ಕ್ರೌರ್ಯ

Image result for red flower images
ಲಾಡೂ ವೀರಪುರ್ ಕಿ ಮರ್ದಾನಿಎನ್ನುವ ಹೆಸರಿನ ಒಂದು ಧಾರವಾಹಿ ಕಲರ್ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ. ಅದರಲ್ಲಿ ಹೆಣ್ಣುಮಕ್ಕ್ಲಾ ಮೇಲೆ- ಅಮಾಯಕ ಜನರ ಮೇಲೆ ನಡೆಯುವ ದೌರ್ಜನ್ಯದ ಕಥೆಯಿದೆ. ಇದು ಕಾಲ್ಪನಿಕ ಕಥೆಯಾದರೂ  ಸಹಿತ  ಅನೇಕಾನೇಕ  ವಾಸ್ತವ  ಸಂಗತಿಗಳನ್ನು ಹೊಂದಿದೆ.  ಧಾರವಾಹಿ ಎಂದರೆ ವೈಭವೀಕರಣ ಇರಲೇ ಬೇಕು. ಇದರಲ್ಲಿ ಕ್ರೌರ್ಯ ಪ್ರಮುಖ ಪಾತ್ರವನ್ನು ಹೊಂದಿದೆ. ತೀರಾ ಹಿಂದುಳಿದ ಹಳ್ಳಿಗಳಲ್ಲಿ,ಪಟ್ಟಣಗಳಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ . ಅಮ್ಮಾಜಿ ಎಂಬ ಹಿರಿಯ ಹೆಣ್ಣುಮಗಳು ತಾನೇ ಕಾನೂನು ಕೈಗೆತ್ತಿಕೊಂಡು ಸಮಸ್ಯೆ ಬಗೆಹರಿಸುವತ್ತ ಆದ್ಯತೆ ನೀಡಿದರೆ ಆಕೆಯ ಮೊಮ್ಮಗಳು ಕಾನೂನಿನ ಬಗ್ಗೆ ಗೌರವಾದರ ಹೊಂದಿವವಳು.
ತನ್ನ ತಂಗಿ ಜಾನ್ಹವಿಯು ದುರುಳರ ಕೈಗೆ ಸಕ್ಕು ಅತ್ಯಾಚಾರಕ್ಕೆ ಒಳಗಾಗಿ ಸತ್ತು ಹೋಗಿರುತ್ತಾಳೆ. ಅವಳನ್ನು ಹತ್ಯೆಗೈದ ಜನರಿಗೆ ತಕ್ಕ ಶಾಸ್ತಿ ಮಾಡುವ ಉದ್ದೇಶದಿಂದ ಕಾನೂನಿನ ಮೊರೆ ಹೋಗುತ್ತಾಳೆ. ವಿಷಾದದ ಸಂಗತಿ ಅಂದ್ರೆ ಅಲ್ಲಿನ  ಅಧಿಕಾರಿಗಳು ಶ್ರೀಮಂತರ ಕೈಯಾಳುಗಳು.  ಈ ಉತ್ತರಭಾರತದ, ಅದರಲ್ಲೂ ಹರಿಯಾಣ ಭಾಷೆ- ಪ್ರಾಂತ್ಯಗಳ ಕಥಾಹಂದರ ಹೊಂದಿರುವ  ಧಾರವಾಹಿಗಳು ಬರೀ ಕ್ರೌರ್ಯ ಪ್ರಧಾನವಾಗಿರುತ್ತದೆ, ಇಲ್ಲವೇ ಹೆಣ್ಣಿನ ಶೋಷಣೆ ಸಾಮಾನ್ಯವಾಗಿರುತ್ತದೆ. ನಿಜವಾಗಿಯೂ ಅಲ್ಲಿ ಅಂತಹದೊಂದು ವಾತಾವರಣ ಇದೆಯೆ ? ಹಾಗೆ ಇರುವುದಾದರೇ ಎಷ್ಟು ವಿಷಾದಕರ ಸಂಗತಿ ಅಲ್ವೇ?  
Image result for red flower images
## ಇದೇ ವಾಹಿನಿಯಲ್ಲಿ ಶಕ್ತಿ ಅಸ್ತಿತ್ವ  ಕಿ ಎಹಸಾಸ್ ಎನ್ನುವ ಹೆಸರಿನ ಧಾರವಾಹಿ ಪ್ರಸಾರವಾಗ್ತಾಯಿದೆ. ಮಂಗಳಮುಖಿಯರ-ದೇವರಿಗೆ ಬಿಟ್ಟವರ ಕಥೆಯನ್ನು ಹೊಂದಿದೆ. ಈ ಕಥೆಯ ನಾಯಕ ಒಬ್ಬ ಕಿನ್ನರಿಯನ್ನು ಮದುವೆಯಾಗುತ್ತಾನೆ. ಆರಂಭದಲ್ಲಿ ಆಕೆ ಈ ರೀತಿಯವಳು ಎನ್ನುವ ಸಂಗತಿ ಆತನಿಗೆ ಗೊತ್ತಿರಲ್ಲ. ತನ್ನ ಹೆಂಡತಿಯನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದ ನಾಯಕ ಹರ್ಮನ್ ಗೆ ಆಕೆ ಕಿನ್ನರಿ ಎನ್ನುವ ಸಂಗತಿ ಗೊತ್ತಾದ ಬಳಿಕವೂ ಅವಳ ಕೈ ಬಿಡುವುದಿಲ್ಲ. ಆದರೇ ಸೌಮ್ಯಳ ಅತ್ತೆ  ಅಂದ್ರೆ ಹರ್ಮನ್ ತಾಯಿಗೆ ಇದು ಸಹ್ಯವಾಗಲ್ಲ. ಇವರಿಬ್ಬರನ್ನು ಬೇರೆ ಮಾಡುವ ಕೆಲಸದಲ್ಲಿ ಸದಾ ವ್ಯೂಹಗಳನ್ನು ರಚಿಸುತ್ತಾ ತಾನೇ ಅದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾಳೆ.ಚೆನ್ನಾಗಿದೆ ಆ ಧಾರವಾಹಿ. ನವಿರಾದ ಪ್ರೇಮಕಥೆ ಇದರ ಮುಖ್ಯಅಂಶ. 

No comments: