ಭಾಷೆ

ಭಾಷೆಯ ಪ್ರಾಮುಖ್ಯತೆ ಎಲ್ಲರಿಗೂ ಗೊತ್ತೇ ಇದೆ.. ಅದನ್ನು ವಿವರಿಸೋಕೆ ಹೋದ್ರೆ ನಿಮಗೂ ಕಷ್ಟ ನನಗೂ ಸಹ ! 
ವಿಶ್ವದಲ್ಲಿರುವ ಎಲ್ಲ ಭಾಷೆಗಳ ಕಥೆ ಬ್ಯಾಡ ನಮ್ಮ ಕನ್ನಡವೇ ಬೇರೆ ಬೇರೆ ಜಾಗಗಳಲ್ಲಿ  ಭಿನ್ನವಾಗಿರುತ್ತದೆ.ಅಂತಹುದರಲ್ಲಿ ಬೇರೆ ಭಾಷೆ ಅಂದ್ರೆ ಸುಮ್ನೆನಾ!

ಪಂಜಾಬಿ ಭಾಷೆ ಬಗ್ಗೆ ನನಗೆ ಮೊದಲಿಂದಲೂ ಒಂದು ರೀತಿ ಕುತೂಹಲ, ಒಂದು ಸ್ವಲ್ಪ ಆಸಕ್ತಿ. ದೇವರಾಣೆ ಹಾಗಂತ ಆ ಭಾಷೆಯನ್ನೂ ಕಲಿತಿಲ್ಲ.. ನನಗೆ ಇರುವ ಅಭ್ಯಾಸಗಳಲ್ಲಿ ಹಾಡು ಕೇಳುವುದು ಒಂದು. ಪಂಜಾಬಿ ಗಾನಗಳಲ್ಲಿ ಗುರುದಾಸ್ ಮಾನ್ ಅವರ ಧ್ವನಿ ರವಷ್ಟು ಜಾಸ್ತಿ ಇಷ್ಟ.. ಹಾಡುಗಳಲ್ಲಿ ಇರುವ ಪಂಜಾಬಿ ಪದಗಳು ಕನ್ನಡದಲ್ಲಿ ಬೈಗುಳ ಪದಗಳಂತೆ ಕೇಳುತ್ತೆ.. ಛೆ ಹಾಗೆಲ್ಲ ಹೇಳ ಬಾರದು ಅಂತ ಅಂದ್ರೂ ಇದು ಸತ್ಯ ಅಲ್ವೇ
ಅದೇ ರೀತಿ ನೀವು ಜಮ್ಮು ಜನ ಮಾತಾಡೋ ಭಾಷೆ ಕೇಳ ಬೇಕು ಣ ..ಣ ಅನ್ನೋ ಅಕ್ಷರ ಹೆಚ್ಚಾಗಿ ಕಿವಿಗೆ ತಲುಪೋದು.
ಭಾಷೆ ಅಂದಾಗ ತಮ್ಮ ಮಾತೃಭಾಷೆ ಬಗ್ಗೆ ಸುಂದರವಾಗಿ ಹೇಳಿದ್ದು ಹಾಸ್ಯ ಮಾಸ್ಟರ್  ರಿಚರ್ಡ್ ಲೂಯಿಸ್.
ಕೊಂಕಣಿ ಭಾಷೆಯಲ್ಲಿ ಯಾರು ಅಂತ ಕೇಳುವುದು  ಕೋಣ .. ಅದೇ ನಮ್ಮ ಕನ್ನಡದಲ್ಲಿ .. 
ಅದೇ ರೀತಿ ನಾನು ಅನ್ನುವ ಉತ್ರ ಭೈನ್ಸ್ ...ಕನ್ನಡದ ಕೋಣ ಹಿಂದಿಯ ಕೋಣ ಜೊತೆ ಆಗುತ್ತೆ.. 
ಟೀವಿ  ನೈನ್  ವಾಹಿನಿಯಲ್ಲಿ ಈಚೆಗೆ ಈ ಕಾರ್ಯಕ್ರಮ ಪ್ರಸಾರ ಆಯ್ತು. ಲೂಯಿಸ್ ಅವರ ಹಾಸ್ಯ ಹೆಚ್ಚು ಉಲ್ಲಾಸ ನೀಡಿದ್ದು ಭಾಷೆಯಿಂದ, ದುಡ್ಡು , ದ್ರವರೂಪ..ಇಂತಹ  ಅನೇಕ ಸಂಗತಿಗಳ ಬಗ್ಗೆ ಲೂಯಿಸ್ ತಿಳಿಸಿದರು..ಒಂದು ಸಮಾಜದಿಂದ ಮತ್ತೊಂದು ಸಮಾಜದ ನಡುವೆ ಇರುವ ವಾಸ್ತವ ಸತ್ಯಗಳನ್ನು ಹೊಂದಿತ್ತು ಅವರ ಹಾಸ್ಯ.. ತುಂಬಾ ಚೆಂದದ ವಿಶ್ಲೇಷಣೆ.

ಉದಯ ನ್ಯೂಸ್ ಈಗ ಹೆಚ್ಚು ಬದಲಾವಣೆ ಕಾಣುತ್ತಿದೆ. ಹಳೆಯ ವಾರ್ತಾ ವಾಹಿನಿ ಉದಯ ನ್ಯೂಸ್ ಅಯ್ಯೋ ನಮಗೆ  ಇಷ್ಟು ವ್ಯಾಪ್ತಿ  ಸಾಕು  ಎಂದು ಕೂರದೆ ವೀಕ್ಷಕರಿಗೆ ಬೇಕಾಗಿರುವ ಅಂಶಗಳತ್ತ ಗಮನ ಕೊಡುವುದಕ್ಕೆ ಆರಂಭಿಸಿರುವುದು ಒಳ್ಳೆಯ ಸಂಗತಿ. ಬೇರೆ ನ್ಯೂಸ್ ಚಾನೆಲ್ ಗಳಂತೆ ಪ್ರಳಯದ ಮಾರಿ ಮಾತ್ರ ಈ  ಚಾನೆಲ್ ಗೆ ಬಿಡದೆ ಇದ್ರೆ ಮತ್ತೂ ಚನ್ನಾ.. ಪ್ರಳಯ  ಮಾಫಿಯಾದಿಂದ ಮಾಧ್ಯಮಗಳಿಗೆ ಲಾಭ ಆಯ್ತೆ ವಿನಃ ಸಾಮಾನ್ಯರಿಗಲ್ಲ!

ಬಿಗ್ ಬಾಸ್ ಕಲರ್ ವಾಹಿನಿಯ ಜಾನ್ ಆಗಿದೆ. ಇದರಲ್ಲಿ ಸೆಲಬಿ  ಇಮಾಂ ಸಿದ್ದಿಕಿ  ವರ್ತನೆ ತುಂಬ ವಿಚಿತ್ರ. ಆಟ ಮೊದಲ ಬಾರಿ ಹಳ್ಳಿ ಮನೆಗೆ ಹೋದಾಗ ಮಾಡಿದ ಅವಘಡ ಬಿಟ್ರೆ ಬೇರೆ ಯಾವ ವಿಷಯದಲ್ಲೂ   ಇಮಾಂ ವರ್ತನೆ ಅಸಹಜ ಅನ್ನಿಸಲ್ಲ. ಯಾಕೆ ಅಂದ್ರೆ ಮೀಡಿಯಾ ಪ್ರಪಂಚದಲ್ಲಿ ಇಮಾಂ ಗಿಂತ ಕೆಟ್ಟ-ಕೊಳಕು ಮನಸ್ಸುಗಳನ್ನು ಕಂಡಿರುವ ನಮ್ಮಂತಹವರಿಗೆ ಆತ ಒಬ್ಬ  ಅತಿರೇಕದ ಪ್ರಾಣಿ ಅನ್ನಿಸುತ್ತೆ. ಫ್ಯಾಶನ್ ಜಗತ್ತಿನಲ್ಲಿ ಇರುವವರು ಅತಿರೇಕದವರೇ  ಅಲ್ವೇ! ಇಮಾಂ ವರ್ತನೆ ಭಾರತದಲ್ಲಿ ಅಸಹಜ ಅನ್ನಿಸುತ್ತೆ ಅದೂ ಮಧ್ಯಮ ವರ್ಗದ ವೀಕ್ಷಕರಿಗೆ,ಅದೇ ವರ್ತನೆ ವಿದೇಶಿಯರಿಗೆ ವಾವ್  ವಟ್ಟ ಕ್ರಿಯೇಟೀವ್ ಫೆಲ್ಲಾ ಅನ್ನಿಸುವಂತೆ ಇದೆ.
ಇಮಾಂ ಒಂದು ವಿಷ್ಯ ಮಾತ್ರ ಸಾಕಷ್ಟು ವಿಶೇಷ ಅನ್ನಿಸಿತು ನನಗೆ, ಅದು ಕಿವಿಯಲ್ಲಿ ಹೂವಿತ್ತು ಕೊಂಡಿದ್ದು ಮತ್ತು ಬಾಲವನ್ನು ತಲೆಯಲ್ಲಿ ಧರಿಸಿದ್ದು. ಹೂವು ಕಿವಿ , ಹಣೆ,ಹಿಂದೆ ಹೀಗೆ ಹಲವಾರು ಕಡೆ ಧರಿಸಲು ಯೋಗ್ಯ ಅನ್ನುವ ಸಂಗತಿ ಗೊತ್ತಾಗಿದ್ದು ಇಮಾಂನಿಂದ 

No comments: