ಎಂದೆಂದೂ ನಿನ್ನನು ಮರೆತು ..


ಕಳೆದ ಕೆಲವು ದಿನಗಳಿಂದ ಒಟ್ಟಾರೆ ಎರಡು ವಾರದಿಂದ ಹಲವಾರು ಸಂಗತಿಗಳು ಮನಸ್ಸು ಕದಡಿತ್ತು. ನೇಪಾಲದ ಭೂಕಂಪ, ಒಬ್ಬ ಹುಡುಗನ ರೋಲ್ ಕಾಲ್ ಸ್ವಭಾವ, ಒಬ್ಬ ಹೆಣ್ಣುಮಗಳು ತನ್ನ ಪತಿಗೆ ಮಾಡಿದ ಮೋಸ ಎಲ್ಲವು ಛೆ ಲೈಫ್ ಇಷ್ಟೇನಾ ಎನ್ನುವಂತಹ ಪ್ರಶ್ನೆ ಮೂಡಿಸಿತ್ತು. ಏಕಾಗ್ರತೆ ಲೋಪವಾದ ಕಾರಣ ಬ್ಲಾಗ್ ಬರೆಯಲಾಗಲೇ ಇಲ್ಲ. ದಿನಕ್ಕೆ ರಾಶಿ ರಾಶಿ ಬರೀತೀನಿ, ಆದರೆ ಬ್ಲಾಗ್ ಪ್ರಪಂಚ ಬೇರೆ. ಆದ್ದರಿಂದ ಅದ್ಯಾಕೋ ಕೂತು ಬರಿಯಲಾರೆ, ತಲೆಯಲ್ಲಿ ರಾಶಿ ರಾಶಿ ಸಂಗತಿಗಳಿದ್ದರೂ ಸಹಿತ ಬ್ಲಾಗ್ ನಲ್ಲಿ ಒಂದು ಅಕ್ಷರವೂ ಟೈಪಿಸಲಾರೆ ಎಂದು ಅನ್ನಿಸಿತು. ಸೊ ಆ ಕಾರಣವನ್ನು ಮುಂದಿಟ್ಟು ಬರೆದಿರಲಿಲ್ಲ.

ಕಳೆದ  ಸ್ವಲ್ಪ ದಿನಗಳಿಂದ ಕನ್ನಡ ಕಾರ್ಯಕ್ರಮಗಳು ಅಂದ್ರೆ ಕನ್ನಡ ವಾಹಿನಿಗಳೇ ಪ್ರಸಾರ ಆಗಲಿಲ್ಲ. ಟಾಟ ಸ್ಕೈ  ಕನ್ನಡಕ್ಕೆ ಟಾಟ ಮಾಡಿತ್ತು. ಈಗ ಬರ್ತಾ ಇದೆ. ಸಾಮಾನ್ಯವಾಗಿ ಯಾವುದೇ ಭಾಷೆಯ ಕಾರ್ಯಕ್ರಮಗಳು   ನೋಡಿದರು ಕನ್ನಡ ನೋಡೆ ತೀರ್ತಾ ಇದ್ದೆ. ಆದರೆ ಸುಮಾರು ಎರಡು ವಾರಗಳಿಂದ ಮಿಸ್ಸಿಂಗ್ . ಆದರು ಸಧ್ಯ ಈಗ ಸರಿಯಾಗಿದೆ ಅದೇ ಖುಷಿ. 

