ನೋಡಿದ್ರೆ
ವಾಹಿನಿಗಳಲ್ಲಿ ನ್ಯೂಸ್ ನೋಡ ಬೇಕು. ಎಂತಾ ಹೆದರಿಕೆ ಹುಟ್ಟಿಸ್ತಾರೆ ಗೊತ್ತಾ ನ್ಯೂಸ್ ರೀಡರ್ಸ್,ಒಂದು
ಸಣ್ಣ ಎಳೆ ಅದನ್ನು ಎಳೆದು ಎಳೆದು ಅದಕ್ಕೊಂದು ಸ್ವರೂಪ ನೀಡ್ತಾರೆ. ಮೂಲ ಸುದ್ದಿ ಅಂತಿಮವಾಗಿ
ಮತ್ಯೇನೋ ಆಗಿರುತ್ತೆ. ವರದಿಗಾರ, ನಿರೂಪಕರು ಸರಿಯಾಗಿಯೇ ಹೇಳಿದ್ದರೂ ಸಾಮಾನ್ಯ ವೀಕ್ಷಕ ಅದನ್ನು
ಬೇರೆಯ ರೀತಿಯಲ್ಲೆ ಅರ್ಥೈಸಿಕೊಳ್ಳುವಂತೆ ಮಾಡಿ ಬಿಡ್ತಾರೆ. ಸ್ಟುಡಿಯೋದಲ್ಲಿ ಕುಳಿತು ಕೇಳಿದ್ದ ಪ್ರಶ್ನೆಗಳನ್ನು ಬದಲಾಯಿಸಿ
ಬದಲಾಯಿಸಿ ಕೇಳಿದ್ರೆ ಅಲ್ಲಿಂದ ಅದೇ ಉತ್ತರ ಬೇರೆ ಬೇರೆ ರೀತಿಯಲ್ಲಿ...
ಜನಶ್ರೀ
ವಾಹಿನಿಯಲ್ಲಿ ವಸಂತ್ ಮತ್ತು ವೀಣಾ ಪೂಜಾರಿ ಕೆ.ಸಿ. ಕೊಂಡಯ್ಯ ಅವರ ಬಗ್ಗೆ ವಾರ್ತೆ ಓದುತ್ತಾ,
ಜೊತೆಗೆ ಪ್ರಶ್ನೆಗಳ ಸುರಿಮಳೆ ಮಾಡುತ್ತಾ ಇದ್ರು.
ಅದನ್ನು ಸಂಪೂರ್ಣವಾಗಿ ಗಮನಿಸಿದರೆ ಅದು ಕೇವಲ ಒಂದು ಎಳೆ.. ಆದರೆ ಅದನ್ನು ಎಳೆದ ರೀತಿ ಅಬ್ಬಾ! ಏನೇ
ಹೇಳಿ ಇಂತಹ ತಾಕತ್ ಇರೋದು ಮಾಧ್ಯಮದವರಿಗೆ ಮಾತ್ರ.

ಪ್ರಶ್ನೆ
.-ನಿರೂಪಕರಿಂದ-ಹೌದಾ ಹಾಗಾದ್ರೆ ಯಾಕೆ ಹಾಗಾಯ್ತು, ಉತ್ತರ ವರದಿಗಾರರಿಂದ- ಇಲ್ಲ ಅದಕ್ಕೆ
ಹಾಗಾಯ್ತು, ಅದು ಹಾಗೆ ಆಗದೆ ಇದ್ದಿದ್ದರೆ ಏನಾಗುತ್ತಿತ್ತು. ಹಾಗೆ ಆಗದೇ ಇದ್ದಿದ್ದಿದ್ದರೇ ಏನಾಗುತ್ತಿತ್ತು
ಎನ್ನುವ ಸಂಗತಿ ಸ್ಪಷ್ಟವಾಗಿ ತಿಳಿದಿಲ್ಲ, ಅದಕ್ಕೆ ಸಂಬಂಧ ಪಟ್ಟಂತೆ ತನಿಖೆ ಆಗ ಬೇಕಿದೆ.
