ಆಸಕ್ತಿ

Image result for red flower images
ಡಿಯರ್  ಕಿಚ್ಚ ಸುದೀಪಾ,
ಸಾಮಾನ್ಯವಾಗಿ ಫೇರಿ ಟೇಲ್ಸ್ ಗಳಲ್ಲಿ ಏನೆಲ್ಲಾ ಕಷ್ಟಗಳನ್ನು ಎದುರಿಸಿದ್ರೂ ಸಹಿತ ಅಂತಿಮವಾಗಿ ನಾಯಕ ತನ್ನತನ ಉಳಿಸಿಕೊಂಡು ಗೆಲುವನ್ನು ಸಾಧಿಸುತ್ತಾನೆ. ಇಂತಹ ಕಥೆಗಳಲ್ಲಿ ಒಳ್ಳೆಯ ಮನದ ದೇವಮಾನವ ಇರುತ್ತಾನೆ. ಫೆರಿಟೇಲ್ ನಲ್ಲಿ ಎಲ್ಲವೂ ಚಂದ.. ಆ ಸ್ವಪ್ನಲೋಕ,ಆ ಅದ್ಭುತ ಪ್ರಪಂಚ  ವಾಹ್ .. ಯಾಕೆ ಈ ಮಾತನ್ನುನಿಮಗೆ ಹೇಳ್ತಾ ಇದ್ದೀನಿ ಅಂದ್ರೆ ನೀವು ಬಿಬಾ ಮನೆಯಲ್ಲಿರುವ ಸ್ಫರ್ಧಿಗಳನ್ನು ಭೇಟಿ ಮಾಡಲು ಹೋದಾಗ ನನಗೆ ಮೇಲೆ ಹೇಳಿದ ಅಂಶಗಳು ನೆನಪಿಗೆ ಬಂತು. ಅದರಲ್ಲೂ  ಮುಖ್ಯವಾಗಿ ಟಿವಿ-ಸಿನಿ ಮಂದಿ ಹೆಚ್ಚೇನೂ ಇಷ್ಟ ಪಡದ ಮುಟ್ಟಲು ಬೇಸರ ಪಡುವ ಸಮೀರನ ಜೊತೆ ನೀವು ನಡೆದುಕೊಂಡ ರೀತಿ ಅತ್ಯಂತ ಗೌರವಾನ್ವಿತ.ಇದರ ಬಗ್ಗೆ ಹೆಚ್ಚೇನೂ ಹೇಳಲ್ಲ.ಮುಂದೆ ಎಂದಾದರೂ, ಸಾಧ್ಯವಾದರೆ ಹೇಳ್ತಿನಿ... :-)
ನನಗೆ ಈ ಪಂದ್ಯದಲ್ಲಿ  ಸಮೀರಾ ಗೆಲ್ಲ ಬೇಕು ಎನ್ನುವ ಆಸೆ ಇದೆ. ಈ ಬಾರಿ ಯಾಕೆ ಆತ ಗೆಲುವಿನ ಕಿರೀಟ ಹೊಂದಬೇಕು ಎನ್ನುವುದರ ಬಗ್ಗೆ ವಿವರಿಸಲ್ಲ.ಮುಂದೆ ಹೇಳ್ತಿನಿ. ದೊಡ್ಡವರ ಸಣ್ಣತನ ನೋಡಿನೋಡಿ ಬೇಸತ್ತ ನನ್ನಂತಹ ಸಾಮಾನ್ಯರಿಗೆ ನಿಮ್ಮ ದೊಡ್ಡತನ ಹೆಚ್ಚು ಗೌರವ ಮೂಡಿಸಿತು.


