ನನ್ನ ಕಥೆ ನನ್ನಲ್ಲೇ ಉಳಿಯಿತು!

 
ಚಂದನ ವಾಹಿನಿಯ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಆಕರ್ಷಣೆ ಯಾವ ಪುಸ್ತಕಗಳು ಈಗ ಜನರ ಮುಂದೆ ಬರುತ್ತಿದೆ. ನಾ. ಸೋಮೇಶ್ವರ್ ಅವರು ಯಾವ ಪುಸ್ತಕಕದ ಬಗ್ಗೆ ವಿವರಣೆ ನೀಡುತ್ತಾರೆ ಅನ್ನೋದು! ಅನೇಕ ಬಾರಿ ಅವರು ಹೇಳುವ ರೀತಿಗೆ ಕೊಳ್ಳುವ ಮನಸ್ಸು ಆಗುತ್ತದೆ. ನಮ್ಮ ಅಮ್ಮನ ಮೆಚ್ಚಿನ ಕಾರ್ಯಕ್ರಮಗಳಲ್ಲಿ ಇದು ಒಂದು. ಅವರು ಇಷ್ಟಪಟ್ಟು ನೋಡ್ತಾರೆ. ಒಂದು ದಿನ ನೀನು ಒಂದಾದರು ಪುಸ್ತಕ ಬರಿ.. ಅದು ಥಟ್ ಅಂತ ಹೇಳಿಗೆ ಕಳುಹಿಸು ಅಂತ ಅಂದ್ರು,ಅಲ್ಲದೆ ಅದರ ಹೆಸರು ನನ್ನ ಕಥೆ ಅಂತ ಇರ್ಲಿ ಎಂದು ಸಹ ಹೇಳಿದ್ರು.. ಅಲ್ಲಿಯೇ ಇದ್ದ ನನ್ನಕ್ಕ ಅಕಸ್ಮಾತ್ ಅಲ್ಲಿ ಬಂದಿರುವ ಸ್ಪರ್ಧಿಗಳು ಪ್ರಶ್ನೆಗೆ ಉತ್ತರ ಹೇಳದೆ ಇದ್ದರೇ ಜಯಶ್ರೀ ಅವರ ನನ್ನ ಕಥೆ ನನ್ನಲ್ಲೇ ಉಳಿಯಿತು ಅಂತಾರೆ ಮೇಷ್ಟ್ರು ಅಂತ ನಕ್ಳು. ಹೆಚ್ಚು ಸಾಕಷ್ಟು ವೀಕ್ಷಕರಿಗೆ ಕಾರ್ಯಕ್ರಮ, ಧಾರವಾಹಿ, ಪಾತ್ರ,ನಿರೂಪಕರು ಹೀಗೆ ಕೆಲವೊಂದು ಸಂಗತಿಗಳು ಹೆಚ್ಚು ಆಪ್ತ ಆಗುತ್ತದೆ, ಅದರಲ್ಲಿ ಮೇಸ್ಟ್ರ ಇಂತಹ ಶೈಲಿ ಹೆಚ್ಚು ಖುಷಿ ಕೊಡುತ್ತದೆ.  ಎಂದಿಗೂ ಬೋರ್ ಹೊದಿಸದ ಕಾರ್ಯಕ್ರಮ ಇದು..

