ಬಿಗ್ ಮಂಕಿ

 ಕೆಲವು ಕಾರ್ಯಕ್ರಮಗಳು ತಲೆ ಕೆಡಿಸಿ ರಾಡಿ ಮಾಡಿ ಬಿಡುತ್ತದೆ, ಅದೇ ಒಂದಷ್ಟು ಕಾರ್ಯಕ್ರಮಗಳು ಪದೇಪದೇ  ನೋಡುವಂತೆ ಮಾಡುತ್ತದೆ.ಅದೇ ರೀತಿ ಕೆಲವು ಚಾನೆಲ್ ಗಳು ಅಷ್ಟೇ ಅನೇಕ ಹೊಸ ಕಾರ್ಯಕ್ರಮಗಳನ್ನು ನೀಡುತ್ತದೆ, ವೀಕ್ಷಿಸಲು ಎಷ್ಟು ಯೋಗ್ಯವೋ ಅಷ್ಟೇ ತಲೆ ಬಿಸಿ ಮಾಡುತ್ತದೆ.. ಬಿಡಿ ಅದು ಅವರ ತಪ್ಪಲ್ಲ.. ಆದರೆ ಎಲ್ಲ ಕಾಲಕ್ಕೂ ಇಷ್ಟ ಆಗುವಂತಹ ಕೆಲವು  ಕೆಲವು ಕಾರ್ಯಕ್ರಮಗಳಿವೆ ಅದರಿಂದ ಮನಸ್ಸಿಗೆ ಖುಷಿ ಜೊತೆಗೆ ಇನ್ನು ಮತ್ತು ತಿಳಿಯಲೇ ಬೇಕೆಂಬ ಆಸೆ ಉಂಟಾಗುತ್ತದೆ.ಅಂತಹ ಕಾರ್ಯಕ್ರಮಗಳಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ ಸುಧಾಕರ ಶರ್ಮ ಅವರ ಹೊಸಬೆಳಕು ಒಂದು. ಅತ್ಯದ್ಭುತ ವಾಗ್ಮಿ, ಚಿಂತಕ, ವಿಚಾರವನ್ನು ಎಲ್ಲ ವೀಕ್ಷಕರಿಗೂ ಅರ್ಥ ಆಗುವಂತೆ ಹೇಳುವ ಮೇಷ್ಟ್ರು..
ವೇದ ,ಉಪನಿಷತ್ ಇಷ್ಟಪಡದ ಜನರ ಬಗ್ಗೆ ನಾನೇನು ಹೇಳಲಾರೆ, ವಿಷಯದ ವಿಸ್ತಾರದ ಬಗ್ಗೆ ಅರಿಯ ಬೇಕಾದರೆ ಹೊಸಬೆಳಕು ಕಾರ್ಯಕ್ರಮ ವೀಕ್ಷಣೆ ತುಂಬಾ ಮುಖ್ಯ.ಪ್ರತಿಭಾನುವಾರ  ಪ್ರಸಾರ ಆಗುತ್ತೆ.. ಈಗಾಗಲೇ ಅನೇಕ ಎಪಿಸೋಡ್ ಗಳು ಪ್ರಸಾರ ಆಗಿವೆ.. ಅದರ ಸೀಡಿಗಳು ಸಿಕ್ತಾವೆ..ಚಂದನದಲ್ಲಿ ಪ್ರಸಾರ ಆಗುವ, ಅದರಲ್ಲೂ  ಮನದಾನಂದ ಹೆಚ್ಚಿಸುವ ಕಾರ್ಯಕ್ರಮ ಇದು.

CNN IBN ವಾಹಿನಿಯಲ್ಲಿ  ಪಾಸಿಟಿವ್ ಇಂಡಿಯಾ ಅನ್ನುವ ಕಾರ್ಯಕ್ರಮ ಪ್ರಸಾರ ಆಯ್ತು,ಸಕತ್ ಕಣ್ರೀ ವಾವ್! ಯಾಕೆ ಗೊತ್ತಾ.. ಸಾಧನೆ ಮಾಡಿದ ಸಬಲತೆಯ ಉದಾಹರಣೆಯ ಪ್ರತೀಕವಾದ ಹಳ್ಳಿ ಹೆಣ್ಣು ಮಕ್ಕಳ ಸಾಧನೆ ಬಗ್ಗೆ  ಇತ್ತು ಈ ಬಾರಿ.. ನಿಜ ಹೇಳ ಬೇಕೂದ್ರೆ ನಾನು ಮೊದಲ ಬಾರಿ ಆ ಕಾರ್ಯಕ್ರಮ ವೀಕ್ಷಿಸಿದ್ದು..ಭಾರತದ ಬಗ್ಗೆ ಹೇಳುವಾಗ ದೃಶ್ಯ ಮಾಧ್ಯಮಗಳಲ್ಲಿ  ಹಾಗಾಗಿದೆ -ಹೀಗಿದೆ ಭಾರತ ಬೇರೆ ರೀತಿಯಲ್ಲಿ  ಪ್ರತಿಬಿ೦ಬಿಸುವುದನ್ನೇ ಕಾಣ್ತೀವಿ.. ಆದರೆ ಪಾಸಿಟಿವ್  .. ಕಾರ್ಯಕ್ರಮ ನೋ ವೆ ..! ನೋಡಿದ ಬಳಿಕ  ಖುಷಿ ಆಗುತ್ತೆ..

ಬಿಗ್ ಮಂಕಿ ಬುಸಿನೆಸ್ Nat Geo wild  ವಾಹಿನಿಯಲ್ಲಿ ಪ್ರಸಾರ ಆಗ್ತಾ ಇತ್ತು..ಕೋತಿ ಕಥೆ ನಮಗೆ ಹೊಸದಲ್ಲ.. ಆದರೂ ಕೋತಿಗಳ ಬದುಕಿನ, ದಿನಚರಿ ಬಗ್ಗೆ ತಿಳಿದಷ್ಟು ಇಷ್ಟ ಆಗುತ್ತೆ ತಿಳಿಯೋಕೆ.. ಕೋತಿಗೆ ಸಂಬಂಧಿಸಿದ  ಕಾರ್ಯಕ್ರಮ ಅನಿಮಲ್ ಪ್ಲಾನೆಟ್ ನಲ್ಲೂ ಬಂದಿತ್ತು.. ಆದರೆ ಅದು ಕಾಡು ಕೋತೀದು  :-) ಏನೇ ಹೇಳಿದ್ರೂ ಕೋತಿ ಎಲ್ಲ ಕಡೆನೂ ಮಾಡೋದು ಕಪಿ ಚೆಷ್ಟೇನೆ  ಅಲ್ವೇ !

No comments: