@@ ಇದೆ ವಾಹಿನಿಯಲ್ಲಿ ಬರುವ ಸಿ ಐ ಡಿ ಧಾರವಾಹಿ ಸಹ ಅತ್ಯಂತ ರೋಚಕ ಮತ್ತು ಆಸಕ್ತಿಕರ ಧಾರವಾಹಿ.ಇದರಲ್ಲಿ ಪಾತ್ರ ಮಾಡಿರುವ ದಯಾನಂದ್ ಶೆಟ್ಟಿ ಉಡುಪಿಯವರು . ಆದರೆ ಅವರಿಗೆ ಕನ್ನಡ ಬರ್ತದಾ ಗೊತ್ತಿಲ್ಲ. ಯಾಕೆಂದ್ರೆ ಮುಂಬೈ ನಲ್ಲಿ ಸೇರಿರುವ ಅಪಾರ ಕನ್ನಡಿಗರಲ್ಲಿ ಅಸಂಖ್ಯಾತ ಮಂದಿಗೆ ಗೊತ್ತಿರೋದು ಸ್ವಲ್ಪ ಸ್ವಲ್ಪ ಕನ್ನಡ . ಸ್ವಲ್ಪನಾದ್ರೂ ಗೊತ್ತಿದ್ಯಲ್ಲ ಅಂತ ನೀವು ನೆಮ್ಮದಿ ಪಟ್ಟರೆ ತಪ್ಪಾಗುತ್ತೆ, ಯಾಕೆ ಅಂದ್ರೆ ಅವರಿಗೆ ಗೊತ್ತಿರೋದು ಸ್ವಲ್ಪ ಸ್ವಲ್ಪ ಅನ್ನೋ ಒಂದು ಪದ ಮಾತ್ರ.. ಹೀಗೂ ಉಂಟು 
ಧಾರವಾಹಿಗಳಲ್ಲಿ ಸ್ವಲ್ಪವೂ ಬೋರ್ ಹೊಡಿಸದೆ ಇರುವ ಮತ್ತೊಂದು ಸೀರಿಯಲ್ ಮಧು ಬಾಲ. ಇದು ಕಲರ್ ವಾಹಿನಿಯಲ್ಲಿ ಪ್ರಸಾರ ಆಗುತ್ತೆ. ಸೂಪರ್ ಸ್ಟಾರ್ ಮತ್ತು , ಸಹ ಕಲಾವಿದರ ನಿಜ ಬದುಕಿನ ಕಥೆ. ಸಿಕ್ಕಾಪಟ್ಟೆ ಕಥೆ ಎಳೆಯೋಕೆ ಹೋಗದೆ ಅಲ್ಲಲ್ಲೇ ಒಂದು ಸುಂದರ ಎಂಡ್ ಕೊಡ್ತಾ ಇದ್ದಾರೆ ಸಮಸ್ಯೆಗಳಿಗೆ ಆ ಧಾರವಾಹಿ ನಿರ್ದೇಶಕರು.
ಕಲರ್ ವಾಹಿನಿಯಲ್ಲಿ ಬಿಗ್ ಬಾಸ್ ಬೋರ್ ಹೊಡಿಸಿದರೂ ನೋಡಲು ಮರೆಯದೆ ಇರುವಂತೆ ಮಾಡುವ ರಿಯಾಲಿಟಿ ಷೋ.ಈ ಗೇಂ ನಲ್ಲಿ ಮುಖ್ಯ ಆಕರ್ಷಣೆ ಇಮಾಂ ಸಿದ್ದಿಕಿ .ಪ್ರತಿ ಸೀಸನ್ ನಲ್ಲೂ ಇಂತಹ ಒಂದು ವಿಚಿತ್ರಗಳು ಇರುತ್ತೆ.. ಆದರೆ ಇಮಾಂ ಸಿದ್ದಿಕಿ ಯಪ್ಪಾ! ಮಾತಿನ ಬಗ್ಗೆ ನಿಗಾನೆ ಇರಲ್ಲ.
ಇದೆ ರೀತಿಯ ಮನಸ್ಥಿತಿ ಹೊಂದಿರುವವರು ರಾಖಿ ಸಾವಂತ್. ಇಬ್ಬರನ್ನು ಒಟ್ಟಿಗೆ ಸೇರಿಸಿದರೆ ಬಿಗ್ ಬಾಸ್ ಬಚ್ಚಿಟ್ಟುಕೊಂಡು ಬಿಡಬೇಕು ಸಾಕಪ್ಪ ಸಾವಾಸ ಅಂತ ಅಷ್ಟೊಂದು ವಿಶೇಷ ಸ್ವಭಾವ.. ಇಮಾಂ ಮಾತೆತ್ತಿದರೆ ಥ್ಯಾಂಕ್ಯು ಬಿಗ್ ಬಾಸ್ , ಇಲ್ಲವೇ ಬೈ ಬೈ , ಇಲ್ಲವೇ ಪಕ್ಕಾ ಪಕ್ಕಾ ಅನ್ನುವ ಮಾತುಗಳು ಸಾಕಷ್ಟು ಸರ್ತಿ ಆ ಸಂದರ್ಭಕ್ಕೆ ಹೊಂದುವುದೇ ಇಲ್ಲ..ವಾಟ್ ಇಮಾಂ.. ಕ್ಯಾ ಗೇಂ ..
ಬಹಳ ಹಿಂದೆ ..ಅಂದ್ರೆ ಸ್ಟಾರ್ ವಾಹಿನಿಯಲ್ಲಿ ಕೌನ್ ಬನೇಗ ಬರ್ತಾ ಇತ್ತು..ಆಗ ಒಮ್ಮೆ ಬಿಗ್ ಬಿ ಶಾಣ್ಯ ಅಮೀರ್ ಖಾನ್ ಕರೆಸಿದರು. ಆತನ ಜೊತೆ ಆತನ ಮಗ ಬಂದಿದ್ದ (ಮಗ ಹಾಟ್ ಸೀಟಲ್ಲಿ ಕುಳಿತಿರಲಿಲ್ಲ). ಬಿಗ್ ಬಿ ಆ ಮಗುವನ್ನು ಯಾವುದೇ ಪ್ರಶ್ನೆ ಕೇಳಿದರು ಬಂದ ಉತ್ತರ ಯಾ .. ಯಾ .. ಯಾ
ಅಂತಹುದೇ ಉತ್ತರವನ್ನು ನಟ ಸಲ್ಮಾನ್ ಖಾನ್ ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ಅನುಪಮ ಚೋಪ್ರ ದಿ ಫ್ರೆಂಟ್ ರೋ ಕಾರ್ಯಕ್ರಮದಲ್ಲಿ ನೀಡಿ ಹಳೆಯ ನೆನಪನ್ನು ಜಾಗೃತ ಗೊಳಿಸಿದರು.ಅನುಪಮ ಅವರ ಪ್ರಶ್ನೆಗೆ ಸಲ್ಮಾನ್ ಹೆಚ್ಚಾಗಿ ಕೊಟ್ಟ ಉತ್ತರ ಯಾ ಯಾ ಯಾ
. ಸನಾ ಖಾನ್ ಅನ್ನೋ ಪೆದ್ದು ಸುಂದರಿ
ಮತ್ತು ಆಶಿಕ ಅಂಬೋ ಅಳ್ತಾ ಇರೋ ಸುಂದರಿ 
ಸಲ್ಮಾನ್ ಖಾನ್ ಹೆಸರಲ್ಲಿ ಸಲ್ಮಾನ್ ಅಂತ ಮಾತ್ರ ಕರಿಯೋಕೆ ಇಷ್ಟ ಸಲ್ಮಾನ್ ಜೀ ಜೀ ಅಂತ ಕರೆಯೋಕೆ ಇಷ್ಟ ಪಡಲ್ಲ ಅಂತ ಹೇಳಿದ್ದು ಕಂಡ ಸಲ್ಮಾನ್ ಖುಷಿ ಆಗಿದ್ದಾರೆ.. ಯಾ ಯಾ..
ಸಲ್ಮಾನ್ ಜೀ ಗೋಸ್ಕರ...
Heights of being single:
listening to a romantic song and..
Getting confused about whom to thing
.....
OMG
The front row with Anupama chopra
http://www.youtube.com/watch?v=Hpe8P24NzZQ
Poornima Girish Gvj.. same thought n view nandoo kooda.. but imaamnashtu chennagi jagala adoru Mattobbarilla.. ulida ashtu janarannu obbane heg handle madtaane.. Naanu noduva ekaika serial Andre nambteera??
No comments:
Post a Comment