ಕಟ್ಟಕಡೆಯ ಪ್ರಶ್ನೆ ?

ಯಾವುದೇ ರಂಗ ಆಗಿರಲಿ ವಾತಾವರಣ, ಅಲ್ಲಿನ ಯಜಮಾನ- ಹೆಡ್ಡುಗಳ ಮನಸ್ಥಿತಿ, ಬುದ್ಧಿವಂತಿಕೆ ಒಟ್ಟಾರೆ ಯಾವುದೇ ಸಂಗತಿ ಆಗಿರಲಿ ಅವರ ದೃಷ್ಟಿಕೋನದ ಮೇಲೆ ಅವಲಂಬಿಸಿರುತ್ತದೆ. ಕನ್ನಡದಲ್ಲಿ ಚಾನೆಲ್ ಗಳೆ ಇಲ್ಲದ ಸಮಯದಲ್ಲಿ ಬಂದ ವಾಹಿನಿ ಉದಯ.  ಆ ಬಳಿಕ ಅದು ಎರಡಾಯಿತು, ಅನೇಕ  ಭಾಗಗಳಾಗಿ ಎಲ್ಲರ ಗಮನ ಸೆಳೆಯಿತು. 

ಮೂಲ ತಮಿಳು ನಾಡಿನ ಚಾನೆಲ್ ಆದ ಕಾರಣ ಧಾರವಾಹಿಗಳು, ಕಾರ್ಯಕ್ರಮಗಳೂ ಸಂಪ್ರದಾಯಗಳ , ಅತಿರೇಕಗಳನ್ನು ಒಳಗೊಂಡಿದ್ದರೂ ಜನರು ಆ ಚಾನೆಲ್ ಸ್ವೀಕರಿಸಿದರು. ಅನಂತರ ಬೇರೆ ಬೇರೆ ಚಾನೆಲ್ ಗಳು ಬಂದು ಮನಗೆದ್ದಿತು. ಆದರೆ ಏನೇ ಹೇಳಿ ಈ  ನ್ಯೂಸ್ ಚಾನೆಲ್ ಗಳ ಭರಾಟೆ ನಡುವೆ ಮನೋರಂಜನೆಯ ವಾಹಿನಿಗಳು ಸರಳ ಹುಡುಗಿಯಾಗಿ ಬಿಡ್ತು.

ಎಲ್ಲಾ ವಾರ್ತಾವಾಹಿನಿಗಳು ಭರ್ಜರಿ ಎಂಟ್ರಿ ಕೊಟ್ಟರೂ ಉದಯ ನ್ಯೂಸ್  ಮಾತ್ರ  ಹಾಗೆ ಉಳಿದು ಬಿಡ್ತು ತುಂಬಾ ಸಮಯ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಕೊಡವಿ ಎದ್ದಿದೆ. ಮುಖ್ಯವಾಗಿ ಚಂದದ ಹುಡುಗಿಯರು ಕಷ್ಟಪಟ್ಟು ಕನ್ನಡ ಮಾತನಾಡಲು ಆರಂಭಿಸಿದ್ದಾರೆ. ಚಂದನವಾಹಿನಿ ಬಿಟ್ರೆ ಇಲ್ಲೇ ಸ್ವಲ್ಪ ಜಾಸ್ತಿ ವಯಸ್ಸಾದ ಪ್ರತಿಭೆಗಳಿಗೆ, ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಆದ್ಯತೆ.

ಮೊದಲೆ ಹೇಳಿದಂತೆ ವಾಹಿನಿಗಳು ಬದಲಾದಂತೆ ಅವುಗಳ ವಾತಾವರಣ ಸಹ ಬದಲಾಗುತ್ತೆ. ಅನಂತ್ ಚಿನಿವಾರ್ ಸುವರ್ಣ ನ್ಯೂಸ್ ಬಂದ ಬಳಿಕ ಅವರ ಅಚ್ಚರಿಯ ಸಮಾನಾರ್ಥಕ ಬೆರಗು ಜೊತೆಗೆ ಕರೆ ತಂದರು. ಅದೇ ರೀತಿ ರವಿ ಬೆಳಗೆರೆ ಜನಶ್ರೀಗೆ ಬಂದಿದ್ದಾರೆ. ಅವರೊಂದಿಗೆ ಪ್ರಿಯ ವೀಕ್ಷಕರೆ  ಜನಶ್ರೀ ನಮ್ಮದು ಮಾತ್ರವಲ್ಲ ಎಲ್ಲರದ್ದು ಕಣ್ರಿ ಈ ಚಾನೆಲ್. ಬರೆಯೋದು ನನಗೆ ಜೀವ ಕೊಡ್ತು, ಜೀವನಾ ಕೊಡ್ತು ಈಗ ಚಾನೆಲ್ಲೇ ಕೊಟ್ಟಿದೆ..

ಹೀಗೆ ಅವರ ಮಾತಿನ ಧಾಟಿ  ಇನ್ನು ಇಲ್ಲಿ ಕಾಮನ್ನು. ಹಮೀದ್ ಪಾಳ್ಯ  ರಾಜ್ ಟೀವಿಯಲ್ಲಿ ಹಾಸನವನ್ನೇ ತಂದಿದ್ದಾರೆ. ಸದ್ಯದಲ್ಲೇ ಸಮಯ ವಾಹಿನಿ ಪೀಠಾರೋಹಣ ಮಾಡೋ ವಿಶ್ವೇಶ್ವರ ಭಟ್ರು ಸಿರಸಿ, ಯಲ್ಲಾಪುರ, ಸಿದ್ದಾಪುರವನ್ನೇ ತರ್ತಾರೆ. ಒಟ್ಟಾರೆ ಯಾರು ಏನೇ ಮಾಡಲಿ ವೀಕ್ಷಕ ಬಯಸೋದು ಒಳ್ಳೆಯ ಕಾರ್ಯಕ್ರಮಗಳನ್ನು!


ಅಕಸ್ಮಾತ್ ಹೀಗೂ ಉಂಟೆ ನಾರಾಣಸ್ವಾಮಿ ಏನಾದ್ರು ಚಾನೆಲ್ ಹೆಡ್ಡಾದ್ರೆ... ಪ್ರಿಯ ವೀಕ್ಷಕರೇ  ಅವರ್ಯಾಕೆ ರಾಜೀನಾಮೆ ಕೊಟ್ಟರು, ಇವರಿಗ್ಯಾಕೆ ಇಬ್ಬರೇ ಗರ್ಲ್ ಫ್ರೆಂಡು, ಇವೆಲ್ಲವನ್ನೂ ನೋಡಿದಾಗ  ನಮ್ಮನ್ನು ಕಾಡುವ ಕಟ್ಟಕಡೆಯ ಪ್ರಶ್ನೆ ಹೀಗೂ ಉಂಟೆ!!!    

ಏನನ್ನುತ್ತಾರೆ?

ಕಳೆದ ಕೆಲವು ದಿನಗಳಿಂದ ನಾನು ಬ್ಲಾಗ್ ಅಪ್ ಡೇಟ್ ಮಾಡೋಕೆ ಆಗೆ ಇರಲಿಲ್ಲ. ಆದರೆ ನಿರಂತರವಾಗಿ ಫೇಸ್ ಬುಕ್ ನಲ್ಲಿ ಭಾವನೆಗಳನ್ನು ಹರಿ ಬಿಡ್ತಾ ಇದ್ದೆ. ಬಿಡಿ ಅಲ್ಲೆ ಒಂದು ಪ್ರಪಂಚ. ಏಕೇಂದ್ರೆ ನನ್ನ ಇಬ್ಬರು ಜೂನಿಯರ್  ಗಳು ಮೇಡಂ ನಮ್ಮ ಅಭಿಪ್ರಾಯ ನಿಮ್ಮ ವಾಲ್ ನಲ್ಲಿ ಹಾಕಿ ಇಡೀ ಪ್ರಪಂಚಕ್ಕೆ ರೀಚ್ ಆಗುತ್ತೆ ಅನ್ನುವ ಮಾತು ಸದಾ ಹೇಳ್ತಾ ಇರ್ತಾರೆ.

 ಅಷ್ಟೇ ಅಲ್ಲದೆ ಟ್ವಿಟ್ಟರ್ ನಿಂದಲೂ ಹೆಚ್ಚು ಖುಷಿ ಸಿಗ್ತಾ ಇತ್ತು-ಇದೆ.ಐಬಿಎನ್ , ಜೀ ನಾನು ಹೆಚ್ಚು ಫಾಲೋ ಮಾಡುವ ಸಂಸ್ಥೆಗಳು. ಹಾಗೆ ನೋಡಿದ್ರೆ ಸ್ವಲ್ಪ ಮಟ್ಟಿಗೆ ಟ್ವಿಟ್ಟರ್ ನಲ್ಲಿ ಆಕ್ಟೀವ್ ಆಗಿರುವ ಕನ್ನಡ ಚಾನೆಲ್ಗಳು ಅಂದ್ರೆ (ನಾನು ಕಂಡಂಗೆ)  ರಂಗಣ್ಣನ ಪಬ್ಲಿಕ್ ಟೀವಿ, ಆಗಾಗ ಸುವರ್ಣ ನ್ಯೂಸ್.
ಆದರೂ ಈ ಬ್ಲಾಗ್ ಅಂದ್ರೆ ನನಗೊಂದು ರೀತಿಯಲ್ಲಿ ಪ್ರೀತಿ . ಕಳೆದ ನಾಲ್ಕು ವರ್ಷಗಳಿಂದ ಇದರ ಒಡನಾಟದಲ್ಲಿ ಇರುವ ನನಗೆ ತುಂಬಾ ತೃಪ್ತಿ ತಂದಿದೆ. ಅನೇಕ ಉತ್ತಮ ಸ್ನೇಹಗಳ  ಪರಿಚಯ ಆಗಿದೆ. ಅಷ್ಟೇ ಅಲ್ಲದೇ ಕೊಳಕು ಮನಸ್ಸುಗಳ ಕಂಡಿವೆ.. ಏನೇ ಆದ್ರು ನನಗೆ ಅನ್ನಿಸಿದ್ದು ಹೇಳಲು ಉತ್ತಮ ವೇದಿಕೆಯಾಗಿದೆ. 

ಈ ತಿಂಗಳ ಹತ್ತನೆಯ ತಾರೀಕ್ ನನ್ನ ಬ್ಲಾಗ್ ಬರ್ತಡೇ ಆಯಿತು. ಅಂದು ಅದರ ಬಗ್ಗೆ ಬರೆಯದೆ ಇಂದು ಬರಿತಾ ಇದ್ದೀನಿ. ಹ್ಯಾಪಿ ಬರ್ತಡೇ ... ಮೈ ಡಿಯರ್
ನ್ಯೂಸ್ ಚಾನೆಲ್ಗಳಲ್ಲಿ ಟೀವಿ ನೈನ್ ದೇ ಒಂದು ರೀತಿಯ ಖದರ್. ಹೊಸಬರಿಗೆ ಹೆಚ್ಚು ಅವಕಾಶ ನೀಡುವ ಚಾನೆಲ್ ಅನ್ನುವುದಕ್ಕಿಂತ ಅಂತಹವರ ಒಳ್ಳೆಯ ವೇದಿಕೆ. ನೀವು ಹೇಳಿದ್ದು ನಾವು ಕೇಳಿದ್ದು ಈ ವಾಹಿನಿಯ ವಿಶೇಷ ಕಾರ್ಯಕ್ರಮಗಳಲ್ಲಿ ಒಂದು. ತಪ್ಪದೇ ನೋಡಿ ಎಂಜಾಯ್ ಮಾಡುವ ಕಾರ್ಯಕ್ರಮ. ಇದರಲ್ಲಿ ಮಾತುಗಳ ಬರೆಯೋ ಹುಡುಗ ನಮ್ಮ ಶರತ್ ಚಕ್ರವರ್ತಿ .
ನಾಟಕ-ಕವನ ಅಂತ ಇರೋ ನಮ್ಮ ಶರತ್ತು, ಅವನ-ನನ್ನ  ಮಿತ್ರ ರಾಜೇಂದ್ರ ಪ್ರಸಾದ್ ಮತ್ತು ನಮ್ಮೆಲ್ಲರ ಪ್ರೀತಿಯ ಲೇಖಕ ಕು.ವೀ. ಅವರ ಮಗ ಪ್ರವರ ಈ ಮೂರು ತರಲೆಗಳು ಕವನ ಸಂಕಲನ ಬಿಡುಗಡೆ ಮಾಡ್ತಾ ಇದ್ದಾರೆ ಸದ್ಯದಲ್ಲೆ. ಇನ್ನೂ ಕರೆದಿಲ್ಲ . ಪ್ರವರ ಅಕ್ಕೋ ಬಾರಕ್ಕ ಅಂತ ಕರದೇ ಕರೀ ಬಹುದು ಅನ್ನೋ ನಂಬಿಗೆ ಬಲವಾಗಿದೆ.. ನೋಡಾಮ!