@@ ಬರೆಯುವ ಪ್ರಪಂಚ ನನಗೆ ಹೊಸತಲ್ಲ ಆದರೆ ಇದನ್ನೇ ಬದುಕಾಗಿ ತಗೋತೀನಿ ಅಂತ ನಾನು ಒಂದು ದಿನವೂ ತಿಳಿದಿರಲಿಲ್ಲ. ಓದಿದ ವಿಷಯ ಬೇರೆ, ಕನಸುಕತ್ತಿದ್ದು ಬೇರೆ ಸಂಗತಿಗೆ ಆದರೆ ಅಂತಿಮವಾಗಿ ನೆಲೆ ಕಂಡಿದ್ದು ಇಲ್ಲಿ! ಆದರೆ ಇದನ್ನೇ ವೃತ್ತಿಯಾಗಿ ತೆಗೆದುಕೊಳ್ಳ ಬೇಕು ಅಂತ ನಿರ್ಧಾರ ಮಾಡಿದಾಗ ಒಂದು ಸಂಗತಿ ಹೆಚ್ಚು ಹೆದರಿಕೆ ಉಂಟು ಮಾಡಿತ್ತು. ಅದು ಸಿಲ್ಲಿಲಲ್ಲಿ ಸಂಗತಿ. ಅದರಲ್ಲಿ ಸಿಲ್ಲಿಗೆ ಸದಾ ಬರೆಯುವ ಹುಚ್ಚು.. ಆದರೆ ಒಂದೂ ಪಬ್ಲಿಶ್ ಆಗಲ್ಲ. ಅದೇರೀತಿ ನನ್ನ ಕಸಿನ್ ಒಬ್ಬನಿಗೆ ಸಿಕ್ಕಾಪಟ್ಟೆ ಬರೆಯುವ ಹುಚ್ಚು, ಒಂದೇಒಂದು ಬಾರಿಯೂ ಪಬ್ಲಿಶ್ ಆಗಿರಲಿಲ್ಲ.ಸಿಲ್ಲಿ ಲಲ್ಲಿ ಯನ್ನು ಈಟಿವಿಯಲ್ಲಿ ನೋಡುವಾಗ ನನ್ನ ಸಾಹಸ ನೆನಪಾಗುತ್ತಿತ್ತು. 

ಮತ್ತೆ ಪ್ರಸಾರ ಆಗ್ತಾ ಇದೆ.. ಒಂದು ಸಂಗತಿ.. ಆಗಷ್ಟೇ ಸಿಲ್ಲಿಲಲ್ಲಿ ಪ್ರಸಾರ ಆಗ್ತಾ ಇತ್ತು. ಆಗ ನಾನು ವಾರಪತ್ರಿಕೆ ಒಂದಕ್ಕೆ ಹೋಗಿದ್ದೆ, ಅಲ್ಲಿನ ಎಡಿಟರ್ ಮಾತಿನ ಮಧ್ಯೆ ಹೆಚ್ಚು ಮೆಚ್ಚಿಕೊಂಡಿದ್ದು ಸಿಲ್ಲಿಲಲ್ಲಿಯನ್ನು. ಆಗ ಪಾಪ ಪಾಂಡು ಕಾಲ .. ಈ ಪಾಂಡುಗಿಂತ   ಸಿಲ್ಲಿ ಚೆನ್ನಾಗಿ  ಮಾಡ್ತಾಳೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದರು ! 

@@
ಸಾಧ್ಯ ಆದ್ರೆ ಅಸ್ಸಾಮಿ ಚಾನೆಲ್ ನೋಡಿ ರಾಮಧೇನು ಅಂತ ಹೆಸರು.. ಸಕತ್ತಾಗಿರುತ್ತೆ ಅದರಲ್ಲಿ ಪ್ರಸಾರ ಆಗುವ ಹಾಡುಗಳು. ಅಸಮಾನ್ಯ ಸಂಗೀತ ನಿರ್ದೇಶಕರು ಈಶಾನ್ಯ ಭಾರತದಿಂದ ಬಂದಿದ್ದಾರೆ, ಆಹಾ ಸಕತ್ .. ಆದ್ರೆ ಅನೇಕ ಸಂಗತಿಗಳು ಅಂದ್ರೆ ಪಿಕ್ಚರೈಸ್ ಆಗಿರುವ ಸಂಗತಿಗಳು ಹೆಚ್ಚಾಗಿ ಎಂಬತ್ತರ ದಶಕದ ಸಮೀಪದಲ್ಲೇ ಇತ್ತು. ಆದರೆ ನಾನು ಹಳೆಯ ಹಾಡುಗಳನ್ನು ನೋಡಿದೆನೇನೋ ಗೊತ್ತಿಲ್ಲ, ಆದರೆ ಎಂತಹ ಮೆಲೋಡಿ ಹಾಡುಗಳು ಗೊತ್ತೇ! ಭಾಷೆ ಅರ್ಥ ಆಗದೆ ಇದ್ರೂ ಸಂಗೀತಕ್ಕೆ ಭಾಷೆ ಗೊಡವೆ ಇಲ್ಲ!

@@ ಸುವರ್ಣ ಸುದ್ದಿ ವಾಹಿನಿಯಲ್ಲಿ ಮಿತ್ರ ಬದರಿನಾಥ್  ಪಲವಳ್ಳಿ ಕೆಲಸ ಮಾಡೋದು.. ಕೈಲಿ ಕ್ಯಾಮರ ಹಿಡಿದು ಬೇಕು ಬೇಡದ ದೃಶ್ಯಗಳನ್ನು ಸೆರೆ ಹಿಡಿಯುವ ಈ ಗೆಳೆಯ ಎಲ್ಲಾ  ವಿಷಯಗಳ ಬಗ್ಗೆ ಸಾಕಷ್ಟು  ಅರಿವನ್ನು ಹೊಂದಿರುವ ಪ್ರತಿಭಾವಂತ. ಬರೆಯುವ ಮತ್ತು ಬರೆಯುವವರನ್ನು ಪ್ರೋತ್ಸಾಹಿಸುವ ಮನಸ್ತತ್ವ ಹೊಂದಿರುವ ಮಿತ್ರ. ಬ್ಲಾಗ್ ಬರೆಯಿರಿ ಅಂತ ಹೆಚ್ಚು ಹೇಳೋದು ಈತನೇ.. ನನಗೆ ಬ್ಲಾಗ್ ಓದೋಕೆ ಇಷ್ಟ ಅಂತ ಹೇಳುವ ಬದರಿ ಸಹನೆ ಎಲ್ಲರಿಗು ಕೊಡು ತಂದೆ ಅಂತಾ ಕೇಳಿಕೊಳ್ತೀನಿ... ತಪ್ಪದೆ ಓದಿ ತಮ್ಮ ಅನಿಸಿಕೆ ಹೇಳುವ ಈ ಗೆಳೆಯನಿಗಿರುವ ಗೆಳೆಯರ ಗುಂಪು ಅಪಾರ. ಚಾನೆಲ್ ಒಂದರಲ್ಲಿ ಕೆಲಸ ಮಾಡುವಾಗ ಅಲ್ಲಿಂದ ಹೊರ ಬರ ಬೇಕಾದ ಪರಿಸ್ಥಿತಿ . ಅವರ ಆ ನೋವಿನ ಕ್ಷಣಗಳು ಇನ್ನು ಕಣ್ಣಿಗೆ ಕಟ್ಟಿದಂತಿದೆ. ಸುವರ್ಣ ನ್ಯೂಸ್ ನಲ್ಲಿ ಈಗ ಬದುಕು ಕಾಣುತ್ತಿರುವ ಬದರಿ ತಮ್ಮ ಗುರು ಸುಬೋಧ್ ಜೋಷಿ ಮತ್ತು ಟೀಮ್ ನೊಂದಿಗೆ ಹಾಯಾಗಿದ್ದಾರೆ {ಹಾಗಂತ ಗೆಸ್ ಮಾಡ್ತಾ ಇದ್ದೀನಿ    }   ಒಟ್ಟಾರೆ ಕಾಯಕವೇ ಕೈಲಾಸ ಎಂದು ಜೊತೆಗೆ ಬ್ಲಾಗ್ ಓದೋದು ನನ್ನ ಹವ್ಯಾಸ ಎಂದು ಬದುಕನ್ನು ವಿಭಿನ್ನ ರೀತಿಯಲ್ಲಿ ಸಾಗಿಸುತ್ತಿರುವ ಗೆಳೆಯ ಬದರಿಗೆ  ನಮೋನ್ನಮಃ  

ಸರಿಯಾದ ಉತ್ತರ!




