ಕ್ರೌರ್ಯ

Image result for red flower images
ಲಾಡೂ ವೀರಪುರ್ ಕಿ ಮರ್ದಾನಿಎನ್ನುವ ಹೆಸರಿನ ಒಂದು ಧಾರವಾಹಿ ಕಲರ್ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ. ಅದರಲ್ಲಿ ಹೆಣ್ಣುಮಕ್ಕ್ಲಾ ಮೇಲೆ- ಅಮಾಯಕ ಜನರ ಮೇಲೆ ನಡೆಯುವ ದೌರ್ಜನ್ಯದ ಕಥೆಯಿದೆ. ಇದು ಕಾಲ್ಪನಿಕ ಕಥೆಯಾದರೂ  ಸಹಿತ  ಅನೇಕಾನೇಕ  ವಾಸ್ತವ  ಸಂಗತಿಗಳನ್ನು ಹೊಂದಿದೆ.  ಧಾರವಾಹಿ ಎಂದರೆ ವೈಭವೀಕರಣ ಇರಲೇ ಬೇಕು. ಇದರಲ್ಲಿ ಕ್ರೌರ್ಯ ಪ್ರಮುಖ ಪಾತ್ರವನ್ನು ಹೊಂದಿದೆ. ತೀರಾ ಹಿಂದುಳಿದ ಹಳ್ಳಿಗಳಲ್ಲಿ,ಪಟ್ಟಣಗಳಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ . ಅಮ್ಮಾಜಿ ಎಂಬ ಹಿರಿಯ ಹೆಣ್ಣುಮಗಳು ತಾನೇ ಕಾನೂನು ಕೈಗೆತ್ತಿಕೊಂಡು ಸಮಸ್ಯೆ ಬಗೆಹರಿಸುವತ್ತ ಆದ್ಯತೆ ನೀಡಿದರೆ ಆಕೆಯ ಮೊಮ್ಮಗಳು ಕಾನೂನಿನ ಬಗ್ಗೆ ಗೌರವಾದರ ಹೊಂದಿವವಳು.
ತನ್ನ ತಂಗಿ ಜಾನ್ಹವಿಯು ದುರುಳರ ಕೈಗೆ ಸಕ್ಕು ಅತ್ಯಾಚಾರಕ್ಕೆ ಒಳಗಾಗಿ ಸತ್ತು ಹೋಗಿರುತ್ತಾಳೆ. ಅವಳನ್ನು ಹತ್ಯೆಗೈದ ಜನರಿಗೆ ತಕ್ಕ ಶಾಸ್ತಿ ಮಾಡುವ ಉದ್ದೇಶದಿಂದ ಕಾನೂನಿನ ಮೊರೆ ಹೋಗುತ್ತಾಳೆ. ವಿಷಾದದ ಸಂಗತಿ ಅಂದ್ರೆ ಅಲ್ಲಿನ  ಅಧಿಕಾರಿಗಳು ಶ್ರೀಮಂತರ ಕೈಯಾಳುಗಳು.  ಈ ಉತ್ತರಭಾರತದ, ಅದರಲ್ಲೂ ಹರಿಯಾಣ ಭಾಷೆ- ಪ್ರಾಂತ್ಯಗಳ ಕಥಾಹಂದರ ಹೊಂದಿರುವ  ಧಾರವಾಹಿಗಳು ಬರೀ ಕ್ರೌರ್ಯ ಪ್ರಧಾನವಾಗಿರುತ್ತದೆ, ಇಲ್ಲವೇ ಹೆಣ್ಣಿನ ಶೋಷಣೆ ಸಾಮಾನ್ಯವಾಗಿರುತ್ತದೆ. ನಿಜವಾಗಿಯೂ ಅಲ್ಲಿ ಅಂತಹದೊಂದು ವಾತಾವರಣ ಇದೆಯೆ ? ಹಾಗೆ ಇರುವುದಾದರೇ ಎಷ್ಟು ವಿಷಾದಕರ ಸಂಗತಿ ಅಲ್ವೇ?  
Image result for red flower images
## ಇದೇ ವಾಹಿನಿಯಲ್ಲಿ ಶಕ್ತಿ ಅಸ್ತಿತ್ವ  ಕಿ ಎಹಸಾಸ್ ಎನ್ನುವ ಹೆಸರಿನ ಧಾರವಾಹಿ ಪ್ರಸಾರವಾಗ್ತಾಯಿದೆ. ಮಂಗಳಮುಖಿಯರ-ದೇವರಿಗೆ ಬಿಟ್ಟವರ ಕಥೆಯನ್ನು ಹೊಂದಿದೆ. ಈ ಕಥೆಯ ನಾಯಕ ಒಬ್ಬ ಕಿನ್ನರಿಯನ್ನು ಮದುವೆಯಾಗುತ್ತಾನೆ. ಆರಂಭದಲ್ಲಿ ಆಕೆ ಈ ರೀತಿಯವಳು ಎನ್ನುವ ಸಂಗತಿ ಆತನಿಗೆ ಗೊತ್ತಿರಲ್ಲ. ತನ್ನ ಹೆಂಡತಿಯನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದ ನಾಯಕ ಹರ್ಮನ್ ಗೆ ಆಕೆ ಕಿನ್ನರಿ ಎನ್ನುವ ಸಂಗತಿ ಗೊತ್ತಾದ ಬಳಿಕವೂ ಅವಳ ಕೈ ಬಿಡುವುದಿಲ್ಲ. ಆದರೇ ಸೌಮ್ಯಳ ಅತ್ತೆ  ಅಂದ್ರೆ ಹರ್ಮನ್ ತಾಯಿಗೆ ಇದು ಸಹ್ಯವಾಗಲ್ಲ. ಇವರಿಬ್ಬರನ್ನು ಬೇರೆ ಮಾಡುವ ಕೆಲಸದಲ್ಲಿ ಸದಾ ವ್ಯೂಹಗಳನ್ನು ರಚಿಸುತ್ತಾ ತಾನೇ ಅದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾಳೆ.ಚೆನ್ನಾಗಿದೆ ಆ ಧಾರವಾಹಿ. ನವಿರಾದ ಪ್ರೇಮಕಥೆ ಇದರ ಮುಖ್ಯಅಂಶ. 

ಡಬ್ಬಿವಾಲ

ನಿನ್ನೆ ಎರಡು ಕಾರಣಗಳಿಂದ ಮನಕ್ಕೆ ಬೇಸರವಾಗಿತ್ತು ( ಈಗ ಸಹಿತ ನೆನಪಿಸಿಕೊಂಡರೆ ಹೆಚ್ಚು ದುಃಖವಾಗುತ್ತದೆ). ದುರುಳರಿಂದ ಅತ್ಯಾಚಾರಕ್ಕೆ ಒಳಗಾಗಿ ಬದುಕು ಮುರುಟಿಕೊಂಡ ದಾನಮ್ಮ ಮತ್ತು ಮಾಜಿ ಮುಖ್ಯಮಂತ್ರಿ-ತಮಿಳುನಾಡಿನ ಅಮ್ಮ ಜಯಲಲಿತಾ ಅವರ ಬದುಕಿನ ಕೊನೆಯ ಕಾಲದಲ್ಲಿನ ವಿಡಿಯೋ ಕ್ಲಿಪ್ಪಿಂಗ್ ವೀಕ್ಷಣೆ.ಜಯಲಲಿತಾ ಎನ್ನುವ ಶಕ್ತಿ ಅಂತ್ಯ ಹೀಗಾಯ್ತಲ್ಲ ಎನ್ನುವ ಬೇಸರದ ಜೊತೆಗೆ  ಮುಗ್ಧ ಹುಡುಗಿ ದಾನಮ್ಮನ ಅಂತ್ಯ ಈ ರೀತಿ ಆದ ಬಗ್ಗೆಯೂಹೆಚ್ಚು ನೋವಾಯಿತು.ದಾನಮ್ಮ ಆತ್ಮಕ್ಕೆ ಶಾಂತಿ ಹಾಗೂ ಮನೆಯವರಿಗೆ ದುಃಖ ಭರಿಸುವ ಶಕ್ತಿ ಆ ಭಗವಂತನು ನೀಡಲಿ.
