ಕಟ್ಟಕಡೆಯ ಪ್ರಶ್ನೆ ?

ಯಾವುದೇ ರಂಗ ಆಗಿರಲಿ ವಾತಾವರಣ, ಅಲ್ಲಿನ ಯಜಮಾನ- ಹೆಡ್ಡುಗಳ ಮನಸ್ಥಿತಿ, ಬುದ್ಧಿವಂತಿಕೆ ಒಟ್ಟಾರೆ ಯಾವುದೇ ಸಂಗತಿ ಆಗಿರಲಿ ಅವರ ದೃಷ್ಟಿಕೋನದ ಮೇಲೆ ಅವಲಂಬಿಸಿರುತ್ತದೆ. ಕನ್ನಡದಲ್ಲಿ ಚಾನೆಲ್ ಗಳೆ ಇಲ್ಲದ ಸಮಯದಲ್ಲಿ ಬಂದ ವಾಹಿನಿ ಉದಯ.  ಆ ಬಳಿಕ ಅದು ಎರಡಾಯಿತು, ಅನೇಕ  ಭಾಗಗಳಾಗಿ ಎಲ್ಲರ ಗಮನ ಸೆಳೆಯಿತು. 

ಮೂಲ ತಮಿಳು ನಾಡಿನ ಚಾನೆಲ್ ಆದ ಕಾರಣ ಧಾರವಾಹಿಗಳು, ಕಾರ್ಯಕ್ರಮಗಳೂ ಸಂಪ್ರದಾಯಗಳ , ಅತಿರೇಕಗಳನ್ನು ಒಳಗೊಂಡಿದ್ದರೂ ಜನರು ಆ ಚಾನೆಲ್ ಸ್ವೀಕರಿಸಿದರು. ಅನಂತರ ಬೇರೆ ಬೇರೆ ಚಾನೆಲ್ ಗಳು ಬಂದು ಮನಗೆದ್ದಿತು. ಆದರೆ ಏನೇ ಹೇಳಿ ಈ  ನ್ಯೂಸ್ ಚಾನೆಲ್ ಗಳ ಭರಾಟೆ ನಡುವೆ ಮನೋರಂಜನೆಯ ವಾಹಿನಿಗಳು ಸರಳ ಹುಡುಗಿಯಾಗಿ ಬಿಡ್ತು.

ಎಲ್ಲಾ ವಾರ್ತಾವಾಹಿನಿಗಳು ಭರ್ಜರಿ ಎಂಟ್ರಿ ಕೊಟ್ಟರೂ ಉದಯ ನ್ಯೂಸ್  ಮಾತ್ರ  ಹಾಗೆ ಉಳಿದು ಬಿಡ್ತು ತುಂಬಾ ಸಮಯ. ಆದರೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಕೊಡವಿ ಎದ್ದಿದೆ. ಮುಖ್ಯವಾಗಿ ಚಂದದ ಹುಡುಗಿಯರು ಕಷ್ಟಪಟ್ಟು ಕನ್ನಡ ಮಾತನಾಡಲು ಆರಂಭಿಸಿದ್ದಾರೆ. ಚಂದನವಾಹಿನಿ ಬಿಟ್ರೆ ಇಲ್ಲೇ ಸ್ವಲ್ಪ ಜಾಸ್ತಿ ವಯಸ್ಸಾದ ಪ್ರತಿಭೆಗಳಿಗೆ, ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಆದ್ಯತೆ.

ಮೊದಲೆ ಹೇಳಿದಂತೆ ವಾಹಿನಿಗಳು ಬದಲಾದಂತೆ ಅವುಗಳ ವಾತಾವರಣ ಸಹ ಬದಲಾಗುತ್ತೆ. ಅನಂತ್ ಚಿನಿವಾರ್ ಸುವರ್ಣ ನ್ಯೂಸ್ ಬಂದ ಬಳಿಕ ಅವರ ಅಚ್ಚರಿಯ ಸಮಾನಾರ್ಥಕ ಬೆರಗು ಜೊತೆಗೆ ಕರೆ ತಂದರು. ಅದೇ ರೀತಿ ರವಿ ಬೆಳಗೆರೆ ಜನಶ್ರೀಗೆ ಬಂದಿದ್ದಾರೆ. ಅವರೊಂದಿಗೆ ಪ್ರಿಯ ವೀಕ್ಷಕರೆ  ಜನಶ್ರೀ ನಮ್ಮದು ಮಾತ್ರವಲ್ಲ ಎಲ್ಲರದ್ದು ಕಣ್ರಿ ಈ ಚಾನೆಲ್. ಬರೆಯೋದು ನನಗೆ ಜೀವ ಕೊಡ್ತು, ಜೀವನಾ ಕೊಡ್ತು ಈಗ ಚಾನೆಲ್ಲೇ ಕೊಟ್ಟಿದೆ..

ಹೀಗೆ ಅವರ ಮಾತಿನ ಧಾಟಿ  ಇನ್ನು ಇಲ್ಲಿ ಕಾಮನ್ನು. ಹಮೀದ್ ಪಾಳ್ಯ  ರಾಜ್ ಟೀವಿಯಲ್ಲಿ ಹಾಸನವನ್ನೇ ತಂದಿದ್ದಾರೆ. ಸದ್ಯದಲ್ಲೇ ಸಮಯ ವಾಹಿನಿ ಪೀಠಾರೋಹಣ ಮಾಡೋ ವಿಶ್ವೇಶ್ವರ ಭಟ್ರು ಸಿರಸಿ, ಯಲ್ಲಾಪುರ, ಸಿದ್ದಾಪುರವನ್ನೇ ತರ್ತಾರೆ. ಒಟ್ಟಾರೆ ಯಾರು ಏನೇ ಮಾಡಲಿ ವೀಕ್ಷಕ ಬಯಸೋದು ಒಳ್ಳೆಯ ಕಾರ್ಯಕ್ರಮಗಳನ್ನು!


ಅಕಸ್ಮಾತ್ ಹೀಗೂ ಉಂಟೆ ನಾರಾಣಸ್ವಾಮಿ ಏನಾದ್ರು ಚಾನೆಲ್ ಹೆಡ್ಡಾದ್ರೆ... ಪ್ರಿಯ ವೀಕ್ಷಕರೇ  ಅವರ್ಯಾಕೆ ರಾಜೀನಾಮೆ ಕೊಟ್ಟರು, ಇವರಿಗ್ಯಾಕೆ ಇಬ್ಬರೇ ಗರ್ಲ್ ಫ್ರೆಂಡು, ಇವೆಲ್ಲವನ್ನೂ ನೋಡಿದಾಗ  ನಮ್ಮನ್ನು ಕಾಡುವ ಕಟ್ಟಕಡೆಯ ಪ್ರಶ್ನೆ ಹೀಗೂ ಉಂಟೆ!!!    

1 comment:

Anonymous said...

ಅಷ್ಟೊಂದು ಸುದ್ದಿವಾಹಿನಿಸಿಗಳಿದ್ದರೂ ಒಂದೂ ಕೂಡ ನಂಬಲರ್ಹವಾಗಿಲ್ಲ ಅನ್ನುವುದು ಖೇದಕರ.