ಟೀವಿ ಕಾರ್ಯಕ್ರಮಗಳು ಇಷ್ಟ ಆಗುತ್ತೆ ಅಂತ ಹೇಳೋಕ್ಕಿಂತ ಸಮಯಕ್ಕೆ ಒಂದಷ್ಟು ಮನೋರಂಜನೆ ಸಿಗುತ್ತೆ ಅದಕ್ಕೆ ವೀಕ್ಷಿಸೊದು ಅಂತಾನು ಹೇಳಬಹುದು. ನಿನ್ನೆ ಮಾ ಟೀವಿ ಕೋಟ್ಯಾಧಿಪತಿ ಕಾರ್ಯಕ್ರಮ ವೀಕ್ಷಿಸಿದಾಗ ಅದರಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಪ್ರಶ್ನೆ ಅದರಲ್ಲೂ ಆಯುರ್ವೇದಕ್ಕೆ ಸಂಬಂಧಪಟ್ಟ ಪ್ರಶಸ್ತಿ ಬಗ್ಗೆ ಒಂದು ಪ್ರಶ್ನೆ ಇತ್ತು. ಅದರಲ್ಲಿ ಸುಮಾರು ಶೇ. 30  ರಷ್ಟಿರ ಬೇಕು  ಮಂದಿ ಆಡಿಯನ್ಸ್ ತಪ್ಪು ಉತ್ತರ ಹೇಳಿದ್ದು, ಅವರೆಲ್ಲರೂ ಇಂಜಿನಿಯರಿಂಗ್   ಮಾಡಿದವರು.. !  ಇದೊಂಥರ ಬಿಂದಾಸ್ ಉತ್ತರ.. ತೊಂದ್ರೆನೆ ಇಲ್ಲ ತಪ್ಪು ಹೇಳಿದ್ರೆ.. ಇಲ್ಲದೆ ಇದ್ರೆ ಬ್ಯಾಡ ಕಥೆ.. ಸಕತ್ ಮಜಾ ಬಂತು ಬಿಡಿ! ನಿರೂಪಕ ನಾಗಾರ್ಜುನ ಸಹ ನಕ್ಕು ಎಂಜಾಯ್ ಮಾಡಿಕೊಂಡರು..  ಅವರಿಗೂ ಪ್ರಶ್ನೆಗಳಿಗೆ  ಸರಿಯಾದ  ಉತ್ತರ ಹೇಳಿ- ಕೇಳಿ ಸಾಕಾಗಿತ್ತು ;-)
ಅದೇ ರೀತಿ   ಒಂದು ಸುದ್ದಿ ಓದಿ ಸಹ ನಗು ಬಂದಿತ್ತು.. ಕೇರಳದಲ್ಲಿ ಸರ್ಕಾರಿ  ಹುದ್ದೆಗೆಂದು ಪರೀಕ್ಷೆ ಭಾನುವಾರ ನಡೆಯಿತಂತೆ ಅದರಲ್ಲಿ ಅತಿ ಎತ್ತರದ ನಟಿ ಯಾರು ಅಂತ ಒಂದಷ್ಟು ಹೆಸರುಗಳನ್ನೂ ನೀಡಿದ್ದರಂತೆ. ಅದರಲ್ಲಿ ಕತ್ರಿನಾ ಕೈಫ್ ಮತ್ತು ದೀಪಿಕ.. ಸೇರಿದ್ದರಂತೆ. ಅಲ್ಲಿದ್ದ ಸ್ಪರ್ಧಿ ತನಗೆ ಇವರ್ಯಾರು ಗೊತ್ತಿಲ್ಲ, ಇವರು ಬಿಕಿನಿ ಹಾಕಿದ್ದು ನೆನಪಿಲ್ಲ, ಆದರೆ ಕತ್ರಿನ ಬೀಚ್ನಲ್ಲಿ ರಣಬೀರ್ ಜೊತೆ ಇದ್ದ ಫೋಟೋಗಳು ನೆನಪಿಗೆ ಬರ್ತಾ ಇದೆ ಎನ್ನುವ ಉತ್ತರ ಬರೆದಿದ್ದನಂತೆ.. ಎಷ್ಟು ಒಳ್ಳೆ ಉತ್ರ ಅಲ್ವ .. ಯಾರಿಗೆ ಏನು ನೆನಪಿರುತ್ತೋ ಅದೆ ಸರಿಯಾದ ಉತ್ತರ! 


