ವಾರದ ಅತಿಥಿ

 




ಇತ್ತೀಚೆಗೆ  ವೆಬ್ ಸೀರಿಸ್  ನೋಡುತ್ತಿದ್ದೀನಿ. ಆ ಭಾಷೆ ಬಳಕೆ, ನೇರವಂತಿಕೆ ಹೆಸರಲ್ಲಿ ಎಲ್ಲಾ ಬಿಚ್ಚಿಡುವ ಅಂಶಗಳು  ಒಂದಷ್ಟು ಪ್ರಮಾಣದಲ್ಲಿ ಕಿರಿಕಿರಿ  ಉಂಟು ಮಾಡಿದರು, ಕಥೆ, ವಿಷಯ, ನಟನೆ, ಖುಷಿ  ಕೊಡುತ್ತಿದೆ.. 
ಇಂತಹ ವೆಬ್ ಸಿರೀಸ್ ಕಾಲದಲ್ಲೂ ತನ್ನತನವನ್ನು ಉಳಿಸಿಕೊಂಡಿರುವ ಚಾನಲ್ ಚಂದನ.. ಇದರಲ್ಲಿಪ್ರಸಾರವಾಗುವ ಕಾರ್ಯಕ್ರಮಗಳ ಬಗ್ಗೆ ವಿವರಿಸುವಷ್ಟಿಲ್ಲ,  ಸದಭಿರುಚಿಯನ್ನು ಹೊಂದಿರುತ್ತವೆ. 
ಚಂದನ ವಾರದ ಅತಿಥಿ ಎನ್ನುವ  ಟಾಕ್ ಷೋ  ಒಂದು ಸುಂದರ ಮಾಹಿತಿಭರಿತ ಕಾರ್ಯಕ್ರಮ. ಶ್ರೀನಿವಾಸ್, ಶ್ವೇತ  ಜಗದೀಶ್ ಮಠಪತಿ ಸೇರಿದಂತೆ   ಸುಲಲಿತ ಕನ್ನಡ ಮಾತುಗಾರ  ಆಂಕರ್ ಗಳು ಅತಿಥಿಗಳಷ್ಟೇ  ಈ ಕಾರ್ಯಕ್ರಮದ ಆಕರ್ಷಣೆ. ಉದಯ ವಾಹಿನಿ..., ಹಲವಾರು ವಾಹಿನಿಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು   ವೀಕ್ಷಕರು ಸವಿದ್ದಿದ್ದಾರೆ. ಅಂತಹ ಉತ್ತಮ ಕಾರ್ಯಕ್ರಗಳ ಪಟ್ಟಿಗೆ ವಾರದ ಅತಿಥಿ ಸಹಿತ ಸೇರ್ಪಡೆಯಾಗುತ್ತದೆ.