Posts

Showing posts from December 16, 2012

she wasn’t

Image
She was a student. She was 23. She was
coming back from a date with her
boyfriend. Her fault: she boarded the
wrong bus. And oh yeah, SHE WAS A GIRL!
Six men raped her one by one and then used an iron rod to tear her vagina, small intestine and large intestine . They left
her to die on the road. Naked. Wounded. Exposed. Devastated.

What’s more no one
even turned to look at her. No one even
bothered to throw a shawl on the ill-clad,
ill-fated girl. She can never lead a normal
married life again. She has gone into coma
five times since 16th December. She is unconscious,
critical and hasn’t been able to stop crying.

But don’t worry, she wasn’t
your sister. She wasn’t your daughter.But
she could be. The brutality has to stop
right here guys. These people deserve
capital punishment for their heinous, perverted act.

I VOTE FOR A CAPITAL PUNISHMENT! Please show her that you
care. Please show her that you all are there for here. Maybe that’s all she will ever have to live by. I didn’t know her. But she is relat…

ದುಃಖ

Image
ನಂಗೊತ್ತು ನ0ಗೊತ್ತು ಈಗ ನಮ್ಮ ಕನ್ನಡ ವಾರ್ತಾ ವಾಹಿನಿಗಳಿಗೆ ಸಿಕ್ಕಾಪಟ್ಟೆ ದುಃಖ  ಆಗಿರುತ್ತೆ.. ಕಾರಣ ಇಷ್ಟೇ ಪ್ರಳಯ ಆಗಲೇ ಇಲ್ಲ. ಛೆ ಹಾಗೆ ಆಗಿದ್ದಿದ್ದಿದ್ದರೆ ಆಗ ಕನ್ನಡ ಚಾನೆಲ್ ಗಳು ಲೈವ್ ಕಾರ್ಯಕ್ರಮ ನಿದ್ದ್ತಾ ಇದ್ವು ವೀಕ್ಷಕರಿಗೆ .. ಸಖತ್ತಾಗಿರ್ತಾ ಇತ್ತು.. ಆದ್ರೆ ಛೆ ಹಾಗೆ ಆಗಲಿಲ್ಲ.ಇರ್ಲಿ ಬಿಡಿ ತಮಾಷೆಗೆ ನಾನು ಹೀಗೆ ಹೇಳಿದ್ದು.. 

ಆದರೂ ಒಂದು ಸಂಗತಿ ಮಾತ್ರ ನಮ್ಮ ಕನ್ನಡ ವಾರ್ತಾ ವಾಹಿನಿಗಳಿಗೆ ಗೊತ್ತಾಗಲಿಲ್ವ ಅಥವಾ ಗೊತ್ತಾದರೂ ಸುಮ್ಮನಿದ್ದರಾ ಗೊತ್ತಿಲ್ಲ? ಯಾಕೆಂದ್ರೆ ನಾವು ಪುರಾಣ ಓದುವಾಗ , ಪ್ರವಚನ ಕೇಳುವಾಗ ಪ್ರಳಯದ ಬಗ್ಗೆ ಕೇಳಿ-ಓದಿದ್ದಿವಿ .ಅದು ಸಮಯಕ್ಕೆ -ಸಂದರ್ಭಕ್ಕೆ ಮಾತ್ರ ಸರಿ ಹೊಂದೋದು. ಆದರೆ ಅದೇ ಸಂಗತಿಯನ್ನು  ಉಪಯೋಗಕ್ಕೆ ಬ್ರಹ್ಮಾಂಡ ಸ್ವಾಮಿ  ಬಳಸಿಕೊಂಡ ಪರಿ ..ಅದನ್ನು ನಂಬಿದ ಸಾಮಾನ್ಯ ಜನತೆ ಅದಕ್ಕೆ ಪುಷ್ಟಿ ಕೊಟ್ಟ ಕನ್ನಡ ಮೀಡಿಯಾಗಳು...(ಟೀ ಆರ್ಪಿ  ಗಾಗಿ ಇವೆಲ್ಲ ಅಂತೀರಾ ) ಆಶ್ಚರ್ಯ ಅಂದ್ರೆ ಆತ  ದೊಡ್ಡ  ಕಣಿಗಲೆ-ಚಂಡು  ಹೂ ಮೀಡಿಯಾದವರ ಕಿವಿಗಿಟ್ಟರೂ ಅರ್ಥ ಮಾಡಿಕೊಳ್ಳದ ಕನ್ನಡ ಮೀಡಿಯಾ ಮಂದಿ , ಆತ ಹೇಳಿದ   ಪ್ರಳಯ ಆಗುತ್ತೆ ಅನ್ನುವ ಸಂಗತಿಯನ್ನು ವರ್ಷವಿಡಿ ಜೀವಂತವಾಗಿಟ್ಟಿದ್ದು ದು ಕಂಡು ಯಾವ ರೀತಿ ಪ್ರತಿಕ್ರಿಯಿಸ ಬೇಕೋ ಗೊತ್ತಾಗುತ್ತಿಲ್ಲ ಸಾಮಾನ್ಯರಿಗೆ...! 
ಆ ವಿಷಯ  ಪಕ್ಕಕ್ಕೆ ಇಡಿ.ಆದರೆ ನಿನ್ನೆ ಕನ್ನಡ ವಾಹಿನಿಗಳು ಮೋದಿ ಅವರ ಗೆಲುವಿನ-ಗುಜರಾತ್ ಚುನಾವಣೆಯ ವಿಶ್ಲೇಷಣೆ ಚೆನ್ನಾಗಿ…

ಸ್ವಲ್ಪ ಸ್ವಲ್ಪ!

Image
ಕಳೆದ ಒಂದು ಪೋಸ್ಟ್ ನಲ್ಲಿ ನಾನು ಸೋನಿ ವಾಹಿನಿಯಲ್ಲಿ ಬರುವ ಅನಾಮಿಕ ಅನ್ನುವ ಧಾರವಾಹಿ ಬಗ್ಗೆ ಹೇಳಿದ್ದೆ.ಚೆನ್ನಾಗಿದೆ..ಯಾಕೆಂದ್ರೆ ಮೊದಲೇ ತಿಳಿಸಿದಂತೆ ಅದರಲ್ಲಿ ದೆವ್ವ ಇದೆ ಪ್ರೀತಿ ವಿದೆದೆ ಜೊತೆಗೆ ಒಬ್ಬ ಅಜ್ಜಿ ಸಹ ಇದ್ದಾರೆ. ಆಕೆ ವಿಶೇಷತೆ ಅಂದ್ರೆ ಟ್ಯಾಬ್ ಹಿಡಿದು ಸದಾ ಫೇಸ್ ಬುಕ್ (ಅದರಲ್ಲಿ ಫ್ರೆಂಡ್ ಬುಕ್ )ಸ್ಟೇಟಸ್ ಚೆಕ್ ಮಾಡ್ತಾ ಇರೋದು. ತುಂಬಾ ಇಷ್ಟಾ ಅನ್ನಿಸುವ ಒಂದು ಅಪರೂಪದ ಪಾತ್ರ. ಆಕೆಯ ಲವಲವಿಕೆ  ಮಜಾ ಕೊಡುತ್ತೆ ಬೇಬೆ ಲೈಕ್  ಲೈಕ್ ಬೇಬೆ 
@@ ಇದೆ  ವಾಹಿನಿಯಲ್ಲಿ ಬರುವ  ಸಿ ಐ ಡಿ  ಧಾರವಾಹಿ ಸಹ ಅತ್ಯಂತ ರೋಚಕ ಮತ್ತು ಆಸಕ್ತಿಕರ ಧಾರವಾಹಿ.ಇದರಲ್ಲಿ ಪಾತ್ರ ಮಾಡಿರುವ ದಯಾನಂದ್  ಶೆಟ್ಟಿ ಉಡುಪಿಯವರು . ಆದರೆ ಅವರಿಗೆ ಕನ್ನಡ ಬರ್ತದಾ ಗೊತ್ತಿಲ್ಲ. ಯಾಕೆಂದ್ರೆ ಮುಂಬೈ ನಲ್ಲಿ ಸೇರಿರುವ ಅಪಾರ ಕನ್ನಡಿಗರಲ್ಲಿ ಅಸಂಖ್ಯಾತ ಮಂದಿಗೆ ಗೊತ್ತಿರೋದು ಸ್ವಲ್ಪ ಸ್ವಲ್ಪ ಕನ್ನಡ . ಸ್ವಲ್ಪನಾದ್ರೂ ಗೊತ್ತಿದ್ಯಲ್ಲ ಅಂತ ನೀವು ನೆಮ್ಮದಿ ಪಟ್ಟರೆ  ತಪ್ಪಾಗುತ್ತೆ, ಯಾಕೆ ಅಂದ್ರೆ ಅವರಿಗೆ ಗೊತ್ತಿರೋದು ಸ್ವಲ್ಪ ಸ್ವಲ್ಪ ಅನ್ನೋ ಒಂದು ಪದ ಮಾತ್ರ.. ಹೀಗೂ ಉಂಟು 
ಧಾರವಾಹಿಗಳಲ್ಲಿ  ಸ್ವಲ್ಪವೂ ಬೋರ್ ಹೊಡಿಸದೆ  ಇರುವ ಮತ್ತೊಂದು ಸೀರಿಯಲ್ ಮಧು ಬಾಲ. ಇದು ಕಲರ್ ವಾಹಿನಿಯಲ್ಲಿ ಪ್ರಸಾರ ಆಗುತ್ತೆ. ಸೂಪರ್ ಸ್ಟಾರ್ ಮತ್ತು , ಸಹ ಕಲಾವಿದರ ನಿಜ ಬದುಕಿನ ಕಥೆ. ಸಿಕ್ಕಾಪಟ್ಟೆ ಕಥೆ ಎಳೆಯೋಕೆ ಹೋಗದೆ ಅಲ್ಲಲ್ಲೇ  ಒಂದು ಸುಂದರ ಎಂಡ್ ಕೊಡ್ತಾ ಇದ್ದಾ…

ಹಿಂಸೆ

Image
ಯುಎಸ್ ದೇಶದಲ್ಲಿ ಮಕ್ಕಳ ಮೇಲೆ ನಡೆದ ಮಾರಣ ಹೋಮ ನಿಜಕ್ಕೂ ಅತ್ಯಂತ ದುಃಖ ಕರ ಸಂಗತಿ.ಏನೂ ಅರಿಯದ  ಆ ಕಂದಮ್ಮಗಳು ಕ್ರೂರ  ಮನಸ್ಥಿತಿ  ವ್ಯಕ್ತಿಯಿಂದ ಅಮಾನುಷವಾಗಿ ಸಾವನ್ನಪ್ಪಿದ ಘಟನೆ ಮನಕ್ಕೆ ತುಂಬಾ ನೋವು ಉಂಟು ಮಾಡಿದೆ. ಖುಷಿಯಿಂದ ಶಾಲೆಗೆ ಹೋರಾಟ ಮಕ್ಕಳು ಹೆಣವಾಗಿ ಬಂದುದನ್ನು ಕಂಡ ಆ ಪೋಷಕರ ಸ್ಥಿತಿ .. ಛೆ..! ಆ ಮೃತ ಕಂದಮ್ಮಗಳ ಆತ್ಮಕ್ಕ್ಕೆ ಶಾಂತಿ ಮತ್ತು ಅವರ ಪೋಷಕರುಗಳಿಗೆ ಧೈರ್ಯ ನೀಡಲೆಂದು ಆ ಭಗವಂತನಲ್ಲಿ ಪ್ರಾರ್ಥಿಸೋಣ ,,

ಮನಸ್ಸಿಗೆ ತುಂಬಾ ಖೇದ ಅನ್ನಿಸುತ್ತೆ ಮಕ್ಕಳ ಮೇಲೆ ನಡೆಯುವ ಹಿಂಸೆ ಕಂಡಾಗ. ಇತ್ತೀಚಿಗೆ ತಾಯಿ ತನ್ನ ಮಗುವನ್ನು ಕ್ರೂರವಾಗಿ ಹೊಡೆದ ಘಟನೆ ಪ್ರಸಾರ ಆಗಿತ್ತು.ಇಂತಹ ತಾಯಂದಿರು ಸಿಕ್ಕಾಪಟ್ಟೆ ಇದ್ದಾರೆ ಬಿಡಿ , ಇನ್ನು ಚಿತ್ರ-ವಿಚಿತ್ರ ರೀತಿಯಲ್ಲಿ ದಾಳಿ ಮಾಡ್ತಾರೆ . ಆ ಮಗುವಿನ ಸ್ಥಿತಿ ಛೆ!

ಟೀವಿ ನೈನ್  ವಾಹಿನಿಯಲ್ಲಿ ಇಂದು ನಿರೂಪಕಿ ಹೇಮಾ ಒಂದು ಕಾರ್ಯಕ್ರಮ ನಡೆಸಿಕೊಡ್ತಾ ಇದ್ರು .. ಅದು ಸಹ ಮಗುವಿನ ಮೇಲೆ ನಡೆದ ಹಿಂಸೆ ಕುರಿತಾದ ಕಾರ್ಯಕ್ರಮ. ಒಂದು ಮಗು ತನ್ನ ಪ್ರಿನ್ಸಿಪಾಲರ ಬಳಿ  ಮಾನುಷವಾಗಿ ಹೊಡೆಸಿಕೊಂಡ ವಿಷ್ಯ. ಆತ  ಆ ಮಗುವಿನ ಕಿವಿಗೆ ಅದೆಷ್ಟು ಜೋರಾಗಿ ,ಪ್ರಾಣಾಂತಿಕವಾಗಿ ಹೊಡೆದಿದ್ದಾನೆಂದರೆ ಅದರ ತಮಟೆಯಲ್ಲಿ ಗಾಯ ರಕ್ತ ಉಂಟಾಗಿದೆ. ಶಾಲೆಯು ಇತ್ತೀಚೆಗಂತೂ ರಕ್ಷಣೆಯ ಸ್ಥಳಗಳಾಗಿಲ್ಲ  ಅನ್ನುವ ಸಂಗತಿ ಮತ್ತೊಮ್ಮೆ ದೃಢಪಟ್ಟಿದೆ. ನನಗೆ ಅನ್ನಿಸುತ್ತೆ ಇಲ್ಲಿ ಭಾಷೆಯು ಹೆಚ್ಚು ಸಮಸ್ಯೆಗೆ ಕಾರಣ ಆಗ…