ಸುವರ್ಣ ವಾಹಿನಿಯಲ್ಲಿ ಕನ್ನಡ ಬಿಗ್ ಬಾಸ್ ನಿಂದ ಶಕಾಶಕ ಶಕೀಲ ಹೊರ ಬಂದಿದ್ದು ನಿಜವಾಗಿ ಕನ್ನಡಿಗರಿಗೆ ತೃಪ್ತಿ ಕೊಟ್ಟಿದೆ. ಆ ಸಾಫ್ಟ್ ಪೋರ್ನ್   ನಟಿಯನ್ನು ಕಂಡಾಗ ಹಿಂದಿ ಬಿಗ್ ಬಾಸ್   ಹಾತ್ ಪೋರ್ನ್ ನಟಿ ಸನ್ನಿಲಿಯೋನ್  ನೆನಪಾಗುತ್ತೆ. ಆಕೆಯು ಆರಂಭದಿಂದಲೂ ಮುಜ್ಕೋ ತುಜ್ ಕೊ  ಅಂತ ಹಿಂದಿಯಲ್ಲಿ ಮಾತಾಡೋಕೆ ಪ್ರಯತ್ನ ಪಟ್ಟಿದ್ದಳು. ಆಕೆ ವಿದೇಶದ ಪೋರ್ನ್ ನಟಿ, ಭಾರತೀಯ ಮೂಲ ಆಗಿದ್ದರು ಸಹ  ಹಿಂದಿಯು ಬರಬೇಕು ಅನ್ನೋ ನಿಯಮ ಇರಲಿಲ್ಲ, ಆದರೆ ..! ಅದೇ ಶಕೀಲ    ವಿಷಯದಲ್ಲೂ ಸಹ ಆದ್ರೆ?? ಕನ್ನಡ ಚಿತ್ರಗಳಲ್ಲಿ ನಟಿಸಿ, ತನ್ನ ಆತ್ಮಕಥೆಯನ್ನು ಕನ್ನಡ ಸೇರಿದಂತೆ ಭಾರತದ ಎಲ್ಲ ಭಾಷೆಗಳಲ್ಲೂ ಚಿತ್ರಿಸ ಬೇಕು ಅಂದರೆ ಆ ಚಿತ್ರದ ನಿರ್ದೇಶನ ಮಾಡ ಬೇಕು ಅನ್ನೋ ಆಸೆ  ಹೊಂದಿದ್ರು ವೀಕ್ಷಕರು ಕನ್ನಡಕ್ಕಾಗಿ ಕಾದು ಕುಳಿತಿರುವಂತೆ ಮಾಡಿದ್ರು ಶಕೀಲ.ಪ್ರೇಕ್ಷಕರಿಗೆ ಖುಷಿ ಆಗೋಕ್ಕಾದ್ರು ಕನ್ನಡ ಕಲಿಯೋ ಪ್ರಯತ್ನ ಮಾಡಿದ್ದಿದ್ದಿರೆ !!   ಹೆಣ್ಣು ಮಕ್ಕಳಿಗೆ ಖುಷಿ ಕೊಟ್ಟಿಲ್ಲ ಕಿಚ್ಚ.. ವೈ .. ಏತಕ್ಕೆ ಹೆಣ್ಣು ಮಕ್ಕಳನ್ನೇ ಹೊರ ಹಾಕುತ್ತಿದ್ದಿರಿ.. ? ಎನ್ನುವ ಪ್ರಶ್ನೆಯು ಹೆಣ್ಣುಮಕ್ಕಳ ಮನದಲ್ಲಿ ...ಛೆ ಛೆ!
 @ ಹಿರಿಯ ನಟಿ ತಾರ ಅವರ ಜೊತೆಗಿನ ಮಾತು ಕಥೆಗಳು ಸಕತ್  ಮನಸ್ಪರ್ಶಿ ಆಗಿತ್ತು. ಆಕೆಯ ಮಾತುಗಳು ಸಂಪೂರ್ಣವಾಗಿ ಅಕ್ಕನ ಮಾತುಗಳಾಗಿತ್ತು ತಮ್ಮನ ಮುಂದೆ...! ಲೈಕ್ ಆಯ್ತು ಬಿಡಿ ಕಿಚ್ಚ !

ಅತ್ಯಾಚಾರ...!!


ಕಳೆದ ಕೆಲವು ದಿನಗಳಿಂದ ಕನ್ನಡ ದೃಶ್ಯ ಮಾಧ್ಯಮಗಳಲ್ಲಿ ಬರಿ ಅತ್ಯಾಚಾರದ್ದೇ ಸುದ್ದಿ . ಕಾಮುಕರ ರಾಜ್ಯ, ಇನ್ನೊಬ್ಬರ ರಾಜ್ಯ , ಅದೂ ಇದೂ ಅನ್ನುವ ಶೀರ್ಷಿಕೆಗಳ ಮುಖಾಂತರ ತಮ್ಮ ಆಕ್ರೋಶವನ್ನು ತೋರುತ್ತಾ ಆ ರಾಜದ ಸತ್ಪ್ರಜೆಗಳು ತಾವು ಅನ್ನೋದನ್ನು ಮರೆತುಹೋಗಿದ್ದರು  ಬರೆಯುವವವರು, ಮಾತಾಡುವವರು, ಚರ್ಚಿಸಿದವರು, ಕೋಪಿಸಿ ಕೊಂಡವರು.... ಯಪ್ಪ ಯಪ್ಪಾ ! 
ಆದರೆ ಅತ್ಯಂತ ಸೂಕ್ಷ್ಮ ಸಂಗತಿ ಆದ ಈ ಅತ್ಯಾಚಾರ ಮಾತ್ರ ತುಂಬಾ ಖೇದ ಹಾಗೂ ಹೇಯ!ತನ್ನ ಶಕ್ತಿಯನ್ನು, ಅಧಿಕಾರ, ಅಸಂತೃಪ್ತಿ ಏನೇ ಇರಲಿ  ಹೆಣ್ಣನ್ನು ಹೀಗೆ ಹಿಂಸಿಸಿ ಪ್ರತಿಕಾರ ತೋರುವ ವರ್ತನೆ ಎಂದಿಗೂ ಅಕ್ಷಮ್ಯ. 
ಸಾಮಾನ್ಯವಾಗಿ ಈ ರೀತಿಯ ಸೂಕ್ಷ್ಮವಾದ ಸಂಗತಿಗಳ ಬಗ್ಗೆ ಚರ್ಚೆ ಮಾಡುವಾಗ ನಿರೂಪಕರು ಸಹ ಸೂಕ್ಷ್ಮ ಸಂವೇದಿ ಆಗಿರ ಬೇಕು ಅನ್ನುವುದು ನನ್ನ ಅಭಿಪ್ರಾಯ. ಅದನ್ನು ಹೊರೆತು ಪಡಿಸಿ ಸಿಕ್ಕಾಪಟ್ಟೆ ಕೂಗಾಡುವ, ಕಿರುಚಾಡುವ ನಿರೂಪಕರು ಇದ್ದರೆ ಅಂತಹ ಸಂಗತಿಗಳು ತಲುಪ ಬೇಕಾದ  ಸ್ಥಳಕ್ಕೆ ತಲುಪದೇ ಟೀವಿ ಆರಿಸಿ ಬಿಡುವ ಅಥವಾ ಬೇರೆ ಚಾನೆಲ್ ಕಡೆಗೆ ಹೋಗುವ ಸಂಭವ ಅಧಿಕ !ಹಿಂದಿ ವಾಹಿನಿಯಲ್ಲಿ ಅಮೀರ್ ಖಾನ್ ಅವರ ಸತ್ಯಮೇವ ಜಯತೆ ಕಾರ್ಯಕ್ರಮ ಇಷ್ಟಾ ಆಗಿದ್ದು ಅವರ ಸೂಕ್ಷ್ಮ ಸಂವೇದಿ   ಗುಣದಿಂದ! 
 ಸೂಕ್ಷ್ಮ ಸಂವೇದನೆಯ ನಿರೂಪಕರ ಸಾಲಿಗೆ ಸುವರ್ಣವಾಹಿನಿಯಲ್ಲಿ ಬದುಕು ಕಂಡುಕೊಂಡಿರುವ ಅಜಿತ್ ಹನುಮಕ್ಕನವರ್ ಸೇರ್ಪಡೆ ಆಗ್ತಾರೆ... ಅತ್ಯಾಚಾರದಿಂದ ವರ್ಷಾನುಗಟ್ಟಲೆ ನ್ಯಾಯ ಸಿಗದೇ ನಿರಪರಾಧಿ ಹೆಣ್ಣುಮಕ್ಕಳ ದುಃಖ, ಅವರ ಅಸಹಾಯಕತೆ ... ಅವರ ನೋವಿಗೆ ಸ್ಪಂದಿಸಿದ ಅಜಿತ್... !!ಕಾರ್ಯಕ್ರಮ ನಿನ್ನೆ ಪ್ರಸಾರ ಆಯ್ತು...
ಕರಾಳ ಕರ್ನಾಟಕ ಅದೂ ಇದೂ ಅಂತ ಹೇಳುತ್ತಾ ಘೋಷಣೆ   ಕೂಗುವುದರಿಂದ ಏನೇನು ಪ್ರಯೋಜನ ಇಲ್ಲ ಬಿಡಿ..! ಎಷ್ಟೇ ಲಾ ಬಂದರು ನಮ್ಮಲ್ಲಿ ಬದಲಾವಣೆ ಆದರೆ ಮಾತ್ರ ಸಮಸ್ಯೆಗೆ ಪರಿಹಾರ..

@@ ಅತ್ಯಾಚಾರದ ಬಗ್ಗೆ  ಒಂದು ಸಿನಿಮಾವನ್ನು ಸಾಕಷ್ಟು ವರ್ಷಗಳ ಹಿಂದೆ ನೋಡಿದ್ದೇ, ಆಂಗ್ಲ ಚಿತ್ರ, ಹೆಸರು ಮರೆತು ಹೋಗಿದೆ. ಕರಿಯರು - ಬಿಳಿಯರ ನಾಡು.ಅಲ್ಲಿ ಸುಸಂಸ್ಕೃತ ಕರಿಯರ ಕುಟುಂಬ.. ಅಪ್ಪ ಅಮ್ಮ ಇಬ್ಬರು ಮೂರುಜನ ಮಕ್ಕಳು. ಅವರಲ್ಲಿ ಹಿರಿಯಮಗಳಿಗೆ 12  ವರ್ಷ. ಆ ಹುಡುಗಿ ಮನೆಯ ಕೆಲವು ಹೊಣೆ ಹೊತ್ತವಳು.. ಎಲ್ಲವು ಚಂದ ಇತ್ತು ಸ್ವಲ್ಪ ಕಾಲದವರೆಗೂ. ಆದರೆ ಮನುಷ್ಯ ಎನ್ನುವ ಕ್ರೂರ ಮೃಗ ಇರುವ ಕಡೆ ಬದಲಾವಣೆ ಆಗಲೇ  ಬೇಕಲ್ಲವೇ. ಅದೇರೀತಿ ಒಂದು ದಿನ ಆಕೆ ಸಾಮಾನು ತರಲು ಮಾರುಕಟ್ಟೆಗೆ ಹೋದಳು.ಹಿಂತಿರುಗಿ ಬರುವಾಗ ಆಕೆ ಒಂದಷ್ಟು ಕಾಮಾಂಧರು ಕುಡಿದ ಮತ್ತಿನಲ್ಲಿ ಆ ಎಳೆಯ ಹುಡುಗಿಯ ಮೇಲೆ ತೀವ್ರವಾಗಿ ಅತ್ಯಾಚಾರ ಮಾಡಿ ಬಿಡ್ತಾರೆ. ಅವರು ಬಿಳಿಯರಾಗಿರ್ತಾರೆ. ಅದೆಷ್ಟು ಕ್ರೂರವಾಗಿ ಆಕೆಯನ್ನು ಹಿಂಸಿಸಿರುತ್ತಾರೆ ಅಂದ್ರೆ ಅವಳ ಮೂತಿ ಸೊಟ್ಟಗಾಗಿ, ದೇಹದ ಭಾಗಗಳು ಒಂದರ್ಥದಲ್ಲಿ ನಿಷ್ಕ್ರಿಯೇ ಆಗಿ ಬಿಡುತ್ತದೆ.. ಕಣ್ಣನ್ನು   ಸಹ ತೊಂದರೆಗೆ ಒಳಪಡಿಸಿರುತ್ತಾರೆ ಅಂತ ನೆನಪು ! ಆಕೆಯ ಪರವಾಗಿ ಬಿಳಿಯ ಲಾಯರ್ ಒಬ್ಬರು ನಿಲ್ಲುತ್ತಾರೆ. ಸಿನಿಮಾದಲ್ಲಿ ಬರಿ ಆ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಬಿಡಿಸಿ ಹೇಳುತ್ತಾರೆ ನಿರ್ದೇಶಕರು.. ಅಂತಿಮವಾಗಿ ಆ ಹುಡುಗಿಗೆ ನ್ಯಾಯ ಸಿಗುತ್ತದೆ.. ಆ ಚಿತ್ರ ನೋಡಿದ ಅನೇಕ ತಿಂಗಳು ನನ್ನ ಮನಕ್ಕೆ  ದುಃಖ ಆಗಿತ್ತು. ದೆಹಲಿಯ ನಿರ್ಭಯ ಅತ್ಯಾಚಾರ-ಸಾವು  ಸಹ ಇಂತಹ ನೋವು ಕೊಟ್ಟಿತ್ತು. ಮಾಧ್ಯಮಗಳು  ವಿಷಯವನ್ನು ಕೇವಲ ತಮ್ಮ ರೇಟ್ ಹೆಚ್ಚಿಸಿಕೊಳ್ಳುವ ಭರದಲ್ಲಿ ಒಂದೆರಡು ದಿನ ಇಂತಹ ಸುದ್ದಿಯನ್ನು ಕೊಟ್ಟು ಸುಮ್ಮನಾಗುತ್ತಾರೆ .. ಪ್ರತಿದಿನ ಇಂತಹ ಸುದ್ದಿ ಇರಲಿ ಅಂತಲ್ಲ ಆದರೆ ಅತಿಯಾದ ವೈಭವೀ ಕರಣಕ್ಕಿಂತ   ಸಾಮಾಜಿಕವಾಗಿ ಯಾವ ರೀತಿ ಇಂತಹ ಸಮಸ್ಯೆಗಳಿಗೆ ಅಥವಾ ಪಿಡುಗು {ಏನು ಬಳಸಬೇಕೋ ತಿಳಿತಿಲ್ಲ} ಪರಿಹಾರ ನೀಡುವುದಕ್ಕೆ ಪ್ರಯತ್ನ ಪಟ್ಟರೆ , ಜನರಲ್ಲಿ ಆ ಒಂದು ಅವೇರ್ ಮೂಡಿಸುವತ್ತ ಗಮನ ನೀಡಿದರೆ ....? ಮಾಧ್ಯಮಕ್ಕಿಂತ ಪ್ರಭಾವಶಾಲಿ ಯಾವುದಿದೆ? ಹೆಣ್ಣಿಗೆ ಸಮಾನ ಹಕ್ಕು ನೀಡುವ ಮನಸ್ಸು ಸಮಾಜಕ್ಕಿಲ್ಲ ಬಿಡಿ.. ಕನಿಷ್ಠ ಆಕೆಗೆ ಬದುಕುವ ಹಕ್ಕನ್ನಾದರೂ ನೀಡಿದರೆ....!!