ಛೇ ;-) :(...

ಕೆಲವು ಆಶ್ಚರ್ಯ ಗಳು ಅಂದ್ರೆ ನಾವು ಹೇಳುವ ಅನೇಕ ಸಂಗತಿಗಳು ನಿಜಗಳಾಗಿ ಬಿಡುತ್ತೆ . ಅಯ್ಯೋ ಅಯ್ಯೋ ನಿಜ ಕಣ್ರೀ .ನಿನ್ನೆ ಕಸ್ತೂರಿ ನ್ಯೂಸ್ ನಲ್ಲಿ ದೆವ್ವದ ಬಗ್ಗೆ ಒಂದು ಕಾರ್ಯಕ್ರಮ ಪ್ರಸಾರ ಆಗ್ತಾ ಇತ್ತು. ಅದನ್ನು ನಿರೂಪಣೆ ಮಾಡ್ತಾ ಇದ್ದ ಹೆಣ್ಣುಮಗಳು ದೆವ್ವದ ಬಗ್ಗೆ ವಿವರಣೆ ನೀಡ್ತಾ ಇದ್ದರು. ಬ್ಯಾಟರಾಯನ ಪುರದಲ್ಲಿ ಇರುವ ಒಂದು ಮರದಲ್ಲಿ ಹೆಣ್ಣು ಮುಖ  ಪ್ರತ್ಯಕ್ಷ ಆಗುತ್ತಂತೆ . ಸಂಜೆ ಹೊತ್ತು ಯಾರಿಗೂ ಅಲ್ಲಿಗೆ ಹೋಗೋಕೆ ಭಯ.ಈ ಕಾರ್ಯಕ್ರಮ ಆದಸ್ವಲ್ಪ ಸಮಯದ  ಬಳಿಕ ಏನಾಯ್ತು ಅಂದ್ರೆ ಈ ಮರದ ಲೈವ್ ಅಯ್ಯೊ ಅಯ್ಯೋ ಅದರ ಮುಂದೆ ವರದಿಗಾರ್ತಿ ದೆವ್ವದ ಮಹಿಮೆ ಗುಣಗಾನ ಮಾಡ್ತಾ ಇದ್ದರೆ , ಸ್ಟುಡಿಯೋದಲ್ಲಿ ಅದೇ ಬೆಳಗಿನಿಂದ ದೆವ್ವದ ಗುಣಗಾನ ಮಾಡುತ್ತಿದ್ದಾಕೆ ಆಕೆಗೆ ಪ್ರಶ್ನೆಗಳ ಸುರಿಮಳೆ ಮಾಡುತ್ತಾ ...  :-).  ಮೋಹಿನಿ ಕಾಟ ಬ್ಯಾಡ ಅಂತ ಗಂಡುಮಕ್ಕಳು ಮರದತ್ತ ಸುಳಿಯದೇ ಹೆಣ್ಣು ಹೈಕ್ಲಿಗಳನ್ನು ದೆವ್ವದ ಬಳಿ  ಬಿಟ್ಟಿದ್ದು ಕಂಡಾಗ ನನಗೆ ಅನ್ನಿಸಿದ್ದು ಛೆ ;-)



ಸುವರ್ಣ  ನ್ಯೂಸ್ ನಲ್ಲಿ ವಿಜಯಲಕ್ಷ್ಮಿ ನಡೆಸಿಕೊಡುವ ಸುವರ್ಣ ಫೋಕಸ್ ಕಾರ್ಯಕ್ರಮ ತುಂಬಾ ಚೆನ್ನಾಗಿರುತ್ತೆ. ನಿನ್ನೆ ಕನಕಪುರದ ಲೂಮ್ಸ್ ಗಳಲ್ಲಿ ಇರುವ ಜೀತಪದ್ದತಿ ಬಗ್ಗೆ ತಿಳಿದಂತಹ ಕಾರ್ಯಕ್ರಮ ಕಂಡು ಖೇದ ಅನ್ನಿಸಿತು. ಬೆಂಗಳೂರಿನ ಸಮೀಪ ಇಂತಹ ವಾತಾವರಣ ಛೇ  :(. ವಿಜಯಲಕ್ಷ್ಮಿ ಈ ಕಾರ್ಯಕ್ರಮದಲ್ಲಿ ಓದಿದಂತೆ ಧ್ವನಿ ನೀಡುವುದಕ್ಕಿಂತ ಮಾತನಾಡಿದಂತೆ ಹೇಳಿದರೆ ಒಳಿತು .

No comments: