Posts

Showing posts from December 2, 2012

ಭಾಷೆ

Image
ಭಾಷೆಯ ಪ್ರಾಮುಖ್ಯತೆ ಎಲ್ಲರಿಗೂ ಗೊತ್ತೇ ಇದೆ.. ಅದನ್ನು ವಿವರಿಸೋಕೆ ಹೋದ್ರೆ ನಿಮಗೂ ಕಷ್ಟ ನನಗೂ ಸಹ ! 
ವಿಶ್ವದಲ್ಲಿರುವ ಎಲ್ಲ ಭಾಷೆಗಳ ಕಥೆ ಬ್ಯಾಡ ನಮ್ಮ ಕನ್ನಡವೇ ಬೇರೆ ಬೇರೆ ಜಾಗಗಳಲ್ಲಿ  ಭಿನ್ನವಾಗಿರುತ್ತದೆ.ಅಂತಹುದರಲ್ಲಿ ಬೇರೆ ಭಾಷೆ ಅಂದ್ರೆ ಸುಮ್ನೆನಾ!
ಪಂಜಾಬಿ ಭಾಷೆ ಬಗ್ಗೆ ನನಗೆ ಮೊದಲಿಂದಲೂ ಒಂದು ರೀತಿ ಕುತೂಹಲ, ಒಂದು ಸ್ವಲ್ಪ ಆಸಕ್ತಿ. ದೇವರಾಣೆ ಹಾಗಂತ ಆ ಭಾಷೆಯನ್ನೂ ಕಲಿತಿಲ್ಲ.. ನನಗೆ ಇರುವ ಅಭ್ಯಾಸಗಳಲ್ಲಿ ಹಾಡು ಕೇಳುವುದು ಒಂದು. ಪಂಜಾಬಿ ಗಾನಗಳಲ್ಲಿ ಗುರುದಾಸ್ ಮಾನ್ ಅವರ ಧ್ವನಿ ರವಷ್ಟು ಜಾಸ್ತಿ ಇಷ್ಟ.. ಹಾಡುಗಳಲ್ಲಿ ಇರುವ ಪಂಜಾಬಿ ಪದಗಳು ಕನ್ನಡದಲ್ಲಿ ಬೈಗುಳ ಪದಗಳಂತೆ ಕೇಳುತ್ತೆ.. ಛೆ ಹಾಗೆಲ್ಲ ಹೇಳ ಬಾರದು ಅಂತ ಅಂದ್ರೂ ಇದು ಸತ್ಯ ಅಲ್ವೇ ಅದೇ ರೀತಿ ನೀವು ಜಮ್ಮು ಜನ ಮಾತಾಡೋ ಭಾಷೆ ಕೇಳ ಬೇಕು ಣ ..ಣ ಅನ್ನೋ ಅಕ್ಷರ ಹೆಚ್ಚಾಗಿ ಕಿವಿಗೆ ತಲುಪೋದು. ಭಾಷೆ ಅಂದಾಗ ತಮ್ಮ ಮಾತೃಭಾಷೆ ಬಗ್ಗೆ ಸುಂದರವಾಗಿ ಹೇಳಿದ್ದು ಹಾಸ್ಯ ಮಾಸ್ಟರ್  ರಿಚರ್ಡ್ ಲೂಯಿಸ್. ಕೊಂಕಣಿ ಭಾಷೆಯಲ್ಲಿ ಯಾರು ಅಂತ ಕೇಳುವುದು  ಕೋಣ .. ಅದೇ ನಮ್ಮ ಕನ್ನಡದಲ್ಲಿ ..  ಅದೇ ರೀತಿ ನಾನು ಅನ್ನುವ ಉತ್ರ ಭೈನ್ಸ್ ...ಕನ್ನಡದ ಕೋಣ ಹಿಂದಿಯ ಕೋಣ ಜೊತೆ ಆಗುತ್ತೆ..  ಟೀವಿ  ನೈನ್  ವಾಹಿನಿಯಲ್ಲಿ ಈಚೆಗೆ ಈ ಕಾರ್ಯಕ್ರಮ ಪ್ರಸಾರ ಆಯ್ತು. ಲೂಯಿಸ್ ಅವರ ಹಾಸ್ಯ ಹೆಚ್ಚು ಉಲ್ಲಾಸ ನೀಡಿದ್ದು ಭಾಷೆಯಿಂದ, ದುಡ್ಡು , ದ್ರವರೂಪ..ಇಂತಹ  ಅನೇಕ ಸಂಗತಿಗಳ ಬಗ್ಗೆ ಲೂಯಿಸ್ ತಿಳಿ…

ಬಿಗ್ ಮಂಕಿ

Image
ಕೆಲವು ಕಾರ್ಯಕ್ರಮಗಳು ತಲೆ ಕೆಡಿಸಿ ರಾಡಿ ಮಾಡಿ ಬಿಡುತ್ತದೆ, ಅದೇ ಒಂದಷ್ಟು ಕಾರ್ಯಕ್ರಮಗಳು ಪದೇಪದೇ  ನೋಡುವಂತೆ ಮಾಡುತ್ತದೆ.ಅದೇ ರೀತಿ ಕೆಲವು ಚಾನೆಲ್ ಗಳು ಅಷ್ಟೇ ಅನೇಕ ಹೊಸ ಕಾರ್ಯಕ್ರಮಗಳನ್ನು ನೀಡುತ್ತದೆ, ವೀಕ್ಷಿಸಲು ಎಷ್ಟು ಯೋಗ್ಯವೋ ಅಷ್ಟೇ ತಲೆ ಬಿಸಿ ಮಾಡುತ್ತದೆ.. ಬಿಡಿ ಅದು ಅವರ ತಪ್ಪಲ್ಲ.. ಆದರೆ ಎಲ್ಲ ಕಾಲಕ್ಕೂ ಇಷ್ಟ ಆಗುವಂತಹ ಕೆಲವು  ಕೆಲವು ಕಾರ್ಯಕ್ರಮಗಳಿವೆ ಅದರಿಂದ ಮನಸ್ಸಿಗೆ ಖುಷಿ ಜೊತೆಗೆ ಇನ್ನು ಮತ್ತು ತಿಳಿಯಲೇ ಬೇಕೆಂಬ ಆಸೆ ಉಂಟಾಗುತ್ತದೆ.ಅಂತಹ ಕಾರ್ಯಕ್ರಮಗಳಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಸುಧಾಕರ ಶರ್ಮ ಅವರ ಹೊಸಬೆಳಕು ಒಂದು. ಅತ್ಯದ್ಭುತ ವಾಗ್ಮಿ, ಚಿಂತಕ, ವಿಚಾರವನ್ನು ಎಲ್ಲ ವೀಕ್ಷಕರಿಗೂ ಅರ್ಥ ಆಗುವಂತೆ ಹೇಳುವ ಮೇಷ್ಟ್ರು..
ವೇದ ,ಉಪನಿಷತ್ ಇಷ್ಟಪಡದ ಜನರ ಬಗ್ಗೆ ನಾನೇನು ಹೇಳಲಾರೆ, ವಿಷಯದ ವಿಸ್ತಾರದ ಬಗ್ಗೆ ಅರಿಯ ಬೇಕಾದರೆ ಹೊಸಬೆಳಕು ಕಾರ್ಯಕ್ರಮ ವೀಕ್ಷಣೆ ತುಂಬಾ ಮುಖ್ಯ.ಪ್ರತಿಭಾನುವಾರ  ಪ್ರಸಾರ ಆಗುತ್ತೆ.. ಈಗಾಗಲೇ ಅನೇಕ ಎಪಿಸೋಡ್ ಗಳು ಪ್ರಸಾರ ಆಗಿವೆ.. ಅದರ ಸೀಡಿಗಳು ಸಿಕ್ತಾವೆ..ಚಂದನದಲ್ಲಿ ಪ್ರಸಾರ ಆಗುವ, ಅದರಲ್ಲೂ  ಮನದಾನಂದ ಹೆಚ್ಚಿಸುವ ಕಾರ್ಯಕ್ರಮ ಇದು.
CNN IBN ವಾಹಿನಿಯಲ್ಲಿ  ಪಾಸಿಟಿವ್ ಇಂಡಿಯಾ ಅನ್ನುವ ಕಾರ್ಯಕ್ರಮ ಪ್ರಸಾರ ಆಯ್ತು,ಸಕತ್ ಕಣ್ರೀ ವಾವ್! ಯಾಕೆ ಗೊತ್ತಾ.. ಸಾಧನೆ ಮಾಡಿದ ಸಬಲತೆಯ ಉದಾಹರಣೆಯ ಪ್ರತೀಕವಾದ ಹಳ್ಳಿ ಹೆಣ್ಣು ಮಕ್ಕಳ ಸಾಧನೆ ಬಗ್ಗೆ  ಇತ್ತು ಈ ಬಾರಿ.. ನಿ…

ಓಟ್ಸ್

Image
ಊಟ  ತನ್ನಿಚ್ಛೆ ನೋಟ ಪರರ ಇಚ್ಛೆ ಹಾಗೆ ಅಂತಾರಪ್ಪ. ಹಾಗಂತ ಸಿಕ್ಕಾ ಪಟ್ಟೆ ತಿಂದರೆ ಅಜೀರ್ಣ ಗ್ಯಾರೆಂಟಿ, ಅದಕ್ಕಿಂತಲೂ ಒಬಿಸಿಟಿ ಖಂಡಿತ ..ಈಗ ಯಾರು ಹೇಳಿಲ್ಲ ನಮಗೆ ಆ ಅನುಭವ ಆಗ್ತಾ ಇದೆ ನಮ್ಮ  ಜೀವನಶೈಲಿಯಿಂದ.
ಹಾಗೆಂದು ಒಳ್ಳೆಯ ಅಡುಗೆ, ಅದ್ರ ಕಲಿಕೆ ಯಾರೂ ಬೇಡ ಎಂದು ಹೇಳಲ್ಲ,ಪ್ರಾಯಶಃ ಈ ಕಾರಣದಿಂದಲೇ ಇರಬೇಕು ಅಡುಗೆ ಕಾರ್ಯಕ್ರಮಗಳು, ಅದಕ್ಕೆ ಸಂಬಂಧಿಸಿದ ರಿಯಾಲಿಟಿ ಶೋಗಳು ಹೆಚ್ಚು ಜನಪ್ರಿಯ ಆಗ್ತಾ ಇರೋದು.
ಆಂಗ್ಲ ವಾಹಿನಿಗಳಲ್ಲಿ ಸ್ಟಾರ್ ವರ್ಲ್ಡ್ ಅಡುಗೆ ರಿಯಾಲಿಟಿ ಶೋಗಳಲ್ಲಿ ಮುಂದು. ಅಷ್ಟು ಜನ ಸ್ಪರ್ಧಿಗಳು ಮಾಡುವ ಅಡುಗೆ ಎಲ್ಲದರ ರುಚಿ ಕೇವಲ ಮೂರು ಜನ ನೋಡಿ ಮುಗಿಸ್ತಾರೆ ಅಂದ್ರೆ ಅವರ ಜಿಹ್ವ ಜಾಪಲ್ಯ ಹೇಗಿರಬೇಕು,ಅದಕ್ಕಿಂತ ಅವರ ಜೀರ್ಣಶಕ್ತಿ.. ! ಏನೇ ಕೀಟಲೆ ಮಾಡಿದ್ರು ಸರಿಯೇ ಆ ಕಾರ್ಯಕ್ರಮ ಅಂದ್ರೆ ಮಾಸ್ಟರ್  ಶೆಫ್ ,ಅದರಲ್ಲೂ ಆಸ್ಟ್ರೇಲಿಯಾದ ಮಾಸ್ಟರ್  ಶೆಫ್  ಸ್ಪರ್ಧೆ ವೀಕ್ಷಿಸೋಕೆ ಇಷ್ಟ ಆಗುತ್ತೆ. ಮಾಸ್ಟರ್  ಶೆಫ್ ನಲ್ಲಿ ಕೇವಲ ದೊಡ್ಡವರು ಮಾತ್ರ ತಮ್ಮ ಪ್ರತಿಭೆ ತೋರ ಬೇಕಿಲ್ಲ, ಚಿಕ್ಕಮಕ್ಕಳು ತಮ್ಮಲ್ಲಿ ಅಡಗಿರುವ  ಅಡುಗೆ ಕಲೆ ಪ್ರದರ್ಶಿಸ ಬಹುದು.ನಾವು ನಿಮಗೆ ವೇದಿಕೆ ಕಲ್ಪಿಸಿಕೊಡ್ತೀವಿ ಅಂತ ಮಾಸ್ಟರ್ ಶೆಫ್  ಜೂನಿಯರ್   ರಿಯಾಲಿಟಿ ಶೋ  ಸಿದ್ಧ ಮಾಡಿ ವೀಕ್ಷಕರ ಮುಂದೆ ಇಟ್ಟಿದೆ. ಎಂಟು,ಹತ್ತು, ಹನ್ನೆರಡು ವರ್ಷದ ಹೆಣ್ಣು-ಗಂಡು ಮಕ್ಕಳು ಇದರ ಜೀವಾಳ..ಅಯ್ಯು ಏನ್ ಅಡುಗೆ ಮಾಡ್ತಾರೆ ಗೊತ್ತೇನ್ರಿ. ಬೆಂಕಿ, ಚಾಕು, ಆಹ…