ಇದ್ದಾಗ... ಇದ್ದಾಗ!!!


ಆ ಮಗುವಿಗೆ ಕೇವಲ ಎಂಟು ವರ್ಷ. ಅವನ ತಾಯಿ ಸತ್ತು ಹೋಗುತ್ತಾಳೆ, ಆಗ ಆ ಮಗುವಿನ ತಂದೆ ಮದುವೆ ಆಗ್ತಾರೆ ಮತ್ತೆ. ಸ್ವಲ್ಪ ದಿನಗಳ ಬಳಿಕ ಆ ಮಗುವಿನ ತಂದೆ ಅವನ ಬಳಿ ಬಂದು ನಿನ್ನ ಹೊಸ ತಾಯಿ ಹೇಗಿದ್ದಾರೆ ಕಂದ ಎಂದು ಕೇಳಿದ. ಆಗ ಆ ಮಗು ಅಪ್ಪ ಹೊಸ   ಅಮ್ಮ ನಿಜ ಹೇಳ್ತಾಳೆ ಆದರೆ ಸತ್ತು ಹೋದ ಅಮ್ಮ ಸುಳ್ಳು ಹೇಳ್ತಾ ಇದ್ದಳು ಎಂದು ಹೇಳಿತು..
ಅಪ್ಪನಿಗೆ ಆಶ್ಚರ್ಯ...
ಅದು ಹೇಗೆ ಹೇಳ್ತಿಯಾ ನೀನ ಆ ಅಮ್ಮ ಸುಳ್ಳಿ  ಮತ್ತು ಈ ಅಮ್ಮ ನಿಜ ಹೇಳ್ತಾಳೆ ಅಂತ ಎಂದು ಕೇಳಿದ.. 
ಆಗ ಆ ಮಗು ಅಪ್ಪ ಆ ಅಮ್ಮ ನಾನೆಷ್ಟು ತುಂಟತನ ಮಾಡಿದರು ಸಹಿತ ನೋಡು ಹೀಗೆ ನೀನು ತುಂಟತನ ಮಾಡಿದರೆ ನಿನಗೆ ಊಟ ಹಾಕಲ್ಲ ಅಂತ ಹೇಳ್ತಾ ಇದ್ದಳು. ಆದರೆ ನಾನು ನನ್ನ ತುಂಟತನ ಬಿಡಲೇ ಇಲ್ಲ..ಹೆದರಿಸಿದ್ದ ಆ ಅಮ್ಮ ತಪ್ಪದೆ ನನ್ನನ್ನು ಮುದ್ದು ಮಾಡಿ ಊಟ ಹಾಕುತ್ತಿದ್ದಳು ...
ಆದರೆ ಈ ಹೊಸ ಅಮ್ಮನ ಬಳಿ ಸಹಿತ ನಾನು ತುಂಟತನ ಮಾಡಿದೆ.. ನಾನು ಮಾಡಿದ ತುಂಟತನ ಕಂಡು ಆ ಅಮ್ಮ ನೋಡು ನೀನು ಹೀಗೆ ತುಂಟತನ ಮಾಡಿದರೆ ಊಟ ಹಾಕಲ್ಲ ಅಂತ ಹೇಳಿದಳು.. ಅವಳು ಹೇಳಿದಂತೆ ಮಾಡಿದ್ದಾಳೆ ಮೂರು ದಿನ ಆಯ್ತು ನಾನು ಊಟ ಮಾಡಿ !! 
ಹೈದರಾಬಾದ್ ಗೆ ಸೇರಿರುವ  ರಮಣಾಕರ್  ನಿರ್ದೇಶಕ, ಗೀತ ರಚನೆಕಾರ, ಸೃಜನಶೀಲ ಬರಹಗಾರ.... ಹೀಗೆ ಅನೇಕ ಸಂಗತಿ + ಗಳನ್ನೂ ಹೊಂದಿರುವ ನನ್ನ ಫೇಸ್ ಬುಕ್  ಮಿತ್ರ. ಸದಾ ಒಂದೊಳ್ಳೆ ಸಂಗತಿಯನ್ನು ಅವರ ವಾಲ್ ಮೇಲೆ ಹಾಕಿರ್ತಾರೆ ತೆಲುಗು ಭಾಷೆಯಲ್ಲಿ ಬರೆದು.. ಅವರ ಈ ಬರಹ ಮನ ಸೆಳೆಯಿತು.. ನಿಮ್ಮ ಬಳಿ ಹಂಚಿಕೊಳ್ತಾ ಇದ್ದೀನಿ..
ಇದಕ್ಕೆ ಪೂರಕವಾಗಿ ನಾನು ಅಂದು ನಾನು 
ಸೋನಿ ವಾಹಿನಿಯ ಪ್ರಸಿದ್ಧ ಧಾರವಾಹಿ ಕ್ರೈಮ್  ಪೆಟ್ರೋಲ್ ವೀಕ್ಷಿಸಿದೆ... ಅದರಲ್ಲಿ ಹಣಕ್ಕಾಗಿ ಪರಿಚಿತ ವ್ಯಕ್ತಿ ಮಗುವನ್ನು ಅಪಹರಣ ಮಾಡುವುದು... ಆ ಬಳಿಕ ಕಥೆ ಸುಖಾಂತ್ಯ ಆಗುತ್ತದೆ.. ಪೊಲೀಸರ ಸಾಹಸ ಮನಸ್ಪರ್ಶಿಯಾಗಿ ತೋರಿಸಿದ್ದಾರೆ.ಅದನ್ನು ವೀಕ್ಷಿಸಿದ  ತುಂಬಾ ಸಮಯ ಒಂದು ತೆರನಾದ ಭಾವದಲ್ಲಿ ಇದ್ದೆ..ನನಗೆ ಅನೇಕ ಕಿರಿಯ ವಯಸ್ಸಿನ  ಪೊಲೀಸ್ ಪೇದೆ ಹುಡುಗರು ಪರಿಚಯ.. ಅವರು ಆ ಇಲಾಖೆಯ ಬಗ್ಗೆ ಹೇಳೋದನ್ನು ಕೇಳುವಾಗ ಅಬ್ಬ ಅನ್ನಿಸುತ್ತೆ.. ಆದರೆ ಸಿನಿಮಾಗಳಲ್ಲಿ ಪ್ರಸಾರಿಸುವಂತೆ ಅವರು ಇರಲ್ಲ ಅನ್ನೋದು ಸಹ ಮುಖ್ಯ ...