ನಿಜಕ್ಕೂ ತನಿಖೆ ಆಗಬೇಕಾ ಏನನ್ನುತ್ತಾರೆ ಸ್ಥಳೀಯರು, ಅವರ ಬಳಿ ಮಾತನಾಡಿದಾಗ ಅವರಿಗೆ ಈ ವಿಷಯ ಗೊತ್ತಿಲ್ಲವೆಂದು
ಹೇಳಿದ್ದಾರೆ, ಆದರೂ ಯಾವುದೇ ನಿರ್ಧಾರಕ್ಕೂ ಬರದಂತಹ ಸ್ಥಿತಿಯಲ್ಲಿ ಅವರಿದ್ದಾರೆ. ಓಕೆ ಓಕೆ
ನಿಮ್ಮ ಎಲ್ಲಾ ಮಾಹಿತಿಗಳಿಗೂ ಧನ್ಯವಾದಗಳು...
ಸಾಕಷ್ಟು
ಸರ್ತಿ ಇಂತಹ ಮಜಗಳನ್ನು ತೆಗೆದುಕೊಳ್ಳುವ ಸಲುವಾಗಿ ನ್ಯೂಸ್ ನೋಡ್ತೀನಿ ನಾನು.


ಇಂದು
ಪಬ್ಲಿಕ್ ಟೀವಿಯಲ್ಲಿ ನಿರೂಪಕ ರಾಘವ್ ನಡೆಸಿ ಕೊಡುತ್ತಿದ್ದ ಕಾರ್ಯಕ್ರಮ ವೀಕ್ಷಿಸಿದಾಗ ಕ್ಷಣ ಅರ್ಥ ಆಗಲಿಲ್ಲ. ಅ ಬಳಿಕ ವಿಷಯ ಅರ್ಥ ಆಯ್ತು
ಬಿಡಿ. ತಿರುಪತಿ ತಿಮ್ಮಪ್ಪನ ಪಾಪ್ಯೂಲಾರಿಟಿ ಕಡಿಮೆ ಆಯ್ತಾ ಎನ್ನುವ ನೋವು ರಾಘವ್ ದಾಗಿತ್ತು.
ಇಲ್ಲ ಎನ್ನುವ ಸಮಾಧಾನ ಅಲ್ಲಿ ನೆರೆದಿದ್ದ ಅತಿಥಿಗಳದ್ದು . ಆಂಧ್ರ ಇಬ್ಭಾಗ ಆಗಿರೋ ಈ ಸಮಯದಲ್ಲಿ
ಸಾಮಾನ್ಯರಿಗೆ ತೊಂದರೆ ಆಗ ಬಹುದು ಎನ್ನುವ ಆತಂಕ ಸಾಮಾನ್ಯ. ಅದಷ್ಟೆ ಕಾರಣ ಮತ್ತೇನೂ ಅಲ್ಲ.
ಆದ್ರೂ ರಾಘವ್ ಜನಕ್ಕೆ ಚೆನ್ನಾಗಿ ಭಯ ಹುಟ್ಟಿಸಿದ್ರಿ ಕಣ್ರಿ. ಭಕ್ತರನ್ನು ಆಕರ್ಷಿಸಲು ದಸರೆಯಲ್ಲಿ ನಡೆಯುವ ಬ್ರಹ್ಮ
ರಥೋತ್ಸವದಲ್ಲಿ ಭಕ್ತರಿಗಾಗಿ ವಿಶೇಷ ಲಡ್ಡು ತಯಾರಿಯಲ್ಲಿದೆ ಟಿಟಿಡಿ.. ಜಾಸ್ತಿ ದ್ರಾಕ್ಷಿ
ಗೋಡಂಬಿ ಹಾಕಿ ಮಾಡುವ ಲಡ್ಡು !
No comments:
Post a Comment