ಜೀ ಹಿಂದಿ  ವಾಹಿನಿಯಲ್ಲಿ  ಡಿಐಡಿ ಅಮ್ಮಂದಿರ ವಿಶೇಷ ನೃತ್ಯ ಸ್ಪರ್ಧೆಯಲ್ಲಿ ಮೂರು ಅಪರೂಪದ ತೀರ್ಪುಗಾರರಿದ್ದಾರೆ. ಅವರ ಬಗ್ಗೆ ನಿಮಗೆ ಗೊತ್ತಿದೆ. ಗೋವಿಂದ , ಟೆರೆನ್ಸ್, ಗೀತ ಅವರ ಬಗ್ಗೆ  ವಿಶೇಷವಾಗಿ ಹೇಳುವಷ್ಟಿಲ್ಲ. ಅಲ್ಲದೆ ಒಂದು ಪೋಸ್ಟ್ ನಲ್ಲಿ ನಾನು ಸೌಮ್ಯಶ್ರೀ ಎನ್ನುವ ಕನ್ನಡದ ಹೆಣ್ಣು ಮಗಳ ಬಗ್ಗೆ ಹೇಳಿದ್ದೆ. ಆಕೆ ಸಕತ್ ಎನೆರ್ಜಿಟಿಕ್. ಅದೇರೀತಿ  ಬೇರೆ ಮದರ್ ಇಂಡಿಯಾಗಳು ಸಹ ಸಕತ್ ಡ್ಯಾನ್ಸ್ ಮಾಡ್ತಾರೆ. (ಈ ಸಮಯದಲ್ಲಿ ನಾನು ಹೆಚ್ಚು ಬಾರಿ ಹೋಗಿದ್ದ ಒಂದು ಮಹಿಳಾ ಸಂಘದ ನೆನಪಾಗುತ್ತದೆ. ಅದರಲ್ಲಿ ಅರವತ್ತಕ್ಕೂ ಹೆಚ್ಚು ವಯಸ್ಸಾದ ಅಮ್ಮಂದಿರ ಡ್ಯಾನ್ಸ್ ಎಷ್ಟು ಎನೆರ್ಜಿಟಿಕ್  ಗೊತ್ತ ಸುಪರ್ಬ್..  !)

ಆದರೆ ನನಗೆ ಹೆಚ್ಚು ಖುಷಿ ಕೊಟ್ಟ ಸಂಗತಿ ಗೋವಿಂದ ಅವರು ಡಾ. ರಾಜ್ ಕುಮಾರ್ ಅವರ ಎವರ್ ಗ್ರೀನ್ ಪ್ರೇಮಗೀತೆ ಎಂದೆಂದೂ ನಿನ್ನನು ಮರೆತು ಹಾಡನ್ನು ಹಾಡಿದ್ದು.. ವಾವ್  ಖುಷಿ ಆಯ್ತು. ಹಿಂದಿನ ದಿನವಷ್ಟೇ ಅಣ್ಣಾವ್ರ ಹುಟ್ಟು ಹಬ್ಬವಾಗಿತ್ತು. ಮಾರನೆಯ ದಿನ ಪ್ರಸಿದ್ಧ ಟೀವಿ ಷೋ ನಲ್ಲಿ ವಾವ್  ಕ್ಯಾ  ಬಾತ್ ಹಾಯ್ ಲೈಕ್ ಇಟ್ . 


@ಇಂಡಿಯ ಗಾಟ್ ಟ್ಯಾಲೆಂಟ್ ಕಾರ್ಯಕ್ರಮ ಈಗ ಕಲರ್ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ. ಕಿರಣ್, ಕರಣ್ ಹಾಗೂ ಮಲೈಕ ಜೊತೆ ನಾವು ಎಂಜಾಯ್ ಮಾಡೋ ಕಾರ್ಯಕ್ರಮ.  ಬೆಂಗಳೂರಿನ ಪ್ರತಿಭೆ  ವಿಶೇಷವಾಗಿ ತನ್ನಲ್ಲಿರುವ ವಿಭಿನ್ನತೆ ತೋರಿದ. ಕೊಳಲು ನುಡಿಸುತ್ತಾ ಬಾಯಲ್ಲಿ ತಬಲದಂತೆ ಶಬ್ದ  ಮಾಡುತ್ತಾ ವಾವ್ ! ಅದನ್ನು ನೋಡಿದ್ರೆನೆ  ಕಣ್ರೀ ಮಜಾ ಸಿಗೋದು. ಆ ವಾಹಿನಿಯವರು ಮತ್ತೊಮ್ಮೆ ಪ್ರಸಾರ ಮಾಡಿದ್ರೆ ನೋಡಿ. ಅದೇರೀತಿ ಬಾಟಲ ಮೇಲೆ ಸ್ಟೂಲ್ ನಂತಹವು ಹಾಕಿ ಒಂದಷ್ಟು ಗುಂಪು ಕಸರತ್ತು ಮಾಡಿದ್ರು. ಸಕತ್ತಾಗಿತ್ತು.