@@
ಸುವರ್ಣ ನ್ಯೂಸ್ ನಲ್ಲಿ ಪ್ರಸಾರ ಆಗುವ ಬೆರಗು  ಒಂದೊಳ್ಳೆಯ ಕಾರ್ಯಕ್ರಮ.  ರಾಘವೇಂದ್ರ ಕಾಂಚನ್ ಅವರ ನಿರೂಪಣೆ ಚಂದ ಇರುತ್ತದೆ.. ಕೆಲವು ಕಾರ್ಯಕ್ರಮಗಳಿಗೆ ಕೆಲವರೇ ಸೂಕ್ತ.. !! ಅತಿಯಾಗಿ ಹೆದರಿಸುವವರಿಗಿಂತ ವಿಷಯವನ್ನು ಹೇಳುವ ರೀತಿ ಹೆಚ್ಚು ಜನರನ್ನು ಸೆಳೆಯುತ್ತದೆ... 
ರಾಘವೇಂದ್ರ ಅತ್ಯುತ್ತಮ ನಿರೂಪಕ.. ಅದರ ಬಗ್ಗೆ ಎರಡು ಮಾತಿಲ್ಲ!


ಹಿಂದಿ ಬಿಗ್ ಬಾಸ್ ಆರಂಭ ಆಗಿದೆ.. ಒಂದಷ್ಟು ಮುಖಗಳು ನೋಡಿದ ನೆನಪು.. ಒಂದಷ್ಟು ಗೊತ್ತಿಲ್ಲ.. ಹೇಗೆ ಇಷ್ಟ ಆಗ್ತಾರೋ ಆ ಪ್ರಯಾಣಿಕರು ಗೊತ್ತಿಲ್ಲ.. ಆದರು ಕ್ಯಾಪ್ಟನ್  ಸಲ್ಮಾನ್ ಖಾನ್ ಇದ್ದಾಗ.. ಏರೋಪ್ಲೇನ್ ಆಕಾಶದಲ್ಲಿ ಕೆಟ್ಟರು ಸಹ ಅಲ್ಲೇ ನಿಲ್ಲಿಸಿ ಸರಿ ಮಾಡ್ತಾರೆ.. ಐ ಲೈಕ್ ಇಟ್ ಯಾ ..
...
ಏನೇ ಆದರೂ ಕನ್ನಡ ಬಿಗ್ ಬಾಸ್ ನಲ್ಲಿ ಸುದೀಪ್ ಮಾತು ... ಸ್ಟೈಲು ಮತ್ತು... ಸಾರಿ ಇನ್ನೇನು ಬರಿ ಬೇಕೋ  ಗೊತ್ತಾಗ್ತಾ ಇಲ್ಲ :-) .. ಆದರು ನಂಗೆ ಒಂದು ವಿಷಯದಲ್ಲಿ ಆತಂಕ ಆಗಿತ್ತು.. ಹಿರಿಯ ನಿರ್ದೇಶಕ ಗುರು ಅವರು ಸ್ವಲ್ಪ ಜಾಸ್ತಿನೇ ಬುದ್ಧಿವಂತ ಅನ್ನುವ ಸಂಗತಿ ಗೊತ್ತಿತ್ತು, ಆ ಎಡವಟ್ಟ ನಿರ್ದೇಶಕ ಅವರು ಸುಖಾಸುಮ್ಮನೆ  ಬೇರೆ ಸ್ಪರ್ಧಿಗಳಿಂದ ಹೀನಾಯವಾಗಿ ಅಪಮಾನ ಮಾಡಿಸಿಕೊಂಡರೆ ಎನ್ನುವ ಆತಂಕ ಇತ್ತು.. ಕಿಚ್ಚ ನೀವು ಆ ಪ್ರತಿಭೆಯನ್ನು ಕಳಿಸಿಕೊಟ್ಟ ರೀತಿ ಅನನ್ಯ  .. ಇಷ್ಟ ಆಯ್ತು ನನಗೆ...