Image result for pink and blue flowers
ನಿನ್ನೆ  ಮಧ್ಯಾನ್ಹ ದಿಗ್ವಿಜಯ ಕನ್ನಡವಾಹಿನಿಯಲ್ಲಿ ಮುಂಬೈನ ದುಡಿಯುವ ಮಂದಿಯ ಜೀವದಾತರಾದ ಡಬ್ಬಿವಾಲಗಳ ಬಗ್ಗೆ ಕಾರ್ಯಕ್ರಮ ಪ್ರಸಾರವಾಯ್ತು. ಅವರರವರ ಊಟದ ಡಬ್ಬಿ ಅವರವರಿಗೆ ತಲುಪಿಸುವ ಚಾಕಚಕ್ಯತೆ ಬಗ್ಗೆ, ಡಬ್ಬಿವಾಲಗಳ ಈ ಕೆಲಸ ಆರಂಭವಾದ ಇಸವಿ ಎಲ್ಲದರ ಬಗೆಗಿನ ಮಾಹಿತಿ ಚೆನ್ನಾಗಿತ್ತು. ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ್ ಭಟ್ ಡಬ್ಬಿವಾಲಗಳ ಬಗ್ಗೆ ಬರೆದ ಲೇಖನ ಬಹಳ ಹಿಂದೆ  ಓದಿದ್ದೆ. ಆಗ ಅದು ಸಕತ್ ಇಷ್ಟವಾಗಿತ್ತು. ಅದೇರೀತಿ ನಿನ್ನೆ ಕಾರ್ಯಕ್ರಮ ವೀಕ್ಷಿಸಿದಾಗಲೂ ಸಹಿತ  :-) 
Image result for pink and blue flowers
@@ ಇಂದು 3 ಗಂಟೆಯ ನ್ಯೂಸ್ ವಾಚನ ಮಾಡಿದ ಈಟೀವಿ -ನ್ಯೂಸ್ 18 ವಾಹಿನಿಯ ವಾರ್ತಾವಾಚಕಿ ಹೆಚ್ಚು ಇಷ್ಟವಾದರು. ಅವರ ಹೆಸರು ಗೊತ್ತಿಲ್ಲ.
ಓದುವ ಶೈಲಿ , ವಿಷಯ ತಿಳಿಸುವ ವಿಧಾನ ಪ್ಲೆಸೆಂಟಾಗಿತ್ತು. ಕೊಚಕೊಚ ಎಂದು ಓದುವವರ ಸಂಖ್ಯೆ ಹೆಚ್ಚಾಗಿರುವವರ  ಈ ಕಾಲದಲ್ಲಿ ಹೀಗೆ ಅರ್ಥವಾಗುವ ರೀತಿಯಲ್ಲಿ ಓದುವ ರೀತಿ ಇಂಪ್ರೆಸ್ ಮಾಡಿತು.

ಪಾಪ ಛೀ

ಈ  ಬಾರಿಯ ಹಿಂದಿ ಬಿಗ್ ಬಾಸ್  ನ ಆರಂಭದಲ್ಲಿ ಸವ್ಯಸಾಚಿ ( ಸಬ್ಯಸಾಚಿ ) ಸತ್ಪತಿ ಎನ್ನುವ ಸ್ಫರ್ಧಿ  ಇದ್ರು ಅವರ ಹೆಸರನ್ನು ಕರೆಯೋಕೆ ಸಲ್ಮಾನ್  BOY  ಒದ್ದಾಡಿದ್ದು ನೆನಪಿಸಿ ಕೊಂಡ್ರೆ ಸಕತ್ ನಗು ಬರುತ್ತೇ.  ಲೋಪಮುದ್ರಾ ಎನ್ನುವ ಹೆಸರಿನ ಸ್ಫರ್ಧಿ ( ಪ್ರಾಯಶಃ ಕಳೆದಬಾರಿ  ಇದ್ರು) ಅವರ ಹೆಸರು ಕರೆಯುವಾಗ ಸಹಿತ ಸಲ್ಮಾನ್ ಕಷ್ಪಪಟ್ಟಿದ್ದು ನೆನಪಿಸಿಕೊಂಡ್ರೆ  :-) 
Image result for orange color flowers images
ಅದೇರೀತಿ ನಮಗೆ ಕನ್ನಡ ಬಿಬಾದಲ್ಲಿ ಸುದೀಪಾ ಸಂಖ್ಯಾಶಾಸ್ತ್ರಜ್ಞ ಎನ್ನುವ ಪದ ಹೇಳಲಾಗದೆ ಒದ್ದಾಡಿದ್ದು ಈ ಸೀಸನ್ ವಿಶೇಷ. ನಾವ್ ನೋಡಿ   ನಿಮ್ಮ ಹೆಸರುಗಳನ್ನು ಎಷ್ಟು ಆರಾಮವಾಗಿ ಹೇಳ್ತೀವಿ ;-).. 

