ಯಾಕಿಷ್ಟಾ... ಯಾಕಿಷ್ಟಾಂದ್ರೆ !





ಟೀವಿ ವೀಕ್ಷಣೆ  ಮಾಡುವುದನ್ನೇ ಹಾಬಿ ಅಂತ ಬಹಳಷ್ಟು ಜನರು ಹೇಳ್ತಾರೆ. ಛೇ  ಹಾಬಿ ಗೆ ಬೆಲೆನೇ ಇಲ್ಲ ಎಂದು ಸೋ ಕಾಲ್ಡ್ ಬುದ್ದಿವಂತರು ಬೇಸರ ಪಡ್ತಾರೆ.  

 ಏನೇ ಹೇಳಿ ಟೀವಿ ನೋಡದೇ ಇರೋಕೆ ಆಗಲ್ಲ ಅನ್ನುವ ಮಂದಿ ಈಗ ಜಾಸ್ತಿ. ಟೀವಿ ಅಂದ ತಕ್ಷಣ ಅಭಿರುಚಿ-ಆಸಕ್ತಿಗೆ ಅನುಗುಣವಾಗಿ  ಜನರು  ಕಾರ್ಯಕ್ರಮ ವೀಕ್ಷಿಸುತ್ತಾರೆ. ಅಲ್ಲಿ ಅವರು ಆಸಕ್ತಿಯಿಂದ ವೀಕ್ಷಿಸುವ ಆಂಕರ್ ಗಳು, ಆಕ್ಟರ್ ಗಳು ಇರ್ತಾರೆ. ನ್ಯೂಸ್  ರೂಮ್ ಮಂದಿ ಬಗ್ಗೇ ನೂ ಹೆಚ್ಚು ಗಮನ ಕೊಟ್ಟು ವೀಕ್ಷಿಸುವ ವೀಕ್ಷಕರಿದ್ದಾರೆ. ಅಯ್ಯೋ ಹೌದ್ರಿ ಹೌದ್ರಿ ! ! 



ನನ್ನ ಕಲೀಗ್ ರೂಪಾಗೆ ಟೀವಿ ನೈನ್  ವರದಿಗಾರ ವಿನಾಯಕ ಗಂಗೊಳ್ಳಿ ಶೈಲಿ ಧಾಟಿ ಅಂದ್ರೆ ಖುಷಿ. ಪಾಪದ ಹುಡುಗ ಹೇಳೋದು ವರದಿ,  ಸಾಮಾನ್ಯವಾಗಿ  ಪ್ರಸಕ್ತ ರಾಜಕೀಯದ  ಸಂಗತಿಗಳು ಅಂದ್ರೆ ಸ್ವಲ್ಪ ಬೋರ್ , ಆ ಬೋರ್ ನ್ನು ಆಸಕ್ತಿದಾಯಕವಾಗಿ ವರದಿಗಾರ ಮಾಡ ಬೇಕೆಂದ್ರೆ ಮಾತಿನ ಶೈಲಿ ಚೆನ್ನಾಗಿರ ಬೇಕು. ಯಾಕಿಷ್ಟ ನಿಮಗೆ ಅಂತ ನಾನು ಆಕೆಯನ್ನು ಕೆಣಕಿದೆ. ತಪ್ಪು ತಿಳಿದಾರು ಎಂದು ಭಾವಿಸಿ ಹೇಳಿದೆ ಯಾಕೇಂದ್ರೆ ನನಗೆ ಸಲ್ಮಾನ್ ಖಾನ್ ಇಷ್ಟ . ಯಾಕಿಷ್ಟ ಅಂದ್ರೆ ಅದಕ್ಕೆ ಸಾವಿರ ಕಾರಣ ಹೇಳ್ತೀನಿ  ಎಂದೆ.  ಅದಕ್ಕೆ ಆಕೆ ಹೇಳಿದ್ದು ಅವರು ಲೈವ್ ನಲ್ಲಿ ನಿರೂಪಣೆ , ತಪ್ಪಿಲ್ಲದೆ ಮಾತನಾಡುವ ಶೈಲಿ ಇಷ್ಟ ಆಗುತ್ತೆ ಅಂದ್ರು, ಹೌದು ವಿನಾಯಕ ನಮಗೂ ಆ ಕಾರಣಕ್ಕೆ ನೀವು ಇಷ್ಟ ಆಗೋದು. ನೋಡಿ ವೀಕ್ಷಕರು ಪ್ರತಿಯೊಂದು ಸಂಗತಿಗೂ ಆದ್ಯತೆ ನೀಡ್ತಾರೆ.  ಇನ್ನೂ ಹಲವಾರು ವರದಿಗಾರರಿದ್ದಾರೆ  ವೀಕ್ಷಕರು ಇಷ್ಟ ಪಡುವಂತಹವರು . 

ಸುವರ್ಣ ನ್ಯೂಸ್ ನಲ್ಲಿ ಪ್ರಸಾರ ಆಗುವ ಉಡೀಸ್  ಕಾರ್ಯಕ್ರಮ ಸಕತ್. ಪ್ರಸ್ತುತ ರಾಜಕೀಯ ಅಂಶಗಳು, ಸಿನೆಮಾ ಅಂಶಗಳನ್ನು ಒಳಗೊಂಡ ಕಾರ್ಯಕ್ರಮ. ಇದರ ನಿರೂಪಕ, ಮುಖ್ಯಆಕರ್ಷಣೆ ವಿಶ್ವ. ಹೆಸರಿನಂತೆ ಅಪಾರ –ಅಪರೂಪದ ಪ್ರತಿಭಾವಂತ. ವೈರಸ್ ಆದರಲ್ಲಿ ಆತನ ಹೆಸರು.. ಮಜಾ ಬರುತ್ತೆ  ಕಾರ್ಯಕ್ರಮ. 



1 comment:

Unknown said...

nimma barahave athraagolla marayre!