ್ಕ್ ಕಾರ್ಯಕ್ರಮ ಪ್ರಸಾರ ಆಗುತ್ತದೆ. ಹೆಸರೇ ತಿಳಿಸುವಂತೆ ಅದು ದೇವರು,ಆತನಿಗೆ ಸಂಬಂಧಿತ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ ಡಾ. ಚಂದ್ರ ಶೇಖರ್ ಉಡುಪ ಅವರು. ಯಾವುದೇ ಪ್ರಶ್ನೆ ಇರಲಿ ನೀಡುವ ಉತ್ತರ ಮನಸ್ಸಿಗೆ ಆಪ್ತ ಅನ್ನಿಸುತ್ತದೆ. ಆಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರಿಗೆ ಹೆಚ್ಚು ಇಷ್ಟ  ಆಗುವಂತಹ  ಕಾರ್ಯಕ್ರಮ.ಶಂಕರ ವಾಹಿನಿಯಲ್ಲಿ ಪ್ರಸಾರ ಆಗುವಂತೆ ಆಸ್ಥ, ಸಂಸ್ಕಾರ್,ಭಕ್ತಿ ಯಾವುದೇ ಚಾನೆಲ್  ಆಗಿರಲಿ ಒಟ್ಟಾರೆ ಇಷ್ಟ ಆಗುತ್ತದೆ. ಆದರೆ ಶಂಕರದಲ್ಲಿನ ಡಾಕ್ಟರ್ ಕಾರ್ಯಕ್ರಮ ಅದ್ಭುತ !
ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ಅದರಲ್ಲೂ ಪ್ರವಚನಗಳು ಸಹ ಚಂದ ಇರುತ್ತದೆ.
@@ಇದೆ ವಾಹಿನಿಯಲ್ಲಿ ಭಜನ್ ಕಾರ್ಯಕ್ರಮ ಸಹ ಸಕತ್ ಚೆನ್ನಾಗಿದೆ. ಮುಖ್ಯವಾಗಿ ಇದರಲ್ಲಿ ಇರುವಭಿನ್ನತೆ ಸಾಕಷ್ಟು ಗಮನ ಸೆಳೆಯುತ್ತದೆ. ತಮಿಳು ಭಾಷೆ ಬರುವವರಿಗೆ ಸ್ವಲ್ಪ ಹೆಚ್ಚೇ ಇಷ್ಟ ಆಗುತ್ತದೆ.


@ ಸಾಮಾನ್ಯವಾಗಿ ನಾನು ಜೆಮಿನಿ ಕಾಮಿಡಿ ಮತ್ತು ಉದಯ ಕಾಮಿಡಿಯನ್ನು ಆಗಾಗ ನೋಡುತ್ತೇನೆ. ನನಗೆ ತೆಲುಗಿನಲ್ಲಿ  ಬ್ರಹ್ಮಾನಂದಂ ಮತ್ತು ಕನ್ನಡದಲ್ಲಿ ಸಾಧು ಬಾರಿ ಲೈಕ್ ಆಗುತ್ತೆ...
ನಿಜ ಕೆಲವು ಬಾರಿ ಅತಿರೇಕ ಅನ್ನಿಸೋದು ಸಹಜ ಆದರೆ ಇಷ್ಟ ಆಗುತ್ತೆ ಅವರಿಬ್ಬರ ನಟನೆ..
ಇತ್ತೀಚಿಗೆ ಒಂದು ಸಂಗತಿ ಓದಿದೆ ಬ್ರಹ್ಮಾನಂದಂ ಅವರು ಅತ್ಯಂತ ಬ್ಯುಸಿ ಇರುವಕಮೆಡಿಯನ್. ಅವರ ಕಾಲ್ಶೀಟ್ ಸಿಕ್ದೇ ಇದ್ರ…

ತಿಳಿ ಹಾಸ್ಯದ ಶೈಲಿ

Image
ಅಡುಗೆ ಕಾರ್ಯಕ್ರಮ ಎಲ್ಲ ಚಾನೆಲ್ ಗಳಲ್ಲೂ ಬರುತ್ತದೆ. ಅದು ಎಲ್ಲರಿಗು ಗೊತ್ತೇ ಇದೆ.. ಅಡುಗೆ ಮಾಡುವವರಿಗಿಂತ ಆ ಕಾರ್ಯಕ್ರಮದ ನಿರೂಪಕರಿಂದ ಕಾರ್ಯಕ್ರಮ ಜೀವಂತ ಆಗಿರುತ್ತದೆ.  ಜೀವಂತಿಕೆ ಇರುವಂತೆ ಮಾಡುವುದರಲ್ಲಿ ಜೀ ಕನ್ನಡ ವಾಹಿನಿ ಮುರಳಿ ಸೇರ್ತಾರೆ.. ತಿಳಿ ಹಾಸ್ಯದ ಶೈಲಿ ಆಕರ್ಷಕವಾಗಿರುತ್ತದೆ .ಸಾಮಾನ್ಯವಾಗಿ ಅಡುಗೆ ಕಾರ್ಯಕ್ರಮಗಳಲ್ಲಿ ಹೆಣ್ಣು ಮಕ್ಕಳು ನಿರೂಪಣೆ ಮಾಡುತ್ತಾರೆ. ನಮ್ಮ ಪುರಾಣ ಇತಿಹಾಸದಲ್ಲಿ ಗಂಡುಮಕ್ಕಳೇ   ಉತ್ತಮ ಅಡುಗೆ ಮಾಡುವವರು,ಅದೇ ರೀತಿ ನಮ್ಮಲ್ಲಿ ಈಗ ಬೃಹತ್ ಕಾರ್ಯಕ್ರಮದಲ್ಲಿ ಏನೇ ಆದರೂ ಅಡುಗೆಯವರು ಗಂಡಸರೇ.  ಹಾಗಿದ್ದರು ಛೆ! ಅಡುಗೆ ಕಾರ್ಯಕ್ರಮ ನೋಡ ಬೇಕಾಗಿರೋದು ಮತ್ತು ನಡೆಸಿಕೊಡ ಬೇಕಾಗಿ ಇರುವವರು ಹೆಂಗಸರು ! ಆದರೆ ಮುರಳಿ ಸಕತ್ತಾಗಿ ನಡೆಸಿಕೊಡ್ತಾರೆ... ಮಾತಿನ ಶೈಲಿ  , ಮಾತನಾಡುವ ರೀತಿ ಇಷ್ಟ ಆಗುವಂತೆ ಇರುತ್ತದೆ..ಅತಿಯಾಗಿ ಮಾತುಕತೆ ಆಡಲ್ಲ !  
ಅಲ್ಲದೆ ಈ ಕಾರ್ಯಕ್ರಮಕ್ಕೆ ಬರುವವರಿಗೆ ಅನೇಕ ಸೌಲಭ್ಯಗಳನ್ನು ಸಹ ನೀಡುತ್ತಾರೆ. ಭಾಗವಹಿಸುವ ಸ್ಪರ್ಧಿಗಳಿಗೆ...! 


@@ಕಲರ್ ವಾಹಿನಿಯಲ್ಲಿ ಪ್ರಸಾರ ಆಗುವ ಸುಂದರ ಕಾರ್ಯಕ್ರಮಗಳಲ್ಲಿ ಜಾಲಕ್ ದಿಕ್ಲಾಜ ಸಹ ಒಂದಾಗಿದೆ. ಬಾಲಿವುಡ್ ನ ಮಹಾನ್ ತಾರೆಯರಾದ ಅಂದ್ರೆ ಅವರದ್ದೇ ಆದ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪ್ರತಿಭೆಗಳಾದ ಮಾಧುರಿ ದೀಕ್ಷಿತ್ ನೆನೆ, ರೆಮೋ ಡಿಸೋಜ ಮತ್ತು ಕರಣ್ ಜೋಹರ್ ಮೂರು ಜನ. ಸಾಮಾನ್ಯವಾಗಿ ಕೆಲವು ರಿಯಾಲಿಟಿ ಶೋಗಳಲ್ಲಿ ಬರುವ ಜಡ್ಜ್ ಗಳ…