ಸುದ್ದಿ ಮಾಡುವ ವಿಷಯದಲ್ಲಿ ಎಡವಟ್ಟುಗಳು ಆಗೋದು ಸಹಜ. ವಿದೇಶದಲ್ಲಿರುವ ನನ್ನ ಎಫ್ ಬಿ ಮಿತ್ರರಾದ ಪಡ್ಯಾಣ ರಾಮಚಂದ್ರ ಐಬಿಎನ್ ಲೈವ್ ನಲ್ಲಿ ಬಂದ ಸುದ್ದಿ ಬಗ್ಗೆ  ಅಭಿಪ್ರಾಯ ವ್ಯಕ್ತ ಪಡಿಸಿದ್ದು ಹೀಗೆ.. ಇದಕ್ಕೆ ರಾಜ್ ದೀಪ್ ಏನನ್ನುತ್ತಾರೆ? ಲಿಂಕ್ ಇಲ್ಲಿದೆ.
Personally I dont have anything against Kimmane Rathnakar and I have high regards for him.

But, I have low regard for the news reporter who gave the heading to this news ,as the heading and contents do not match

ಶೀರ್ಷಿಕೆ


ಟಿ .ಎನ್.ಸೀತಾರಾಮ್  ಅವರ  ಬರೆದಾಗ   ಅವರ   ಬಗ್ಗೆ ಅನೇಕ ಬಗೆಯ ಅಭಿಪ್ರಾಯಗಳು ಹೊರ ಹೊಮ್ಮಿತು. ಏನೇ ಹೇಳಿ ಅವರ ತಾಕತ್ತು, ಆ ಕೆಲಸದ ಪರಿ ನನಗೆ ಬಹಳ ಇಷ್ಟ..
ಸಾಮಾನ್ಯವಾಗಿ ಹೆಚ್ಚು ಜನರು ವೀಕ್ಷಿಸುವ ಕಾರ್ಯಕ್ರಮಗಳಲ್ಲಿ ಕ್ರೈಮ್ ಸಹ ಒಂದಾಗಿದೆ. ಕೆಲವೊಂದು ಅದೆಷ್ಟರಮಟ್ಟಿಗೆ ಭೀಭತ್ಸವಾಗಿರುತ್ತದೆ ವಾಗಿರುತ್ತೆ ಅಂದ್ರೆ  ಟೀಆರ್ಪಿ ಗಾಗಿ ಏನೆಲ್ಲಾ ಮಾಡ್ತಾರೆ . ಹಾಗಂತ ಹೆಚ್ಚು ಅದರ ಬಗ್ಗೆ ಹೇಳೋಕೆ ಆಗಲ್ಲ. ಯಾಕೆಂದರೆ ಬದುಕು ಮುಖ್ಯ! ಜನಪ್ರಿಯತೆ ಇದ್ದರೆ ಒಂದು ಚಾನೆಲ್ ಉಳಿಯುತ್ತೆ...ಹೀಗೆ ಅನೇಕ ಲಿಂಕ್ ಗಳಿವೆ.
ಆದರೂ ಈ ಕ್ರೈಮ್ ಕಾರ್ಯಕ್ರಮವನ್ನು ವೈಭವೀ ಕರಿಸುವ ಕ್ರಿಯೆ ಇದೆಯಲ್ಲ ಅದರಷ್ಟು ಕಿರಿಕಿರಿ ಮತ್ತೊಂದಿಲ್ಲ. ನೋಡ ಬೇಡ ಅನ್ನ ಬಹುದು ನೀವು, ನಿಜ ನಾನು ನೋಡುವ ಅಗತ್ಯ ಇಲ್ಲ , ವಸ್ತು ಸ್ಥಿತಿ ಬಗ್ಗೆ ಹೇಳಿದ್ದು.
ಇತ್ತಿಚೆಗೆ ಫೇಸ್ಬುಕ್ ಪ್ರೀತಿಯಿಂದ ಸತ್ತ ವೃದ್ಧನ ಮತ್ತು ಆತನ ಕುಟುಂಬ ಮತ್ತು ಆ ಹುಡುಗಿ ಕಾರ್ಯಕ್ರಮ ಅದೆಷ್ಟು ವೈಭವೀಕರಿಸಿದ್ರು ಅಂದ್ರೆ, ಎಲ್ಲವೂ ತಪ್ಪು ಅನ್ನಿಸುವಂತೆ ಇತ್ತು. ನಿಜ ಹೇಳ ಬೇಕು ಅಂತ ಅಂದ್ರೆ  ವಾರ್ತಾವಾಹಿನಿಗಳು ಪ್ರಸಾರ ಮಾಡುವ ಅನೇಕ ವರದಿಗಳು ವೀಕ್ಷಿಸುವಾಗ, ಕೊಡುವ ಶೀರ್ಷಿಕೆಗಳು ರಾಮ ರಾಮ !