ಮನುಷ್ಯ ಅತ್ಯಂತ  ಎಚ್ಚರಿಕೆಯಿಂದ ಇರಬೇಕಾದ ಸಮಯದಲ್ಲಿ ಮೈಮರೆಯುತ್ತಾನೆ. ಇದು ಜಗದ ನಿಯಮ.ಹಾಗೆ ಆಗಿದೆ  ಹಿಂದಿ ಬಿಗ್ ಬಾಸ್ ನ ಈ ಬಾರಿಯ ನಾಮಿನೇಷನ್ ವಿಷಯದಲ್ಲೂ ಸಹ.

ಯಾರನ್ನು ಮನೆಗೆ ಕಳುಹಿಸ ಬೇಕು ಎಂದು ನಿರ್ಧಾರ ಮಾಡೋದು ಜನ- ಬಿಬಾ. ಆದರೇ ಒಂದಷ್ಟು ಮಂದಿಯನ್ನು ಆಯ್ಕೆ ಮಾಡುವ ಅಧಿಕಾರ ಅಲ್ಲಿನ ಸ್ಫರ್ಧಿಗಳದ್ದಾಗಿರುತ್ತದೆ. ಆ ಸಂಗತಿ ಬಗ್ಗೆ ಒಬ್ಬರ ಬಳಿ ಮತ್ತೊಬ್ಬರು ಚರ್ಚಿಸುವ ಹಾಗಿಲ್ಲ. ಆದರೇ ಈ ವಾರ  ಹೀನಾ ಖಾನ್ ಹೊರೆತು ಪಡಿಸಿ ಎಲ್ಲರೂ ಈ ಸಂಗತಿಯನ್ನು ಚರ್ಚಿಸಿ  ಬಿಬಾ ಕೆಂಗಣ್ಣಿಗೆ ಗುರಿಯಾಗಿ ನಾಮಿನೇಟ್ ಆಗಿದ್ದಾರೆ. ಪಾಪ ಛೀ! ಇದೊಂಥರಾ ತಮ್ಮನ್ನು ತಾವು ನಾಮಿನೇಟ್ ಮಾಡಿಕೊಳ್ಳುವುದು ಎನ್ನ ಬಹುದಾ! ಒಟ್ಟಾರೆ ವಿಕ್ಷಕರಿಗೆ ಮಜಾ ಬಿಡಿ ! 

ಎಲ್ಲರೂ ಒಂದೇ!

Image result for orange color flowers images
ಕೇವಲ ಒಂದು-ಒಂದೂವರೆ ಗಂಟೆಯಷ್ಟು ಕಾಲ ವೀಕ್ಷಣೆ ಮಾಡುವುದರಿಂದ ನಮಗೆ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಸಂಗತಿಗಳ ಬಗ್ಗೆ ಪರಿಪೂರ್ಣತೆ ಇರದು ಈ ಮಾತು ಸತ್ಯ. ಆದರೇ ಆ ಅವಧಿಯಲ್ಲಿ ಪ್ರಸಾರಿಸುವ ಅಂಶಗಳು ಸಹಿತ ಸತ್ಯಕ್ಕೆ ದೂರವಾಗಿರುವುದಿಲ್ಲವೆನ್ನುವ ಸಂಗತಿಯನ್ನು ಸಹಿತ  ಎಲ್ಲರೂ ಒಪ್ಪಲೇಬೇಕು.
 ಕಲರ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಬಾ ರಿಯಾಲಿಟಿ ಶೋ ವಿಷಯಕ್ಕೆ ಬರುವುದಾದರೆ ನನಗೆ ಹೆಚ್ಚು ಆಶ್ಚರ್ಯ ಉಂಟು ಮಾಡಿದ ವ್ಯಕ್ತಿ ಜಯಶ್ರೀನಿವಾಸ್. ಈ ಸಂಖ್ಯಾಶಾಸ್ತ್ರಜ್ಞ ಹೆಚ್ಚಾಗಿ , ಬಹಳಷ್ಟು, ವೀಕ್ಷಕರಿಗೆ ಗೊತ್ತಾಗುವಷ್ಟು , ಅರ್ಥವಾಗುವಷ್ಟು ಸ್ಪಷ್ಟವಾಗಿ  ತಮ್ಮ ಪ್ರೀತಿ, ಬೆಂಬಲ, ಅಭಿಮಾನ ......... !!!! ಮುಂತಾದವು ತೋರುವುದು ಜೆಕೆ, ಅನುಪಮ, ಕೃಷಿ, ಶೃತಿ, ಚಂದನ್ ಗೆ ಮಾತ್ರ. ಅಲ್ಪ- ಸ್ವಲ್ಪ ರಿಯಾಜ್, ದಿವಾಕರ್ ಅವರುಗಳಿಗೆ, ಸ್ವಲ್ಪ ಮಟ್ಟಿಗೆ ನಿವೇದಿತಾಗೆ ಆದರೆ  ಸಮೀರ ಅಂದ್ರೆ ಅಷ್ಟಕ್ಕಷ್ಟೆ ಅಂತ ಅನ್ನಿಸುವ ರೀತಿಯಲ್ಲಿ ಇರ್ತಾರೆ. ಅವರ ಕೆಲವು- ಬಹಳಷ್ಟು ಬಾರಿಯ ವರ್ತನೆಗಳು ಜಲಸಿ ದೈ ನೇಮ್ ಈಸ್ ... ಅನ್ನಿಸುವಂತೆ  ಇರುತ್ತದೆ. ಈ ಜಯಶ್ರೀನಿವಾಸ್ ಅವರು ಸಿನಿ-ಟೀವಿ ಮಂದಿಯನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿ ಇರ್ತಾರೆ ಎನ್ನುವ ಸಂಗತಿ ನಮಗೆ ಒಂದು-ಒಂದೂವರೆ ಗಂಟೆಯ ಕಾಲದಲ್ಲಿ ಸುಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇಡೀ ದಿನ ಹೇಗಿರಬಹುದು ಗಾಡ್ ನೋಸ್! ಸದಾ ಜೆಕೆಯನ್ನ ಇಂಪ್ರೆಸ್ ಮಾಡುವ ತವಕದಲ್ಲಿ ಇವರು ತಮ್ಮತನ ಕಳೆದುಕೊಳ್ತಾ ಇದ್ದಾರೆ ಅಂತ ನನಗನ್ನಿಸಿದೆ. ಜಯಶ್ರೀನಿವಾಸ್ ಅವರಂತೆ ಜೆಕೆ ಸಹ ಒಬ್ಬ ಸ್ಫರ್ಧಿ ಅಷ್ಟೆ..ಅದನ್ನು ತಿಳಿದು ಈ ನ್ಯೂಮರಾಲಜಿಸ್ಟ್  ಕಾಮನರ್  (ಈಗ ಎಲ್ಲರಿಗೂ ತಿಳಿದಿರುವ ಸಮೀರ್, ರಿಯಾಜ್, ನಿವಿ, ದಿವಾಕರ್ )ಜೊತೆ ಮತ್ತಷ್ಟು ಉತ್ತಮ ಬಾಂಧವ್ಯ ಬೆಳೆಸಿಕೊಂಡರೆ ಜನಕ್ಕೆ ಹೆಚ್ಚು ಇಷ್ಟವಾಗ್ತಾರೆ.ಮೇಲ್ -ಫೀಮೇಲ್ ಟಾಸ್ಕ್ ನಲ್ಲಿ ಜೇಕೆಯನ್ನು ಹೊಗಳಿದ ವೇಳೆಯ ಸ್ವಲ್ಪ ಭಾಗವನ್ನು ಸಮೀರನಿಗೆ ಕೊಡಬಹುದಿತ್ತು. ಆದರೇ ಹಾಗಾಗಲಿಲ್ಲ ..ಆತನ ಬಗ್ಗೆ ಒಂದೂ ಮಾತು ಹೇಳಲಿಲ್ಲ  ಸಂಖ್ಯೆಗಳ ಮೇಷ್ಟ್ರು ಅಥವಾ  ನಮಗೆ  ಅದು ಟೆಲಿಕಾಸ್ಟ್ ಆಗಲಿಲ್ಲವೋ ??
ಟಾಸ್ಗಳ ವಿಷಯದಲ್ಲಿ ಸಮೀರ ಅಗ್ರೆಸಿವ್ ಇರ ಬಹುದು ಆದರೇ ಅವರ ಇನ್ವಾಲ್ವ್ ಮೆಂಟ್ ಜೆಕೆಗಿಂತ ಹೆಚ್ಚಾಗಿದೆ ಎನ್ನವ ಸಂಗತಿ  24 x 7  ಒಟ್ಟಿಗೆ ಇರುವ  ಈ ನ್ಯೂಮರಾಲಜಿಸ್ಟ್ ಗೆ ಗೊತ್ತಾಗಲಿಲ್ಲವಲ್ಲ ಅಕಟಕಟಾ!!
* ಈ ಬಾರಿ ಕೊಲೆಗಾರ ಟಾಸ್ಕ್ ಆಸಕ್ತಿಯಿಂದ ಇತ್ತು. ಆದರೆ ಬಿಬಾ ಕಾಮನರ್ ಅವರನ್ನು ಕೊಲೆ ಮಾಡಿ ದೆವ್ಗಗಳನ್ನು ಮಾಡೋ ಬದಲಿಗೆ ಸಿನಿ-ಟಿವಿ ರಂಗದವರನ್ನು ಕೊಲೆ ಮಾಡಿಸಿದ್ದಿದ್ದರೇ ಹೆಚ್ಚು ಚೆನ್ನಾಗಿರ್ತಾ ಇತ್ತು. ನೀವೆ ಪಾರ್ಷಲ್ ಆದ್ರೆ ಹೇಗೆ? ವೀಕ್ಷಕರಿಗೆ ಎಲ್ಲರೂ ಒಂದೇ.. ಆದರೇ ನಿಮಗೆ??
ಇಲ್ಲಿ ಜೆಕೆ .. ಅವರ ಟೀಮ್ ಗೆ ಸುಪ್ತವಾಗಿ ತಾವು ನಾಮಿನೇಟ್ ಆದ್ರೂ ಎವಿಕ್ಟ್ ಆಗಲ್ಲವೆನ್ನುವ ಧೈರ್ಯವಿದೆ. ಅದನ್ನು ದೂರ ಮಾಡಬಲ್ಲ ಮಾಸ್ಟರ್ ಮೈಂಡ್ ಇರುವುದು ಬಿಬಾಗೆ !
ವೆಲ್ ಸುದೀಪಾ ಹೆಚ್ಚು ನಾನ್ ವೆಜ್ ಅಡುಗೆ ಮಾಡಬೇಡಿ.. ನಮ್ಮಂತಹ ವೆಜ್ ಪ್ರಿಯರಿಗೆ ಕಾರ್ಯಕ್ರಮ ವೀಕ್ಷಿಸೋಕೆ ಸಾಧ್ಯವಾಗಲ್ಲ ಮಿತ್ರ. ಅಡುಗೆ ಮಾಡುವುದು  ಶ್ರೇಷ್ಟವಾದ ಹವ್ಯಾಸ-ಕೆಲಸ.  ನಿಮ್ಮ ಬಗ್ಗೆ ನಮಗೆ ಪ್ರೀತಿ- ವಿಶ್ವಾಸ ಇದೆ,  ನೀವು ಮಾಡಿದ ಅಡುಗೆಯನ್ನೂ ನಾವು ಖುಷಿಯಿಂದ ವೀಕ್ಷಸಬೇಕಲ್ವೇ!!