Image result for red flower images
@ ಈ ಬಾರಿ ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಷೋ ಹತ್ತು ಹಲವಾರು ಕಾರಣಗಳಿಂದ ನನ್ನ ಗಮನ ಸೆಳೆದಿದೆ. ಅಂತಿಮ ಹಂತದತ್ತ ಹೆಜ್ಜೆ ಹಾಕುತ್ತಿರುವ ರಿಯಾಲಿಟಿ ಷೋನಲ್ಲಿ  ಈ ಬಾರಿ ಬಿಬಾ ಆದೇಶದಂತೆ  ಎಲ್ಲರು ನಾಮಿನೇಟ್ ಆಗಿರೋದು ಮತ್ತು ಐದು ಸಾವಿರ ಪಾಯಿಂಟ್ ಗಳನ್ನು ತಾವೇ ಕೈಯಾರೆ ಕಡಿಮೆ ಮಾಡಿಕೊಳ್ಳುತ್ತಿರುವ ಅಂಶವು ಸಹಿತ ಆಸಕ್ತಿಯಿಂದ ಕೂಡಿದೆ.
ದಿವಾಕರ್  ಇಲ್ಲಿ ತನಕ ಬಂದಿದ್ದು ಮಾತ್ರ ಅತ್ಯಂತ ಆಶ್ಚರ್ಯ. ತಪ್ಪು ಮಾಡಿದರು ಅಮಾಯಕತ್ವದ ಸೋಗಲ್ಲಿ ಸಮಾಧಾನ ಮಾಡಿ ಅನೇಕ  ವೀಕ್ಷಕರ ಮತ್ತು ಮನೆಯವರ ಕಣ್ಣಿಗೆ ಒಳ್ಳೆಯ ಮನುಷ್ಯನಾಗಿರುವ ಈ ಸ್ಫರ್ಧಿ ಸೋಮಾರಿ ಅನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ನಿವೇದಿತಾ ಮಾಡುವ ಪ್ರಯತ್ನದಲ್ಲಿನ ಅರ್ಧದಷ್ಟು ಸಹಿತ ಈತ ಮಾಡದೆ ಇದ್ದರೂ ಅದು ಹೇಗೋ ಇನ್ನು ಬಿಬಾ ಮನೆಯಲ್ಲಿ ಇದ್ದಾರೆ..
@@ಆಟದಲ್ಲಿ ಹೆಚ್ಚು ಆಸಕ್ತಿ ಉಂಟಾಗಬೇಕಾದರೆ ಡಬಲ್ ಎಲಿಮಿನೇಷನ್ ಆಗಬೇಕು ಮತ್ತು ಈ ಬಾರಿ ಶ್ರುತಿ ಮತ್ತು ದಿವಾಕರ್ ಎವಿಕ್ಟ್ ಆಗ ಬೇಕು .. ಆಗ ಸಖತ್ತಾಗಿರುತ್ತದೆ..

ಸ್ವಂತಿಕೆ


Image result for red flower images
ಕಲರ್ ಹಿಂದಿ ವಾಹಿನಿಯಲ್ಲಿ ಈವರೆಗೂ ಪ್ರಸಾರ ಆಗುತ್ತಿದ್ದ ಹಿಂದಿ ಬಿಗ್ಬಾಸ್  ಮುಗಿಯಿತು. ಸಲ್ಮಾನ್ BOY ಅವರ ನಿರೂಪಣೆಯ ಈ ರಿಯಾಲಿಟಿ ಷೋವನ್ನು  ನಾನು ಹೆಚ್ಚು ಆಸಕ್ತಿಯಿಂದ ವೀಕ್ಷಿಸುತ್ತಾ ಬಂದಿದ್ದೇನೆ. .ನನಗೆ ಹೆಚ್ಚು ಖುಷಿ ಕೊಟ್ಟ ಸಂಗತಿ ಅಂದ್ರೆ ಶಿಲ್ಪ ಶಿಂಧೆ ಅವರಿಗೆ ದೊರೆತ ಗೆಲುವು. ಕಂಗ್ರಾಟ್ಸ್ ಶಿಲ್ಪ.. ಹೊಸ ಬದುಕನ್ನು ಸಂತೋಷದಿಂದ ಮುಂದುವರೆಸಿ. ನಿಮಗೆ ಒಳ್ಳೆಯದಾಗಲಿ.
ಕೆಲವು ಸೀಸನ್ ಗಳನ್ನೂ ಹೆಚ್ಚು ಗಮನ  ಕೊಟ್ಟು ವೀಕ್ಷಿಸಿಲ್ಲವಾದರೂ ನೋಡೇ ಇಲ್ಲ ಎಂದು ಹೇಳೋಕೆ ಆಗಲ್ಲ, ಹಲವಾರು ಕಾರಣಗಳಿಂದ ಅದರ ಬಗ್ಗೆ ಬರೆಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಶಿಲ್ಪ ಶಿಂಧೆ ಮಾತ್ರವಲ್ಲ ಉಳಿದೆಲ್ಲಾ ಸ್ಫರ್ಧಿಗಳು ಸಹಿತ ಜಗಳ, ಅಸೂಯೆ, ಲೂಸ್ ಟಾಕ್ ಹೀಗೆ ಯಾವುದೋ ಒಂದು ರೀತಿಯಲ್ಲಿ ಗಮನ ಸೆಳೆದರೂ, ಶಿಲ್ಪ ಹೆಚ್ಚು ಇಷ್ಟ ಆಗಿದ್ದರು. ಭಾಬೀಜಿ ಶಿಲ್ಪ ತಮ್ಮ ಸ್ವಂತಿಕೆ ಮೂಲಕ ಗೆದ್ದಿದ್ದಾರೆ.ಬದುಕಿನಲ್ಲಿ ಎದುರಿಸಿದ ಕೆಟ್ಟ ಕಹಿಯು ಮರೆತು ಹೋಗುವಂತಹ ಅದ್ಭುತ ಯಶ ಅವರದ್ದಾಗಿದೆ.