
ವಾಹಿನಿಗಳಲ್ಲಿ
ಪ್ರಸಾರ ಆಗುವ ಕಾರ್ಯಕ್ರಮಗಳನ್ನು ಅಭಿರುಚಿಗೆ ತಕ್ಕಂತೆ ವೀಕ್ಷಿಸುತ್ತಾರೆ.ಆದಷ್ಟು ರಕ್ತ ಕುದಿಯ
ಬೇಕು, ಇಲ್ಲವೇ ಮತ್ತೇರ ಬೇಕು ಅಂತಹ ಕಾರ್ಯಕ್ರಮಗಳಿಗೆ ಹೆಚ್ಚು ವ್ಯಾಲ್ಯೂ. ಆದರೇ
ಅದಕ್ಕಿಂತ ಅಧಿಕ ಪ್ರಾಮುಖ್ಯತೆ ನೀಡುವುದು ಯಾರದೋ
ಮನೆಯ ಜಗಳ, ಊರಿನ ಗಲಾಟೆ ಹೀಗೆ ಅನೇಕ ಸಂಗತಿಗಳು ನಿಜಕ್ಕೂ ಅಷ್ಟೊಂದು ಪ್ರಾಮುಖ್ಯತೆ ಇಲ್ಲದೇ
ಇದ್ದರೂ ಅದನ್ನು ಎತ್ತಿ ಹಿಡಿಯುವ ಪ್ರಯತ್ನ. ಕೆಲವೊಂದು ಅದೆಷ್ಟರ ಮಟ್ಟಿಗೆ ತಲೆ ಕೆಡುತ್ತೇ
ಅಂದ್ರೆ ದೊಡ್ಡ ಚಾನೆಲ್ ಗಳಿಗಿಂತ ಸಣ್ಣಪುಟ್ಟ ಚಾನೆಲ್ ವೀಕ್ಷಿಸೋದು ಒಳ್ಳೆಯದು ಎಂದು ಅಂದುಕೊಳ್ತಾರೆ
ವೀಕ್ಷಕರು . ಆದರೆ ಅವರು ಹಾಗೆ ಮಾಡಲ್ಲ ಬಿಡಿ.
ಟೀವಿ ನೈನ್ ವಾಹಿನಿಯಲ್ಲಿ ಸ್ವಲ್ಪ ಜಾಸ್ತೀನೆ ಗ್ಲಾಮರ್ ಹೆಣ್ಣು ಮಗಳು ಶೀತಲ್ ಶೆಟ್ಟಿ. ಆಕೆ
ಮಾತು, ಕಣ್ಣು ಮಿಟುಕಿಸೋ ರೀತಿ, ನಗು, ಸ್ವಲ್ಪ ಜಾಸ್ತಿನೇ ಫೇಮಸ್ಸು. ಆಕೆ ತಾನು ಮಾಧ್ಯಮದಲ್ಲಿ
ಒಂದೊಳ್ಳೆ ಸ್ಥಾನ ಪಡೆಯಲು ತನ್ನದೇ ಆದ ವಿಶಿಷ್ಟ ಶೈಲಿಯನ್ನು ಬೆಳೆಸಿಕೊಂಡರು. ತಮಾಷೆ ಅಂದ್ರೆ ಆ
ಹೆಣ್ಣುಮಗಳನ್ನು ಅನುಸರಿಸೋ ಮಂದಿ ಹೆಚ್ಚು ಇದ್ದಾರೆ. ಎಲ್ಲಾ ಕನ್ನಡ ಚಾನೆಲ್ಗಳಲ್ಲೂ ಇಂತಹ ಧ್ವನಿ
ಅಥವಾ ಸ್ಟೈಲು ಹೊಂದಿರುವ ಹೆಣ್ಣುಮಕ್ಕಳು ಇದ್ದೇ ಇದ್ದಾರೆ.ಅರೇ ಶೀತಲ್ ಇಲ್ಲಿಗೆ ಬಂದ್ರ ಎಂದು
ಯೋಚಿಸುವಂತೆ ಮಾಡುತ್ತೇ ಅವರುಗಳ ಧ್ವನಿ ಕೇಳಿದಾಗ!

ಇದೆ
ವಾಹಿನಿಯ ಉಷಾ ಶೈಲಿ ನನಗೆ ತುಂಬಾ ಇಂಪ್ರೆಸ್
ಮಾಡಿದೆ. ಸರಳವಾಗಿ , ಸ್ಪಷ್ಟವಾಗಿ ವಿವರಣೆ ನೀಡುವ ಈಕೆ ಬಗ್ಗೆ ಸ್ವಲ್ಪ ಜಾಸ್ತೀನೆ ಗಮನ. ಟೀವಿ
ನೈನ್ ನ ಸಮೀನಾ, ಉಷಾ, ಶೀತಲ್, ರಾಧಿಕ ಹಾಯಾಗಿ
ಒಂದೇ ಕಡೆ , ಅದೂ ಒಂದೇ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಾ ಇದ್ದಾರೆ. ಅದೂ ಒಳ್ಳೇದು ಅಲ್ವೇ !
ಒಂದೇ
ರೀತಿಯ ಕಾರ್ಯಕ್ರಮ ಅನ್ನುವಾಗ ನೆನಪಿಗೆ ಬರುವುದು
ಸೋನಿ ವಾಹಿನಿಯ ಅರ್ಚನಾ ಪೂರಣ್ ಸಿಂಗ್.
ಕಾಮಿಡಿ ಸರ್ಕಲ್ ತೀರ್ಪುಗಾರ್ತಿ . ಆಕೆಯು ಜನರಿಗೆ ವೀಕ್ಷಕರ ಮುಂದೆ ಅನೇಕ ವರ್ಷಗಳಿಂದ ತೀರ್ಪುಗಾರ್ತಿಯಾಗಿಯೇ
ಕಾಣಿಸಿಕೊಳ್ಳುತ್ತಿದ್ದಾರೆ. ಹಲವಾರು ವರ್ಷಗಳಿಂದ ವೀಕ್ಷಕರು ಸಹ ಆಕೆಯನ್ನು ಸ್ವೀಕರಿಸಿದ್ದಾರೆ.
ನಾನಂತೂ ಆಕೆ ಅಹಹಅ ಅಹಹ ಅಹ್ಹ ಅಹ್ಹ ನಗುವಿಗೆ
ಫಿದಾ. ಕಣ್ಣಲ್ಲಿ ಒಂದು ಚೂರು ಭಾವನೆ ಇರೋದೇ ಇಲ್ಲ, ಕೆಲವು ಬಾರಿ ನಗುತ್ತಿದ್ದರೂ ಮುಖದ ಭಾವ
ವ್ಯಾಕ್ ಅನ್ನೋ ರೀತಿ ಇರುತ್ತೆ.. ಇಂತಹ ಪ್ರತಿಭೆ ಎಲ್ಲಿದ್ದಾರೆ ಹೇಳಿ ?
No comments:
Post a Comment