ಆದರೂ ಒಂದು ಸಂಗತಿ ಮಾತ್ರ ನಮ್ಮ ಕನ್ನಡ ವಾರ್ತಾ ವಾಹಿನಿಗಳಿಗೆ ಗೊತ್ತಾಗಲಿಲ್ವ ಅಥವಾ ಗೊತ್ತಾದರೂ ಸುಮ್ಮನಿದ್ದರಾ ಗೊತ್ತಿಲ್ಲ? ಯಾಕೆಂದ್ರೆ ನಾವು ಪುರಾಣ ಓದುವಾಗ , ಪ್ರವಚನ ಕೇಳುವಾಗ ಪ್ರಳಯದ ಬಗ್ಗೆ ಕೇಳಿ-ಓದಿದ್ದಿವಿ .ಅದು ಸಮಯಕ್ಕೆ -ಸಂದರ್ಭಕ್ಕೆ ಮಾತ್ರ ಸರಿ ಹೊಂದೋದು. ಆದರೆ ಅದೇ ಸಂಗತಿಯನ್ನು ಉಪಯೋಗಕ್ಕೆ ಬ್ರಹ್ಮಾಂಡ ಸ್ವಾಮಿ ಬಳಸಿಕೊಂಡ ಪರಿ ..ಅದನ್ನು ನಂಬಿದ ಸಾಮಾನ್ಯ ಜನತೆ ಅದಕ್ಕೆ ಪುಷ್ಟಿ ಕೊಟ್ಟ ಕನ್ನಡ ಮೀಡಿಯಾಗಳು...(ಟೀ ಆರ್ಪಿ ಗಾಗಿ ಇವೆಲ್ಲ ಅಂತೀರಾ )
![]() |
ಕೃಪೆ : ಅರುಲ್ ದಾಸ್ ವಿಜಯ |
ಆಶ್ಚರ್ಯ ಅಂದ್ರೆ ಆತ ದೊಡ್ಡ ಕಣಿಗಲೆ-ಚಂಡು ಹೂ ಮೀಡಿಯಾದವರ ಕಿವಿಗಿಟ್ಟರೂ ಅರ್ಥ ಮಾಡಿಕೊಳ್ಳದ ಕನ್ನಡ ಮೀಡಿಯಾ ಮಂದಿ , ಆತ ಹೇಳಿದ ಪ್ರಳಯ ಆಗುತ್ತೆ ಅನ್ನುವ ಸಂಗತಿಯನ್ನು ವರ್ಷವಿಡಿ ಜೀವಂತವಾಗಿಟ್ಟಿದ್ದು ದು ಕಂಡು ಯಾವ ರೀತಿ ಪ್ರತಿಕ್ರಿಯಿಸ ಬೇಕೋ ಗೊತ್ತಾಗುತ್ತಿಲ್ಲ ಸಾಮಾನ್ಯರಿಗೆ...!
ಆ ವಿಷಯ ಪಕ್ಕಕ್ಕೆ ಇಡಿ.ಆದರೆ ನಿನ್ನೆ ಕನ್ನಡ ವಾಹಿನಿಗಳು ಮೋದಿ ಅವರ ಗೆಲುವಿನ-ಗುಜರಾತ್ ಚುನಾವಣೆಯ ವಿಶ್ಲೇಷಣೆ ಚೆನ್ನಾಗಿ ನಡೆಸಿಕೊಟ್ಟ ವು . ಪಬ್ಲಿಕ್ ಟೀವಿ ರಂಗಣ್ಣ,ಶ್ಯಾಮ್ , ಸುವರ್ಣ ನ್ಯೂಸ್ ಹಮೀದ್, ರಂಗನಾಥ್,ಅಜೀತ್, ಜನಶ್ರೀ ರಮಾಕಾಂತ್, ಉದಯ ನ್ಯೂಸ್, ಟೀವಿ ನೈನ್ ಶಿವಪ್ರಕಾಶ್,... ಎಲ್ರು ! ಸಾಕಷ್ಟು ಆಸಕ್ತಿ-ಕುತೂಹಲಕರ ಸಂಗತಿ ಆಗಿದ್ದ ಈ ಫಲಿತಾಂಶಕ್ಕೆ ಬಂದ ಅತಿಥಿಗಳ ದೃಷ್ಟಿಕೋನದ ಜೊತೆಗೆ ವಾಹಿನಿ ಮಂದಿಯ ಮಾತುಕತೆಗಳು ವೆರಿ ವೆರಿ ಇಂಟರೆಸ್ಟಿಂಗ್ ಆಗಿತ್ತು ಸಚ್ಚಿ!
No comments:
Post a Comment